ಬಿಸಿಲ ಧಗೆ ತಡೆಯೋಕೆ ಆಗ್ತಿಲ್ವಾ? ಇಂಥಾ ಪಾನೀಯ ಕುಡಿಯೋದು ಬಿಟ್ಬಿಡಿ
ಬೇಸಿಗೆ ಶುರುವಾಗಿದೆ. ಸಿಕ್ಕಾಪಟ್ಟೆ ಬಿಸಿಲು. ಸೆಖೆ ತಡೆಯೋಕೆ ಆಗ್ತಿಲ್ಲ. ನೀವು ತಿನ್ನೋ ಆಹಾರ, ಪಾನೀಯ ಕೂಡಾ ಇದರ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಬೇಸಿಗೆಯಲ್ಲಿ ಏನು ತಿನ್ಬೇಕು, ಏನು ತಿನ್ಬಾರ್ದು ಅನ್ನೋದು ಗೊತ್ತಿರಲಿ.

ಕಾರ್ಬೋನೇಟೆಡ್ ಡ್ರಿಂಕ್ಸ್
ಬೇಸಿಗೆಯಲ್ಲಿ ಬಹುತೇಕ ಜನರು ಕಾರ್ಬೋನೇಟೆಡ್ ಡ್ರಿಂಕ್ಸ್ ಕುಡಿಯುತ್ತಾರೆ. ಆದರೆ ಈ ಪಾನೀಯಗಳು ಬಾಯಾರಿಕೆಯನ್ನು ನೀಗಿಸುವುದಿಲ್ಲ. ಬದಲಿಗೆ ಒಂದು ಸಾರಿಯಷ್ಟೇ ತಂಪಾದ ಅನುಭವವಾಗುತ್ತದೆ. ಸ್ಪಲ್ಪ ಹೊತ್ತಿನ ಬಳಿಕ ಹೆಚ್ಚು ಸೆಖೆಯಾದ ಅನುಭವವಾಗುತ್ತದೆ. ಮಾತ್ರವಲ್ಲ ಈ ಕಾರ್ಬೋನೇಟೆಡ್ ಡ್ರಿಂಕ್ಸ್ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಇದು ಆರೋಗ್ಯಕರ ಚರ್ಮ ಕೋಶಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಚರ್ಮವನ್ನು ಶುಷ್ಕಗೊಳಿಸಿ ಚರ್ಮದ ಕಿರಿಕಿರಿಯನ್ನುಂಟುಮಾಡುತ್ತದೆ.
ಮಿಲ್ಕ್ ಬೇಸ್‌ಡ ಡ್ರಿಂಕ್ಸ್
ಬೇಸಿಗೆಯಲ್ಲಿ ಆಹಾರ ಜೀರ್ಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿ ಹಾಲು ಹಾಗೂ ಹಾಲಿನ ಇತರ ಉತ್ಪನ್ನಗಳಿಂದ ತಯಾರಿಸಿದ ಪದಾರ್ಥ, ಪಾನೀಯಗಳಿಂದ ಬೇಸಿಗೆಯಲ್ಲಿ ದೂರವಿರಿ. ಯಾಕೆಂದರೆ ಈ ಡೈರಿ ಉತ್ಪನ್ನಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇಂಥವುಗಳನ್ನು ಸೇವಿಸೋದ್ರಿಂದ ಅವು ಜೀರ್ಣವಾಗದೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ.
ಪ್ರೋಟೀನ್ ಶೇಕ್
ಪ್ರೋಟೀನ್ ಶೇಕ್ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಬೇಸಿಗೆಯಲ್ಲಿ ಪ್ರೊಟೀನ್ ಶೇಕ್‌ಗಳನ್ನು ಕುಡಿಯಲೇಬಾರದು. ಯಾಕೆಂದರೆ ಇವು ಹೆಚ್ಚಿನ ಪ್ರಮಾಣದ ವಿಟಮಿನ್, ಪ್ರೊಟೀನ್ ಹೊಂದಿರುತ್ತವೆ. ಇವು ಜೀರ್ಣವಾಗಲು ದೀರ್ಘ ಸಮಯ ತೆಗೆದುಕೊಳ್ಳುತ್ತವೆ. ಹೀಗಾಗಿ ಸಾಮಾನ್ಯ ದಿನಚರಿಯಲ್ಲಿ ತೊಡಗಿಸಿಕೊಂಡಿರುವವರು ಇದರಿಂದ ದೂರವಿದ್ದರೆ ಒಳ್ಳೆಯದು. ಎಕ್ಸರ್‌ಸೈಸ್ ಮಾಡುವವರಷ್ಟೇ ಪ್ರೊಟೀನ್ ಶೇಕ್ ಕುಡಿಯಬಹುದು.
ಸಕ್ಕರೆ ಪಾನೀಯಗಳು
ಸಕ್ಕರೆ ಪಾನೀಯಗಳು ಸಮ್ಮರ್‌ನಲ್ಲಿ ಸೂಕ್ತವಾದ ಆಯ್ಕೆಯಲ್ಲ.. ಸೋಡಾ, ಹೆಚ್ಚು ಸಕ್ಕರೆ ಹಾಕಿದ ಜ್ಯೂಸ್‌ಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ. ಮಾತ್ರವಲ್ಲ ಇದು ಬ್ಲಡ್ ಶುಗರ್ ಲೆವೆಲ್‌ನ್ನು ಹೆಚ್ಚಿಸಬಹುದು. ಹೆಚ್ಚು ಬಾಯಾರಿಕೆಯಾಗುವಂತೆ ಮಾಡಬಹುದು.
ಬಿಸಿ ಪಾನೀಯಗಳು
ಬೇಸಿಗೆಯಲ್ಲಿ ಆಲ್‌ರೆಡಿ ಸಿಕ್ಕಾಪಟ್ಟೆ ಧಗೆಯಿರುತ್ತದೆ. ಹೀಗಾಗಿ ಇದರ ಮೇಲೆ ಬಿಸಿ ಪಾನೀಯಗಳ ಸೇವನೆ ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಬಿಸಿ ಟೀ, ಕಾಫಿಗಳಿಂದ ಆದಷ್ಟುದ ದೂರವಿರಿ. ಇದು ದೇಹವನ್ನು ಮತ್ತಷ್ಟು ಜಡವಾಗಿಸುತ್ತದೆ. ಬಿಸಿ ಪಾನೀಯಗಳು ದೇಹದ ಟೆಂಪರೇಚರ್‌ನ್ನು ಹೆಚ್ಚುಗೊಳಿಸುತ್ತದೆ. ಇದು ದೇಹ ಡಿಹೈಡ್ರೇಟ್ ಆದ ಅನುಭವವಾಗಲು ಕಾರಣವಾಗುತ್ತದೆ.
ಆರೋಗ್ಯಕರ ಪಾನೀಯ ಯಾವುದು?
ಕಾರ್ಬೋನೇಟೆಡ್ ಡ್ರಿಂಕ್ಸ್, ಸಕ್ಕರೆ ಪಾನೀಯಗಳು, ಪ್ರೋಟೀನ್ ಶೇಕ್ ಬದಲು ಸಾದಾ ನೀರನ್ನು ಹೆಚ್ಚು ಹೆಚ್ಚು ಕುಡಿಯಬಹುದು. ಇದು ದೇಹವನ್ನು ಹೈಡ್ರೇಡ್ ಮಾಡಿಡುವುದರ ಜೊತೆಗೆ ಆರೋಗ್ಯ ಸಮಸ್ಯೆಗಳಿಂದ ದೂರವಿಡುತ್ತದೆ. ಹಣ್ಣು, ತರಕಾರಿಗಳನ್ನು ಜ್ಯೂಸ್ ಮಾಡದೆ ಹಾಗೆಯೇ ತಿನ್ನುವುದು ಸಹ ಒಳ್ಳೆಯ ಅಭ್ಯಾಸ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.