ಹೈ ಕೊಲೆಸ್ಟ್ರಾಲ್ ಇರೋರು ಆಲೂಗಡ್ಡೆ ತಿನ್ನಬಹುದೇ?
ಈ ಫಾಸ್ಟ್ ಆಗಿರೋ ಲೈಫ್ ನಲ್ಲಿ ಅನಾರೋಗ್ಯಕರ ಡಯಟ್ ಮತ್ತು ಕಳಪೆ ಲೈಫ್ ಸ್ಟೈಲ್ ನಿಂದಾಗಿ, ಹೆಚ್ಚಿನ ಜನರು ಬೊಜ್ಜಿನ ಸಮಸ್ಯೆಗೆ ಸಾಮಾನ್ಯವಾಗಿ ಬಲಿಯಾಗುತ್ತಿದ್ದಾರೆ. ತಜ್ಞರ ಪ್ರಕಾರ, ಇಡೀ ವಿಶ್ವದ ಪ್ರತಿಯೊಬ್ಬ ಮೂರನೇ ವ್ಯಕ್ತಿಯು ಕೊಲೆಸ್ಟ್ರಾಲ್ ಸಮಸ್ಯೆಯಿಂದ ತೊಂದರೆಗೀಡಾಗುತ್ತಿದ್ದಾನೆ. ಕೊಲೆಸ್ಟ್ರಾಲ್ ದೇಹದ ಅನೇಕ ಪ್ರಕ್ರಿಯೆಗಳಿಗೆ ಮುಖ್ಯವಾಗಿದೆ. ಇದು ಕೊಬ್ಬಿನ ವಸ್ತುವಾಗಿದ್ದು, ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತೆ. ಆದರೆ ಹೆಚ್ಚಿನ ಕೊಲೆಸ್ಟ್ರಾಲ್ ಇದ್ರೆ ಅನಾರೊಗ್ಯ ಸಮಸ್ಯೆ ಕಾಡುತ್ತೆ. ಹಾಗಿದ್ರೆ ಕೊಲೆಸ್ಟ್ರಾಲ್ ಕಡಿಮೆ ಮಾಡೋದು ಹೇಗೆ?
ಆರೋಗ್ಯವಾಗಿರಲು, ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳೋದು ಬಹಳ ಮುಖ್ಯ, ಇದಕ್ಕಾಗಿ ನೀವು ನಿಮ್ಮ ದೈನಂದಿನ ದಿನಚರಿಯಲ್ಲಿ ಸರಿಯಾದ ಆಹಾರ ಮತ್ತು ದೈಹಿಕ ವ್ಯಾಯಾಮ ಸೇರಿಸಬೇಕು. ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟ ಹೃದಯಾಘಾತದಂತಹ(Heart attack) ಗಂಭೀರ ಮತ್ತು ಮಾರಣಾಂತಿಕ ಸ್ಥಿತಿಗಳಿಗೆ ಕಾರಣವಾಗಬಹುದು.
ಹೆಚ್ಚು ಕೊಲೆಸ್ಟ್ರಾಲ್(Cholesterol) ಇರುವ ರೋಗಿಗಳು ಹೆಚ್ಚಾಗಿ ತಿನ್ನುವ ಮತ್ತು ಕುಡಿಯುವುದರ ಬಗ್ಗೆ ತುಂಬಾ ಯೋಚನೆ ಮಾಡ್ತಾರೆ. ಯಾವ ಆಹಾರ ತಿಂದರೆ ಆರೋಗ್ಯಕ್ಕೆ ಉತ್ತಮ, ಯಾವ ಆಹಾರ ತಿಂದರೆ ಎಫೆಕ್ಟ್ ಆಗುತ್ತೆ, ಅನ್ನುವ ಬಗ್ಗೆ ಯೋಚನೆ ಮಾಡ್ತಾರೆ, ಹಾಗಿದ್ರೆ ಬನ್ನಿ ಹೆಚ್ಚಿನ ಕೊಲೆಸ್ಟ್ರಾಲ್ ನಲ್ಲಿ ಆಲೂಗಡ್ಡೆಯ ಸೇವನೆಯು ಎಷ್ಟು ಪರಿಣಾಮಕಾರಿ ಎಂದು ತಿಳಿಯೋಣ.
ಹೈ ಕೊಲೆಸ್ಟ್ರಾಲ್ ಇರುವಾಗ ಆಲೂಗಡ್ಡೆ ತಿನ್ನಬಹುದೇ?
ಆಲೂಗಡ್ಡೆ(Potato) ತಿನ್ನಲು ರುಚಿಕರ ಮಾತ್ರವಲ್ಲ, ಆಲೂಗಡ್ಡೆಯ ನ್ಯೂಟ್ರಿಷನಲ್ ವ್ಯಾಲ್ಯೂ ಇತರ ತರಕಾರಿಗಳಂತೆ ಸಾಕಷ್ಟು ಹೆಚ್ಚಾಗಿದೆ. ಆಲೂಗಡ್ಡೆಯಲ್ಲಿ ಸೊಲ್ಯುಬಲ್ ಫೈಬರ್ ನೊಂದಿಗೆ ಮಿನರಲ್ಸ್ ಕೂಡ ಹೇರಳವಾಗಿವೆ. ಇದು ಚಯಾಪಚಯ ಕ್ರಿಯೆಗೆ ಸಹಕಾರಿಯಾಗಿದೆ.
ಆಲೂಗಡ್ಡೆಯಲ್ಲಿರುವ ಸೊಲ್ಯುಬಲ್ ಫೈಬರ್ ದೇಹದ ಸರಿಯಾದ ಜೀರ್ಣಕ್ರಿಯೆಗೆ(Digestion) ಸಹಾಯ ಮಾಡುತ್ತವೆ ಮತ್ತು ಪಿತ್ತರಸ ಆಸಿಡ್ ಕಡಿಮೆ ಮಾಡುವ ಕೆಲಸ ಮಾಡುತ್ತವೆ. ಪಿತ್ತರಸ ಆಮ್ಲವು ಕೊಲೆಸ್ಟ್ರಾಲ್ ಗೆ ಸಂಬಂಧಿಸಿದೆ, ಈ ಕಾರಣದಿಂದಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವೂ ಕಡಿಮೆ ಇರುತ್ತೆ.
ತಜ್ಞರ ಪ್ರಕಾರ, ಸೊಲ್ಯುಬಲ್ ಫೈಬರ್ ಹೊಂದಿರುವ ಆಹಾರಗಳು ಅಧಿಕ ರಕ್ತದೊತ್ತಡ(HIgh Blood pressure), ಕೆಟ್ಟ ಕೊಲೆಸ್ಟ್ರಾಲ್ ಮತ್ತು ದೇಹದಲ್ಲಿ ಉರಿಯೂತದಂತಹ ಸಮಸ್ಯೆಗಳ ರೋಗಲಕ್ಷಣಗಳಲ್ಲಿ ಹೆಚ್ಚಿನ ಪರಿಹಾರ ನೀಡುತ್ತವೆ. ಆದುದರಿಂದ ಇವುಗಳನ್ನು ನಿಮ್ಮ ಆಹಾರದಲ್ಲಿ ಸೇವಿಸೋದು ತುಂಬಾನೆ ಉತ್ತಮ.
ಆಲೂಗಡ್ಡೆಯಲ್ಲಿ ಸೊಲ್ಯುಬಲ್ ಫೈಬರ್(Soluble fiber) ಸಮೃದ್ಧವಾಗಿದೆ, ಇದನ್ನು ಹೆಚ್ಚಿನ ಕೊಲೆಸ್ಟ್ರಾಲ್ ರೋಗಿಗಳು ಯಾವುದೇ ಯೋಚನೆ , ಹೆದರಿಕೆ ಇಲ್ಲದೇನೆ ಸೇವಿಸಬಹುದು. ಆಲೂಗಡ್ಡೆಯ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳೋದು ಮಾತ್ರವಲ್ಲದೆ, ದೇಹವು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಪಡೆಯುತ್ತೆ.
ಕೊಲೆಸ್ಟ್ರಾಲ್ ನಿರ್ವಹಿಸಲು ಆಲೂಗಡ್ಡೆಯನ್ನು ಸೇವಿಸೋದು ಹೇಗೆ?
-ಕೊಲೆಸ್ಟ್ರಾಲ್ ನಲ್ಲಿ ಆಲೂಗಡ್ಡೆಯ ಸೇವನೆಯನ್ನು ನೀವು ಸರಿಯಾಗಿ ಸೇವಿಸಿದರೆ ಮಾತ್ರ ಅದು ಸುರಕ್ಷಿತವಾಗಿರುತ್ತೆ .
- ಆಲೂಗಡ್ಡೆ ಸಿಪ್ಪೆಯಲ್ಲಿ(Potato peel) ಹೆಚ್ಚಿನ ನಾರಿನಂಶವಿದೆ, ಆದ್ದರಿಂದ ಆಲೂಗಡ್ಡೆಯನ್ನು ಸಿಪ್ಪೆಯೊಂದಿಗೆ ಸೇವಿಸಿ.
- ಆಲೂಗಡ್ಡೆಯನ್ನು ಎಣ್ಣೆಯಲ್ಲಿ ಕರಿಯೋದರಿಂದ ಅದರ ಎಲ್ಲಾ ಪೋಷಕಾಂಶಗಳು ನಷ್ಟವಾಗುತ್ತೆ ಮತ್ತು ಕೊಲೆಸ್ಟ್ರಾಲ್ ಹೆಚ್ಚಾಗುತ್ತೆ, ಆದ್ದರಿಂದ ಆಲೂಗಡ್ಡೆಯನ್ನು ಬೇಯಿಸಿ ಅಥವಾ ಹುರಿಯುವ ಮೂಲಕ ಮಾತ್ರ ಸೇವಿಸಿ. ಇದರಿಂದ ಕೊಲೆಸ್ಟ್ರಾಲ್ ಹೆಚ್ಚಾಗೋದಿಲ್ಲ. ಇದನ್ನು ಮರೆಯಬೇಡಿ. ಇನ್ನು ಆಲೂಗಡ್ಡೆ ಚಿಪ್ಸ್(Potato chips) ಸೇವನೆ ಬೇಡವೇ ಬೇಡ.