ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಅತಿಯಾದರೆ ಅಮೃತವೂ ವಿಷ! ಹಾಗಾದರೆ ದಿನಕ್ಕೆ ಎಷ್ಟು ತಿನ್ನಬೇಕು? ತಿಳಿಯಲು ಮುಂದೆ ಓದಿ.
health-life Jun 23 2026
Author: Ashwini HR Image Credits:Freepik
Kannada
ಸರಿಯಾದ ಪ್ರಮಾಣ
ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಸಿಗಲು ಪ್ರತಿದಿನ 4-5 ಬಾದಾಮಿ ಮತ್ತು 2-3 ಗೋಡಂಬಿಯನ್ನು ತಪ್ಪದೇ ಸೇವಿಸಬೇಕು. 5 ಬಾದಾಮಿ ಮತ್ತು 4 ಗೋಡಂಬಿ ತಿಂದರೆ ದೇಹವು ಆರೋಗ್ಯದಿಂದ ಮತ್ತು ದಿನವಿಡೀ ಶಕ್ತಿಯಿಂದ ಕೂಡಿರುತ್ತದೆ.
Image credits: Freepik
Kannada
ಮಕ್ಕಳಿಗೆ ಎಷ್ಟು ಕೊಡಬೇಕು?
ದಿನಕ್ಕೆ 4-5 ಬಾದಾಮಿ ಹಾಗೂ 2-3 ಗೋಡಂಬಿಯ ಪ್ರಮಾಣವು ಮಕ್ಕಳ ಆರೋಗ್ಯಕ್ಕೂ ಕೂಡ ಸಾಕಾಗುತ್ತದೆ. ಇದು ಅವರ ನೆನಪಿನ ಶಕ್ತಿ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿ.
Image credits: Freepik
Kannada
ವರ್ಕೌಟ್ ಮಾಡುವವರಿಗೆ ವಿಶೇಷ
ಜಿಮ್‌ಗೆ ಹೋಗುತ್ತಿದ್ದರೆ/ಮಸಲ್ಸ್ ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ, ದಿನಕ್ಕೆ 8-10 ಬಾದಾಮಿ ತಿನ್ನಬಹುದು. ನೀರಿನಲ್ಲಿ ನೆನೆಸಿ ತಿನ್ನುವುದು ಪ್ರಯೋಜನಕಾರಿ, ಏಕೆಂದರೆ ಇದು ಬಾದಾಮಿಯ ಉಷ್ಣತೆ ಕಡಿಮೆ ಮಾಡುತ್ತೆ.
Image credits: Pinterest
Kannada
ಗೋಡಂಬಿ ಅತಿಯಾಗಿ ತಿನ್ನಬೇಡಿ
ಗೋಡಂಬಿ ತುಂಬಾ ಇಷ್ಟಪಡುವವರು ಪ್ರಮಾಣವನ್ನು 5-6 ಕ್ಕೆ ಹೆಚ್ಚಿಸಬಹುದು. ಆದರೆ ದಿನಾ ಅಷ್ಟು ತಿನ್ನುವುದನ್ನು ತಪ್ಪಿಸಿ. ದಿನಕ್ಕೆ 4-5 ಗೋಡಂಬಿ ತಿಂದರೆ ದೇಹದಲ್ಲಿ ಕ್ಯಾಲ್ಸಿಯಂ ಹಾಗೂ ಮೆಗ್ನೀಶಿಯಂ ಕೊರತೆ ನೀಗುತ್ತದೆ.
Image credits: Pinterest
Kannada
ಆರೋಗ್ಯದ ಪ್ರಯೋಜನಗಳು
ಪ್ರತಿದಿನ ಗೋಡಂಬಿ-ಬಾದಾಮಿ ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಬಾದಾಮಿಯಲ್ಲಿರುವ ವಿಟಮಿನ್ ಇ ಮತ್ತು ಒಮೆಗಾ-3 ಫ್ಯಾಟಿ ಆಸಿಡ್ ದೇಹವನ್ನು ಫಿಟ್ ಆಗಿಟ್ಟು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.