ಕೀಲು ನೋವು ಕಡಿಮೆ ಮಾಡಲು ನೀವು ತಿನ್ನಲೇಬೇಕಾದ 7 ಆಹಾರಗಳು
ಮೆಟ್ಟಿಲು ಹತ್ತುವಾಗ, ಕುರ್ಚಿಯಿಂದ ಏಳುವಾಗ ಅಥವಾ ಓಡುವಾಗ ನೋವು ಕಾಣಿಸಿಕೊಂಡಾಗ ಮಾತ್ರ ನಾವು ಕೀಲುಗಳ ಆರೋಗ್ಯದ ಬಗ್ಗೆ ಯೋಚಿಸುತ್ತೇವೆ. ಕೀಲು ನೋವು ಹೆಚ್ಚಾಗದಂತೆ ತಡೆಯಲು ನೀವು ನಿಮ್ಮ ಡಯಟ್‌ನಲ್ಲಿ ಸೇರಿಸಲೇಬೇಕಾದ ಪ್ರಮುಖ ಆಹಾರಗಳು ಇಲ್ಲಿವೆ.

ಕಾಳುಗಳು ಮತ್ತು ಬೇಳೆಕಾಳುಗಳು
ಧಾನ್ಯಗಳು, ಬೇಳೆಕಾಳುಗಳು, ನಟ್ಸ್ ಮತ್ತು ಬೀಜಗಳು ನಮ್ಮ ದೇಹಕ್ಕೆ ಅಗತ್ಯವಿರುವ ಫೈಬರ್ ಹಾಗೂ ಇತರ ಪೋಷಕಾಂಶಗಳನ್ನು ಒದಗಿಸುತ್ತವೆ.
ದೂರವಿಡಬೇಕಾದ ಆಹಾರಗಳು
ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡಲು ಕರಿದ ತಿಂಡಿಗಳು, ಅತಿಯಾದ ಸಕ್ಕರೆ ಇರುವ ಪದಾರ್ಥಗಳು ಹಾಗೂ ಸಂಸ್ಕರಿಸಿದ ಆಹಾರಗಳನ್ನು ಆದಷ್ಟು ದೂರವಿಡುವುದು ಒಳ್ಳೆಯದು.
ಪ್ರೋಟೀನ್ ಭರಿತ ಆಹಾರಗಳು
ಹೆಸರುಕಾಳು, ಬೇಳೆಕಾಳುಗಳು, ಹಾಲು, ಮೊಸರು, ಪನೀರ್, ಮೊಟ್ಟೆ, ಮೀನು, ಕೊಬ್ಬು ಕಡಿಮೆ ಇರುವ ಮಾಂಸ ಮತ್ತು ಸೋಯಾ ಉತ್ಪನ್ನಗಳನ್ನು ಊಟದಲ್ಲಿ ಸೇರಿಸಿ. ಇವು ಸ್ನಾಯುಗಳ ಶಕ್ತಿಯನ್ನು ಕಾಪಾಡುತ್ತವೆ.
ವಿಟಮಿನ್ ಸಿ ಇರುವ ಆಹಾರಗಳು
ನಿಂಬೆ ಜಾತಿಯ ಹಣ್ಣುಗಳು, ಸೀಬೆಕಾಯಿ ಮತ್ತು ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೆಚ್ಚಾಗಿರುತ್ತದೆ. ದೇಹದಲ್ಲಿ ಕಾಲಜನ್ ಉತ್ಪಾದನೆಗೆ ಇದು ತುಂಬಾ ಮುಖ್ಯ.
ವಿಟಮಿನ್ ಡಿ
ಮೂಳೆಗಳು ಮತ್ತು ಸ್ನಾಯುಗಳ ಬಲವನ್ನು ಹೆಚ್ಚಿಸಲು ವಿಟಮಿನ್ ಡಿ ಅತ್ಯಗತ್ಯವಾಗಿದೆ.
ಕ್ಯಾಲ್ಸಿಯಂ ಭರಿತ ಆಹಾರಗಳು
ಹಾಲು, ಮೊಸರು ಮತ್ತು ಪನೀರ್ ನಮ್ಮ ಮೂಳೆಗಳು ಹಾಗೂ ಸ್ನಾಯುಗಳ ಆರೋಗ್ಯವನ್ನು ಕಾಪಾಡುತ್ತವೆ.
ಫ್ಯಾಟಿ ಫಿಶ್
ಸಾಲ್ಮನ್, ಬಂಗುಡೆ ಮತ್ತು ಮತ್ತಿ ಮೀನುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಹೇರಳವಾಗಿರುತ್ತದೆ. ಇವು ಕೀಲುಗಳಲ್ಲಿ ಉಂಟಾಗುವ ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

