MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • ಮಾಡಿಟ್ಟ ಚಪಾತಿ ಬೇಗ ಗಟ್ಟಿಯಾಗತ್ತಾ? ಹೆಚ್ಚಿನವರು ಮಾಡ್ತಿರೋ ನಾಲ್ಕು ತಪ್ಪು ತಿಳಿಸಿದ ಮಾಸ್ಟರ್​ಷೆಫ್​

ಮಾಡಿಟ್ಟ ಚಪಾತಿ ಬೇಗ ಗಟ್ಟಿಯಾಗತ್ತಾ? ಹೆಚ್ಚಿನವರು ಮಾಡ್ತಿರೋ ನಾಲ್ಕು ತಪ್ಪು ತಿಳಿಸಿದ ಮಾಸ್ಟರ್​ಷೆಫ್​

ಚಪಾತಿ ತಣ್ಣಗಾದಾಗ ಗಟ್ಟಿಯಾಗಲು ಹಿಟ್ಟು ಕಲಸುವುದರಿಂದ ಹಿಡಿದು ಸಂಗ್ರಹಿಸುವವರೆಗೆ ಮಾಡುವ ನಾಲ್ಕು ಸಾಮಾನ್ಯ ತಪ್ಪುಗಳೇ ಕಾರಣ. ಬೆಚ್ಚಗಿನ ನೀರು ಬಳಸುವುದು, ಹಿಟ್ಟಿಗೆ ವಿಶ್ರಾಂತಿ ನೀಡುವುದು, ಸರಿಯಾದ ಉರಿಯಲ್ಲಿ ಬೇಯಿಸುವುದು ಚಪಾತಿಯನ್ನು ದೀರ್ಘಕಾಲ ಮೃದುವಾಗಿಡಬಹುದು ಎಂದು ಷೆಫ್​ ಸಲಹೆ ನೀಡುತ್ತಾರೆ.

1 Min read
Author : Suchethana D
Published : Aug 09 2026, 06:15 PM IST
Share this Photo Gallery
  • FB
  • TW
  • Linkdin
  • Whatsapp
16
ತಣ್ಣಗಾಗುತ್ತಿದ್ದಂತೆ ಚಪಾತಿ ಗಟ್ಟಿ
Image Credit : Asianet News

ತಣ್ಣಗಾಗುತ್ತಿದ್ದಂತೆ ಚಪಾತಿ ಗಟ್ಟಿ

ಎಷ್ಟೋ ಸಂದರ್ಭಗಳಲ್ಲಿ ಚಪಾತಿ ಮಾಡಿಟ್ಟ ಕೆಲವೇ ಗಂಟೆಗಳಲ್ಲಿ ಅದು ತಣ್ಣಗಾಗುತ್ತಿದ್ದಂತೆಯೇ ಗಟ್ಟಿಯಾಗಿಬಿಡುತ್ತದೆ. ಇದಕ್ಕೆ ಕಾರಣ ಏನು ಗೊತ್ತಾ? ನೀವು ಮಾಡ್ತಿರೋ ನಾಲ್ಕು ತಪ್ಪುಗಳೇ ಇದಕ್ಕೆ ಕಾರಣ ಎನ್ನುತ್ತಾರೆ ಮಾಸ್ಟರ್​ಷೆಫ್​ ಮೊಬಾಸಿರ್​ ಹಾಸನ್​.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನಾಲ್ಕು ತಪ್ಪುಗಳಿಂದ ಹೀಗಾಗತ್ತೆ
Image Credit : Asianet News

ನಾಲ್ಕು ತಪ್ಪುಗಳಿಂದ ಹೀಗಾಗತ್ತೆ

ಹಾಗಿದ್ದರೆ ಆ ನಾಲ್ಕು ತಪ್ಪುಗಳು ಯಾವುದು ಎಂದು ನೋಡೋಣ. ಇದು ಶುರುವಾಗುವುದು ಹಿಟ್ಟು ಕಲಸುವುದರಿಂದಲೇ. ಅಲ್ಲಿಂದ ಆಗುವ ತಪ್ಪು ಪ್ರತಿ ಹೆಜ್ಜೆಯಲ್ಲಿಯೂ ಆಗುತ್ತಿದೆ.ಆದರೆ ಸಾಧಾರಣವಾಗಿ ಈ ತಪ್ಪು ಎಷ್ಟೋ ಮಂದಿಗೆ ತಿಳಿದೇ ಇರುವುದಿಲ್ಲ.

Related Articles

Related image1
ನಿಮ್ಮ ಮುದ್ದಿನ ನಾಯಿಯ ಬಾಯಿ ವಾಸನೆ ಬರ್ತಿದ್ಯಾ? ನಿರ್ಲಕ್ಷ್ಯ ಸಲ್ಲದು, ಸುಲಭದ ಪರಿಹಾರ ಏನು
Related image2
ಕೈ-ಕಾಲಿಗೆ ಹಚ್ಚುವ ಮೆಹಂದಿ ಗಾಢ ಬಣ್ಣ ಬರಬೇಕಾ? ಸುಲಭದ ಟಿಪ್ಸ್​ ಫಾಲೋ ಮಾಡಿ ಅಂದ ನೋಡಿ
36
ತಪ್ಪು 1: ಕಲಸುವಾಗ ತಣ್ಣೀರು ಹಾಕುವುದು
Image Credit : mobasir_hassan Instagram

ತಪ್ಪು 1: ಕಲಸುವಾಗ ತಣ್ಣೀರು ಹಾಕುವುದು

ಮೊದಲನೆಯ ತಪ್ಪು ಎಂದರೆ, ಹಿಟ್ಟನ್ನು ಕಲಸುವಾಗ ತಣ್ಣೀರು ಹಾಕುವುದು. ಮೊಬಾಸಿರ್​ ಹಾಸನ್​ ಅವರು ಹೇಳುವ ಪ್ರಕಾರ, ಹಿಟ್ಟನ್ನು ತಣ್ಣೀರಿನಲ್ಲಿ ಕಲಸಬಾರದು, ಬದಲಿಗೆ ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಕಲಸಬೇಕು. ಇದರಿಂದ ಮಾಯಿಸ್ಟರೈಸರ್​ ಚೆನ್ನಾಗಿ ಉಳಿಯುತ್ತದೆ. ದೀರ್ಘಕಾಲ ಚಪಾತಿ ಸಾಫ್ಟ್​ ಆಗಿಯೇ ಇರುತ್ತದೆ.

46
ತಪ್ಪು 2: ತಕ್ಷಣವೇ ಚಪಾತಿ ಮಾಡುವುದು
Image Credit : mobasir_hassan Instagram

ತಪ್ಪು 2: ತಕ್ಷಣವೇ ಚಪಾತಿ ಮಾಡುವುದು

ಎರಡನೆಯ ತಪ್ಪು, ಹಿಟ್ಟನ್ನು ಕಲಸಿದ ತಕ್ಷಣವೇ ಚಪಾತಿ ಮಾಡುವುದು. ಇದು ತಪ್ಪು. ಹಿಟ್ಟನ್ನು ಕಲಸಿ ಕನಿಷ್ಠ 15 ನಿಮಿಷಗಳವರೆಗೆ ರೆಸ್ಟ್​ ಕೊಡಬೇಕು. ಅದರ ಮೇಲೆ ಒಂದು ಬಟ್ಟೆ ಮುಚ್ಚಿಟ್ಟರೆ ಚಪಾತಿ ದೀರ್ಘಕಾಲ ಸಾಫ್ಟ್​ ಆಗಿರುತ್ತದೆ.

56
ತಪ್ಪು 3: ಅತಿ ಕಡಿಮೆ ಹೀಟ್​ನಲ್ಲಿ ಬೇಯಿಸುವುದು
Image Credit : mobasir_hassan Instagram

ತಪ್ಪು 3: ಅತಿ ಕಡಿಮೆ ಹೀಟ್​ನಲ್ಲಿ ಬೇಯಿಸುವುದು

ಚಪಾತಿ ಮಾಡುವಾಗ ಅತಿ ಕಡಿಮೆ ಹೀಟ್​ನಲ್ಲಿ ಬೇಯಿಸುವುದು. ಈ ಸಂದರ್ಭದಲ್ಲಿ ಚಪಾತಿಯಲ್ಲಿನ ನೀರಿನಾಂಶವೆಲ್ಲಾ ನಿಧಾನವಾಗಿ ಹೀರುವುದರಿಂದ ಚಪಾತಿ ಗಟ್ಟಿಯಾಗುತ್ತದೆ. ಆದ್ದರಿಂದ ಅದನ್ನು ಮೀಡಿಯಂ ಹೈ ಹೀಟ್​ನಲ್ಲಿ ಬೇಯಿಸಬೇಕು.

66
ತಪ್ಪು 4: ನೇರವಾಗಿ ಡಬ್ಬದಲ್ಲಿ ಹಾಕುವುದು
Image Credit : mobasir_hassan Instagram

ತಪ್ಪು 4: ನೇರವಾಗಿ ಡಬ್ಬದಲ್ಲಿ ಹಾಕುವುದು

ಕೊನೆಯದಾಗಿ ಚಪಾತಿಯನ್ನು ನೇರವಾಗಿ ಡಬ್ಬದಲ್ಲಿ ಹಾಕುವುದು. ಇದು ಸರಿಯಲ್ಲ. ಅದರ ಬದಲು ಒಂದು ಕಾಟನ್​ ಬಟ್ಟೆ ಹಾಕಿ ಅದರಲ್ಲಿ ಚಪಾತಿ ಇಟ್ಟು ಮುಚ್ಚಬೇಕು ಎನ್ನುವುದು ಮಾಸ್ಟರ್​ಷೆಫ್​ ಸಲಹೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆಹಾರ
ಅಡುಗೆಮನೆ ಸಲಹೆಗಳು
ಮಹಿಳೆಯರು
ಜೀವನಶೈಲಿ
Latest Videos
Recommended Stories
Recommended image1
ಮನೆಯ ಬಾಗಿಲಿಗೆ ಇದೊಂದು ಬೇರು ಕಟ್ಟಿದರೆ ಸಾಕು; ಮನೆಯೊಳಕ್ಕೆ ಹಾವು ಬರೋದಿಲ್ಲ! ಗೊತ್ತಾ ಈ ರಹಸ್ಯ?
Recommended image2
ಫ್ರಿಡ್ಜ್ ಬಳಕೆಯ ಈ ಸತ್ಯಗಳು ನಿಮಗೆ ತಿಳಿದಿದೆಯೇ? ತಾಪಮಾನ, ಸ್ವಚ್ಛತೆ, ಬಳಕೆ ಟಿಪ್ಸ್
Recommended image3
ಕಬ್ಬಿಣ Vs ನಾನ್‌ಸ್ಟಿಕ್ ? ಯಾವ ಕಾವಲಿ ಮೇಲೆ ದೋಸೆ ಟೇಸ್ಟಿ ಆಗುತ್ತೆ? ಎರಡರಲ್ಲಿ ಬೆಸ್ಟ್ ಯಾವುದು?
Related Stories
Recommended image1
ನಿಮ್ಮ ಮುದ್ದಿನ ನಾಯಿಯ ಬಾಯಿ ವಾಸನೆ ಬರ್ತಿದ್ಯಾ? ನಿರ್ಲಕ್ಷ್ಯ ಸಲ್ಲದು, ಸುಲಭದ ಪರಿಹಾರ ಏನು
Recommended image2
ಕೈ-ಕಾಲಿಗೆ ಹಚ್ಚುವ ಮೆಹಂದಿ ಗಾಢ ಬಣ್ಣ ಬರಬೇಕಾ? ಸುಲಭದ ಟಿಪ್ಸ್​ ಫಾಲೋ ಮಾಡಿ ಅಂದ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved