- Home
- Life
- Kitchen
- How to Cut Onions Without Crying: ಈರುಳ್ಳಿ ಕಟ್ ಮಾಡುವಾಗ ಕಣ್ಣೀರು ಬರುತ್ತಾ? ಏನ್ ಮಾಡಬೇಕು?
How to Cut Onions Without Crying: ಈರುಳ್ಳಿ ಕಟ್ ಮಾಡುವಾಗ ಕಣ್ಣೀರು ಬರುತ್ತಾ? ಏನ್ ಮಾಡಬೇಕು?
10 proven ways to cut an onion without crying: ಅಡುಗೆಮನೆಯಲ್ಲಿ ಈರುಳ್ಳಿ ಕತ್ತರಿಸುವುದು ಅಂದ್ರೆ ಹಲವರಿಗೆ ದೊಡ್ಡ ಸವಾಲು. ಎಷ್ಟೇ ದೊಡ್ಡ ಅಡುಗೆ ಪರಿಣಿತರಾಗಿದ್ದರೂ, ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬಾರದೇ ಇರದು. ಕಣ್ಣಲ್ಲಿ ನೀರು ಬರದಂತೆ ಈರುಳ್ಳಿ ಕತ್ತರಿಸುವುದು ಹೇಗೆಂದು ನೋಡೋಣ?

ಈರುಳ್ಳಿ ಯಾಕೆ ನಮ್ಮನ್ನು ಅಳಿಸುತ್ತೆ?
ಈರುಳ್ಳಿ ಭೂಮಿಯೊಳಗೆ ಬೆಳೆಯುವಾಗ, ಮಣ್ಣಿನಲ್ಲಿರುವ ಸಲ್ಫರ್ (sulphur) ಅಂಶವನ್ನು ಹೀರಿಕೊಂಡು ತನ್ನ ಜೀವಕೋಶಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ನಾವು ಈರುಳ್ಳಿಯನ್ನು ಕತ್ತರಿಸಿದಾಗ, ಆ ಜೀವಕೋಶಗಳು ಒಡೆದು, ಅದರಿಂದ ಎಂಜೈಮ್‌ಗಳು ಮತ್ತು ಸಲ್ಫರ್ ಸಂಯುಕ್ತಗಳು (sulphur compounds) ಹೊರಬರುತ್ತವೆ. ಇವೆರಡೂ ಸೇರಿ ರಾಸಾಯನಿಕ ಕ್ರಿಯೆ ನಡೆದು, 'ಸಿನ್-ಪ್ರೊಪನೆಥಿಯಲ್ ಎಸ್-ಆಕ್ಸೈಡ್' (syn-propanethial S-oxide) ಎಂಬ ಅನಿಲ ಉತ್ಪತ್ತಿಯಾಗುತ್ತದೆ.
ಈ ಅನಿಲ ಗಾಳಿಯಲ್ಲಿ ಹರಡಿ ನಮ್ಮ ಕಣ್ಣುಗಳನ್ನು ತಲುಪುತ್ತದೆ. ನಮ್ಮ ಕಣ್ಣುಗಳಲ್ಲಿರುವ ತೇವಾಂಶದೊಂದಿಗೆ ಈ ಅನಿಲ ಸೇರಿದಾಗ, ಅದು ಸೌಮ್ಯವಾದ ಸಲ್ಫ್ಯೂರಿಕ್ ಆಮ್ಲವಾಗಿ ಬದಲಾಗುತ್ತದೆ. ಈ ಆಮ್ಲವು ಕಣ್ಣುಗಳಿಗೆ ಕಿರಿಕಿರಿ ಉಂಟುಮಾಡಿ, ಕಣ್ಣೀರಿನ ಗ್ರಂಥಿಗಳನ್ನು ಪ್ರಚೋದಿಸುತ್ತದೆ. ಇದೇ ಕಾರಣಕ್ಕೆ ಕಣ್ಣಿನಿಂದ ನೀರು ಸುರಿಯುತ್ತದೆ.
ಈ ಸಮಸ್ಯೆಯಿಂದ ಪಾರಾಗಲು ಕೆಲವು ಸುಲಭ ಉಪಾಯಗಳಿವೆ. ಇವುಗಳನ್ನು ಅನುಸರಿಸಿದರೆ, ಇನ್ನು ಮುಂದೆ ಈರುಳ್ಳಿ ಕತ್ತರಿಸುವಾಗ ಅಳಬೇಕಾಗಿಲ್ಲ!
ಈರುಳ್ಳಿಯನ್ನು ತಣ್ಣಗಾಗಿಸಿ!
ಈರುಳ್ಳಿ ಕತ್ತರಿಸುವ 10-15 ನಿಮಿಷಗಳ ಮೊದಲು, ಅದನ್ನು ಫ್ರಿಡ್ಜ್ ಅಥವಾ ಫ್ರೀಜರ್‌ನಲ್ಲಿ ಇಟ್ಟು ತೆಗೆಯಿರಿ. ತಂಪು ವಾತಾವರಣವು ಈರುಳ್ಳಿಯಿಂದ ಬರುವ ಅನಿಲದ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಅನಿಲ ಗಾಳಿಯಲ್ಲಿ ಹರಡುವುದು ಕಡಿಮೆಯಾಗಿ ಕಣ್ಣೀರು ಬರುವುದಿಲ್ಲ.
ನೀರಿನಲ್ಲಿ ಕತ್ತರಿಸಿ!
ಈರುಳ್ಳಿಯ ಸಿಪ್ಪೆ ತೆಗೆದ ನಂತರ, ಅದನ್ನು ತಣ್ಣೀರಿನಲ್ಲಿ 10-15 ನಿಮಿಷಗಳ ಕಾಲ ನೆನೆಸಿಟ್ಟು ನಂತರ ಕತ್ತರಿಸಿ. ಇಲ್ಲವಾದರೆ, ಒಂದು ಪಾತ್ರೆಯಲ್ಲಿ ನೀರು ತುಂಬಿ, ಅದರೊಳಗೆ ಈರುಳ್ಳಿಯನ್ನು ಕತ್ತರಿಸಬಹುದು. ಬಿಸಿ ನೀರಿನಲ್ಲಿ 30 ಸೆಕೆಂಡುಗಳ ಕಾಲ ನೆನೆಸಿಟ್ಟು ಕತ್ತರಿಸಿದರೂ ಕಣ್ಣೀರು ಬರುವುದಿಲ್ಲ. ಹೀಗೆ ಮಾಡುವುದರಿಂದ ಸಲ್ಫರ್‌ನ ಪ್ರಭಾವ ಕಡಿಮೆಯಾಗಿ ಕಣ್ಣೀರು ಬರುವುದು ನಿಲ್ಲುತ್ತದೆ
ಹರಿತವಾದ ಚಾಕು ಬಳಸಿ!
ಮೊಂಡಾದ ಚಾಕುವಿನಿಂದ ಈರುಳ್ಳಿ ಕತ್ತರಿಸಿದರೆ, ಅದರ ಜೀವಕೋಶಗಳು ಹೆಚ್ಚು ಜಜ್ಜಲ್ಪಡುತ್ತವೆ. ಇದರಿಂದಾಗಿ, ಹೆಚ್ಚು ಕಿರಿಕಿರಿ ಉಂಟುಮಾಡುವ ಅನಿಲ ಬಿಡುಗಡೆಯಾಗುತ್ತದೆ. ಹರಿತವಾದ ಚಾಕುವನ್ನು ಬಳಸಿ ನಿಧಾನವಾಗಿ ಕತ್ತರಿಸಿ. ಆಗ ಅನಿಲ ಬಿಡುಗಡೆಯಾಗುವುದು ಕಡಿಮೆಯಾಗಿ ಕಣ್ಣೀರು ಬರುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

