ದಾವಣಗೆರೆ ಬೆಣ್ಣೆ ದೋಸೆ ರುಚಿ ಸ್ವಾದ ಕನ್ನಡಿಗರಿಗೆ ಬಿಡಿಸಿ ಹೇಳಬೇಕಾಗಿಲ್ಲ. ಆದರೆ ದೋಸೆ ಸಂಪೂರ್ಣ ಲಾಭವನ್ನು ಮುಂಬೈನ ಸಣ್ಣ ಹೊಟೆಲ್ ಒಂದು ಪಡೆಯುತ್ತಿದೆ. ಬರೋಬ್ಬರಿ 350 ಕೋಟಿ ರೂಪಾಯಿ ಬ್ಯೂಸಿನೆಸ್ ಕುರಿತು ಉದ್ಯಮಿ ಹರ್ಷಾ ಗೊಯೆಂಕಾ ಹೇಳಿದ್ದೇನು?

ಮುಂಬೈ (ಆ.10) ದಾವಣಗೆರೆ ಬೆಣ್ಣೆ ದೋಸೆ ಕರ್ನಾಟಕದಲ್ಲಿ ಮಾತ್ರವಲ್ಲ ಹಲವು ಭಾಗದಲ್ಲಿ ಜನಪ್ರಿಯವಾಗಿದೆ. ಅಥೆಂಟಿಕ್ ದಾವಣಗೆರೆ ಬೆಣ್ಣೆ ದೋಸೆ ತಿಂದವರು ಯಾವತ್ತೂ ರುಚಿ, ಸ್ವಾದ ಮರೆಯಲ್ಲ. ಬಾಯಲ್ಲಿ ನೀರೂರಿಸುವ ದಾವಣಗೆರೆ ಬೆಣ್ಣೆ ದೋಸೆ ಖುದ್ದು ದಾವಣೆಗೆರೆಯಲ್ಲಿ, ಬೆಂಗಳೂರಿನಲ್ಲಿ ಹಾಗೂ ಕರ್ನಾಟಕದಲ್ಲಿ ಅದೆಷ್ಟು ಕಮಾಯಿ ಮಾಡುತ್ತಿದ್ದೆ ಅನ್ನೋದು ಸ್ಪಷ್ಟವಿಲ್ಲ, ಆದರೆ ದೂರದ ಮುಂಬೈನಲ್ಲಿ ಸಣ್ಣ ಹೊಟೆಲ್ ಬರೋಬ್ಬರಿ 350 ಕೋಟಿ ಉದ್ಯಮ ನಡೆಸುತ್ತಿದ್ದಾರೆ. ಈ ಮಾತನ್ನು ಖ್ಯಾತ ಉದ್ಯಮಿ ಹರ್ಷಾ ಗೊಯೆಂಕಾ ಬಹಿರಂಗಪಡಿಸಿದ್ದಾರೆ.

ಮುಂಬೈನಲ್ಲಿ ಸದ್ದು ಮಾಡುತ್ತಿದೆ ದಾವಣಗೆರೆ ಬೆಣ್ಣೆ ದೋಸೆ

ದಾವಣಗೆರೆ ಬೆಣ್ಣೆ ದೋಸೆಗೆ ಕನ್ನಡಿಗರು ಮಾತ್ರವಲ್ಲ, ದೇಶದ ದೋಸೆ ಪ್ರಿಯರ ನೆಚ್ಚಿನ ಉಪಹಾರವಾಗಿ ಮಾರ್ಪಟ್ಟಿದೆ. ಮುಂಬೈನಲ್ಲಿ ಕೇವಲ 12 ಸೀಟುಗಳಿಂದ ಆರಂಭಗೊಂಡ ಸಣ್ಣ ದೋಸೆ ಹೊಟೆಲ್ ಇದೀಗ ದಾವಣಗೆರೆ ಬೆಣ್ಣೆ ದೋಸೆಯಿಂದ 350 ಕೋಟಿ ಪೂಪಾಯಿ ಆದಾಯದ ಹೊಟೆಲ್ ಆಗಿ ಬೆಳೆದಿದೆ. ಈ ಯಶಸ್ಸಿನ ಸೀಕ್ರೆಟನ್ನು ಹರ್ಷಾ ಗೊಯೆಂಕಾ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಮುಂಬೈನ ಬ್ಯಾಂಡ್ರಾ ಬಳಿ ಸಣ್ಣ ದೋಸೆ ಸೆಂಟರ್ ಆರಂಭಗೊಂಡಿತ್ತು. ಕೇವಲ 12 ಸೀಟುಗಳ ಸಣ್ಣ ಹೊಟೆಲ್ ಆಗಿತ್ತು. ಆದರೆ ಯಾವುದೇ ಸ್ಟಾರ್ ಹೊಟೆಲ್ ನೀಡದ ಅಥೆಂಟಿಕ್ ದಾವಣೆಗೆರೆ ಬೆಣ್ಣೆ ದೋಸೆಯನ್ನು ಅದೇ ಸ್ವಾದದಲ್ಲಿ, ಅಷ್ಟೇ ರುಚಿಯಲ್ಲಿ ಈ ಹೊಟೆಲ್ ನೀಡಿತ್ತು. ಬಿಸಿಬಿಸಿ, ಗರಿಗರಿ ಬೆಣ್ಣೆ ದೋಸೆ, ಕೊಬ್ಬರಿ ಚಟ್ನಿ ಮುಂಬೈ ಜನರ ಬಾಯಲ್ಲಿ ನೀರೂರಿಸುವ ಉಪಹಾರವಾಗಿ ಮಾರ್ಪಟ್ಟಿತ್ತು. ಹೊಟೆಲ್ ಯಾವತ್ತೂ ಜಾಹೀರಾತು ನೀಡಿಲ್ಲ, ಪಿಆರ್ ಕೆಲಸ ಮಾಡಿಲ್ಲ, ಸೋಶಿಯಲ್ ಮೀಡಿಯಾಗಳಲ್ಲೂ ಪ್ರಮೋಶನ್ ಮಾಡಲಿಲ್ಲ. ಆದರೆ ಬಾಯಿಂದ ಬಾಯಿಗೆ ಈ ಹೊಟೆಲ್ ಕುರಿತು ಜನರೇ ಮಾಹಿತಿ ಹಂಚಿಕೊಂಡಿದ್ದರು.

350 ಕೋಟಿ ಉದ್ಯಮವಾಗಿದ್ದು ಹೇಗೆ?

ಸಣ್ಣ ಹೊಟೆಲ್ ಇದೀಗ 350 ಕೋಟಿ ರೂಪಾಯಿ ಉದ್ಯಮವಾಗಿದ್ದು ಹೇಗೆ ಎಂಬುದನ್ನು ಉದ್ಯಮಿ ಹರ್ಷಾ ಗೊಯೆಂಕಾ ವಿವರಿಸಿದ್ದಾರೆ. ಅಂದಿನಿಂದ ಇಂದಿನವರಗೆ, ಸಣ್ಣ ಹೊಟೆಲ್‌ನಿಂದ ಇದೀಗ ದೊಡ್ಡ ಹೊಟೆಲ್ ವರಗೆ ಬೆಳೆದು ನಿಂತರೂ ದೋಸೆಯಲ್ಲಿ, ರುಚಿಯಲ್ಲಿ ಸ್ವಾದದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹೊಟೆಲ್‌ನಲ್ಲಿ ನೂರಾರೂ ಖಾದ್ಯಗಳಿಲ್ಲ, ಮೆನು ಲಿಸ್ಟ್ ದೊಡ್ಡದಿಲ್ಲ. ಪ್ರಮುಖವಾಗಿ ದೋಸೆ ಅದರಲ್ಲೂ ದಾವಣಗೆರೆ ಬೆಣ್ಣೆ ದೋಸೆ. ಪ್ರತಿ ದಿನ ಈ ಹೊಟೆಲ್ ತುಂಬಿ ತುಳುಕುತ್ತದೆ. ಆದರೆ ಇಲ್ಲಿ ಬಂದವರು ಹೆಚ್ಚು ಕಾಯಬೇಕಿಲ್ಲ. ತ್ವರಿತವಾಗಿ ದೋಸೆ ಸಿಗುತ್ತದೆ. ಇದೀಗ ಉದ್ಯಮ ವಿಸ್ತರಿಸಿದ್ದಾರೆ. ಆಧುನಿಕ ಲೇಔಟ್, ಆಧುನಿಕತೆ ಸ್ಪರ್ಶ ನೀಡಿದ್ದರು, ರುಚಿ ವಿಚಾರದಲ್ಲಿ ರಾಜಿಯಾಗಿಲ್ಲ ಎಂದು ಹರ್ಷಾ ಗೊಯೆಂಕಾ ಯಶಸ್ಸಿನ ಹಿಂದಿನ ಸೀಕ್ರೆಟ್ ಹೇಳಿದ್ದಾರೆ.