ಮುರಿದ ಹಲ್ಲುಗಳ ಕನಸು ಬಿದ್ರೆ ಅದರ ಅರ್ಥ ಏನು?
ಪ್ರತಿಯೊಬ್ಬ ವ್ಯಕ್ತಿಯು ಮಲಗುವಾಗ ಒಂದಲ್ಲ ಒಂದು ರೀತಿಯ ಕನಸು ಕಾಣುತ್ತಾನೆ. ಕೆಲವು ಕನಸುಗಳು ನೆನಪಿನಲ್ಲಿರುತ್ತೆ ಮತ್ತು ಕೆಲವು ಮರೆತುಹೋಗುತ್ತವೆ. ಕನಸಿನ ವಿಜ್ಞಾನದ ಪ್ರಕಾರ, ಕನಸಿನಲ್ಲಿ ಕಾಣಿಸಿಕೊಳ್ಳುವ ಅನೇಕ ವಸ್ತುಗಳು ಮುಂಬರುವ ಒಳ್ಳೆಯ ಮತ್ತು ಕೆಟ್ಟ ಸಮಯಗಳ ಬಗ್ಗೆ ನಿಮಗೆ ಸಂಕೇತ ನೀಡುತ್ತವೆ. ಕನಸಿನಲ್ಲಿ, ಅನೇಕ ಜನರು ತಮ್ಮದೇ ಹಲ್ಲು ಮುರಿಯುವುದನ್ನು ನೋಡುತ್ತಾರೆ. ಇದರರ್ಥ ಏನೆಂದು ಇಲ್ಲಿ ತಿಳಿಯಿರಿ.
ಕನಸು(Dream) ಕಾಣೋದು ಕೇವಲ ಯಾವುದೇ ವ್ಯಕ್ತಿಯ ವಿಷಯವಲ್ಲ. ಕನಸುಗಳು ಗಾಢ ನಿದ್ರೆಯಲ್ಲಿ ಬರುತ್ತದೆ ಮತ್ತು ಅದು ನಮ್ಮನ್ನು ಮತ್ತೊಂದು ಪ್ರಪಂಚಕ್ಕೆ ಕರೆದೊಯ್ಯುತ್ತೆ. ಅಲ್ಲದೇ ನಾವು ಕಾಣುವ ಕನಸು ಒಂದೊಂದು ಅರ್ಥವನ್ನು ನೀಡುತ್ತೆ. ಅವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಅನೇಕ ಕನಸುಗಳು ನಮಗೆ ಆಹ್ಲಾದಕರ ಅನುಭವ ನೀಡುತ್ತವೆ, ಆದರೆ ಕೆಲವೊಮ್ಮೆ ಕನಸುಗಳು ನಮ್ಮನ್ನು ಚಡಪಡಿಸುವಂತೆ ಮಾಡುತ್ತೆ. ಎಚ್ಚರವಾದ ನಂತರ, ಈ ಕನಸುಗಳಿಗೆ ಯಾವುದೇ ಮಹತ್ವವಿಲ್ಲ ಎಂದು ನಾವು ಅನೇಕ ಬಾರಿ ಭಾವಿಸುತ್ತೇವೆ, ಆದರೆ ಅದು ಹಾಗಲ್ಲ.
ಕನಸಿನ ವಿಜ್ಞಾನದ ಪ್ರಕಾರ, ಕನಸುಗಳು ಮುಂಬರುವ ಭವಿಷ್ಯದ ಬಗ್ಗೆ ಸಂಕೇತ ನೀಡುತ್ತವೆ. ಅಂತಹ ಒಂದು ಕನಸು ಹಲ್ಲು ಮುರಿಯೋದು(Broken teeth). ಅನೇಕ ಜನರು ತಮ್ಮದೇ ಆದ ಹಲ್ಲು ಮುರಿಯುವ ಕನಸು ಕಾಣುತ್ತಾರೆ. ಈ ಕನಸು ನಿರಂತರವಾಗಿ ಬರುತ್ತಿದ್ದರೆ, ಜಾಗರೂಕರಾಗಿರಬೇಕು. ಕನಸಿನಲ್ಲಿ ಹಲ್ಲು ಮುರಿಯೋದು ಏನನ್ನು ಸೂಚಿಸುತ್ತದೆ ಎಂದು ಇಲ್ಲಿ ತಿಳಿಯಿರಿ.
ಕನಸಿನ ವಿಜ್ಞಾನದ ಪ್ರಕಾರ, ಕನಸಿನಲ್ಲಿ ನಿಮ್ಮ ಹಲ್ಲು ಮುರಿದಿರೋದನ್ನು ನೋಡಿದರೆ, ಜೀವನದಲ್ಲಿನ ಯಾವುದಾದರೂ ವಿಷಯದ ಬಗ್ಗೆ ನೀವು ತುಂಬಾನೆ ಯೋಚನೆ(Thinking) ಮಾಡುತ್ತಿದ್ದೀರಿ ಅಥವಾ ಒಂದು ವಿಷಯ ನಿಮ್ಮನ್ನು ಆಳವಾಗಿ ಕಾಡುತ್ತಿದೆ ಎಂದರ್ಥ, ಅದು ಜೀವನದ ಮೇಲೆ ಆಳವಾದ ಪರಿಣಾಮ ಬೀರಬಹುದು.
ಒಬ್ಬ ವ್ಯಕ್ತಿಯು ಕನಸಿನಲ್ಲಿ ತನ್ನ ಹಲ್ಲು ಮುರಿಯೋದನ್ನು ನೋಡಿದರೆ, ಜೀವನದಲ್ಲಿ ಮುಂಬರುವ ಸಮಯದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ ಮತ್ತು ಆ ಹೊಸ ಅವಕಾಶಗಳಿಂದ ಹಣದ(Money) ಪ್ರಯೋಜನಗಳನ್ನು ಪಡೆಯಬಹುದು ಎಂದು ಸಹ ಅರ್ಥೈಸಬಹುದು.
ಕನಸಿನ ವಿಜ್ಞಾನದ ಪ್ರಕಾರ, ಒಬ್ಬ ವ್ಯಕ್ತಿ ನಿಮ್ಮ ಹಲ್ಲನ್ನು ಎಳೆಯುತ್ತಿರುವ ಅಥವಾ ಒಡೆಯಲು ಪ್ರಯತ್ನಿಸುತ್ತಿರುವ ಕನಸು ಬಿದ್ದರೆ ಅದು ನಿಮ್ಮ ಭವಿಷ್ಯದಲ್ಲಿ ದೊಡ್ಡ ಬದಲಾವಣೆಯಾಗಲಿದೆ(Change) ಎಂಬುದರ ಸಂಕೇತವಾಗಿದೆ. ಈ ಬದಲಾವಣೆಯ ಬಗ್ಗೆ ಜಾಗರೂಕರಾಗಿರಬೇಕು.
ಒಬ್ಬ ವ್ಯಕ್ತಿ ಕನಸಿನಲ್ಲಿ ತನ್ನ ಹಲ್ಲು ಮುರಿಯೋದನ್ನು ನೋಡಿದರೆ, ಆಗ ಜೀವನದಲ್ಲಿ ಏನೋ ಸರಿಯಲ್ಲದ್ದು ನಡೆಯುತ್ತಿದೆ ಎಂದು ಅರ್ಥ, ಆದ್ದರಿಂದ ಈ ವಿಷಯವನ್ನು ಗುರುತಿಸಿ ಮತ್ತು ಅದನ್ನು ಬದಲಾಯಿಸಲು (Change) ಪ್ರಯತ್ನಿಸಿ. ಇಲ್ಲವಾದರೆ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆ ಅನುಭವಿಸಬೇಕಾಗಿ ಬರಬಹುದು.
ಕನಸಿನಲ್ಲಿ ಹಲ್ಲು ಬಿರುಕು ಬಿಟ್ಟಿರೋದನ್ನು ನೋಡಿದರೆ, ನೀವು ಯಾವುದಾದರೂ ವಿಷಯದ ಬಗ್ಗೆ ತೀವ್ರ ಒತ್ತಡದಲ್ಲಿದ್ದೀರಿ(Stress) ಎಂದರ್ಥ. ಹಾಗಾಗಿ, ನೀವು ಅದನ್ನು ನಿವಾರಿಸಲು ಪ್ರಯತ್ನಿಸಬೇಕು.ಆಗ ಲೈಫ್ ಬ್ಯೂಟಿಫುಲ್ ಆಗಿರುತ್ತೆ. ಇನ್ನು ಮುಂದೆ ಹಲ್ಲಿನ ಕನಸು ಬಿದ್ರೆ ಅದನ್ನು ಇಗ್ನೋರ್ ಮಾಡ್ಲೇ ಬೇಡಿ.