ಈ ಒಂದು ಸಣ್ಣ ಕೆಲ್ಸ ಮಾಡಿದ್ರೆ ಮಕ್ಕಳು ಮೊಬೈಲ್ ಮರೆತು ಬಿಡ್ತಾರೆ
Vastu tips : ಮಕ್ಕಳು ಇಡೀ ದಿನ ಮೊಬೈಲ್ ನೋಡ್ತಾರೆ. ಮಕ್ಕಳನ್ನು ಮೊಬೈಲ್ ನಿಂದ ದೂರ ಇಡಬೇಕು ಅಂದ್ರೆ ಹೆಚ್ಚು ಟೆನ್ಷನ್ ಮಾಡ್ಕೊಳ್ಬೇಕಾಗಿಲ್ಲ. ವಾಸ್ತು ಪ್ರಕಾರ ಒಂದೇ ಒಂದು ದಿಕ್ಕು ನಿಮ್ಮ ಮಕ್ಕಳ ಮೊಬೈಲ್ ಚಟಕ್ಕೆ ಮುಕ್ತಿ ನೀಡುತ್ತದೆ.

ಮೊಬೈಲ್ ಹ್ಯಾಬಿಟ್
ಮಕ್ಕಳು ಮತ್ತೆ ಮೊಬೈಲ್ ಪೆವಿಕಾಲ್ ನಂತೆ ಅಂಟಿಕೊಳ್ಳುವ ವಸ್ತುವಾಗ್ಬಿಟ್ಟಿದೆ. ಅರ್ಧ ಗಂಟೆ ಮಕ್ಕಳು ಮೊಬೈಲ್ ನಿಂದ ದೂರ ಇರೋದಿಲ್ಲ. ಮೊಬೈಲ್, ರೀಲ್ಸ್, ಸೋಶಿಯಲ್ ಮೀಡಿಯಾ, ಟಿವಿ ಹೀಗೆ ಒಂದಾದ್ಮೇಲೆ ಒಂದು ಬೇಕು. ಮೊಬೈಲ್ ಇಲ್ದೆ ಮಕ್ಕಳ ಬಾಯಿಗೆ ಒಂದು ತುತ್ತು ಅನ್ನ ಹೋಗೋದಿಲ್ಲ. ಮಕ್ಕಳ ಈ ಚಟಕ್ಕೆ ಪಾಲಕರು ಬೇಸತ್ತಿದ್ದಾರೆ. ಮೊಬೈಲ್ ನಿಂದ ಮಕ್ಕಳನ್ನು ದೂರ ಇಡಲು ಅಲ್ಲಿ ಇಲ್ಲಿ ಅಂತ ಬೇರೆ ಬೇರೆ ಕ್ಲಾಸಿಗೆ ಮಕ್ಕಳನ್ನು ಹಾಕಿ ಬ್ಯುಸಿ ಮಾಡ್ತಿದ್ದಾರೆ. ಇಷ್ಟಾದ್ರೂ ಮಕ್ಕಳ ಚಟ ಬಿಡಿಸೋಕಾಗ್ತಿಲ್ಲ. ನೀವು ಮಕ್ಕಳನ್ನು ಮೊಬೈಲ್ ನಿಂದ ದೂರ ಇಡಲು ವಾಸ್ತು ಟಿಪ್ಸ್ ಕೂಡ ಟ್ರೈ ಮಾಡ್ಬಹುದು.
ಮಕ್ಕಳನ್ನು ಮೊಬೈಲ್ ನಿಂದ ದೂರ ಇಡುತ್ತೆ ದಿಕ್ಕು
ವಾಸ್ತು ಪ್ರಕಾರ, ನಮ್ಮ ಮನೆ ದಿಕ್ಕು ಬಹಳ ಮುಖ್ಯ. ಮನೆಯ ಯಾವ ದಿಕ್ಕಿನಲ್ಲಿ ನಾವು ಯಾವ ವಸ್ತುಗಳನ್ನು ಇಡಬೇಕು ಎಂಬುದನ್ನು ತಿಳಿದಿರಬೇಕು. ದಿಕ್ಕು ಹಾಗೂ ಅಲ್ಲಿಡುವ ವಸ್ತು ನಮ್ಮ ಆರೋಗ್ಯ ಹಾಳು ಮಾಡುತ್ತದೆ. ಮಕ್ಕಳಿಂದ ಮೊಬೈಲ್ ದೂರ ಇಡಬೇಕು ಅಂದ್ರೆ ಮೊಬೈಲನ್ನು ಯಾವಾಗಲೂ ನೈಋತ್ಯ ದಿಕ್ಕಿನಲ್ಲಿ ಇಡಿ. ಕ್ರಮೇಣ, ಮಗುವಿನ ಗಮನ ಸ್ವಯಂಚಾಲಿತವಾಗಿ ಮೊಬೈಲ್ ಫೋನ್ನಿಂದ ದೂರ ಸರಿಯೋಕೆ ಶುರುವಾಗುತ್ತೆ. ವಾಸ್ತು ಪ್ರಕಾರ, ನೈಋತ್ಯ ದಿಕ್ಕಿನಲ್ಲಿ ಇರಿಸಲಾದ ವಸ್ತುಗಳು ಕ್ರಮೇಣ ನಿಮ್ಮ ಜೀವನದಿಂದ ಕಣ್ಮರೆಯಾಗುತ್ತವೆ.
ವ್ಯಸನದಿಂದ ದೂರ
ನಿಮ್ಮ ಕುಟುಂಬದಲ್ಲಿ ಯಾರಾದರೂ ಮದ್ಯ ಅಥವಾ ಯಾವುದೇ ವ್ಯಸನಕ್ಕೆ ಬಲಿಯಾಗಿದ್ದರೆ ನೀವು ನೈರುತ್ಯ ದಿಕ್ಕನ್ನು ಬಳಸಬಹುದು. ನೈಋತ್ಯ ದಿಕ್ಕಿನಲ್ಲಿ ಆ ವಸ್ತುಗಳನ್ನು ಇಡೋದ್ರಿಂದ ಅವರು ವ್ಯಸನದಿಂದ ದೂರ ಆಗ್ತಾರೆ. ಮನೆಯ ನೈರುತ್ಯ ದಿಕ್ಕಿನಲ್ಲಿ ಶೌಚಾಲಯ ಇರುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.
ಅನಗತ್ಯ ಖರ್ಚು
ಈ ದಿಕ್ಕಿನಲ್ಲಿ ವಾಸ್ತು ದೋಷಗಳು ಅನಗತ್ಯ ಖರ್ಚುಗಳನ್ನು ಹೆಚ್ಚಿಸಬಹುದು. ವಿಶೇಷವಾಗಿ ಈ ದಿಕ್ಕಿನಲ್ಲಿ ಇರಿಸಲಾಗಿರುವ ವಸ್ತುಗಳ ಮೇಲೆ ಖರ್ಚು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ದಿಕ್ಕಿನಲ್ಲಿ ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳನ್ನು ಬಳಸುವುದನ್ನು ತಪ್ಪಿಸಿ. ಜೀವನದಲ್ಲಿ ಸರಿ ಮತ್ತು ತಪ್ಪುಗಳ ನಡುವೆ ಆಯ್ಕೆ ಮಾಡಲು ಮೊದಲು ಈ ದಿಕ್ಕು ವಾಸ್ತು ದೋಷಗಳಿಂದ ಮುಕ್ತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಈ ವಸ್ತುಗಳನ್ನು ಇಲ್ಲಿ ಇಡಬೇಡಿ
ನೈಋತ್ಯವನ್ನು ವಿಲೇವಾರಿ ದಿಕ್ಕು ಎಂದು ನಂಬಲಾಗಿದೆ. ಮಕ್ಕಳ ಪುಸ್ತಕಗಳು, ಕುಟುಂಬದ ಫೋಟೋಗಳು, ಲಾಕರ್ಗಳು ಇತ್ಯಾದಿ ಯಾವುದೇ ಅಮೂಲ್ಯ ವಸ್ತುಗಳನ್ನು ಇಲ್ಲಿ ಇಡಬೇಡಿ. ಕುಟುಂಬದ ಫೋಟೋಗಳನ್ನು ಇಲ್ಲಿ ಇಡುವುದರಿಂದ ಕುಟುಂಬದಲ್ಲಿ ಗಲಾಟೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಶಾಲಾ ಬ್ಯಾಗ್ಗಳು ಅಥವಾ ಪುಸ್ತಕಗಳನ್ನು ಇಟ್ಟುಕೊಳ್ಳುವುದರಿಂದ ಮಗು ನಿರುತ್ಸಾಹಗೊಳ್ಳಬಹುದು. ಓದಿನಲ್ಲಿ ಹಿಂದೆ ಬೀಳಬಹುದು. ನೈಋತ್ಯ ದಿಕ್ಕಿನಲ್ಲಿ ಯಾವುದೇ ವಸ್ತುಗಳನ್ನು ಇಡುವಾಗ ಮೊದಲು, ಅದರ ಅಗತ್ಯ ನಿಮಗಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸಿಕೊಳ್ಳಿ.

