ದೋಸೆ ಹಿಟ್ಟು ವಾರವಿಡೀ ಫ್ರೆಶ್ ಆಗಿಡಲು 5 ಟಿಪ್ಸ್ ಫಾಲೋ ಮಾಡಿ; ಇದು ಹೋಟೆಲ್‌ಗಳ ಟ್ರಿಕ್ಸ್
Dosa Batter: ದೋಸೆಹಿಟ್ಟನ್ನು ವಾರಗಟ್ಟಲೇ ಫ್ರೆಶ್ ಆಗಿ ಮತ್ತು ಹುಳಿಯಾಗದಂತೆ ಇಡಲು ಕೆಲವು ಸರಳ ವಿಧಾನಗಳಿವೆ. ಕೆಲವು ಸರಳ ವಿಧಾನಗಳ ಮೂಲಕ ದೋಸೆ ಹಿಟ್ಟನ್ನು ದೀರ್ಘಕಾಲ ಸಂಗ್ರಹಿಸಬಹುದು.

ದೋಸೆಹಿಟ್ಟು ವಾರಗಟ್ಟಲೇ ಫ್ರೆಶ್
ಒಮ್ಮೆ ರುಬ್ಬಿಕೊಂಡಿರುವ ದೋಸೆಹಿಟ್ಟು ವಾರಗಟ್ಟಲೇ ಫ್ರೆಶ್ ಆಗಿಡಲು ಕೆಲವೊಂದು ವಿಧಾನಗಳನ್ನು ಫಾಲೋ ಮಾಡಬೇಕಾಗುತ್ತದೆ. ಫೈವ್ ಸ್ಟಾರ್ ಸೇರಿದಂತೆ ಹಲವು ಹೋಟೆಲ್‌ಗಳಲ್ಲಿ ಸರಳ ವಿಧಾನಗಳ ಮೂಲಕ ದೋಸೆಹಿಟ್ಟನ್ನು ದೀರ್ಘ ಸಮಯದವರೆಗೆ ಸ್ಟೋರ್ ಮಾಡಿಕೊಳ್ಳುತ್ತಾರೆ. ಪ್ರತಿದಿನವೂ ತಿಂಡಿ ಮಾಡಲು ಸಮಯ ಇಲ್ಲದಿದ್ರೆ ನೀವು ಸಹ ಸರಳ ವಿಧಾನಗಳ ಮೂಲಕ ದೋಸೆಹಿಟ್ಟನ್ನು ಸಂಗ್ರಹಿಸಿಟ್ಟುಕೊಳ್ಳಬಹುದು. ಇದರಿಂದ ದೋಸೆಹಿಟ್ಟು ಹುಳಿ ಬರಲ್ಲ.
1.ಉಪ್ಪು ಬಳಕೆ
ದೋಸೆಹಿಟ್ಟು ರುಬ್ಬುವಾಗ ಮತ್ತು ರುಬ್ಬಿದ ಕೂಡಲೇ ಉಪ್ಪು ಸೇರಿಸಿಕೊಳ್ಳಬಾರದು. ದೋಸೆ ಮಾಡಿಕೊಳ್ಳುವಾಗ ಬೇಕಾಗುವಷ್ಟು ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಉಪ್ಪು ಸೇರಿಸಿಕೊಳ್ಳಿ. ಇನ್ನುಳಿದ ಹಿಟ್ಟನ್ನು ಎತ್ತಿಟ್ಟುಕೊಳ್ಳಿ. ಈ ವಿಧಾನ ನಿಮ್ಮ ಹಿಟ್ಟನ್ನು ಫ್ರೆಶ್ ಆಗಿಡುತ್ತದೆ. ದೋಸೆ ಮಾಡಿಕೊಳ್ಳುವಾಗಲೇ ಅಡುಗೆಸೋಡಾ ಸಹ ಸೇರಿಸಿಕೊಳ್ಳಬೇಕೇ ಹೊರತು ಇಡೀ ಹಿಟ್ಟಿಗೆ ಹಾಕಿಕೊಳ್ಳಬಾರದು.
2.ಪಾತ್ರೆಗಳ ಬಳಕೆ
ದೋಸೆಹಿಟ್ಟನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಸ್ಟೋರ್ ಮಾಡಿಕೊಳ್ಳೋದರಿಂದ ಚೆನ್ನಾಗಿ ಹುದುಗಿಕೊಳ್ಳುತ್ತದೆ. ಸ್ಟೀಲ್ ಬದಲಾಗಿ ಅಲ್ಯುಮಿನಿಯಂ ಪಾತ್ರೆಗಳನ್ನು ಬಳಕೆ ಮಾಡಿ. ಹಾಗೆಯೇ ರುಬ್ಬಿದ ಹಿಟ್ಟನ್ನು ದೊಡ್ಡಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ದೋಸೆ ಮಾಡುವಾಗ ನಿಮಗೆಷ್ಟು ಬೇಕು ಅಷ್ಟು ಹಿಟ್ಟನ್ನು ಮತ್ತೊಂದು ಚಿಕ್ಕ ಪಾತ್ರೆಗೆ ಹಾಕಿಕೊಂಡು ಬಳಸಬೇಕು. ಸ್ಟೀಲ್ ಪಾತ್ರೆಯಲ್ಲಿ ದೋಸೆಹಿಟ್ಟು ಕಡಿಮೆ ಸಮಯದಲ್ಲಿ ಹಾಳಾಗುವ ಸಾಧ್ಯತೆ ಇರುತ್ತದೆ.
3.ವಿಳ್ಯದೆಲೆ
ದೋಸೆಹಿಟ್ಟು ರುಬ್ಬಿದ ಕೂಡಲೇ ಅದರ ಮೇಲೊಂದು ವಿಳ್ಯದೆಲೆಯನ್ನಿಡಬೇಕು. ಹಿಟ್ಟು ಹುದುಗಿದ ಮೇಲೆ ಹೊಸ ವಿಳ್ಯದೆಲೆಯನ್ನು ಇರಿಸಬೇಕು. ಹೀಗೆ ಪ್ರತಿದಿನವೂ ವಿಳ್ಯದೆಲೆಯನ್ನು ಬದಲಾಯಿಸೋದರಿಂದ ಹಿಟ್ಟು ಫ್ರೆಶ್ ಅಗಿರುತ್ತದೆ. ಹಾಗೆಯೇ ವಿಳ್ಯದೆಲೆನ್ನು ಚೆನ್ನಾಗಿ ತೊಳೆದುಕೊಂಡು ಹಿಮ್ಮುಖವಾಗಿ ಹಿಟ್ಟಿನ ಮೇಲಿಡೋದನ್ನು ಮರೆಯಬೇಡಿ.
4.ಮೆಂತೆ
ಹಿಟ್ಟು ರುಬ್ಬಿಕೊಳ್ಳುವ ಮುನ್ನ ಸುಮಾರು 4 ರಿಂದ 5 ಗಂಟೆ ಬಳಿಕ ನೆನೆಸಿಟ್ಟುಕೊಂಡ ಮೆಂತ್ಯೆಯನ್ನು ಸೇರಿಸಿ ರುಬ್ಬಿಕೊಳ್ಳಿ. ಮೆಂತೆ ಸೇರಿಸೋದರಿಂದ ದೋಸೆ ಕ್ರಿಸ್ಪಿಯಾಗಿ ಬರುತ್ತದೆ. ಹಾಗೆಯೇ ದೋಸೆ ಗಾಢವಾದ ಬಣ್ಣ ಬರುತ್ತದೆ. ಮೆಂತೆದಲ್ಲಿನ ಅಂಶಗಳು ಹಿಟ್ಟು ಬೇಗ ಹುಳಿಯಾಗೋದನ್ನು ತಡೆಯುತ್ತದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಅಣಬೆ ಬೆಳೆದು ಲಕ್ಷ ಲಕ್ಷ ಗಳಿಸಿ: ಸುಲಭದಲ್ಲಿ ಬೆಳೆಯೋದು ಹೇಗೆ? ಸಂಪೂರ್ಣ ಡಿಟೇಲ್ಸ್ ಇಲ್ಲಿದೆ
5.ಅವಲಕ್ಕಿ
ಇನ್ನು ಸಾಮಾನ್ಯವಾಗಿ ಎಲ್ಲರೂ ದೋಸೆಹಿಟ್ಟು ಮಾಡಿಕೊಳ್ಳುವಾಗ ನೆನಸಿವ ಅವಲಕ್ಕಿ ಅಥವಾ ಸಬ್ಬಕ್ಕಿಯನ್ನು ಸೇರಿಸಿಕೊಳ್ಳುತ್ತಾರೆ. ಸಬ್ಬಕ್ಕಿ ಮತ್ತು ಅವಲಕ್ಕಿಯನ್ನು ಸಹ ಕನಿಷ್ಠ ಮೂರರಿಂದ ನಾಲ್ಕು ಗಂಟೆ ನೆನೆಸಿಟ್ಟುಕೊಳ್ಳಬೇಕು.
ಇದನ್ನೂ ಓದಿ: ಇಡ್ಲಿ ಮಾರಿ ತಿಂಗಳಿಗೆ ₹50,000 ಲಾಭ ಮಾಡ್ಬೋದು, ಈ ಬಿಸಿನೆಸ್ ಐಡಿಯಾ ತಿಳ್ಕೊಳ್ಳಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.