ಅಡುಗೆ ಕೆಲ್ಸ ಈಝಿ ಆಗ್ಲೀಂತ ಕುಕ್ಕರ್‌ನಲ್ಲಿ ಬೇಳೆ ಬೇಯಿಸ್ತಿರಾ? ಆರೋಗ್ಯಕ್ಕೆಷ್ಟು ಡೇಂಜರ್ ತಿಳ್ಕೊಳ್ಳಿ
ಅನೇಕ ಜನರು ಅಡುಗೆ ಕೆಲಸ ಈಝಿಯಾಗಲೆಂದು ಪ್ರೆಶರ್ ಕುಕ್ಕರ್‌ನಲ್ಲಿ ಬೇಳೆಯನ್ನು ಬೇಯಿಸುತ್ತಾರೆ. ಯಾಕೆಂದರೆ ಹೀಗೆ ಮಾಡಿದ್ರೆ ಬೇಳೆ ಬೇಗ ಬೇಯುತ್ತೆ. ಆದರೆ ಕುಕ್ಕರ್‌ನಲ್ಲಿ ಬೇಯಿಸಿದ ದಾಲ್ ಅನ್ನು ತಿನ್ನುವುದು ಆರೋಗ್ಯದ ಮಟ್ಟಿಗೆ ಸೇಫಾ?
ಪ್ರತಿಯೊಬ್ಬರೂ ಅಡುಗೆ ಸೇರಿದಂತೆ ಮನೆಕೆಲಸಗಳನ್ನು ಸಾಧ್ಯವಾದಷ್ಟು ಸುಲಭವಾಗಿ ಬೇಗನೇ ಮಾಡಬೇಕು ಎಂದು ಪ್ರಯತ್ನಿಸುತ್ತಾರೆ. ಈ ಉದ್ದೇಶಕ್ಕಾಗಿ ಅನೇಕ ಸುಧಾರಿತ ಉಪಕರಣಗಳು ಮತ್ತು ಸೌಲಭ್ಯಗಳನ್ನುಬಳಸಲಾಗುತ್ತದೆ. ದಿನವೂ ಅಡುಗೆ ಮನೆಯಲ್ಲಿ ಬಳಸೋ ಪ್ರೆಶರ್ ಕುಕ್ಕರ್ ಕೆಲಸವನ್ನು ಸುಲಭಗೊಳಿಸಲು ನೆರವಾಗುತ್ತದೆ.
ಅಡುಗೆಗೆ ಕುಕ್ಕರ್ ಬಳಸುವುದರಿಂದ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಅನ್ನ, ತರಕಾರಿ ಕುಕ್ಕರ್‌ನಲ್ಲಿ ಬೇಯಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಕೆಲಸವನ್ನು ಸುಲಭಗೊಳಿಸಲು ಹೀಗೆ ಕುಕ್ಕರ್‌ನ್ನು ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಕುಕ್ಕರ್‌ನಲ್ಲಿ ದಾಲ್ ಬೇಯಿಸಲೇ ಬಾರದು ಎಂದು ಹೇಳುತ್ತಾರೆ. ಇದು ನಿಜಾನ?
ಪ್ರೆಶರ್ ಕುಕ್ಕರ್‌ನಲ್ಲಿ ಕೆಲವೊಂದು ಆಹಾರಗಳನ್ನು ಬೇಯಿಸಿದರೆ ವಿಷಕಾರಿಯಾಗುತ್ತದೆ ಎಂದು ಕೆಲವೊಬ್ಬರು ಹೇಳುತ್ತಾರೆ. ಇವುಗಳಲ್ಲಿ ದಾಲ್ ಕೂಡಾ ಒಂದು. ಕುಕ್ಕರ್‌ನಲ್ಲಿ ಬೇಳೆ ಬೇಯಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಕುಕ್ಕರ್‌ನಲ್ಲಿ ಬೇಯಿಸಿದ ಬೇಳೆಯನ್ನು ತಿನ್ನುವುದು ಕಾಲು ನೋವಿಗೆ ಕಾರಣವಾಗುತ್ತದೆ ಎಂದು ತಿಳಿಸುತ್ತಾರೆ.
ಕುಕ್ಕರ್‌ನಲ್ಲಿ ಬೇಯಿಸಿದಾಗ ರೂಪುಗೊಳ್ಳುವ ಫೋಮ್ ಯೂರಿಕ್ ಆಮ್ಲವನ್ನು ಹೊಂದಿರುವ ಸಪೋನಿನ್‌ಗಳು ವಿಷಕಾರಿಯಾಗಿವೆ. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಸಪೋನಿನ್‌ಗಳು ಸಸ್ಯಗಳಲ್ಲಿ ಕಂಡುಬರುತ್ತವೆ. ಸೋಪಿನ ನೊರೆಯನ್ನು ಉತ್ಪಾದಿಸುವ ಗುಣಗಳನ್ನು ಅವು ಹೊಂದಿವೆ.
ದಾಲ್ ತುಂಬಾ ಕಡಿಮೆ ಪ್ರಮಾಣದ ಸಪೋನಿನ್‌ಗಳನ್ನು ಹೊಂದಿರುತ್ತವೆ. ಉ ಸಪೋನಿನ್‌ಗಳ ಮಧ್ಯಮ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಅವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.
ಆಹಾರ ತಜ್ಞರ ಪ್ರಕಾರ, ಪ್ರೆಶರ್ ಕುಕ್ಕರ್‌ನಲ್ಲಿ ಬೇಳೆಕಾಳುಗಳನ್ನು ಬೇಯಿಸುವುದು ಸಮಯ ಮತ್ತು ಶಕ್ತಿಯನ್ನು ಉಳಿಸುತ್ತದೆ. ಅಲ್ಲದೆ ಇದರಲ್ಲಿರುವ ಪೋಷಕಾಂಶಗಳು ಹಾಗೇ ಇರುತ್ತವೆ. ಮಾತ್ರವಲ್ಲ, ಪ್ರೆಶರ್ ಕುಕ್ಕರ್ ಬೇಯಿಸಿದ ಬೇಳೆಕಾಳುಗಳನ್ನು ತಿನ್ನುವುದರಿಂದ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುವುದಿಲ್ಲ.
ಹೀಗಾಗಿ ಪ್ರೆಶರ್ ಕುಕ್ಕರ್‌ನಲ್ಲಿ ಬೇಳೆ ಬೇಯಿಸುವಾಗ ಆರೋಗ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆದರೆ ಕುಕ್ಕರ್‌ನಲ್ಲಿ ದಾಲ್ ಬೇಯಿಸುವಾಗ ಕುಕ್ಕರ್‌ನಿಂದ ನೀರು ಬಂದರೆ, ಅದಕ್ಕೆ ಮುಂಚಿತವಾಗಿ ಸ್ವಲ್ಪ ಎಣ್ಣೆಯನ್ನು ಸೇರಿಸುವುದು ಒಳ್ಳೆಯದು.