MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಸಸ್ಯಾಹಾರ ಎಂದ್ರೆ ಏನು? KBC ಸ್ಪರ್ಧಿ ಮಾತು ಕೇಳಿ ಅಮಿತಾಭ್​ ತತ್ತರ! ಕಣ್ಣು ತೆರೆಸಿದ್ರಿ ಎಂದ ಬಿಗ್​ ಬಿ

ಸಸ್ಯಾಹಾರ ಎಂದ್ರೆ ಏನು? KBC ಸ್ಪರ್ಧಿ ಮಾತು ಕೇಳಿ ಅಮಿತಾಭ್​ ತತ್ತರ! ಕಣ್ಣು ತೆರೆಸಿದ್ರಿ ಎಂದ ಬಿಗ್​ ಬಿ

ಕೌನ್​ ಬನೇಗಾ ಕರೋಡ್​ ಪತಿ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರು ಪ್ರಾಣಿ ಹಿಂಸೆಯ ಕಾರಣ ನೀಡಿ ಹಾಲು, ಚರ್ಮ ಮತ್ತು ರೇಷ್ಮೆ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿದ ನಿರೂಪಕ ಅಮಿತಾಭ್​ ಬಚ್ಚನ್​ ಅವರು ಆಶ್ಚರ್ಯಚಕಿತರಾಗಿದ್ದಾರೆ.

2 Min read
Author : Suchethana D
Published : Mar 28 2026, 12:43 PM IST
Share this Photo Gallery
  • FB
  • TW
  • Linkdin
  • Whatsapp
16
ಅಮಿತಾಭ್​ ಬಚ್ಚನ್​ ಷೋ
Image Credit : Amitabh Bachchan Blog

ಅಮಿತಾಭ್​ ಬಚ್ಚನ್​ ಷೋ

ಅಮಿತಾಭ್​ ಬಚ್ಚನ್​ (Amitabh Bachchan) ಬಾಲಿವುಡ್​ ಕಂಡ ಅಪರೂಪದ ನಟ. ಬ್ಲ್ಯಾಕ್​ ಆ್ಯಂಡ್​ ವೈಟ್​ ಚಿತ್ರದಿಂದ ಹಿಡಿದು ಈ 82ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿ, ನಗೆಯ ಬುಗ್ಗೆಯಾಗಿ ಚಿಮ್ಮುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಇವರದ್ದು ಎತ್ತಿದ ಕೈ. 1970ರ ದಶಕದಲ್ಲಿ ಜಂಜೀರ್, ದೀವಾರ್, ಆನಂದ್, ರೋಟಿ ಕಪಾಡಾ ಮತ್ತು ಮಕಾನ್ ಚಿತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಮಿತಾಭ್​ ಬಚ್ಚನ್​ ಅವರಿಗೆ ಈ ವಯಸ್ಸಿನಲ್ಲಿಯೂ ಉತ್ಸಾಹ ಬತ್ತಿಲ್ಲ.

26
ಫುಲ್​ ಎನರ್ಜಿ
Image Credit : Amitabh Bachchan Blog

ಫುಲ್​ ಎನರ್ಜಿ

ಅವರ ಎನರ್ಜಿ ಇನ್ನೂ ಹಾಗೆಯೇ ಇದೆ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ. 80ರ ಹರೆಯದಲ್ಲಿ ಬಿಗ್ ಬಿ ಫುಲ್ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಕೂಲಿ ಚಿತ್ರದಲ್ಲಿ ಮಾರಣಾಂತಿಕ ಗಾಯಗಳಿಂದ ಬದುಕಿ ಬಂದಿದ್ದ ಅಮಿತಾಭ್​ ಅವರು ಇತ್ತೀಚೆಗೆ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೂ ಗಂಭೀರ ಗಾಯಗಳಾಗಿದ್ದವು. ಇವೆಲ್ಲವುಗಳ ಹೊರತಾಗಿಯೂ ಅಮಿತಾಭ್​ ಬಚ್ಚನ್​ ಇಂದಿಗೂ ಅದೇ ಎನರ್ಜಿಯನ್ನು ಉಳಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಕೌನ್​ ಬನೇಗಾ ಕರೋರ್​ಪತಿ.

Related Articles

Related image1
ಮಿಮಿ, ಗುಲ್ಲು, ನುಷ್ಕಿ, ಲೋಲೋ, ಆಲೂ... ಬಾಲಿವುಡ್​ ಸ್ಟಾರ್​ ನಟಿಯರ ಸೀಕ್ರೆಟ್​ ಹೆಸರು ಇಲ್ಲಿವೆ ನೋಡಿ!
Related image2
ಅಮಿತಾಭ್​, ಕತ್ರಿನಾರಿಂದ ಕಿಯಾರಾವರೆಗೆ ಹೆಸರು ಬದಲಿಸಿ ಸ್ಟಾರ್​ ಪಟ್ಟ ಗಳಿಸಿದವರು
36
ಕೌನ್​ ಬನೇಗಾ ಕರೋಡ್​ ಪತಿ
Image Credit : Amitabh Bachchan Blog

ಕೌನ್​ ಬನೇಗಾ ಕರೋಡ್​ ಪತಿ

ಕೌನ್​ ಬನೇಗಾ ಕರೋಡ್​ ಪತಿ (Kaun Banega Crorepati) ಇದೀಗ 17ನೇ ಸೀಸನ್​ ನಡೆಯುತ್ತಿದೆ. ಇಷ್ಟೂ ವರ್ಷಗಳೂ ಇದನ್ನು ನಟ ಅಮಿತಾಭ್​ ಬಚ್ಚನ್​ ಅವರೇ ನಡೆಸಿಕೊಡ್ತಿರೋದು ವಿಶೇಷ. ಈ ಷೋನಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ, ಸಾಮಾನ್ಯ ಜನರಿಂದು ಹಿಡಿದು ಸೆಲೆಬ್ರಿಟಿಗಳವರೆಗೆ, ಬೇರೆ ಬೇರೆ ಭಾಷೆಗಳ ತಾರೆಯರು, ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಎಲ್ಲರೂ ಹಾಟ್​ ಸೀಟ್​ನಲ್ಲಿ ಕುಳಿತಿದ್ದಾರೆ. ಆರಂಭದಲ್ಲಿ ಒಂದು ಕೋಟಿ ರೂಪಾಯಿಗೆ ಸೀಮಿತವಾಗಿದ್ದ ಈ ಷೋ ಇದೀಗ ಏಳು ಕೋಟಿಗೆ ಬಂದು ತಲುಪಿದೆ. ಹಲವಾರು ಮಂದಿ ಕೋಟಿ ಕೋಟಿ ಗೆದ್ದು ಬೀಗಿದ್ದಾರೆ.

46
ಸಸ್ಯಾಹಾರದ ಮಾತು
Image Credit : Sony Liv

ಸಸ್ಯಾಹಾರದ ಮಾತು

ಇದೀಗ ನಟ ಅಮಿತಾಭ್ ಬಚ್ಚನ್​ ಅವರು ಸಸ್ಯಾಹಾರದ ಕುರಿತು ಸ್ಪರ್ಧಿಯೊಬ್ಬ ಹೇಳಿದ ಮಾತು ಕೇಳಿ ಶಾಕ್​ ಆಗಿ ಹೋಗಿದ್ದಾರೆ. ನೀವು ನನ್ನ ಕಣ್ಣು ತೆರೆಸಿದ್ರಿ. ನಿಜಕ್ಕೂ ಇದು ನನಗೆ ಗೊತ್ತೇ ಇರಲಿಲ್ಲ. ಈಗಲೇ ಮನೆಗೆ ಹೋಗಿ ಎಲ್ಲರಿಗೂ ನಾನು ತೊಂದರೆ ಕೊಡುತ್ತೇನೆ ಎಂದಿದ್ದಾರೆ.

56
ಹಾಲು ಕುಡಿಯದ ಸ್ಪರ್ಧಿ
Image Credit : Sony Liv

ಹಾಲು ಕುಡಿಯದ ಸ್ಪರ್ಧಿ

ಸಿದ್ಧಾರ್ಥ ಶರ್ಮ ಎನ್ನುವ ಸ್ಪರ್ಧಿಯ ಬಾಯಿಯಿಂದ ಸಸ್ಯಾಹಾರದ ಮಾತನ್ನು ಕೇಳಿದ್ದಾರೆ ಅಮಿತಾಭ್​. ಸಿದ್ಧಾರ್ಥ್​ ಅವರು ಕಳೆದ ಏಳು ವರ್ಷಗಳಿಂದ ನಾನು ಹಾಲು ಕುಡಿಯುತ್ತಿಲ್ಲ. ಏಕೆಂದರೆ, ಆ ಹಾಲು ಸೃಷ್ಟಿಯಾಗಿರುವುದು ಅದರ ಮಗುವಿಗೆ ಕೊಡುವುದಕ್ಕಾಗಿ. ಅದನ್ನು ನಾವು ಕುಡಿದರೆ ಪ್ರಾಣಿ ಹಿಂಸೆ ಮಾಡಿದಂತೆ. ಹಾಲಿನ ಪದಾರ್ಥಗಳನ್ನು ಯಾವುದೂ ಸೇವಿಸುವುದಿಲ್ಲ ಎಂದಿದ್ದಾರೆ.

66
ಚರ್ಮದ ಶೂಸ್​, ರೇಷ್ಮೆ ಬ್ಯಾನ್​
Image Credit : Sony Liv

ಚರ್ಮದ ಶೂಸ್​, ರೇಷ್ಮೆ ಬ್ಯಾನ್​

ಅವರ ಪತ್ನಿಯನ್ನು ವಿಚಾರಿಸಿದಾಗ, ಅವರು, ತಮ್ಮ ಪತಿ ಚರ್ಮದ ಶೂಸ್​ ಸೇರಿದಂತೆ ಯಾವುದನ್ನೂ ಉಪಯೋಗಿಸುವುದಿಲ್ಲ. ಅಷ್ಟೇ ಅಲ್ಲದೇ, ರೇಷ್ಮೆ ಹುಳುಗಳನ್ನು ಬಿಸಿನೀರಿನಲ್ಲಿ ಕಾಯಿ ಸಾಯಿಸಿ ಅದರಿಂದ ನೂಲು ತೆಗೆಯುವ ಕಾರಣದಿಂದ ರೇಷ್ಮೆ ಬಟ್ಟೆಗಳನ್ನೂ ಧರಿಸುವುದಿಲ್ಲ. ಮದುವೆಯ ಸಂದರ್ಭದಲ್ಲಿಯೂ ಅವರಿಗೆ ಬೇಕಾದ ರೀತಿಯಲ್ಲಿಯೇ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು ಎಂದಿದ್ದಾರೆ. ಇದನ್ನು ಕೇಳಿ ನಟ ಅಮಿತಾಭ್​ ಶಾಕ್​ ಆಗಿದ್ದು, ನಿಜಕ್ಕೂ ಆ ನಿಟ್ಟಿನಲ್ಲಿ ನಾನು ಯೋಚನೆಯೇ ಮಾಡಿರಲಿಲ್ಲ. ನೀವು ನನ್ನ ಕಣ್ಣು ತೆರೆಸಿದಿರಿ. ಇವತ್ತೇ ಮನೆಗೆ ಹೋಗಿ ಎಲ್ಲರಿಗೂ ವಿಷಯ ಹೇಳುತ್ತೇನೆ. ಅವರಿಗೆಲ್ಲಾ ತೊಂದರೆ ಕೊಡುತ್ತೇನೆ ಎಂದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮಿತಾಭ್ ಬಚ್ಚನ್
ಕೌನ್ ಬನೇಗಾ ಕರೋಡ್ಪತಿ
ಆಹಾರ
ಮನರಂಜನಾ ಸುದ್ದಿ
ಟಿವಿ ಶೋ
ಜೀವನಶೈಲಿ
Latest Videos
Recommended Stories
Recommended image1
ಮನೆಯಲ್ಲೇ ತಯಾರಿಸಿದ ಚಟ್ನಿಗಳು ಹೆಚ್ಚು ಕಾಲ ತಾಜಾವಾಗಿರಲು, ಹಾಳಾಗದಿರಲು ಇಲ್ಲಿವೆ 7 Tips
Recommended image2
ವಿಷಕಾರಿ ಸಕ್ಕರೆ ಬದಲು ಟೀ- ಕಾಫಿಗೆ ಇದನ್ನು ಸೇರಿಸಿ, ಆರೋಗ್ಯವಂತರಾಗಿ
Recommended image3
"ಭಾರತದ ಐಸ್‌ಕ್ರೀಂ ರಾಜಧಾನಿ" ಎಂದೇ ಫೇಮಸ್ ಆದ ಕರ್ನಾಟಕದ ಏಕೈಕ ಜಿಲ್ಲೆ ಇದು.. ಯಾವುದು ಗೊತ್ತಾ?
Related Stories
Recommended image1
ಮಿಮಿ, ಗುಲ್ಲು, ನುಷ್ಕಿ, ಲೋಲೋ, ಆಲೂ... ಬಾಲಿವುಡ್​ ಸ್ಟಾರ್​ ನಟಿಯರ ಸೀಕ್ರೆಟ್​ ಹೆಸರು ಇಲ್ಲಿವೆ ನೋಡಿ!
Recommended image2
ಅಮಿತಾಭ್​, ಕತ್ರಿನಾರಿಂದ ಕಿಯಾರಾವರೆಗೆ ಹೆಸರು ಬದಲಿಸಿ ಸ್ಟಾರ್​ ಪಟ್ಟ ಗಳಿಸಿದವರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved