ನಿಮ್ಮ Zodiac Sign ಯಾವುದು? ಹೀಗ್ ಲಕ್ಷ್ಮಿ ಪೂಜೆ ಮಾಡಿದರೆ ಹಣ ಹರಿದು ಬರುತ್ತದೆ!

ತಾಯಿ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಸುಲಭವಲ್ಲ. ಚಂಚಲೆ ಲಕ್ಷ್ಮಿ ಎಲ್ಲರ ಮನೆಯಲ್ಲೂ ನೆಲೆ ನಿಲ್ಲೋದಿಲ್ಲ. ಆಕೆಯನ್ನು ಒಲಿಸಿಕೊಳ್ಳಲು ಭಕ್ತರು ಇನ್ನಿಲ್ಲದ ಸಾಹಸ ಮಾಡ್ತಾರೆ. ದೀಪಾವಳಿಯಲ್ಲಿ ಲಕ್ಷ್ಮಿಗೆ ವಿಶೇಷ ಪೂಜೆ ಮಾಡುವ ಜನರು ಕೆಲ ಸಂಗತಿ ತಿಳಿದಿರಬೇಕು.
 

Lakshmi Puja According To Zodiac Signs to gain more money and prosperity

ದೀಪಗಳ ಹಬ್ಬ ದೀಪಾವಳಿಯಂದು ತಾಯಿ ಲಕ್ಷ್ಮಿ ಪೂಜೆಗೆ ಮಹತ್ವವಿದೆ. ಹಿಂದೂ ಧರ್ಮದಲ್ಲಿ ದೀಪಾವಳಿಯಂದು ತಾಯಿ ಲಕ್ಷ್ಮಿ ದೇವಿ ಜೊತೆ ಗಣೇಶ ಹಾಗೂ ಕುಬೇರನನ್ನು ಪೂಜೆ ಮಾಡಲಾಗುತ್ತದೆ. ಸಂಪತ್ತಿನ ದೇವತೆಯನ್ನು ಭಕ್ತಿಯಿಂದ ಪೂಜೆ ಮಾಡುವ ಭಕ್ತರು, ಐಶ್ವರ್ಯವನ್ನು ಕರುಳಿಸುವಂತೆ ಪ್ರಾರ್ಥನೆ ಮಾಡ್ತಾರೆ. ಈ ಬಾರಿ ದೀಪಾವಳಿಯಲ್ಲಿ ನೀವು ತಾಯಿ ಲಕ್ಷ್ಮಿಯನ್ನು ಒಲಿಸಿಕೊಳ್ಳಬೇಕೆಂದ್ರೆ ನಿಮ್ಮ ರಾಶಿಗೆ ಅನುಗುಣವಾಗಿ ಪೂಜೆ ಮಾಡಿ. ಇದ್ರಿಂದ ಫಲ ಸಿಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇಂದು ನಾವು, ಯಾವ ರಾಶಿಯವರು ಯಾವ ರೀತಿ ಲಕ್ಷ್ಮಿ ಪೂಜೆ ಮಾಡ್ಬೇಕು ಎಂಬುದನ್ನು ಹೇಳ್ತೇವೆ.

ರಾಶಿಗೆ ಅನುಗುಣವಾಗಿ ಮಾಡಿ ತಾಯಿ ಲಕ್ಷ್ಮಿ (Lakshmi) ಪೂಜೆ

ಮೇಷ ರಾಶಿ (Aries) : ಮೇಷ ರಾಶಿಯವರ ಗ್ರಹ ಮಂಗಳ. ಈ ರಾಶಿಯವರು ದೀಪಾವಳಿ ದಿನ ಲಕ್ಷ್ಮಿಯನ್ನು ಒಲಿಸಿಕೊಳ್ಳಬೇಕು ಎಂದಿದ್ದರೆ ಲಕ್ಷ್ಮಿ ಕೆಂಪು (Red) ಹೂವನ್ನು ಅರ್ಪಿಸಿ ಪೂಜೆ ಮಾಡಿ. ಹಾಗೆಯೇ ಲಕ್ಷ್ಮಿ ಸ್ತೋತ್ರವನ್ನು ಪಠಿಸಿ. ಇದರ ಜೊತೆಗೆ ಮೇಷ ರಾಶಿಯ ಜನರು ಹನುಮಂತನ ಪೂಜೆ ಮಾಡಿದ್ರೆ ಬೇಗ ವರ ಪಡೆಯಬಹುದು.

ವೃಷಭ ರಾಶಿ : ವೃಷಭ ರಾಶಿ ಗ್ರಹ ಶುಕ್ರ. ಈ ರಾಶಿಯವರು ದೀಪಾವಳಿ ದಿನ ತಾಯಿ ಲಕ್ಷ್ಮಿಗೆ ಕುಂಕುಮದ ತಿಲಕವನ್ನಿಡಬೇಕು. ಅಲ್ಲದೆ ಓಂ ಮಹಾಲಕ್ಷ್ಮೈ ನಮಃ ಮಂತ್ರವನ್ನು ಪಠಿಸಬೇಕು. 

ಮಿಥುನ ರಾಶಿ : ಮಿಥುನ ರಾಶಿಯ ಗ್ರಹ ಬುಧ.  ದೀಪಾವಳಿಯಂದು ಮಿಥುನ ರಾಶಿಯವರು ಲಕ್ಷ್ಮಿ ಜೊತೆಗೆ ಗಣಪತಿ ಪೂಜೆ ಮಾಡಬೇಕು. ಗಣಪತಿಗೆ ಮೋದಕವನ್ನು ಅರ್ಪಿಸಬೇಕು.  

Vastu tips: ಮರೆತೂ ಈ ವಸ್ತುಗಳನ್ನು ತೆರೆದಿಡಬೇಡಿ, ನಷ್ಟವಾಗುತ್ತೆ!

ಕರ್ಕರಾಶಿ : ಕರ್ಕ ರಾಶಿಯ ಗ್ರಹ ಚಂದ್ರ. ದೀಪಾವಳಿಯ ದಿನದಂದು ಕರ್ಕ ರಾಶಿಯ ಜನರು, ಲಕ್ಷ್ಮಿಗೆ ಕಮಲದ ಹೂ ಅರ್ಪಿಸಿ ಪೂಜೆ ಮಾಡಬೇಕು. ಜೀವನದಲ್ಲಿ ಯಶಸ್ಸು ಸಿಗಲು ಇದು ನೆರವಾಗುತ್ತದೆ. 

ಸಿಂಹ ರಾಶಿ  : ಸಿಂಹ ರಾಶಿಯ ಮುಖ್ಯ ಗ್ರಹ ಸೂರ್ಯ. ಈ ರಾಶಿಯವರು ಲಕ್ಷ್ಮಿ ಕೃಪೆ ಪಡೆಯಬೇಕೆಂದ್ರೆ ದೀಪಾವಳಿಯ ದಿನದಂದು ಲಕ್ಷ್ಮಿ ಹಾಗೂ ಗಣಪತಿಯ ಹೊಸ ಮೂರ್ತಿಗೆ ಪೂಜೆ ಮಾಡ್ಬೇಕು. ಪೂಜಾ ಸ್ಥಳದಲ್ಲಿ ಕೆಂಪು ಬಟ್ಟೆಯನ್ನು ಇಟ್ಟು ಪೂಜೆ ಮಾಡ್ಬೇಕು.  

ಕನ್ಯಾರಾಶಿ : ಕನ್ಯಾ ರಾಶಿ ಗ್ರಹ  ಬುಧನಾಗಿದ್ದಾನೆ. ಕನ್ಯಾ ರಾಶಿಯ ಜನರು ಲಕ್ಷ್ಮಿ ಒಲಿಸಿಕೊಳ್ಳಲು ಹಾಗೂ ಹೊಸ ಉದ್ಯೋಗ ಪ್ರಾರಂಭಿಸುವ ಬಯಕೆಯಲ್ಲಿದ್ದರೆ ಲಕ್ಷ್ಮಿಗೆ ಖೀರ್ ಅರ್ಪಿಸಬೇಕು.  ಹಾಗೆಯೇ ಲಕ್ಷ್ಮಿಗೆ ಕಮಲದ ಹೂವುಗಳನ್ನು ಅರ್ಪಿಸಬೇಕು. 

ತುಲಾ ರಾಶಿ : ತುಲಾ ರಾಶಿ ಗ್ರಹ ಶುಕ್ರನಾಗಿದ್ದಾನೆ. ದೀಪಾವಳಿಯ ದಿನದಂದು ತುಲಾ ರಾಶಿಯ ಜನರು, ಲಕ್ಷ್ಮಿಗೆ ಕೆಂಪು ಹೂ ಅರ್ಪಿಸಬೇಕು ಮತ್ತು ತಾಯಿಯನ್ನು ಕೆಂಪು ಬಟ್ಟೆಯಿಂದ ಅಲಂಕರಿಸಬೇಕು. ಇದ್ರಿಂದ ಸಂಪತ್ತು ಪ್ರಾಪ್ತಿಯಾಗುವ ಜೊತೆಗೆ ದಾಂಪತ್ಯ ಜೀವನದಲ್ಲಿ ಸುಖ ಸಿಗುತ್ತದೆ.

ವೃಶ್ಚಿಕ ರಾಶಿ : ಈ ರಾಶಿಗೆ ಮಂಗಳ ಗ್ರಹ ಒಡೆಯ. ಈ ರಾಶಿಯವರು ದೀಪಾವಳಿಯ ದಿನದಂದು ಲಕ್ಷ್ಮಿಗೆ ಕೆಂಪು ಕುಂಕುಮವನ್ನು  ಅರ್ಪಿಸಬೇಕು. ಇದ್ರಿಂದ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ನಂಬಲಾಗಿದೆ. 

ಧನು ರಾಶಿ : ಧನು ರಾಶಿಯವರ ಗ್ರಹ ಸೂರ್ಯ ಎಂದು ಹೇಳಲಾಗುತ್ತದೆ. ಧನು ರಾಶಿಯ ಜನರು ದೀಪಾವಳಿಯ ದಿನದಂದು  ಲಕ್ಷ್ಮಿ ದೇವಿಗೆ ಬಿಳಿ ಕಮಲ ಅರ್ಪಿಸಬೇಕು. ಇದ್ರಿಂದ ಎಲ್ಲ ರೀತಿಯ ಯಶಸ್ಸು ಪ್ರಾಪ್ತಿಯಾಗುತ್ತದೆ. ಆರ್ಥಿಕ ಲಾಭವುಂಟಾಗುತ್ತದೆ.

ಮಕರ ರಾಶಿ : ಮಕರ ರಾಶಿಯ ಗ್ರಹ ಶನಿ. ದೀಪಾವಳಿಯ ದಿನದಂದು ಲಕ್ಷ್ಮಿ ಮೆಚ್ಚಿಸಲು ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು. ಇದ್ರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಸದಾ ನೆಲೆಸಿರುತ್ತದೆ.

ಕುಂಭ ರಾಶಿ : ಕುಂಭ ರಾಶಿಯ ಜನರು ದೀಪಾವಳಿಯ ದಿನದಂದು ಲಕ್ಷ್ಮಿ ದೇವಿಗೆ ಬೆಳ್ಳಿ ಅಥವಾ ಬಿಳಿ ಲೋಹದಿಂದ ಮಾಡಿದ ವಸ್ತು ಅರ್ಪಿಸಿ ಪೂಜೆ ಮಾಡುವುದು ಒಳ್ಳೆಯದು. ಇದ್ರಿಂದ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಯಾಗುತ್ತದೆ.

Vastu Tips: ಕೈ ತುಂಬಾ ಹಣ ತುಂಬಬೇಕೆಂದ್ರೆ ಮಲಗುವ ಮುನ್ನ ಹೀಗೆ ಮಾಡಿ..

ಮೀನ ರಾಶಿ : ಮೀನ ರಾಶಿಯ ಗ್ರಹ ಗುರು. ದೀಪಾವಳಿ ದಿನ ತಾಯಿ ಲಕ್ಷ್ಮಿಗೆ ಚುನರಿ ಅರ್ಪಿಸಬೇಕು. ದಾಂಪತ್ಯ ಜೀವನ ಸಂತೋಷದಿಂದ ಕೂಡಿರಲು ಇದು ನೆರವಾಗುತ್ತದೆ.
 

Latest Videos
Follow Us:
Download App:
  • android
  • ios