ಮಲಗುವಾಗ ಈ ವಸ್ತುಗಳನ್ನು ತಲೆ ಬಳಿ ಇಟ್ರೆ ಅದೃಷ್ಟ ಬದಲಾಗುತ್ತಂತೆ!
ವಾಸ್ತು ಶಾಸ್ತ್ರ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತೆ ಅನ್ನೋದು ನಿಜ.ಮನೆಯಲ್ಲಿ ಪ್ರತಿಯೊಂದೂ ವಸ್ತುಗಳನ್ನು ಇಡುವ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಒಂದೊಂದು ರೀತಿಯ ಸಲಹೆ ನೀಡಲಾಗುತ್ತೆ. ಸಂತೋಷದ ಜೀವನ ನಡೆಸಲು ಅನೇಕ ಪರಿಹಾರ ಮತ್ತು ನಿಯಮಗಳನ್ನು ಸಹ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಅನುಸರಿಸುವ ಮೂಲಕ ಒಬ್ಬ ವ್ಯಕ್ತಿ ಸಂತೋಷ ಮತ್ತು ಅದೃಷ್ಟದೊಂದಿಗೆ ಜೀವನ ನಡೆಸಬಹುದು. ಹಾಗೆಯೇ, ವಾಸ್ತು ಶಾಸ್ತ್ರದಲ್ಲಿ, ಅಂತಹ ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ, ಅವುಗಳನ್ನು ಮಲುಗುವ ಸಮಯದಲ್ಲಿ ತಲೆದಿಂಬಿನ ಬಳಿ ಇರಿಸೋದ್ರಿಂದ ಅದೃಷ್ಟ ಬದಲಾಗುತ್ತೆ. ಮಲಗುವಾಗ ದಿಂಬಿನ ಬಳಿ ಯಾವ ವಸ್ತುಗಳನ್ನು ಇಡಬೇಕು ಎಂದು ಇಲ್ಲಿ ತಿಳಿಯಿರಿ.
ಕೆಟ್ಟ ಕನಸುಗಳನ್ನು ದೂರ ಮಾಡಲು, ಚೆನ್ನಾಗಿ ನಿದ್ರೆ(Sleep) ಮಾಡಲು, ಭಯ ಮೊದಲಾದ ಸಮಸ್ಯೆಗಳನ್ನು ದೂರ ಮಾಡಲು ರಾತ್ರಿ ಮಲಗುವ ಮುನ್ನ ಕೆಲವೊಂದು ವಸ್ತುಗಳನ್ನು ದಿಂಬು ಅಥವಾ ಹಾಸಿಗೆ ಬಳಿ ಇಡಬಹುದು. ಹಾಗಿದ್ರೆ ಬನ್ನಿ ಅಂತಹ ವಸ್ತುಗಳು ಯಾವುವು ಅನ್ನೋದನ್ನು ನಾವು ನೋಡೋಣ.
ಲೋಟಾದಲ್ಲಿ ನೀರು(Water)
ವಾಸ್ತು ಶಾಸ್ತ್ರದ ಪ್ರಕಾರ, ಮಲಗುವಾಗ, ಹಾಸಿಗೆಯ ಬಳಿ ಲೋಟದಲ್ಲಿ ನೀರನ್ನು ಇರಿಸಿ ಮತ್ತು ಈ ನೀರನ್ನು ಬೆಳಗ್ಗೆ ಮರ ಮತ್ತು ಗಿಡಕ್ಕೆ ಹಾಕಿ. ಇದನ್ನು ಮಾಡೋದರಿಂದ, ನೀವು ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಬಹುದು ಮತ್ತು ಉತ್ತಮ ಆರೋಗ್ಯವನ್ನು ಸಹ ಪಡೆಯಬಹುದು.
ಚಾಕು (Knife)
ಒಬ್ಬ ವ್ಯಕ್ತಿ ಅಥವಾ ಮಗು ನಿದ್ರಿಸುವಾಗ ಇದ್ದಕ್ಕಿದ್ದಂತೆ ಭಯಪಟ್ಟರೆ ಅಥವಾ ಭಯಾನಕ ಕನಸು ಕಂಡರೆ, ಆಗ ನೀವು ನಿಮ್ಮ ಹಾಸಿಗೆ ಕೆಳಗೆ ಕಬ್ಬಿಣದ ಚಾಕು ಇಡಬಹುದು. ಕಬ್ಬಿಣದ ಚಾಕು ಇಲ್ಲದಿದ್ದರೆ, ನೀವು ಕತ್ತರಿ ಅಥವಾ ಕಬ್ಬಿಣದಿಂದ ಮಾಡಿದ ಏನನ್ನಾದರೂ ಇಟ್ಟುಕೊಳ್ಳಬಹುದು. ಆಗ ಭಯ ಕಡಿಮೆಯಾಗುತ್ತೆ. ಚೆನ್ನಾಗಿ ನಿದ್ರೆ ಬರುತ್ತೆ.
ಬೆಳ್ಳುಳ್ಳಿ(Garlic)
ವಾಸ್ತು ಶಾಸ್ತ್ರದಲ್ಲಿ ಬೆಳ್ಳುಳ್ಳಿಯನ್ನು ಅದೃಷ್ಟದ ಸಂಕೇತದೆ. ನಿಮಗೆ ನಿದ್ರೆಯ ಸಮಸ್ಯೆಯಿಂದಾಗಿ ರಾತ್ರಿಯಿಡೀ ನಿದ್ರೆ ಬಾರದೇ ಇದ್ದರೆ ಅಥವಾ ಹೆಚ್ಚು ನಕಾರಾತ್ಮಕ ಶಕ್ತಿ ಹೊಂದಿದ್ದರೆ, ರಾತ್ರಿ ಮಲಗುವಾಗ ಸ್ವಲ್ಪ ಬೆಳ್ಳುಳ್ಳಿ ಮೊಗ್ಗನ್ನು ದಿಂಬಿನ ಕೆಳಗೆ ಇರಿಸಿ, ಇದು ಸುತ್ತಲೂ ಹೆಚ್ಚು ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತೆ.
ಸೋಂಪು (Fennel)
ಜಾತಕದಲ್ಲಿರುವ ರಾಹು ದೋಷ ತೊಡೆದು ಹಾಕಲು ನೀವು ಸೋಂಪನ್ನು ಬಳಸಬಹುದು. ಅದಕ್ಕಾಗಿ ಸ್ವಲ್ಪ ಸೋಂಪನ್ನು ಒಂದು ಕಾಗದದಲ್ಲಿ ಸುತ್ತಿ ಮತ್ತು ಅದನ್ನು ಹಾಸಿಗೆ ಅಥವಾ ದಿಂಬಿನ ಕೆಳಗೆ ಇರಿಸಿ. ಇದು ಕೆಟ್ಟ ಕನಸುಗಳನ್ನು ತೊಡೆದುಹಾಕುತ್ತೆ ಮತ್ತು ಒತ್ತಡದಿಂದ ಮುಕ್ತವಾಗಿರುತ್ತೆ.
ಏಲಕ್ಕಿ(Cardamom)
ವಾಸ್ತು ಶಾಸ್ತ್ರದಲ್ಲಿ ಸಣ್ಣ ಏಲಕ್ಕಿಗೆ ಹೆಚ್ಚಿನ ಮಹತ್ವವಿದೆ. ಅದನ್ನು ಇಟ್ಟುಕೊಳ್ಳುವ ಮೂಲಕ, ವ್ಯಕ್ತಿಯು ಆರ್ಥಿಕ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ತೊಡೆದು ಹಾಕುವುದರ ಜೊತೆಗೆ ಉತ್ತಮ ನಿದ್ರೆ ಪಡೆಯುತ್ತಾನೆ. ಆದ್ದರಿಂದ, ನೀವು ಮಲಗುವಾಗ ದಿಂಬಿನ ಕೆಳಗೆ ಸಣ್ಣ ಏಲಕ್ಕಿ ಇಟ್ಟುಕೊಳ್ಳಬಹುದು.