ನೀವು ಹೀಗೆ ರುಬ್ಬಿದರೆ ಒಂದೇ ಹಿಟ್ಟಿನಿಂದ ಇಡ್ಲಿ, ದೋಸೆ ಎರಡನ್ನೂ ಮಾಡ್ಬೋದು
How to make idli and dosa batter: ಇಡ್ಲಿ ದೋಸೆಗಿಂತ ಸ್ವಲ್ಪ ಉತ್ತಮ. ಏಕೆಂದರೆ ಇದನ್ನು ಎಣ್ಣೆ ಇಲ್ಲದೆ ಹಬೆಯಲ್ಲಿ ತಯಾರಿಸಲಾಗುತ್ತದೆ. ನಾವು ಸಾಮಾನ್ಯವಾಗಿ ಇಡ್ಲಿಗೆ ಒಂದು ಹಿಟ್ಟು, ದೋಸೆಗೆ ಇನ್ನೊಂದು ಹಿಟ್ಟು ತಯಾರಿಸುತ್ತೇವೆ. ಆದರೆ ಈಗ ಎರಡಕ್ಕೂ ಒಂದೇ ಹಿಟ್ಟು ತಯಾರಿಸುವುದು ಹೇಗೆ ಎಂದು ನೋಡೋಣ.

ಅನ್ನ ಸೇರಿಸ್ತಾರೆ
ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಇಡ್ಲಿ ಮತ್ತು ದೋಸೆ ಅತ್ಯಂತ ಜನಪ್ರಿಯ ಟಿಫಿನ್ಸ್. ಇವುಗಳನ್ನು ಹೆಚ್ಚಾಗಿ ಅನ್ನದೊಂದಿಗೆ ತಯಾರಿಸಲಾಗುತ್ತದೆ. ಇಡ್ಲಿ ದೋಸೆಗಿಂತ ಸ್ವಲ್ಪ ಉತ್ತಮ. ಏಕೆಂದರೆ ಇದನ್ನು ಎಣ್ಣೆ ಇಲ್ಲದೆ ಹಬೆಯಲ್ಲಿ ತಯಾರಿಸಲಾಗುತ್ತದೆ. ಮಜಾ ಅಂದ್ರೆ ದೋಸೆಗೆ ಅನೇಕ ಅಭಿಮಾನಿಗಳಿದ್ದಾರೆ. ಆದರೆ ಒಂದೇ ಹಿಟ್ಟಿನಿಂದ ಎರಡನ್ನೂ ಹೇಗೆ ತಯಾರಿಸಬೇಕೆಂದು ನಾವಿಂದು ನೋಡೋಣ.
ಸೇರಿಸುವ ಪದಾರ್ಥ ಸಹ ಗಮನದಲ್ಲಿರಲಿ
ನಾವು ಒಂದೇ ರೀತಿಯ ಹಿಟ್ಟಿನಿಂದ ಇಡ್ಲಿ ಮತ್ತು ದೋಸೆ ಮಾಡಬಹುದು. ಆದರೆ ರುಬ್ಬುವ ವಿಧಾನ ತಿಳಿದಿರಬೇಕು. ಹಿಟ್ಟನ್ನು ತಯಾರಿಸುವಾಗ, ಇವುಗಳಿಗೆ ಸೇರಿಸುವ ಪದಾರ್ಥಗಳನ್ನು ಸಹ ಗಮನದಲ್ಲಿರಬೇಕು.
ಪ್ರತ್ಯೇಕವಾಗಿ 7-8 ಗಂಟೆಗಳ ಕಾಲ ನೆನೆಸಿ
ಈಗ ನಾವು 6 ಗ್ಲಾಸ್ ಅಕ್ಕಿ ತೆಗೆದುಕೊಂಡರೆ ಅದಕ್ಕೆ 3 ಗ್ಲಾಸ್ ಉದ್ದಿನ ಬೇಳೆಯನ್ನು ಸೇರಿಸಬೇಕು. ಇವೆರಡನ್ನೂ ಪ್ರತ್ಯೇಕವಾಗಿ ನೆನೆಸಬೇಕು. ತೊಳೆದು ಸುಮಾರು 7-8 ಗಂಟೆಗಳ ಕಾಲ ಒಳ್ಳೆಯ ನೀರಿನಲ್ಲಿ ನೆನೆಸಿಟ್ಟರೆ ಒಳ್ಳೆಯದು.
ಒಂದು ಚಮಚ ಮೆಂತ್ಯ
ನೀವು ಮೆಂತ್ಯವನ್ನು ಕೂಡ ಸೇರಿಸಬೇಕು. ನೆನಸಿಡಬೇಕು. ಮೆಂತ್ಯವನ್ನು ಸೇರಿಸುವುದರಿಂದ ದೋಸೆಗಳಿಗೆ ಒಳ್ಳೆಯ ಬಣ್ಣ ಬರುತ್ತದೆ. ಹಾಗೆಯೇ ಅವು ಗರಿಗರಿಯಾಗಿರುತ್ತವೆ. ಒಂದು ಚಮಚ ಮೆಂತ್ಯ ಸಾಕು.
ಪ್ರತ್ಯೇಕವಾಗಿ ರುಬ್ಬಿ ಹುದುಗಲು ಬಿಡಿ
ಈಗ ಮೊದಲಿಗೆ ನೆನೆಸಿದ ಅಕ್ಕಿಯನ್ನು ನುಣ್ಣಗೆ ರಬ್ಬಿಕೊಳ್ಳಿ. ನಂತರ ಉದ್ದಿನ ಬೇಳೆ ರುಬ್ಬಿ. ಎರಡನ್ನೂ ಮಿಶ್ರಣ ಮಾಡಿ ಹುದುಗಲು ಬಿಡಿ. ಇದು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹವಾಮಾನ ಬಿಸಿಯಾಗಿದ್ದರೆ ಅದು ಬೇಗನೆ ಹುದುಗುತ್ತದೆ. ಆದರೆ ನೀರು ಹೆಚ್ಚು ಮತ್ತು ಕಡಿಮೆ ಇರದಂತೆ ನೋಡಿಕೊಳ್ಳಿ.
ಇಡ್ಲಿ ಮಾಡುವಾಗ
ಈಗ ನೀವು ಈ ಹಿಟ್ಟಿನಿಂದ ಇಡ್ಲಿ ಮತ್ತು ದೋಸೆಗಳನ್ನು ಹೇಗೆ ಮಾಡಬಹುದು ಎಂದು ನೋಡೋಣ.. ಇಡ್ಲಿ ಮಾಡುವಾಗ ಬಟ್ಟಲಿಗೆ ಸ್ವಲ್ಪ ಎಣ್ಣೆ ಹಾಕಲು ಮರೆಯಬೇಡಿ. ಆಗ ಮಾತ್ರ ಅವು ಬೇಗನೆ ಬೇಯುತ್ತವೆ. ಇಡ್ಲಿಗಳನ್ನು ಮಧ್ಯಮ ಉರಿಯಲ್ಲಿ ಬೇಯಿಸಬೇಕು. ಅದೇ ರೀತಿ ಇಡ್ಲಿಗಳು ಬೆಂದ ನಂತರ ಸ್ವಲ್ಪ ಸಮಯದವರೆಗೆ ಕುಕ್ಕರ್ ಜ್ವಾಲೆಯನ್ನು ಆಫ್ ಮಾಡಿ ಮತ್ತು ಕುಕ್ಕರ್ ಮುಚ್ಚಳವನ್ನು ತೆಗೆಯದೆ ಹಾಗೆಯೇ ಇರಿಸಿ.
ದೋಸೆ ಮಾಡುವಾಗ
ಈಗ ದೋಸೆಗಳನ್ನು ಎಂದಿನಂತೆ ಮಧ್ಯಮ ಉರಿಯಲ್ಲಿ ಮಾಡಿ. ಅವು ಚೆನ್ನಾಗಿ ಗರಿಗರಿಯಾಗಿರುತ್ತವೆ ಮತ್ತು ರುಚಿಯಾಗಿರುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

