ಹಬ್ಬಕ್ಕೆ ಮನೆ ಮುಂದೆ ಸುಂದರ ರಂಗೋಲಿ ಬಿಡಿಸಿ, ಇಲ್ಲಿದೆ ಡಿಸೈನ್
ಹಿಂದೂ ಧರ್ಮದಲ್ಲಿ, ಅಂಗಳ ಅಥವಾ ಬಾಗಿಲಿಗೆ ರಂಗೋಲಿ ಬಿಡಿಸುವುದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಮನೆಯ ಸಂತೋಷ ಮತ್ತು ಸಮೃದ್ಧಿಯೊಂದಿಗೆ ಸಂಬಂಧ ಹೊಂದಿದೆ. ಇದೀಗ ಗಣೇಶ ಹಬ್ಬ ಬಂದಿದೆ. ಹಬ್ಬದಂದು ಮನೆಯನ್ನು ಸುಂದರವಾಗಿ ಅಲಂಕರಿಸಲು ರಂಗೋಲಿಯನ್ನು ಸಹ ಹಾಕಲಾಗುತ್ತೆ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತೆ. ಹಾಗಿದ್ರೆ ಬನ್ನಿ ಈ ಬಾರಿ ಗಣೇಶ ಹಬ್ಬಕ್ಕೆ ತುಂಬಾ ಸುಲಭವಾಗಿ ಮಾಡುವಂತಹ ರಂಗೋಲಿಗಳ ಬಗ್ಗೆ ಇಲ್ಲಿದೆ ಮಾಹಿತಿ.
ಹಿಂದೂ ಧರ್ಮದಲ್ಲಿ, ಅಂಗಳ ಅಥವಾ ಬಾಗಿಲಿಗೆ ರಂಗೋಲಿ ಬಿಡಿಸುವುದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಮನೆಯ ಸಂತೋಷ ಮತ್ತು ಸಮೃದ್ಧಿಯೊಂದಿಗೆ (happiness and prosperity) ಸಂಬಂಧ ಹೊಂದಿದೆ. ಹಬ್ಬಗಳ ಸಂದರ್ಭದಲ್ಲಿ ರಂಗೋಲಿಯಿಂದ ಮನೆಯನ್ನು ಅಲಂಕರಿಸಲಾಗುತ್ತದೆ. ಆದರೆ ಅದರ ಮಹತ್ವವು ಅಲಂಕಾರ ಅಥವಾ ಧಾರ್ಮಿಕ ಮಟ್ಟದಲ್ಲಿ ಮಾತ್ರವಲ್ಲ, ವೈಜ್ಞಾನಿಕ ಮಟ್ಟದಲ್ಲಿಯೂ ಇದೆ. ರಂಗೋಲಿಯನ್ನು ಬಿಡಿಸುವುದರಿಂದ ಆಗುವ 5 ಪ್ರಯೋಜನಗಳು ಮತ್ತು ಯಾವ ರೀತಿಯ ರಂಗೋಲಿಯನ್ನು ಮನೆಯಲ್ಲಿ ಹಾಕಬಹುದು ಅನ್ನೋದನ್ನು ನೋಡೋಣ.
ರಂಗೋಲಿ ಹಾಕೋದು ಒಂದು ಕಲೆ. ಇದನ್ನು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮನೆ ಮುಂದೆ ಹಾಕಲಾಗುತ್ತದೆ. ರಂಗೋಲಿಯನ್ನು ಹಾಕುವ ದೊಡ್ಡ ಪ್ರಯೋಜನವೆಂದರೆ ಅದನ್ನು ಹಾಕುವಾಗ ನೀವು ತುಂಬಾ ಸಕಾರಾತ್ಮಕ ಭಾವನೆಯನ್ನು ಅನುಭವಿಸುತ್ತೀರಿ ಮತ್ತು ಈ ಪ್ರಕ್ರಿಯೆಯು ನಿಮ್ಮ ಒತ್ತಡವನ್ನು ನಿವಾರಿಸುತ್ತದೆ.
ರಂಗೋಲಿಯನ್ನು ಹಾಕುವಾಗ, ನಿಮ್ಮ ಬೆರಳು ಮತ್ತು ಹೆಬ್ಬೆರಳು ಒಟ್ಟಿಗೆ ಜ್ಞಾನಮುದ್ರೆಯನ್ನು ರೂಪಿಸುತ್ತವೆ. ಇದು ನಿಮ್ಮ ಮೆದುಳಿಗೆ ಶಕ್ತಿ ತುಂಬುವುದರ ಜೊತೆಗೆ ಬೌದ್ಧ ಧರ್ಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತೆ
ಈ ಜ್ಞಾನಮುದ್ರೆಯು ಆಕ್ಯುಪ್ರೆಶರ್ ವಿಷಯದಲ್ಲಿ ನಿಮ್ಮ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿದೆ. ಇದು ಅಧಿಕ ರಕ್ತದೊತ್ತಡದಿಂದ (blood pressure) ನಿಮ್ಮನ್ನು ರಕ್ಷಿಸುತ್ತದೆ ಮತ್ತು ಮಾನಸಿಕ ಮತ್ತು ಆತ್ಮ ಶಾಂತಿಯನ್ನು ಒದಗಿಸುತ್ತದೆ. ಮಾನಸಿಕವಗೈಯೂ ನೆಮ್ಮದಿಯನ್ನು ನೀಡುತ್ತದೆ.
ಬಣ್ಣಗಳ ಧನಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು (negative energy) ವಿಜ್ಞಾನ ಮತ್ತು ವಿವಿಧ ವೈದ್ಯಕೀಯ ವಿಜ್ಞಾನದಲ್ಲಿ ತಿಳಿಸಲಾಗಿದೆ. ನೀವು ಬಣ್ಣಗಳಿಗೆ ಒಡ್ಡಿಕೊಂಡಾಗ, ಅವುಗಳಿಂದ ಹೊರಸೂಸುವ ಶಕ್ತಿಯು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ, ಇದು ವಿವಿಧ ರೀತಿಯ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತೆ.
ವಿವಿಧ ಬಣ್ಣಗಳು ಮತ್ತು ಹೂವುಗಳಿಂದ ಮಾಡಿದ ರಂಗೋಲಿ ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸಕಾರಾತ್ಮಕ ಶಕ್ತಿಯನ್ನು (positive energy) ರವಾನಿಸುತ್ತದೆ, ಇದು ಮನಸ್ಸನ್ನು ಸಂತೋಷಗೊಳಿಸುತ್ತದೆ ಮತ್ತು ಪರಿಸರವನ್ನು ತುಂಬಾ ಧನಾತ್ಮಕವಾಗಿಸುತ್ತದೆ. ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.