ವಿಶ್ವದ ವೈನ್ ರಾಜಧಾನಿ ಬಿರುದು ಯಾವ ನಗರಕ್ಕಿದೆ? ಇದರ ಇತಿಹಾಸವೇ ರೋಚಕ
ವಿಶ್ವದ ವೈನ್ ರಾಜಧಾನಿ ಬಿರುದು ಯಾವ ನಗರಕ್ಕಿದೆ? ಇದರ ಇತಿಹಾಸವೇ ರೋಚಕ, ಈ ಪ್ರಶ್ನೆ ಬಂದಾಗ ಹಲವು ಹೆಸರುಗಳು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಆದರೆ ವೈನ್ ರಾಜಧಾನಿ ನಗರದ ಹೆಸರು ಬಹುತೇಕರು ಕೇಳೇ ಇಲ್ಲ.

ವೈನ್ ರಾಜಧಾನಿಯ ಸದ್ದು
ಭಾರತದಲ್ಲಿ ಅನಾಧಿಕಾಲದಿಂದಲೂ ಸೋಮರಸ ಸೇರಿದಂತೆ ಹಲವು ರಸಗಳ ಹೆಸರಿನಲ್ಲಿ ಮದ್ಯ ಚಾಲ್ತಿಯಲ್ಲಿದೆ. ಭಾರತದಲ್ಲಿ ಹಲವು ನಗರ, ಜಿಲ್ಲೆಗಳಲ್ಲಿ ಮದ್ಯ ಸೇವನೆ, ತಯಾರಿಕೆಯಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿದೆ. ಮದ್ಯ ಸೇವನೆ, ಉತ್ಪನ್ನಗಳಲ್ಲಿ ಜಗತ್ತಿನ ಹಲವು ದೇಶಗಳು ಭಾರಿ ಮುಂದಿದೆ. ಈ ಪೈಕಿ ವಿಶ್ವದ ವೈನ್ ರಾಜಧಾನಿ ಇದೀಗ ಭಾರಿ ಸದ್ದು ಮಾಡುತ್ತಿದೆ.
2000 ವರ್ಷಗಳ ಇತಿಹಾಸ
ಫ್ರಾನ್ಸ್‌ನ ಬೊರ್ಡೆಕ್ಸ್ ನಗರವನ್ನು ವಿಶ್ವದ ವೈನ್ ರಾಜಧಾನಿ ಎಂದು ಕರೆಯುತ್ತಾರೆ. ಇಲ್ಲಿನ ವೈನ್ ಉತ್ಪಾದನೆಗೆ ಬರೋಬ್ಬರಿ 2000 ವರ್ಷಗಳ ಇತಿಹಾಸವಿದೆ. ರೋಮನ್ ಕಾಲದಿಂದಲೂ ಇದರ ಉಲ್ಲೇಖವಿದೆ. ಇದೇ ಕಾರಣದಿಂದ ಇಲ್ಲಿ ಅತ್ಯಂತ ಪುರಾತನ ವೈನ್ ಸೇರಿದಂತೆ ಹಲವು ದುಬಾರಿ ವೈನ್‌ಗಳು ಲಭ್ಯವಿದೆ.
ರೋಮ್ ಕಾಲದಲ್ಲೇ ವೈನ್ ವ್ಯಾಪಾರ ಕೇಂದ್ರ
ಬೊರ್ಡೆಕ್ಸ್ ನಗರ ದ್ರಾಕ್ಷಿ ಬೆಳೆಯಲು ಅತ್ಯಂತ ಯೋಗ್ಯ ಮಣ್ಣು ಹೊಂದಿದೆ. ಇಲ್ಲಿನ ದ್ರಾಕ್ಷಿಗಳಿಗೆ ವಿಶೇಷ ರುಚಿ ಇದೆ. ರೋಮ್ ಕಾಲದಿಂದ ಇಲ್ಲಿ ದ್ರಾಕ್ಷಿ ಕೃಷಿ ಮಾಡಲಾಗುತ್ತಿದೆ. ಹೀಗಾಗಿಯೇ ರೋಮ್ ಕಾಲದಿಂದ ವೈನ್ ಕೂಡ ಪ್ರಮುಖ ಉತ್ಪನ್ನವಾಗಿ ಹೊರಹೊಮ್ಮಿದೆ. ರೋಮ್ ಕಾಲದಿಂದಲೇ ಇದು ಯೂರೋಪ್ ಸೇರಿದಂತೆ ಹಲವು ದೇಶಗಳ ವೈನ್ ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿತ್ತು.
ವೈನ್ ಉತ್ಪಾದನೆಯ ವಿಶೇಷ ದ್ರಾಕ್ಷಿ
1,20,000 ಹೆಕ್ಟೇರ್ ಪ್ರದೇಶಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಲಕ್ಷಾಂತರ ಲೀಟರ್ ವೈನ್ ಉಲ್ಲಿ ಉತ್ಪಾದನೆಯಾಗುತ್ತಿದೆ. ರೆಡ್ ವೈನ್‌ಗೆ ಇದು ಪ್ರಸಿದ್ಧಿಯಾಗಿದೆ. ಪ್ರಮುಖವಾಗಿ ಇಲ್ಲಿ ಅತ್ಯುತ್ತಮ ಗುಣಮಟ್ಟದ ವೈನ್ ತಯಾರಿಸುವ ಕ್ಯಾಬರ್ನೆ ಸುವಿಗ್ನಾನ್, ಕ್ಯಾಬರ್ನೆ ಫ್ರಾಂಕ್ ಹಾಗೂ ಮರ್ಲಾಟ್ ತಳಿ ದ್ರಾಕ್ಷಿಗಳನ್ನು ಬೆಳೆದು ವೈನ್ ಉತ್ಪಾದನೆ ಮಾಡಲಾಗುತ್ತದೆ
ಪುರಾತನ ವೈನ್‌ಗಳು ಇಲ್ಲಿ ಲಭ್ಯ
ಅತೀ ಪುರಾತನ ವೈನ್ ಇಲ್ಲಿ ಲಭ್ಯವಿದೆ. ಇನ್ನು ಲಕ್ಷ ಲಕ್ಷ ರೂಪಾಯಿ ಬೆಲೆಯ ವೈನ್ ಕೂಡ ಇಲ್ಲಿ ಲಭ್ಯವಿದೆ. ವೈನ್‌ಗಾಗಿ ಇಲ್ಲಿ ಲಾ ಸಿಟೆ ಡು ವಿನ್ ಅನ್ನೋ ವಿಶ್ವದ ಅತೀ ದೊಡ್ಡ ವೈನ್ ಮ್ಯೂಸಿಯಂ ಇಲ್ಲಿದೆ. ಈ ಮ್ಯೂಸಿಯಂನಲ್ಲಿ ಬೊರ್ಡೆಕ್ಸ್‌ನ ವೈನ್ ಸಂಸ್ಕೃತಿ ಅನಾವರಣ ಮಾಡಲಾಗಿದೆ.
ಪ್ರವಾಸಿಗರ ಸ್ವರ್ಗ
ಈ ವೈನ್ ರಾಜಧಾನಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ದೇಶ ವಿದೇಶಗಳಿಂದ ವೈನ್ ಸವಿರುಚಿ ಪಡೆಯಲು ಇಲ್ಲಿಗೆ ಭೇಟಿ ನೀಡುತ್ತಾರೆ. ದ್ರಾಕ್ಷಿ ತೋಟಗಳಲ್ಲಿ ವಿಹರಿಸುತ್ತಾ, ವೈನ್ ಕುಡಿಯುತ್ತಾ ಕಾಲ ಕಳೆಯಲು ಇಲ್ಲಿ ಹಲವು ಕೇಂದ್ರಗಳಿವೆ.
ಪ್ರವಾಸಿಗರ ಸ್ವರ್ಗ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

