Asianet Suvarna News Asianet Suvarna News

ಕೈ ತುಂಬಾ ದುಡ್ಡಿರಬೇಕು ಅನ್ನೋ ಕನಸು ಯಾರಿಗಿಲ್ಲ ಹೇಳಿ? ಆಫೀಸಲ್ಲಿರಲಿ ಈ ಮೂರ್ತಿ

ಹಣದ ಹೊಳೆ ಹರಿಯಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಎಲ್ಲರಿಗೂ ಇದು ದುಸ್ವಪ್ನ. ಒಂದು ಮಟ್ಟಿಗೆ ಹಣ ಕೈನಲ್ಲಿ ಓಡಾಡ್ತಿರಬೇಕು, ಮಾಡುವ ಕೆಲಸ ಅಥವಾ ವ್ಯಾಪಾರದಲ್ಲಿ ಪ್ರಗತಿಯಾಗಬೇಕು ಅಂದ್ರೆ ಕಚೇರಿ ಅಥವಾ ಅಂಗಡಿಯಲ್ಲಿ ಯಾವ ದೇವರನ್ನು ಇಡಬೇಕು ಎಂಬುದು ತಿಳಿದಿರಬೇಕು.
 

Keeping These Type Of Idols In Shop And Office
Author
First Published Oct 27, 2022, 4:45 PM IST

ಅಂಗಡಿ, ಕಚೇರಿಗಳು ಪವಿತ್ರ ಸ್ಥಳ. ಅಲ್ಲಿ ಬರುವ ಆದಾಯದಿಂದಲೇ ನಮ್ಮ ಜೀವನ ಸಾಗುತ್ತಿರುತ್ತದೆ. ಇದೇ ಕಾರಣಕ್ಕೆ ಆಯುಧ ಪೂಜೆಯಲ್ಲಿ ಕಚೇರಿ, ಅಂಗಡಿಯಲ್ಲಿರುವ ಆಯುಧಗಳ ಪೂಜೆ ನಡೆಯುತ್ತದೆ. ದೀಪಾವಳಿಯ ಅಮವಾಸ್ಯೆಯಂದು ಲಕ್ಷ್ಮಿ ಪೂಜೆ ಮಾಡಿ, ಹೆಚ್ಚೆಚ್ಚು ಲಾಭ ಬರುವಂತೆ ಜನರು ಪ್ರಾರ್ಥಿಸುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಮಾತ್ರವಲ್ಲ ಪ್ರತಿ ದಿನ ಅಂಗಡಿಯಲ್ಲಿ ದೇವರ ಪೂಜೆ ಮಾಡುವವರಿದ್ದಾರೆ. ಕಚೇರಿ, ಅಂಗಡಿಯಲ್ಲಿ ದೇವರ ಪೂರ್ತಿಗಳನ್ನು ಇಟ್ಟು, ಅದಕ್ಕೆ ಹೂ,ಅರಿಶಿನ, ಕುಂಕುಮ ಹಾಕಿ, ಆರತಿ ಬೆಳಗಿ ಪೂಜೆ ಮಾಡ್ತಾರೆ. ಸಂಜೆ ಹೊತ್ತಿನಲ್ಲಿ ಕೂಡ ಕಚೇರಿ ಅಥವಾ ಅಂಗಡಿಯಲ್ಲಿರುವ ದೇವರ ಮುಂದೆ ದೀಪ ಹಚ್ಚುತ್ತಾರೆ. ಕಚೇರಿಯಲ್ಲಿ ದೇವರ ಮೂರ್ತಿ ಇಟ್ಟು ಪೂಜೆ ಮಾಡಬೇಕು ಎಂಬ ಕಾರಣಕ್ಕೆ ಅಂಗಡಿಯಲ್ಲಿ ಒಂದಿಷ್ಟು ದೇವರ ಮೂರ್ತಿ, ಫೋಟೋಗಳನ್ನು ಹಾಕ್ತಾರೆ. ಆದ್ರೆ ಅದ್ರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇದಕ್ಕೆ ಕಾರಣ ಕಚೇರಿ ಅಥವಾ ಅಂಗಡಿಯಲ್ಲಿ ಹಾಕುವ ದೇವರ ಫೋಟೋ ಅಂದ್ರೆ ನೀವು ನಂಬುತ್ತೀರಾ? ಇದಕ್ಕೂ ಒಂದಿಷ್ಟು ನಿಯಮವಿದೆ. ಕಚೇರಿ ಅಥವಾ ಅಂಗಡಿಯಲ್ಲಿ ಯಾವ ರೀತಿಯ ದೇವರ ಫೋಟೋ ಹಾಕಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಗಣೇಶ (Ganesh) ನ ಈ ವಿಗ್ರಹ ಕಚೇರಿ (Office) ಯಲ್ಲಿರಲಿ : ಪ್ರತಿಯೊಂದು ಕಚೇರಿಯಲ್ಲೂ ಗಣೇಶನ ವಿಗ್ರಹವಿರುತ್ತದೆ. ಬಹುತೇಕರು ಕುಳಿತ ಗಣೇಶನ ಮೂರ್ತಿ ಅಥವಾ ಫೋಟೋಕ್ಕೆ ಪೂಜೆ ಮಾಡ್ತಿರುತ್ತಾರೆ. ಕಚೇರಿಯಲ್ಲಿ ನೀವು ಕುಳಿತ ಗಣಪತಿ ಮೂರ್ತಿ ಇಡಬಾರದು. ನಿಂತ ಗಣಪತಿ ಮೂರ್ತಿ ಇಟ್ಟರೆ ಮಂಗಳಕರವೆಂದು ಹೇಳಲಾಗಿದೆ. ಇದ್ರಿಂದ ಕೆಲಸದ ಸ್ಥಳದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ನಿಮ್ಮ ಕ್ಷೇತ್ರದಲ್ಲಿ ನೀವು ಬೆಳವಣಿಗೆ ಕಾಣ್ತೀರಿ.   

Chanakya Niti: ವಂಚಕರನ್ನು ಈ ರೀತಿ ಗುರುತಿಸಿ, ಅವರಿಂದ ದೂರವಿರಿ

ಲಕ್ಷ್ಮಿ (Lakshmi) ಯ ಈ ವಿಗ್ರಹವಿರಲಿ : ಅಂಗಡಿ (Shop) ಅಥವಾ ಕಚೇರಿಯಲ್ಲಿ ದೇವರ ಮೂರ್ತಿ ಇಡಲು ಬಯಸಿದ್ದರೆ ನೀವು ತಾಯಿ  ಲಕ್ಷ್ಮಿ ವಿಗ್ರಹವನ್ನು ಇಟ್ಟುಕೊಳ್ಳಬೇಕು. ಅಂಗಡಿ ಅಥವಾ ಕಚೇರಿಗೆ ಕಾಲಿಟ್ಟ ತಕ್ಷಣ ನೀವು  ನಿರ್ಮಲ ಮನಸ್ಸಿನಿಂದ ಲಕ್ಷ್ಮಿಗೆ ನಮಸ್ಕರಿಸಬೇಕು. ತಾಯಿಗೆ  ಅಗರಬತ್ತಿ ಹಚ್ಚಿ, ದೀಪ ಬೆಳಗಿ ಅಲ್ಲಿನ ಪರಿಸರವನ್ನು ಶುದ್ಧಗೊಳಿಸಿ. ಇದ್ರಿಂದ ಲಕ್ಷ್ಮಿ ಪ್ರಸನ್ನಗೊಳ್ತಾಳೆ. ಬೆಳಿಗ್ಗೆ ಮತ್ತು ಸಂಜೆ ಕಚೇರಿ ತೆರೆಯುವ ಸಮಯದಲ್ಲಿ ತಾಯಿಗೆ ಆರತಿ ಮಾಡಬೇಕು.  

ಕುಲದೇವರ ಫೋಟೋ ಅಂಗಡಿಯಲ್ಲಿರಲಿ : ಕುಲದೇವರ ಆರಾಧನೆ ಬಹಳ ಮುಖ್ಯ. ಕುಲದೇವರ ಆಶೀರ್ವಾದವಿದ್ದರೆ ಎಂಥ ಕಷ್ಟವನ್ನು ಕೂಡ ಜಯಿಸಬಹುದು. ನಿಮಗೆ ನಿಮ್ಮ ಕುಲದೇವರ ಬಗ್ಗೆ ತಿಳಿದಿದ್ದರೆ ಅದರ ಫೋಟೋವನ್ನು ಕಚೇರಿ ಅಥವಾ ಅಂಗಡಿಯಲ್ಲಿಟ್ಟು ಪೂಜೆ ಮಾಡಿ. ಪ್ರತಿನಿತ್ಯ ಬೆಳಗ್ಗೆ ಅಗರಬತ್ತಿಗಳನ್ನು ಹಚ್ಚಿ ಪೂಜೆ ಮಾಡಿ. ಹಾಗೆಯೇ ಅಂಗಡಿ ಅಥವಾ ಕಚೇರಿಗೆ ಪ್ರತಿ ದಿನ ಗಂಗಾಜಲ ಹಾಕಿ ಶುದ್ಧ ಮಾಡಿ.  

ಕಚೇರಿ ಅಥವಾ ಅಂಗಡಿಯಲ್ಲಿ ಬೇಡ ಈ ಫೋಟೋ, ವಿಗ್ರಹ : ಅತಿ ದೊಡ್ಡ ಚಿತ್ರಗಳು ಮತ್ತು ವಿಗ್ರಹಗಳನ್ನು ಕಚೇರಿಯಲ್ಲಿ ಅಥವಾ ಅಂಗಡಿಯಲ್ಲಿ ಇಡುವುದು ಒಳ್ಳೆಯದಲ್ಲ. ಫೋಟೋ ನಿಮ್ಮ ಅಂಗೈಗಿಂತ ದೊಡ್ಡದಾಗಿರಬಾರದು. ಹೆಬ್ಬೆರಳಿನ ಗಾತ್ರಕ್ಕಿಂತ ಸ್ವಲ್ಪ ದೊಡ್ಡದಾಗಿರುವ ದೇವರ ವಿಗ್ರಹವನ್ನು ಮಾತ್ರ ಕಚೇರಿಯಲ್ಲಿ ಇಡಬೇಕು.

ನಿಮ್ಮ ಪರ್ಸ್ ನಲ್ಲಿ ಇದನ್ನಿಡಿ ಸಾಕು, ಹಣ ಪದೇ ಪದೇ ಖರ್ಚಾಗೋದೆ ಇಲ್ಲ

ವಿಗ್ರಹವಿಟ್ಟ ಸ್ಥಳದಲ್ಲಿ ಸ್ವಚ್ಛತೆ ಮುಖ್ಯ : ಕೆಲಸ ಮಾಡುವ ಜಾಗ ಯಾವಾಗಲೂ ಸ್ವಚ್ಛವಾಗಿರಬೇಕು. ಪ್ರತಿ ದಿನ ಕಚೇರಿ ಅಥವಾ ಅಂಗಡಿಯನ್ನು ಕ್ಲೀನ್ ಮಾಡುವುದು ಮುಖ್ಯ. ಅದರಂತೆ ನೀವು ವಿಗ್ರಹವಿಟ್ಟ ಸ್ಥಳವನ್ನು ಕೂಡ ಪ್ರತಿ ದಿನ ಕ್ಲೀನ್ ಮಾಡ್ಬೇಕು. ಮೂರ್ತಿಯಿಟ್ಟ ಜಾಗ ಅಥವಾ ಫೋಟೋ ನೇತು ಹಾಕಿದ ಜಾಗದಲ್ಲಿ ಕೊಳಕನ್ನು ಇಡಬಾರದು. ಕೊಳಕಿರುವ ಜಾಗದಲ್ಲಿ ದೇವರು ನೆಲೆಸಲು ಸಾಧ್ಯವಿಲ್ಲ. ಶುದ್ಧ ಸ್ಥಳದಲ್ಲಿ ದೇವರು ಸಂತೋಷವಾಗಿರ್ತಾನೆ. 
 

Follow Us:
Download App:
  • android
  • ios