ಅಕ್ಟೋಬರ್ 24 ರಂದು ಸೂರ್ಯಗ್ರಹಣ: ಈ ರಾಶಿಯವರು ಹುಷಾರಾಗಿರಿ!
ಅಕ್ಟೋಬರ್ ತಿಂಗಳಲ್ಲಿ ಸೂರ್ಯ ಗ್ರಹಣ ಉಂಟಾಗಲಿದೆ ಎನ್ನವುದನ್ನು ಕೇಳಿ ಪ್ರತಿಯೊಬ್ಬರಿಗೂ ಈ ಬಾರಿ ನಮಗೆ ಏನು ತೊಂದರೆಯಾಗಲಿದೆ ಅನ್ನೋ ಭಯ ಕಾಡುತ್ತಿದೆ. ಪಂಚಾಂಗದ ಪ್ರಕಾರ, ಈ ವರ್ಷ ದೀಪಾವಳಿ ಹಬ್ಬವನ್ನು ಅಕ್ಟೋಬರ್ 24 ರಂದು ಆಚರಿಸಲಾಗುವುದು. ಮರುದಿನ ಅಂದರೆ ಗೋವರ್ಧನ ಪೂಜೆಯಂದು ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯಗ್ರಹಣವು ಯಾವಾಗಲೂ ಅಮಾವಾಸ್ಯೆ ತಿಥಿಯಂದು ಸಂಭವಿಸುತ್ತೆ ಮತ್ತು ದೀಪಾವಳಿಯನ್ನು ಪ್ರತಿ ವರ್ಷ ಅಮಾವಾಸ್ಯೆ ತಿಥಿಯಂದು ಆಚರಿಸಲಾಗುತ್ತೆ. ಈ ಬಾರಿ ಸೂರ್ಯ ಗ್ರಹಣದಂದು ಯಾವ ರಾಶಿ ಮೇಲೆ ಪರಿಣಾಮ ಬೀರಲಿದೆ ನೋಡೋಣ.
ಗ್ರಹಣದ(Eclipse) ಸಮಯದಲ್ಲಿ, ಸೂರ್ಯನು ತುಲಾರಾಶಿಯಲ್ಲಿರುತ್ತಾನೆ, ಇದನ್ನು ಸೂರ್ಯನ ನೀಚ ರಾಶಿ ಎಂದು ಪರಿಗಣಿಸಲಾಗುತ್ತೆ . ಈ ಸೂರ್ಯಗ್ರಹಣದ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಇದ್ದರೂ, ವೃಷಭ, ಮಿಥುನ, ಕನ್ಯಾ ಮತ್ತು ತುಲಾ ರಾಶಿಯವರು ವಿಶೇಷವಾಗಿ ಜಾಗರೂಕರಾಗಿರಬೇಕು. ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ.
ಸೂರ್ಯಗ್ರಹಣ(Solar eclipse) 2022: ಸೂತಕ ಕಾಲ ಯಾವಾಗ ಸಂಭವಿಸುತ್ತೆ
ಪಂಚಾಂಗದ ಪ್ರಕಾರ, ಸೂರ್ಯಗ್ರಹಣವು ಅಕ್ಟೋಬರ್ 25 ರಂದು ಮಧ್ಯಾಹ್ನ 2:29 ಕ್ಕೆ ಪ್ರಾರಂಭವಾಗುತ್ತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯಗ್ರಹಣ ಪ್ರಾರಂಭವಾಗುವ 12 ಗಂಟೆಗಳ ಮೊದಲು ಸೂತಕದ ಅವಧಿಯು ನಡೆಯುತ್ತೆ. ಆದ್ದರಿಂದ, ಸೂತಕ ಅವಧಿಯು ಅಕ್ಟೋಬರ್ 24 ರ ದೀಪಾವಳಿಯ ರಾತ್ರಿ 2:30 ರಿಂದ ಆರಂಭವಾಗುತ್ತೆ. ಏಕೆಂದರೆ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸೋದಿಲ್ಲ. ಆದ್ದರಿಂದ, ಈ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗೋದಿಲ್ಲ.
ಈ ರಾಶಿಯವರು ಜಾಗರೂಕರಾಗಿರಬೇಕು
ವೃಷಭ ರಾಶಿ: (Taurus)
ಸೂರ್ಯಗ್ರಹಣವು ನಿಮಗೆ ಶುಭಕರವಲ್ಲ. ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆದ್ದರಿಂದ ಆಹಾರದ ಬಗ್ಗೆ ಜಾಗರೂಕರಾಗಿರಿ, ಎಚ್ಚರಿಕೆಯಿಂದ ಆಹಾರ ಸೇವನೆ ಮಾಡಿ. ವ್ಯವಹಾರದಲ್ಲಿ ನಷ್ಟವಾಗಬಹುದು. ಹೂಡಿಕೆ ಮಾಡೋದನ್ನು ತಪ್ಪಿಸಿ ಎಂದು ತಜ್ಞರು ಹೇಳುತ್ತಾರೆ.
ಮಿಥುನ ರಾಶಿ: (Gemini)
ಸೂರ್ಯಗ್ರಹಣವು ನಿಮಗೆ ನೋವುಂಟುಮಾಡಬಹುದು. ದುಂದುವೆಚ್ಚ ಹೆಚ್ಚಾಗಬಹುದು. ನಿಮ್ಮ ಬಜೆಟ್ ಹದಗೆಡಬಹುದು. ಕೆಲವು ಪ್ರಮುಖ ಕೆಲಸಗಳಿಗೆ ಅಡ್ಡಿಪಡಿಸಬಹುದು. ಯಾವುದೇ ವ್ಯವಹಾರ ಒಪ್ಪಂದವನ್ನು ರದ್ದುಗೊಳಿಸಬಹುದು. ವೈವಾಹಿಕ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು.
ಕನ್ಯಾ ರಾಶಿ :(Virgo)
ಕನ್ಯಾ ರಾಶಿಯವರಿಗೂ ಗ್ರಹಣದಿಂದ ತೊಂದರೆ ಇದೆ. ಈ ಸೂರ್ಯಗ್ರಹಣವು ನಿಮ್ಮ ಆರ್ಥಿಕ ಕ್ಷೇತ್ರದಲ್ಲಿ ತೊಂದರೆಗಳನ್ನು ಸೃಷ್ಟಿಸುತ್ತೆ. ಈ ಸಮಯದಲ್ಲಿ ನಿಮ್ಮ ವ್ಯವಹಾರವು ನಿಧಾನವಾಗಬಹುದು. ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಹೂಡಿಕೆ ಮಾಡಲು ಇದು ಸರಿಯಾದ ಸಮಯವಲ್ಲ.
ತುಲಾ(Libra) ರಾಶಿ:
ಶನಿಯ ಧೈಯ ನಿಮ್ಮ ಮೇಲೆ ಚಲಿಸುತ್ತಿದೆ. ಹಾಗಾಗಿ, ನೀವು ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು ಏಕೆಂದರೆ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ಆದುದರಿಂದ ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಉತ್ತಮ. ನೀವು ಯಾವುದಕ್ಕೂ ಹೆದರದಿರಿ, ಧೈರ್ಯದಿಂದ ಕೆಲಸ ಮಾಡಬೇಕು.