ಈ ರೀತಿಯ ಅಂಗಾಲು ಹೊಂದಿರುವ ಜನರು ಅದೃಷ್ಟವಂತರು!
ಸಮುದ್ರ ಶಾಸ್ತ್ರದಲ್ಲಿ ವ್ಯಕ್ತಿಯ ದೇಹದ ರಚನೆಯನ್ನು ನೋಡುವ ಮೂಲಕ, ಅವನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಕಂಡುಹಿಡಿಯಬಹುದು. ಸಮುದ್ರ ಶಾಸ್ತ್ರದ ಪ್ರಕಾರ, ದೇಹದ ರಚನೆ ಮತ್ತು ದೇಹದ ಭಾಗಗಳನ್ನು ನೋಡುವ ಮೂಲಕ , ವ್ಯಕ್ತಿಯ ಭವಿಷ್ಯದ ಬಗ್ಗೆ ಮತ್ತು ಅವನ ಗುಣ ಮತ್ತು ಸ್ವಭಾವದ ಬಗ್ಗೆ ತಿಳಿದುಕೊಳ್ಳಬಹುದು. ಪಾದದ ವಿನ್ಯಾಸ ಹೇಗಿದೆ? ಹಿಮ್ಮಡಿ ಹೇಗಿದೆ ಎಂದು ನೋಡುವ ಮೂಲಕ ಆ ವ್ಯಕ್ತಿಯ ಗುಣ ಲಕ್ಷಣಗಳನ್ನು ತಿಳಿದುಕೊಳ್ಳೋದು ತುಂಬಾನೆ ಸುಲಭ. ಬನ್ನಿ ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ಸಮುದ್ರ ಶಾಸ್ತ್ರದಲ್ಲಿ ವ್ಯಕ್ತಿಯ ದೇಹದ ರಚನೆಯನ್ನು ನೋಡುವ ಮೂಲಕ, ಅವನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಕಂಡುಹಿಡಿಯಬಹುದು. ಸಮುದ್ರ ಶಾಸ್ತ್ರದ ಪ್ರಕಾರ, ದೇಹದ ರಚನೆ ಮತ್ತು ದೇಹದ ಭಾಗಗಳನ್ನು ನೋಡುವ ಮೂಲಕ , ವ್ಯಕ್ತಿಯ ಭವಿಷ್ಯದ ಬಗ್ಗೆ ಮತ್ತು ಅವನ ಗುಣ ಮತ್ತು ಸ್ವಭಾವದ ಬಗ್ಗೆ ತಿಳಿದುಕೊಳ್ಳಬಹುದು. ಪಾದದ ವಿನ್ಯಾಸ ಹೇಗಿದೆ? ಹಿಮ್ಮಡಿ(Feet) ಹೇಗಿದೆ ಎಂದು ನೋಡುವ ಮೂಲಕ ಆ ವ್ಯಕ್ತಿಯ ಗುಣ ಲಕ್ಷಣಗಳನ್ನು ತಿಳಿದುಕೊಳ್ಳೋದು ತುಂಬಾನೆ ಸುಲಭ. ಬನ್ನಿ ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ಪಾದಗಳ ವಿನ್ಯಾಸದಿಂದ ನಿಮ್ಮ ಭವಿಷ್ಯವನ್ನು ತಿಳಿಯಿರಿ
ಸಮುದ್ರ ಶಾಸ್ತ್ರದ ಪ್ರಕಾರ, ಅಂಗಾಲುಗಳು ತುಂಬಾ ಮೃದುವಾದ(Smooth) ನಯವಾದ ಮತ್ತು ಕೆಂಪು ಬಣ್ಣವನ್ನು ಹೊಂದಿರುವ ಜನರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತೆ. ಸಮುದ್ರ ಶಾಸ್ತ್ರದ ಪ್ರಕಾರ, ತಾಯಿ ಲಕ್ಷ್ಮಿ ಅಂತಹ ವ್ಯಕ್ತಿಗಳಿಂದ ಸಂತುಷ್ಟಳಾಗಿದ್ದಾಳೆ.
ಅನೇಕ ಜನರು ಚಪ್ಪಟೆಯಾದ ಅಂಗಾಲುಗಳನ್ನು ಹೊಂದಿರೋದನ್ನು ನೀವು ಗಮನಿಸಿರಬಹುದು. ಅಂತಹ ಜನರು ತುಂಬಾ ಶ್ರಮಜೀವಿಗಳು(Hard worker) ಮತ್ತು ಅವರ ಆಲೋಚನೆಗಳು ಸಹ ಮುಕ್ತವಾಗಿರುತ್ತವೆ. ಅಂತಹ ಪಾದಗಳನ್ನು ಹೊಂದಿರುವ ಜನರು ಮುಂದೆ ಬಂದು ಇತರರಿಗೆ ಸ್ವತಃ ಸಹಾಯ ಮಾಡುತ್ತಾರೆ ಎಂದು ಹೇಳಲಾಗುತ್ತೆ.
ಯಾರ ಹಿಮ್ಮಡಿಗಳು ಒಡೆದಿವೆಯೋ(Cracked heel) ಮತ್ತು ಚರ್ಮವೂ ಒಣಗಿರುತ್ತದೆಯೋ ಅಂತಹ ಜನರನ್ನು ಶುಭವೆಂದು ಪರಿಗಣಿಸಲಾಗೋದಿಲ್ಲ. ಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂತಹ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಹೆಣಗಾಡಬೇಕಾಗುತ್ತೆ. ಇವರು ತುಂಬಾ ಕಷ್ಟಪಡುತ್ತಾರೆ ಎಂದು ಶಾಸ್ತ್ರಗಳು ತಿಳಿಸುತ್ತವೆ.
ಅನೇಕ ಜನರ ಅಂಗಾಲುಗಳು ಸಂಪೂರ್ಣವಾಗಿ ಬಿಳಿ(White) ಬಣ್ಣದಲ್ಲಿರುತ್ತವೆ. ಅಂತಹ ಬಣ್ಣವನ್ನು ಹೊಂದಿರುವ ಜನರು ಸರಿ ಮತ್ತು ತಪ್ಪುಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿರೋದಿಲ್ಲ ಎಂದು ನಂಬಲಾಗಿದೆ. ಅಂತಹ ಜನರು ಏನನ್ನೂ ಮಾಡುವ ಮೊದಲು ಹೆಚ್ಚು ಯೋಚಿಸೋದಿಲ್ಲ ಮತ್ತು ಕೆಲವೊಮ್ಮೆ ಈ ವಿಷಯದಲ್ಲಿ ತಮಗೆ ತಾವೆ ತೊಂದರೆಯನ್ನುಂಟು ಮಾಡುತ್ತಾರೆ.
ಅಂಗಾಲುಗಳಲ್ಲಿ ಸ್ವಲ್ಪ ಕಪ್ಪಾಗಿರುವ ಜನರು ಆರ್ಥಿಕ ಸಮಸ್ಯೆಗಳನ್ನು(Financial problems) ಎದುರಿಸಬೇಕಾಗುತ್ತೆ. ಅಲ್ಲದೆ, ಅಂತಹ ಜನರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು, ಕಷ್ಟಗಳನ್ನು ಎದುರಿಸಬೇಕಾಗಬಹುದು ಎಂದು ಸಮುದ್ರ ಶಾಸ್ತ್ರವು ತಿಳಿಸುತ್ತದೆ.
ಒಬ್ಬ ವ್ಯಕ್ತಿಯ ಅಂಗಾಲಿನ ಒಂದು ರೇಖೆಯು ಹಿಮ್ಮಡಿಯಿಂದ ಪ್ರಾರಂಭವಾಗಿ ಹೆಬ್ಬೆರಳಿನ ತುದಿಯನ್ನು ತಲುಪಿದರೆ, ಅಂತಹ ಜನರು ತುಂಬಾ ಅದೃಷ್ಟವಂತರು(Lucky). ಅಂತಹ ಜನರಿಗೆ ಹಣದ ಕೊರತೆಯಿರೋದಿಲ್ಲ. ಅಲ್ಲದೆ, ಅಂತಹ ಜನರು ತಮ್ಮ ಜೀವನವನ್ನು ಬಹಳ ಆರಾಮದಿಂದ ಕಳೆಯುತ್ತಾರೆ.