MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Food
  • ಕೂರ್ಗ್‌ ಸ್ಪೆಷಲ್‌: ಆಷಾಢ ತಿಂಗಳ 18ರಂದು ಮಾಡುವ 18 ಔಷಧೀಯ ಗುಣಗಳುಳ್ಳ ಆಟಿ ಪಾಯಸ ಮಾಡುವ ವಿಧಾನ

ಕೂರ್ಗ್‌ ಸ್ಪೆಷಲ್‌: ಆಷಾಢ ತಿಂಗಳ 18ರಂದು ಮಾಡುವ 18 ಔಷಧೀಯ ಗುಣಗಳುಳ್ಳ ಆಟಿ ಪಾಯಸ ಮಾಡುವ ವಿಧಾನ

ಆಷಾಢ ಅಥವಾ ಆಟಿ ಎಂದರೆ ವಿಶೇಷ ತಿನಿಸುಗಳ ಒಂದು ಮಾಸ, ಕೊಡಗು ಕರಾವಳಿ ಭಾಗದಲ್ಲಿ ಈ ಸಮಯದಲ್ಲಿ ಈ ತಲೆಮಾರಿನ ಮಕ್ಕಳಿಗೆ ಈ ವಿಶೇಷ ತಿನಿಸಿನ ಬಗ್ಗೆ ಅರಿವು ಮೂಡಿಸಲು ವಿಶೇಷ ಆಹಾರ ಮೇಳವನ್ನು ಆಯೋಜಿಸುತ್ತಾರೆ. ಈಗ ಇಲ್ಲಿ ಕೊಡಗಿನ ವಿಶೇಷ ತಿನಿಸಾದ ಆಟಿ ಪಾಯಸ ಮಾಡುವ ವಿಧಾನದ ಬಗ್ಗೆ ಮಾಹಿತಿ ಇದೆ.

3 Min read
Anusha Kb
Published : Jul 19 2025, 11:40 AM IST
Share this Photo Gallery
  • FB
  • TW
  • Linkdin
  • Whatsapp
112
ಕೊಡಗಿನ ವಿಶೇಷ ಆಟಿ ಪಾಯಸ
Image Credit : youtube

ಕೊಡಗಿನ ವಿಶೇಷ ಆಟಿ ಪಾಯಸ

ಆಷಾಢ ಅಥವಾ ಆಟಿ ತಿಂಗಳು ಎಂದರೆ ಕೊಡಗು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವಿಶೇಷವಾದ ಋತುಮಾನದ ತಿನಿಸುಗಳ ತಿಂಗಳು ಎಂದೇ ಹೇಳಬಹುದು, ಹೊರಗೆ ಧೋ ಎಂದು ಮಳೆ ಸುರಿಯುತ್ತಿದ್ದರೆ ಮನೆಯೊಳಗೆ ಕುಳಿತು ಆ ಚಳಿಯ ಮಧ್ಯೆ ಒಲೆಯ ಮುಂದೆ ದೇಹವನ್ನು ಬಿಸಿಗೊಳಿಸಿಕೊಳ್ಳುತ್ತಾ ಬಿಸಿ ಬಿಸಿಯಾದ ತಿನಿಸುಗಳು ಸಿದ್ಧಗೊಳ್ಳುತ್ತವೆ.

212
ವಿಶೇಷ ತಿನಿಸುಗಳ ಮಾಸ ಆಟಿ
Image Credit : youtube

ವಿಶೇಷ ತಿನಿಸುಗಳ ಮಾಸ ಆಟಿ

ಪತ್ರೊಡೆ, ಕಣಿಲೆ(ಕಳಲೆ),ಕೇಸುವಿನ ವಿಶೇಷ ಖಾದ್ಯಗಳು, ನೈಸರ್ಗಿಕ ಅಣಬೆ, ಚಗಟೆ ಸೊಪ್ಪಿ ಖಾದ್ಯ ಇವೆಲ್ಲವೂ ಈ ಆಷಾಢ ತಿಂಗಳಲ್ಲಿ ತಿನ್ನುವಂತಹ ವಿಶೇಷ ಖಾದ್ಯಗಳಾಗಿವೆ. ಮಳೆ ಜೋರಾಗಿ ಸುರಿಯುವುದರಿಂದ ಹೊಲದಲ್ಲಿ ಬಿತ್ತನೆ ಕಾರ್ಯದ ಸಮಯ.

Related Articles

Related image1
ಮಳೆ ಬಂದಿದೆ, ಆಟಿ ತಿಂಗಳಲ್ಲಿ ಪತ್ರೊಡೆ ತಿನ್ನದಿದ್ದರೆ ಹೇಗೆ? ಇಲ್ಲಿದೆ ರೆಸಿಪಿ
Related image2
Aati Amavasya 2023: ತುಳುನಾಡಿನಲ್ಲಿ ಆಟಿ ಕಷಾಯ ಕುಡಿಯುವ ದಿನ, ಏನಿದು ಪಾಲೆದ ಕಷಾಯ?
312
ಕೊಡಗಿನ ವಿಶೇಷ ಆಟಿ ಪಾಯಸ
Image Credit : youtube

ಕೊಡಗಿನ ವಿಶೇಷ ಆಟಿ ಪಾಯಸ

ಆದರೆ ಕೊಡಗು ಭಾಗದಲ್ಲಿ ಇದೇ ಸಮಯದಲ್ಲಿ ಒಂದು ವಿಶೇಷ ಪಾಯಸವನ್ನು ಮಾಡಲಾಗುತ್ತದೆ. ಸ್ಥಳೀಯವಾಗಿ ಆಟಿ ಸೊಪ್ಪು ಎಂದು ಕರೆಯಲ್ಪಡುವ ಸೊಪ್ಪಿನಿಂದ ಈ ವಿಶೇಷ ಸಿಹಿ ಪಾಯಸವನ್ನು ತಯಾರಿಸಲಾಗುತ್ತದೆ. ಈ ಆಟಿ ಸೊಪ್ಪಿಗೆ ವೈಜ್ಞಾನಿಕವಾಗಿ Justicia vinadensis ಎಂದು ಕರೆಯಲಾಗುತ್ತದೆ.

412
18 ಔಷಧಿಗಳನ್ನು ಹೊಂದಿದೆ ಸೊಪ್ಪು
Image Credit : youtube

18 ಔಷಧಿಗಳನ್ನು ಹೊಂದಿದೆ ಸೊಪ್ಪು

ಆಷಾಢದ 18 ಅಥವಾ ಆಟಿ 18ರ ದಿನದಂದು ಈ ಪಾಯಸವನ್ನು ಮಾಡಲಾಗುತ್ತದೆ. ಆ ದಿನದಂದು ಈ ಸೊಪ್ಪಿನಲ್ಲಿ ವಿಶೇಷವಾದ 18 ಬಗೆಯ ಔಷಧಿಗಳು ಇರುತ್ತವೆ ಎಂಬ ನಂಬಿಕೆ ಅಲ್ಲಿನ ಪೂರ್ವರಲ್ಲಿ ಇತ್ತು. ಹಾಗೂ ಈ ಸಂಪ್ರದಾಯವನ್ನು ಕೊಡಗಿನ ಜನ ಮುಂದುವರೆಸಿಕೊಂಡು ಬಂದಿದ್ದು, ಪ್ರತಿ ವರ್ಷದ ಆಟಿ 18ರ ದಿನದಂದು ಈ ಪಾಯಸವನ್ನು ಕೊಡಗಿನ ಪ್ರತಿ ಮನೆಯಲ್ಲೂ ಮಾಡುತ್ತಾರೆ.

512
ಆಟಿ ಪಾಯಸ ಮಾಡುವ ವಿಧಾನ
Image Credit : youtube

ಆಟಿ ಪಾಯಸ ಮಾಡುವ ವಿಧಾನ

ಹಾಗಿದ್ದರೆ ನಾವೀಗ ಈ ಆಟಿ ಪಾಯಸವನ್ನು ಮಾಡುವ ವಿಧಾನ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ, ಸಾಮಾನ್ಯವಾಗಿ ಕೊಡಗಿನ ಭಾಗದಲ್ಲಿ ಈ ಪಾಯಸಕ್ಕೆ ಬೇಕಾಗುವ ಆಟಿ ಸೊಪ್ಪು ಎಲ್ಲಾ ಕಡೆ ಮನೆ ಮುಂದೆಬೇಲಿಗಳಲ್ಲಿ ಸಿಗುತ್ತದೆ. ಆದರೆ ಇತರ ಭಾಗದಲ್ಲಿಯೂ ಇದ್ದರೂ ಇರಬಹುದು ಆದರೆ ಅವರಿಗೆ ಇದರ ಬಳಕೆಯ ಬಗ್ಗೆ ತಿಳಿದಿರುವ ಸಾಧ್ಯತೆ ಕಡಿಮೆ.

612
ಬೇಕಾಗುವ ಸಾಮಗ್ರಿಗಳು
Image Credit : youtube

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

ಬೆಳ್ತಿಗೆ ಅಕ್ಕಿ (white rice) 2 ಗ್ಲಾಸ್

ಬೆಲ್ಲ - 3 ಕಪ್

ತುರಿದ ತೆಂಗಿನಕಾಯಿ ಒಂದು ಗಡಿ( ಒಂದು ಚಿಪ್ಪಿ)

ಏಲಕ್ಕಿ ಪೌಡರ್

5 ಹುಡಿ ಮಾಡಿದ ಕಾಳು ಮೆಣಸು

ಗೋಡಂಬಿ ಹಾಗೂ ದ್ರಾಕ್ಷಿ

ತುಪ್ಪ, ಹಾಗೂ ಜೇನುತುಪ್ಪ,

712
ಆಟಿ ಸೊಪ್ಪನ್ನು ಪಾತ್ರೆಯಲ್ಲಿ ಹಾಕಿ ಅರ್ಧ ಗಂಟೆ ಬೇಯಿಸಿ
Image Credit : youtube

ಆಟಿ ಸೊಪ್ಪನ್ನು ಪಾತ್ರೆಯಲ್ಲಿ ಹಾಕಿ ಅರ್ಧ ಗಂಟೆ ಬೇಯಿಸಿ

ಮೊದಲಿಗೆ ಒಂದು ದೊಡ್ಡ ಬಟ್ಟಲಿನಷ್ಟು ಆಟಿ ಸೊಪ್ಪನ್ನು ತಂದು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ ಬಿಡಿಸಿಟ್ಟುಕೊಳ್ಳಿ, ಸೊಪ್ಪು ಹಾಗೂ ದಂಟು ಎರಡನ್ನು ಆಟಿ ಪಾಯಸ ಮಾಡುವುದಕ್ಕೆ ಬಳಸಬಹುದಾಗಿದೆ. ಚೆನ್ನಾಗಿ ತೊಳೆದ ಸೊಪ್ಪನ್ನು ಒಂದು ಪಾತ್ರೆಗೆ ಹಾಕಿ ಸೊಪ್ಪು ಮುಳುಗುವಷ್ಟು ನೀರು ಹಾಕಿ ಮುಚ್ಚಿಟ್ಟು ಒಲೆ ಮೇಲೆ(ಸ್ಟೌ) ಇಟ್ಟು ಅರ್ಧ ಗಂಟೆ ಬೇಯಿಸಿ.

812
ಬೇಯಿಸಿದ ರಸವನ್ನು ಸೊಪ್ಪಿನಿಂದ ಬೇರೆ ಪಾತ್ರಕ್ಕೆ ಸೋಸಿ
Image Credit : youtube

ಬೇಯಿಸಿದ ರಸವನ್ನು ಸೊಪ್ಪಿನಿಂದ ಬೇರೆ ಪಾತ್ರಕ್ಕೆ ಸೋಸಿ

ಅರ್ಧಗಂಟೆಯಲ್ಲಿ ಸೊಪ್ಪು ಚೆನ್ನಾಗಿ ಬೆಂದಿರುತ್ತೆ, ಅದರಲ್ಲಿರುವ ರಸವೆಲ್ಲಾ ಬಿಟ್ಟು ನೀರು ಪೂರ್ತಿ ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ. ಈಗ ಈ ಸೊಪ್ಪು ಬೇಯಿಸಿದ ನೀರನ್ನು ಒಂದು ಪಾತ್ರೆಗೆ ಸೋಸಿಟ್ಟುಕೊಳ್ಳಿ. ಕೆಲವರು ಬರೀ ಈ ನೀರಿಗೆ ಜೇನು ಹಾಕಿಯೂ ಕುಡಿಯುತ್ತಾರೆ. ಅದು ಕೂಡ ಆರೋಗ್ಯಕ್ಕೆ ಒಳ್ಳೆಯದು.

912
ಆಟಿ ಪಾಯಸ ಮಾಡುವ ವಿಧಾನ
Image Credit : youtube

ಆಟಿ ಪಾಯಸ ಮಾಡುವ ವಿಧಾನ

ಈಗ ಮತ್ತೊಂದು ಪಾತ್ರೆಯಲ್ಲಿ ಎರಡು ಗ್ಲಾಸ್‌ನಷ್ಟು ಅಕ್ಕಿಯನ್ನು ಹಾಕಿ ಅದನ್ನು 2ರಿಂದ 3 ಸಲ ಚೆನ್ನಾಗಿ ತೊಳೆದು ನೀರನ್ನು ಚೆಲ್ಲಿ, ನಂತರ ಬೇಯಿಸಿದ ಆಟಿ ಸೊಪ್ಪಿನಿಂದ ತೆಗೆದ ನೀರನ್ನು ಅಕ್ಕಿಗೆ ಹಾಕಿ, ಎರಡು ಗ್ಲಾಸ್ ಅಕ್ಕಿ ಹಾಕಿದ್ರೆ ಆರು ಗ್ಲಾಸ್ ನೀರು ಹಾಕ್ಬೇಕು, ಯಾಕಂದ್ರೆ ಅಕ್ಕಿ ತುಂಬಾ ಚೆನ್ನಾಗಿ ಬೆಂದು ಮೆತ್ತಗೆ ಆಗ್ಬೇಕು(ಕುಕ್ಕರ್‌ನಲ್ಲಿ ಮಾಡೋದಿದ್ರೆ). ನಂತರ ಇದಕ್ಕೆ ಒಂದು ಚಿಟಿಕೆ ಉಪ್ಪು, ನೀವು ಪೌಡರ್ ಮಾಡಿಟ್ಟ ಕಾಳು ಮೆಣಸಿನ ಹುಡಿ ಹಾಕಿ ಮೂರು ವಿಸಲ್ ಬರೋವರೆಗೆ ಗ್ಯಾಸ್ ಮೇಲೆನೇ ಬೇಯಲು ಬಿಡಿ.

1012
ಆಟಿ ಪಾಯಸ ಮಾಡುವ ವಿಧಾನ
Image Credit : youtube

ಆಟಿ ಪಾಯಸ ಮಾಡುವ ವಿಧಾನ

ಈಗ ಮತ್ತೊಂದು ಪಾತ್ರೆಯಲ್ಲಿ ಮುಕ್ಕಾಲು (3/4 )ಕೆಜಿ ಬೆಲ್ಲ, ಹಾಕಿ ಒಂದು ಅರ್ಧ ಗ್ಲಾಸ್ ನೀರು ಹಾಕಿ ಆ ಬೆಲ್ಲವನ್ನು ಕರಗಿಸಿ ಇಡಿ, ಈಗ ಕುಕ್ಕರ್‌ನಲ್ಲಿ ಆಟಿ ಸೊಪ್ಪಿನ ರಸದೊಂದಿಗೆ ಬೇಯಿಸಿದ ಅನ್ನಕ್ಕೆ ಈ ಕರಗಿಸಿದ ಬೆಲ್ಲದ ಪಾಕವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ( ಕೆಲವರು ಬೆಲ್ಲವನ್ನು ಅದರ ಜೊತೆಗೆ ಹಾಕಿ ಬೇಯಿಸ್ತಾರೆ ಹಾಗೂ ಮಾಡ್ಬಹುದು)

1112
ಆಟಿ ಪಾಯಸ ಮಾಡುವ ವಿಧಾನ
Image Credit : youtube

ಆಟಿ ಪಾಯಸ ಮಾಡುವ ವಿಧಾನ

ಈಗ ಗ್ಯಾಸನ್ನ ಸಣ್ಣ ಉರಿಯಲ್ಲಿ ಇಟ್ಟುಕೊಂಡು ಕುದಿಸಿ ಸೌಟು ಹಾಕಿ ಆಗಾಗ ತಿರುಗಿಸಿ, ಈಗ ಇದಕ್ಕೆ ಏಲಕ್ಕಿ ಪುಡಿ ಹಾಕಿ, ಹಾಗೂ ಅದು ಕುದಿ ಬರ್ತಿದ್ದ ಹಾಗೆ ತುರಿದಿಟ್ಟ ತೆಂಗಿನ ಕಾಯಿಯನ್ನು ಹಾಕಿ ಈಗ ಚೆನ್ನಾಗಿ ಮಿಕ್ಸ್‌ ಮಾಡಿ ಈಗ ಪಾಯಸ ರೆಡಿ ಈಗ ಇದಕ್ಕೆ ಜೇನು ಹಾಕಿ ಬಿಸಿ ಇರುವಾಗಲೇ ತಿನ್ನಿ.

1212
ಆಟಿ ಪಾಯಸ ಮಾಡುವ ವಿಧಾನ
Image Credit : youtube

ಆಟಿ ಪಾಯಸ ಮಾಡುವ ವಿಧಾನ

ಕೆಲವರು ತೆಂಗಿನ ಕಾಯಿಯ ತುರಿಯನ್ನು ಗ್ರೈಂಡ್ ಮಾಡಿ ಹಾಲನ್ನು ಸೋಸಿ ಬರೀ ಹಾಲನ್ನು ಮಾತ್ರ ಹಾಕ್ತಾರೆ ಕೆಲವರು ತೆಂಗಿನ ಕಾಯಿ ಹಾಕದೇನು ಮಾಡ್ತಾರೆ ಹಾಗೂ ಮಾಡ್ಬಹುದು. ಬೇಕಿದ್ರೆ ಗೋಡಂಬಿ ದ್ರಾಕ್ಷಿ ಮನೇಲಿ ಇದ್ರೆ ಈಗ ಒಂದು ಪ್ಯಾನ್‌ನಲ್ಲಿ ಮೂರು ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿ ದ್ರಾಕ್ಷಿಯನ್ನು ಹಾಕಿ ಕೆಲ ನಿಮಿಷ ಹುರಿದು ಈ ಪಾಯಸಕ್ಕೆ ಸೇರಿಸ್ಬಹುದು.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಆಹಾರ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved