ಐಸ್‌ಕ್ರೀಂ ತಿಂದು ನೀರು ಕುಡಿಯೋದು ಸಿಕ್ಕಾಪಟ್ಟೆ ಡೇಂಜರಸ್
ಆಹಾರ ತಿಂದ ತಕ್ಷಣ ನೀರು ಕುಡಿದರೆ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬುದು ಹಲವರಿಗೆ ಗೊತ್ತು. ಆದರೆ ಕೆಲವು ರೀತಿಯ ಆಹಾರ ತಿಂದ ತಕ್ಷಣ ನೀರು ಕುಡಿಯುವುದು ತುಂಬಾ ಅಪಾಯಕಾರಿ ಎನ್ನುತ್ತಾರೆ ತಜ್ಞರು. ಅಂಥಾ ಆಹಾರ ಯಾವುದೆಲ್ಲಾ ತಿಳಿದುಕೊಳ್ಳೋಣ.
ಆರೋಗ್ಯವಂತರಾಗಿರಲು ದಿನಕ್ಕೆ ಎರಡರಿಂದ ಮೂರು ಲೀಟರ್ ನೀರು ಖಂಡಿತಾ ಕುಡಿಯಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ನೀರು ನಮ್ಮ ದೇಹವನ್ನು ಹೈಡ್ರೇಟ್ ಮಾಡುವುದಲ್ಲದೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಉತ್ತಮ ಆರೋಗ್ಯಕ್ಕೆ ನೀರು ಅತ್ಯಗತ್ಯ. ನೀರು ಮತ್ತು ಇತರ ದ್ರವಗಳು ಆಹಾರವನ್ನು ಒಡೆಯಲು ಸಹಾಯ ಮಾಡುತ್ತದೆ. ಈ ರೀತಿಯಾಗಿ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ನೀರು ಕುಡಿಯುವ ಅಭ್ಯಾಸ ಮಲಬದ್ಧತೆಯನ್ನೂ ತಡೆಯುತ್ತದೆ.
ನೀರು ನಮ್ಮ ದೇಹಕ್ಕೆ ಅತ್ಯಂತ ಅವಶ್ಯಕವಾಗಿದೆ. ಆದರೆ ನೀರನ್ನು ಯಾವಾಗ ಕುಡಿಯಬೇಕು ಮತ್ತು ಯಾವಾಗ ಕುಡಿಯಬಾರದು ಎಂಬುದೂ ಮುಖ್ಯ. ಕೆಲವರು ಏನು ತಿಂದರೂ ತಕ್ಷಣ ಸಾಕಷ್ಟು ನೀರು ಕುಡಿಯುತ್ತಾರೆ. ಇದು ಉತ್ತಮ ವಿಧಾನವಲ್ಲ. ಕುಡಿಯುವ ನೀರಿಗೆ ಕೆಲವು ನಿಯಮಗಳಿವೆ. ಅದು ಹೆಚ್ಚು ಜನರಿಗೆ ತಿಳಿದಿಲ್ಲದಿರಬಹುದು. ಕೆಲವರು ಅವಸರದಲ್ಲಿ ಹೆಚ್ಚು ನೀರು ಕುಡಿಯುತ್ತಾರೆ. ಈ ರೀತಿ ಕುಡಿಯಬೇಡಿ. ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ತಿಂದ ತಕ್ಷಣ ನೀರು ಕುಡಿಯಬೇಡಿ ಎನ್ನುತ್ತಾರೆ ಆರೋಗ್ಯ ತಜ್ಞರು. ಜೀರ್ಣಾಂಗ ವ್ಯವಸ್ಥೆಯ ಕಾರ್ಯವೈಖರಿ ಹಾಳಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ ಕೆಲವು ರೀತಿಯ ಆಹಾರವನ್ನು ಸೇವಿಸಿದ ನಂತರ ನೀವು ನೀರನ್ನು ಕುಡಿಯಬಾರದು. ಕುಡಿದರೆ ನಿಮ್ಮ ಆರೋಗ್ಯವನ್ನು ನೀವೇ ಹಾಳು ಮಾಡಿಕೊಳ್ಳುತ್ತೀರಿ. ಊಟ ಮಾಡಿದ ನಂತರ ನೀರು ಕುಡಿಯಬಾರದು ಅನ್ನೋದು ಯಾಕೆಂದು ತಿಳಿಯೋಣ.
ಸೀಬೆಹಣ್ಣು
ಪೇರಳೆ ಹಣ್ಣು ತಿನ್ನಲು ರುಚಿಯಾಗಿರುತ್ತದೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ಈ ಪೇರಳೆ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದಕ್ಕೆ ಉಪ್ಪು, ಮಸಾಲೆ ಹಾಕಿದರೆ ರುಚಿ ದುಪ್ಪಟ್ಟಾಗುತ್ತದೆ. ಆದರೆ ಹೀಗೆ ಪೇರಳೆ ತಿಂದ ನಂತರ ನೀರು ಕುಡಿಯಬೇಕೆನಿಸುತ್ತದೆ. ಆದರೆ ಹಾಗೆ ಮಾಡಬೇಡಿ. ಪೇರಳೆ ತಿಂದ ತಕ್ಷಣ ನೀರು ಕುಡಿದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಇದರಿಂದ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ.
ಹುರಿದ ಕಡಲೆ
ಕರಿದ ಕಡಲೆ ತಿಂದ ತಕ್ಷಣ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ಹೊಟ್ಟೆನೋವು ಬರುತ್ತದೆ. ಕಡಲೆ ತಿಂದ ನಂತರ ನೀರು ಕುಡಿದರೆ ಕಡಲೆ ಸರಿಯಾಗಿ ಜೀರ್ಣವಾಗದೆ ಜೀರ್ಣಾಂಗ ವ್ಯವಸ್ಥೆ ಸಹ ಹಾಳಾಗುತ್ತದೆ.
ಐಸ್ ಕ್ರೀಮ್
ಯಾವ ಸೀಸನ್ ಎಂಬುದನ್ನು ನೋಡದೆಯೇ ಐಸ್ ಕ್ರೀಮ್ ಅನ್ನು ತಿನ್ನಲು ಹಂಬಲಿಸುವ ಅನೇಕ ಜನರಿದ್ದಾರೆ. ಆದರೆ ಐಸ್ ಕ್ರೀಂ ತಿಂದ ನಂತರ ಸಾದಾ ನೀರು ಕುಡಿಯಬೇಕು ಅನ್ನಿಸುತ್ತದೆ. ಆದರೆ ಐಸ್ ಕ್ರೀಂ ತಿಂದ ತಕ್ಷಣ ನೀರು ಕುಡಿದರೆ ಗಂಟಲು ನೋವು ಆಗುತ್ತೆ ಅನ್ನೋದು ನಿಮಗೆ ತಿಳಿದಿದೆಯಾ ? ಐಸ್ ಕ್ರೀಂ ತಿಂದ ನಂತರ ನೀರು ಕುಡಿಯುವುದರಿಂದ ಹಲ್ಲು ನೋವು, ವಸಡು ನೋವು ಮೊದಲಾದ ಸಮಸ್ಯೆ ಸಹ ಉಂಟಾಗಬಹುದು,
ಹಣ್ಣು
ಹಣ್ಣನ್ನು ತಿಂದ ನಂತರ ತಕ್ಷಣಕ್ಕೆ ನೀರು ಕುಡಿಯುವುದನ್ನು ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ ಏಕೆಂದರೆ ಅವುಗಳು ರಸಭರಿತವಾದವು ಮತ್ತು ಈಗಾಗಲೇ ನೀರಿನ ಅಂಶದ ಹೆಚ್ಚಿನ ಮೂಲವಾಗಿದೆ. ಆದ್ದರಿಂದ, ಹಣ್ಣನ್ನು ತಿಂದಾದ ಮೇಲೆ ಮತ್ತೆ ನೀರನ್ನು ಸೇವಿಸಬಾರದು. ಹಾಗೆ ಮಾಡುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೊಟ್ಟೆ ನೋವು, ಜೀರ್ಣಕ್ರಿಯೆ ನಿಧಾನಗೊಳಿಸುವಿಕೆಗೆ ಕಾರಣವಾಗಬಹುದು.