- Home
- Life
- Food
- ಗರಿಗರಿ ಚಿಪ್ಸ್ನ ರಹಸ್ಯ ಬಯಲು- ಷೆಫ್ ಹೇಳಿಕೊಟ್ಟ ಸಿಂಪಲ್ ಟಿಪ್ಸ್ನಿಂದ ಕುರುಂಕುರುಂ, ಟೇಸ್ಟಿ ಟೇಸ್ಟಿ chips ರೆಡಿ
ಗರಿಗರಿ ಚಿಪ್ಸ್ನ ರಹಸ್ಯ ಬಯಲು- ಷೆಫ್ ಹೇಳಿಕೊಟ್ಟ ಸಿಂಪಲ್ ಟಿಪ್ಸ್ನಿಂದ ಕುರುಂಕುರುಂ, ಟೇಸ್ಟಿ ಟೇಸ್ಟಿ chips ರೆಡಿ
ಮನೆಯಲ್ಲಿ ಮಾಡುವ ಆಲೂಗಡ್ಡೆ ಚಿಪ್ಸ್ ಅಂಗಡಿಯಂತೆ ಗರಿಗರಿಯಾಗಿರುವುದಿಲ್ಲ ಎಂಬ ಚಿಂತೆಯೇ? ಮಾಸ್ಟರ್‌ಷೆಫ್ ಅಮಿತ್ ಅವರು ಹಂಚಿಕೊಂಡಿರುವ ವಿಶೇಷ ತಂತ್ರಗಳನ್ನು ಬಳಸಿ. ಐಸ್ ನೀರು, ಕುದಿಯುವ ನೀರು ಮತ್ತು ಸರಿಯಾದ ತಾಪಮಾನದಲ್ಲಿ ಕರಿಯುವ ವಿಧಾನದಿಂದ ಪರಿಪೂರ್ಣ ಗರಿಗರಿ ಚಿಪ್ಸ್ ತಯಾರಿಸಬಹುದು.

ಗರಿಗರಿ ಚಿಪ್ಸ್ ಟಿಪ್ಸ್
ಮನೆಯಲ್ಲಿ ಏನೇ ಮಾಡಿದ್ರೂ ಮಾರ್ಕೆಟ್ನಲ್ಲಿ ಸಿಗುವ ಹಾಗೆ ಗರಿಗರಿ ಚಿಪ್ಸ್ ಆಗೋದೇ ಇಲ್ಲ ಎನ್ನೋ ಚಿಂತೆ ಬಿಟ್ಟುಬಿಡಿ. ಮಾಸ್ಟರ್‌ಷೆಫ್ ಹೇಳಿಕೊಟ್ಟಿರೋ ಈ ಟಿಪ್ಸ್ ಫಾಲೋ ಮಾಡಿ. ಸಾಧಾರಣವಾಗಿ ಮಾಡುವ ತಪ್ಪುಗಳನ್ನು ಇಲ್ಲಿ ತಿಳಿಸಿರುವ ಷೆಫ್ ಅಮಿತ್ ಅವರು, ಇದನ್ನು ಸರಿಯಾಗಿ ಮಾಡುವ ವಿಧಾನವನ್ನು ತಮ್ಮ ಜಾಲತಾಣದಲ್ಲಿ ಹೇಳಿಕೊಟ್ಟಿದ್ದಾರೆ.
ಐಸ್ ನೀರಿನಲ್ಲಿ ಸ್ಲೈಸ್
ಮೊದಲಿಗೆ ಆಲೂಗಡ್ಡೆಯ ಸಿಪ್ಪೆ ತೆಗೆದು, ಸ್ಲೈಸ್ ಮಾಡಿಕೊಳ್ಳಬೇಕು. ಆದರೆ ಇಲ್ಲಿಂದಲೇ ಶುರುವಾಗುವುದು ಟಿಪ್ಸ್. ಇದನ್ನು ಆರಂಭದಲ್ಲಿ ಐಸ್ ನೀರಿನಲ್ಲಿ ಸ್ಲೈಸ್ಗಳನ್ನು ಇಡಬೇಕು. ಇದರಿಂದ ಆಲೂಗಡ್ಡೆಯಲ್ಲಿ ಇರುವ ಸ್ಟಾರ್ಚ್ ಹೋಗಿ ಹಾರ್ಡ್ ಆಗುತ್ತದೆ ಎನ್ನುತ್ತಾರೆ ಅಮಿತ್.
ಕುದಿಯುವ ನೀರಿಗೆ ಹಾಕಿ, ಪುನಃ ಐಸ್ ವಾಟರ್ಗೆ ಹಾಕಬೇಕು
ಬಳಿಕ ಅದನ್ನು ಕುದಿಯುವ ನೀರಿನಲ್ಲಿ ಹಾಕಬೇಕು. ಪುನಃ ಅದನ್ನು ತೆಗೆದು ಅಲ್ಲಿಯೇ ಇರುವ ಐಸ್ ವಾಟರ್ನಲ್ಲಿ ಹಾಕಬೇಕು.
ಟವಲ್ಗೆ ಹಾಕಿ
ಬಳಿಕ ಅದನ್ನು ಸೋಸಿ ಸಂಪೂರ್ಣ ನೀರನ್ನು ತೆಗೆಯಬೇಕು. ಬಳಿಕ ಒಂದು ಟವಲ್ನಲ್ಲಿ ನೀರು ಹೀರಿಕೊಳ್ಳುವ ರೀತಿಯಲ್ಲಿ ಸ್ಪ್ರೆಡ್ ಮಾಡಿ ಇಡಬೇಕು.
ಮೀಡಿಯಂ ಟೆಂಪರೇಚರ್
ಸಂಪೂರ್ಣ ನೀರು ಹೀರಿದ ಬಳಿಕ ಅದನ್ನು ಮೀಡಿಯಂ ಟೆಂಪರೇಚರ್ ಎಣ್ಣೆಯಲ್ಲಿ ಹಾಕಿ ತೆಗೆಯಬೇಕು. ಸುಮಾರು 160 ಡಿಗ್ರಿ ಟೆಂಪರೇಚರ್ ಇರಬೇಕು.
ಗರಿಗರಿ ಚಿಪ್ಸ್ ರೆಡಿ
ಬಳಿಕ ಅದರ ಮೇಲೆ ಖಾರದ ಪುಡಿ ಹಾಕಿ ಮಿಕ್ಸ್ ಮಾಡಿದ್ರೆ, ಅಂಗಡಿಯಲ್ಲಿ ಸಿಗುವ ಚಿಪ್ಸ್ಗಿಂತಲೂ ಗರಿಗರಿಯಾಗಿ, ಟೇಸ್ಟಿ ಟೇಸ್ಟಿಯಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

