- Home
- Astrology
- Festivals
- June 6 Nirjala Ekadashi: ಜೂನ್ 6 ನಿರ್ಜಲ ಏಕಾದಶಿ… ಈ ಕೆಲಸ ಮಾಡಿದ್ರೆ ಅದೃಷ್ಟದ ಬಾಗಿಲು ತೆರೆಯುತ್ತೆ
June 6 Nirjala Ekadashi: ಜೂನ್ 6 ನಿರ್ಜಲ ಏಕಾದಶಿ… ಈ ಕೆಲಸ ಮಾಡಿದ್ರೆ ಅದೃಷ್ಟದ ಬಾಗಿಲು ತೆರೆಯುತ್ತೆ
ನಿರ್ಜಲ ಏಕಾದಶಿಯಂದು ಬೇ ಎಲೆಗಳು ಅಥವಾ ಪುಲಾವ್ ಎಲೆಗಳನ್ನು ಬಳಸಿ, ಇದನ್ನ ಮಾಡೋದ್ರಿಂದ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.

ನಿರ್ಜಲ ಏಕಾದಶಿ (Nirajala Ekadashi)ವರ್ಷದ ಅತ್ಯಂತ ಶುಭ ಏಕಾದಶಿಗಳಲ್ಲಿ ಒಂದಾಗಿದೆ. ನಿರ್ಜಲ ಏಕಾದಶಿ ಉಪವಾಸವನ್ನು ಶುಕ್ರವಾರ, ಜೂನ್ 6 ರಂದು ಆಚರಿಸಲಾಗುತ್ತದೆ, ಪ್ರತಿ ವರ್ಷ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿ ಬರುತ್ತದೆ.
ನಿರ್ಜಲ ಏಕಾದಶಿಯಂದು ಉಪವಾಸ ಮಾಡುವುದರಿಂದ ಎಲ್ಲಾ ಏಕಾದಶಿಗಳಿಗೆ ಸಮಾನವಾದ ಪುಣ್ಯ ಸಿಗುತ್ತದೆ. ತಂತ್ರ ಶಾಸ್ತ್ರದಲ್ಲಿ, ನಿರ್ಜಲ ಏಕಾದಶಿಯಂದು ಪ್ರಯೋಜನಗಳನ್ನು ಪಡೆಯಲು ಕೆಲವು ವಿಶೇಷ ತಂತ್ರಗಳನ್ನು ಹೇಳಲಾಗಿದೆ. ಈ ತಂತ್ರವನ್ನು ಮಾಡೋದ್ರಿಂದ, ಅರ್ಧಕ್ಕೆ ನಿಂತ ನಿಮ್ಮ ಕೆಲಸಗಳೆಲ್ಲಾ ಪೂರ್ಣಗೊಳ್ಳುತ್ತೆ.
ನಿರ್ಜಲ ಏಕಾದಶಿಯಂದು ಉಪವಾಸ (fasting) ಮಾಡೋದರಿಂದ ಮತ್ತು ಆ ದಿನ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ, ಎಲ್ಲಾ ನೋವುಗಳು ಮತ್ತು ತೊಂದರೆಗಳಿಂದ ಪರಿಹಾರ ಸಿಗುತ್ತದೆ. ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತೆ.
ಶಾಸ್ತ್ರಗಳ ಪ್ರಕಾರ, ಒಬ್ಬ ವ್ಯಕ್ತಿಯು ವರ್ಷದ ಉಳಿದ 23 ಏಕಾದಶಿಗಳ ಉಪವಾಸವನ್ನು ಆಚರಿಸಲು ಸಾಧ್ಯವಾಗದಿದ್ದರೆ, ನಿರ್ಜಲ ಏಕಾದಶಿ ಉಪವಾಸವನ್ನು ಮಾತ್ರ ಆಚರಿಸುವುದರಿಂದ, ಎಲ್ಲಾ ಏಕಾದಶಿಗಳಂತೆಯೇ ಪುಣ್ಯ ಫಲಿತಾಂಶಗಳನ್ನು ಪಡೆಯುತ್ತಾನೆ.
ನಿರ್ಜಲ ಏಕಾದಶಿಯ ದಿನದಂದು ಉಪವಾಸ ಮಾಡಿ ವಿಷ್ಣು ಮತ್ತು ಲಕ್ಷ್ಮಿಯನ್ನು (Vishnu and Lakshmi) ಧ್ಯಾನಿಸಿ ನಂತರ ಬೇ ಎಲೆಯ ಅಥವಾ ಪುಲಾವ್ ಎಲೆಯ ಮೇಲೆ ಹಸಿರು ಪೆನ್ನಿನಿಂದ 111, 222, 888 ಎಂದು ಬರೆದು ಕರ್ಪೂರದಿಂದ ಸುಟ್ಟುಹಾಕಿ.
ಈ ಎಲೆ ಉರಿದ ಬಳಿಕ, ಬೂದಿಯನ್ನು ನಿಮ್ಮ ಕೈಗೆ ಹಾಕಿಕೊಳ್ಳಿ ಮತ್ತು ನಂತರ ನಿಮ್ಮ ಕಣ್ಣುಗಳನ್ನು ಮುಚ್ಚಿ ವಿಷ್ಣುವಿಗೆ ನಿಮ್ಮ ಆಸೆಯನ್ನು ತಿಳಿಸಿ. ಇದರ ನಂತರ ಬೂದಿಯನ್ನು ಊದಿ ಬಿಡಿ. ಹೀಗೆ ಮಾಡೋದ್ರಿಂದ ನೀವು ಏನು ಅಂದುಕೊಂಡಿದ್ದೀರೋ ಅದು ನಿಮಗೆ ಸಿಗುತ್ತದೆ.