Weight loss Tips : ರಾತ್ರಿ ಹೊತ್ತು ಈ ಆಹಾರ ಸೇವಿಸಿದ್ರೆ ತೂಕ ಇಳಿಸೋದು ಸುಲಭ
ನಮ್ಮಲ್ಲಿ ಹೆಚ್ಚಿನವರು ತಡರಾತ್ರಿಯಲ್ಲಿ ಬಾಯಲ್ಲಿ ನೀರೂರಿಸುವ ಆಹಾರಗಳನ್ನು (mouth watering) ಹಂಬಲಿಸುತ್ತಾರೆ. ನಮ್ಮ ಬಯಕೆಗಳಿಗೆ ಮಣಿಯದಿರಲು ನಾವು ಸಾಧ್ಯವಾದಷ್ಟು ಆ ಆಸೆಗಳನ್ನು ಬಿಟ್ಟು ಉಪವಾಸ ಇದ್ದು ಬಿಡುತ್ತೇವೆ. ಆದರೆ ಹಸಿವಿನಿಂದ ಮಲಗುವುದು ನಿಜವಾಗಿಯೂ ಡಯಟಿಂಗ್ ಅಲ್ಲ.
ಏನು ಮಾಡಬೇಕು?
ತಡ ರಾತ್ರಿ ಕೆಲವೊಮ್ಮೆ ಏನೇನೋ ತಿನ್ನುವ ಬಯಕೆ ಉಂಟಾಗುತ್ತದೆ. ಆದರೆ ಎಲ್ಲಾ ಆಹಾರಗಳ ರಾತ್ರಿ ಹೊತ್ತಿನ ಸೇವನೆ ಆರೋಗ್ಯಕರವಲ್ಲ. ಕೆಲವು ಆಹಾರಗಳು ರಾತ್ರಿ ಸಮಯದಲ್ಲೂ ಸೇವನೆಗೆ ಯೋಗ್ಯವಾಗಿವೆ. ತಿನ್ನಲು ಆರೋಗ್ಯಕರ ಮಲಗುವ ಸಮಯದ ಆಹಾರಗಳು ಇಲ್ಲಿವೆ.
ಗ್ರೀಕ್ ಮೊಸರು (greek yogurt)
ಮೊಸರಿನಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಸಕ್ಕರೆ ತುಂಬಿರುತ್ತದೆ. ದೇಹದಲ್ಲಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ರಾತ್ರಿಯ ಬಯಕೆಗೆ ಇದು ಆರೋಗ್ಯಕರ ಆಯ್ಕೆಯಾಗಿದೆ. ಇದನ್ನು ನೀವು ರಾತ್ರಿ ಹಸಿವಾದಾಗ ಬಾಯಿ ಚಪ್ಪರಿಸಿ ಸೇವನೆ ಮಾಡಬಹುದು.
ಬ್ರೆಡ್ ಮೇಲೆ ಪೀನಟ್ ಬಟರ್ (bread with peanut butter)
ಪೀನಟ್ ಬಟರ್ ನಲ್ಲಿ ಟ್ರಿಪ್ಟೋಫಾನ್ ಎಂಬ ಪ್ರೋಟೀನ್ ಸಮೃದ್ಧವಾಗಿದೆ. ಇದು ನಿದ್ರೆಯನ್ನು ಪ್ರೇರೇಪಿಸುತ್ತದೆ. ಇದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆ ಮೂಲಕ ಕೊಬ್ಬನ್ನು ತೊಡೆದುಹಾಕುತ್ತದೆ.
ಕಾಟೇಜ್ ಚೀಸ್ (cottage cheese)
ಇದು ರಾತ್ರಿಯಿಡೀ ಹೊಟ್ಟೆ ತುಂಬಿದ ಅನುಭವ ನೀಡಲು ಸಹಾಯ ಮಾಡುತ್ತದೆ ಮತ್ತು ಅದರಲ್ಲಿ ಇರುವ ಪ್ರೋಟೀನ್ ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಮಲಗುವ ಸಮಯದ ಪರಿಪೂರ್ಣ ತಿಂಡಿಯಾಗಿದೆ.
ಬಾಳೆಹಣ್ಣು (banana)
ಬಾಳೆಹಣ್ಣುಗಳಲ್ಲಿ ಟ್ರಿಪ್ಟೋಫಾನ್ (tryptophan) ಕೂಡ ಸಮೃದ್ಧವಾಗಿದೆ ಮತ್ತು ಇದು ನಿಮ್ಮನ್ನು ನಿದ್ರೆಗೆ ತಳ್ಳಲು ಸಹಾಯ ಮಾಡುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ, ಬಾಳೆಹಣ್ಣುಗಳು ಆರೋಗ್ಯಕ್ಕೆ ಉತ್ತಮವಾಗಿವೆ ಮತ್ತು ಹೊಟ್ಟೆಯನ್ನು ತುಂಬಿಸುತ್ತವೆ.
ಚೆರಿಗಳು (cherries)
ನೈಸರ್ಗಿಕವಾಗಿ ದೊರೆವ ಸಕ್ಕರೆಯು ನಿಮ್ಮ ಸಿಹಿ ಬಯಕೆಗಳನ್ನು ಪೂರೈಸಲು ಸಹಾಯ ಮಾಡುತ್ತವೆ. ಚೆರ್ರಿಗಳು ಮೆಲಟೋನಿನ್ ಎಂಬ ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್ ನ ನೈಸರ್ಗಿಕ ಮೂಲವಾಗಿದೆ. ಆದುದರಿಂದ ರಾತ್ರಿಯ ಹೊತ್ತು ಇದನ್ನು ಸೇವಿಸುವ ಮೂಲಕ ಉತ್ತಮ ನಿದ್ರೆಯನ್ನು ಪಡೆಯಬಹುದು.
ಪ್ರೋಟೀನ್ ಶೇಕ್ (protein shake)
ಪ್ರೋಟೀನ್ ಶೇಕ್‌ಗಳು ಜಿಮ್ ಉತ್ಸಾಹಿಗಳಿಗೆ ನೆಚ್ಚಿನವು ಮತ್ತು ಸ್ನಾಯುಗಳನ್ನು ಸರಿಪಡಿಸಲು ಸಹಾಯ ಮಾಡುತ್ತವೆ. ನಿದ್ರೆಯನ್ನು ನಿಯಂತ್ರಿಸುತ್ತದೆ. ರಾತ್ರಿ ಹೊತ್ತು ಹಸಿವಾದಾಗ ಇದನ್ನು ಸೇವಿಸುವ ಮೂಲಕ ನೀವು ಫಿಟ್ ಆಗಿರಬಹುದು, ಜೊತೆಗೆ ಹೊಟ್ಟೆಯೂ ತುಂಬುತ್ತದೆ.