ಮಲಗುವ ಮುನ್ನ ಇಂತಹ ಆಹಾರ ತಿಂದ್ರೆ ಎಂಥೆಂಥ ಕನಸು ಬೀಳುತ್ತವೆ ನೋಡಿ!
ಕನಸುಗಳು ಬರುವುದು ಸಹಜ. ಕೆಲವು ಸಂತೋಷ ತಂದರೆ, ಇನ್ನು ಕೆಲವು ಆತಂಕ ಹುಟ್ಟಿಸುತ್ತವೆ. ಆದರೆ ನಾವು ತಿನ್ನುವ ಆಹಾರ ಕನಸುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?.

ಆಹಾರದಿಂದ ಕನಸುಗಳು ಬದಲಾಗುತ್ತವೆಯೇ?
ರಾತ್ರಿ ಏನು ತಿನ್ನುತ್ತೀರಿ ಎಂಬುದರ ಮೇಲೆ ನಿಮ್ಮ ಕನಸುಗಳ ಸ್ವಭಾವ ಅವಲಂಬಿತವಾಗಿರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಕೆನಡಾದ ಮಾಂಟ್ರಿಯಲ್ ವಿಶ್ವವಿದ್ಯಾಲಯದ 'ಡ್ರೀಮ್ಸ್ ಅಂಡ್ ನೈಟ್‌ಮೇರ್ಸ್ ಲ್ಯಾಬೋರೇಟರಿ' ನಿರ್ದೇಶಕ ಟೋರ್ ನೀಲ್ಸನ್ ಇತ್ತೀಚಿನ ಅಧ್ಯಯನದಲ್ಲಿ ಈ ವಿಷಯ ಬಹಿರಂಗವಾಗಿದೆ. ಜೂನ್ 30 ರಂದು 'ಫ್ರಂಟಿಯರ್ಸ್ ಇನ್ ಸೈಕಾಲಜಿ' ಜರ್ನಲ್‌ನಲ್ಲಿ ಈ ಸಂಶೋಧನೆಯನ್ನು ಪ್ರಕಟಿಸಲಾಗಿದೆ.
ನಕಾರಾತ್ಮಕ ಕನಸುಗಳು
ಅಧ್ಯಯನದ ಪ್ರಕಾರ, ರಾತ್ರಿ ಸಿಹಿತಿಂಡಿ, ಮಸಾಲೆ ಆಹಾರ ಮತ್ತು ಹಾಲು ಹೆಚ್ಚು ಸೇವಿಸಿದವರಲ್ಲಿ ನಕಾರಾತ್ಮಕ ಕನಸುಗಳು ಬಂದಿವೆ.
* 23% ಜನರು ಸಿಹಿ ತಿಂದ ನಂತರ ಕೆಟ್ಟ ಕನಸುಗಳನ್ನು ಕಂಡರು.
* 19.5% ಜನರು ಮಸಾಲೆ ಆಹಾರ ಸೇವಿಸಿದ ನಂತರ ಭಯಾನಕ ಕನಸುಗಳನ್ನು ಅನುಭವಿಸಿದರು.
* 15.7% ಜನರು ಹಾಲು ಕುಡಿದ ನಂತರ ನಕಾರಾತ್ಮಕ ಕನಸುಗಳನ್ನು ಕಂಡರು.
ಇಷ್ಟೇ ಅಲ್ಲದೆ ಮಾಂಸಾಹಾರ ಕೂಡ ಕೆಲವರಲ್ಲಿ ಕನಸುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಟೋರ್ ನೀಲ್ಸನ್ ತಿಳಿಸಿದ್ದಾರೆ.
ಒಳ್ಳೆಯ ನಿದ್ರೆಗೆ ಸಲಹೆಗಳು
ಟೋರ್ ನೀಲ್ಸನ್ ಅವರ ಸಂಶೋಧನೆಯ ಪ್ರಕಾರ, ಆರೋಗ್ಯಕರ ಆಹಾರ ಸೇವಿಸಿದವರಲ್ಲಿ ನಿದ್ರೆಯ ಗುಣಮಟ್ಟ ಉತ್ತಮವಾಗಿದೆ.
* 18% ಜನರು ಹಣ್ಣು ತಿನ್ನುವುದರಿಂದ ಚೆನ್ನಾಗಿ ನಿದ್ದೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
* 13.4% ಜನರು ಹರ್ಬಲ್ ಟೀ ಕುಡಿಯುವುದರಿಂದ ನಿದ್ರೆ ಉತ್ತಮಗೊಂಡಿದೆ ಎಂದಿದ್ದಾರೆ.
* 12% ಜನರು ತರಕಾರಿಗಳಿಂದ ಉತ್ತಮ ಪರಿಣಾಮ ಬೀರಿದೆ ಎಂದಿದ್ದಾರೆ.
ಈ ಮಾಹಿತಿಯ ಆಧಾರದ ಮೇಲೆ, ದೇಹಕ್ಕೆ ಹಗುರವಾದ ಆಹಾರ ಸೇವಿಸುವುದರಿಂದ ಉತ್ತಮ ನಿದ್ರೆ ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.
ಭಯಾನಕ ಕನಸುಗಳಿಗೆ ನಿಜವಾದ ಕಾರಣ
ಎಲ್ಲಾ ಕನಸುಗಳು ಒಂದೇ ರೀತಿ ಇರುವುದಿಲ್ಲ. ಟೋರ್ ನೀಲ್ಸನ್ ಅವರ ಸಂಶೋಧನೆಯಲ್ಲಿ 'ಡಿಸ್ಟರ್ಬಿಂಗ್ ಡ್ರೀಮ್ಸ್' ಎಂದರೆ ಭಯಾನಕ ಕನಸುಗಳು, 'ಬಿಜಾರ್ ಡ್ರೀಮ್ಸ್' ಎಂದರೆ ವಿಚಿತ್ರ ಕನಸುಗಳು ಎಂದು ವರ್ಗೀಕರಿಸಲಾಗಿದೆ.
ವಿಚಿತ್ರ ಕನಸುಗಳಿಗೆ ಹೆಚ್ಚಿನ ಕಾರಣಗಳು:
ಸಿಹಿತಿಂಡಿಗಳು - 38%
ಹಾಲು - 27%
ಭಯಾನಕ ಕನಸುಗಳಿಗೆ:
ಸಿಹಿತಿಂಡಿಗಳು - 31%
ಹಾಲು - 22%
ಮಾಂಸ - 16%
ಭಯಾನಕ ಕನಸುಗಳಿಗೆ ಕಾರಣ
ನೀಲ್ಸನ್ ಅವರ ಸಂಶೋಧನೆಯಲ್ಲಿ ಕೆಲವು ಪ್ರಮುಖ ಅಂಶಗಳು ಬೆಳಕಿಗೆ ಬಂದಿವೆ. ಇವುಗಳ ಪ್ರಕಾರ ಲ್ಯಾಕ್ಟೋಸ್ ಅಲರ್ಜಿ ಇರುವವರು ಹಾಲು ಕುಡಿಯುವುದು, ಆಹಾರ ಸೇವಿಸಿದ ತಕ್ಷಣ ಮಲಗುವುದು ಮುಂತಾದವು ನಿದ್ರೆ ಮತ್ತು ಕನಸುಗಳಿಗೆ ಪ್ರಮುಖ ಕಾರಣಗಳಾಗಿವೆ.
ಅಲ್ಲದೆ, ಔಷಧಗಳು, ಮಾದಕ ದ್ರವ್ಯಗಳು ಮತ್ತು ಮದ್ಯ ಕೂಡ ಭಯಾನಕ ಕನಸುಗಳಿಗೆ ಕಾರಣವಾಗಬಹುದು. ಕೆಲವರಲ್ಲಿ ಗಾಂಜಾ ಸೇವನೆ ನಿಲ್ಲಿಸಿದ ನಂತರ ಕೆಲವು ವಾರಗಳವರೆಗೆ ಭಯಾನಕ ಕನಸುಗಳು ಬರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.