Vaikuntha Ekadashi 2025: ಈ ಬಣ್ಣದ ಬಟ್ಟೆ, ಆಭರಣದ ಧರಿಸಿದ್ರೆ ವೈಕುಂಠ ಏಕಾದಶಿಯಂದು ವಿಷ್ಣುವಿನ ಕೃಪೆಗೆ ಪಾತ್ರರಾಗ್ತೀರಿ..
ಜನವರಿ 10 ರಂದು ವೈಕುಂಠ ಏಕಾದಶಿ ಆಚರಿಸಲಾಗುತ್ತದೆ. ಈ ದಿನ ಭಕ್ತರು ಹಳದಿ, ಕಿತ್ತಳೆ ಅಥವಾ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ, ತುಳಸಿ ಮಾಲೆ ಮತ್ತು ಚಿನ್ನ ಅಥವಾ ಬೆಳ್ಳಿ ಆಭರಣಗಳನ್ನು ಧರಿಸುತ್ತಾರೆ. ಈ ದಿನದಂದು ಉಪವಾಸವಿದ್ದು, ವಿಷ್ಣುವಿನ ದೇವಸ್ಥಾನದಲ್ಲಿ ವೈಕುಂಠ ದ್ವಾರದ ಮೂಲಕ ಹಾದು ಹೋಗಿ ಆಶೀರ್ವಾದ ಪಡೆಯುತ್ತಾರೆ.
ನಾಳೆ ಅಂದರೆ ಜನವರಿ 10 ರಂದು ವೈಕುಂಠ ಏಕಾದಶಿ. ಇದು ಹಿಂದೂಗಳಿಗೆ ಅದರಲ್ಲೂ ವಿಶೇಷವಾಗಿ ವಿಷ್ಣುವಿನ ಭಕ್ತರಿಗೆ ಶುಭದಿನವಾಗಿದೆ.ಏನು ಧರಿಸಬೇಕೆಂದು ಕಟ್ಟುನಿಟ್ಟಿನ ನಿಯಮಗಳಿಲ್ಲದಿದ್ದರೂ, ಅನೇಕ ಜನರು ಶುದ್ಧತೆ ಮತ್ತು ಭಕ್ತಿಗೆ ಸಂಬಂಧಿಸಿದ ಬಣ್ಣಗಳಲ್ಲಿ ಉಡುಗೆ ಮಾಡಲು ಆಯ್ಕೆ ಮಾಡುತ್ತಾರೆ.
ಹಿಂದೂ ಧರ್ಮದಲ್ಲಿ ಪವಿತ್ರ ಬಣ್ಣವೆಂದು ಪರಿಗಣಿಸಲಾಗುತ್ತದೆ, ಆದರೆ ಹಳದಿ ಬಣ್ಣವನ್ನು ಶುಭ ಸಂದರ್ಭಗಳಲ್ಲಿ ಹೆಚ್ಚಾಗಿ ಧರಿಸಲಾಗುತ್ತದೆ. ಅದರೊಂದಿಗೆ ಆಧ್ಯಾತ್ಮಿಕತೆ ಮತ್ತು ತ್ಯಾಗಕ್ಕೆ ಸಂಬಂಧಿಸಿದ ಮತ್ತೊಂದು ಬಣ್ಣವಾದ ಕಿತ್ತಳೆ ಬಣ್ಣದ ಬಟ್ಟೆಯನ್ನೂ ಧರಿಸಬಹುದು. ಶುದ್ಧತೆ ಮತ್ತು ಶಾಂತಿಯನ್ನು ಪ್ರತಿನಿಧಿಸುವ ಬಿಳಿಯನ್ನೂ ಧರಿಸಬಹುದು.
ಇನ್ನು ಆಭರಣಗಳ ವಿಚಾರಕ್ಕೆ ಬರುವುದಾದರೆ. ತುಳಸಿ ಮಣಿಗಳನ್ನು ಧರಿಸಬಹುದು. ಹೆಚ್ಚಾಗಿ ಕುತ್ತಿಗೆ ಅಥವಾ ಮಣಿಕಟ್ಟಿನ ಸುತ್ತಲೂ ಧರಿಸಲಾಗುತ್ತದೆ ಏಕೆಂದರೆ ಅವುಗಳನ್ನು ವಿಷ್ಣುವಿಗೆ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅದರೊಂದಿಗೆ ಪಾರಂಪರಿಕವಾಗಿ ಬಂದ ಚಿನ್ನದ ಆಭರಣ ಧರಿಸಬಹುದು. ಇದು ಸಮೃದ್ಧಿ ಮತ್ತು ದೈವತ್ವದೊಂದಿಗೆ ಸಂಬಂಧ ಹೊಂದಿವೆ.ಶುದ್ಧತೆ ಮತ್ತು ಶಾಂತತೆಯನ್ನು ಪ್ರತಿನಿಧಿಸುವ ಬೆಳ್ಳಿಯ ಆಭರಣಗಳನ್ನು ಹಾಕಿಕೊಳ್ಳಬಹುದು.
ಈ ಬಾರಿಯ ವೈಕುಂಠ ಏಕಾದಶಿಯು ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಬಂದಿದ್ದು, ಜನವರಿ 10 ರಂದು ವೈಕುಂಠ ಏಕಾದಶಿ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ವಿಷ್ಣುವನ್ನು ಬಹಳ ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥಗಳು ಈಡೇರುತ್ತದೆ.
ಪುಷ್ಯ ಮಾಸದ ಶುಕ್ಲ ಪಕ್ಷದ ಈ ಏಕಾದಶಿಯನ್ನು ಪೌಷ್ಯ ಪುತ್ರಾದ ಏಕಾದಶಿ ಎಂದೂ ಹೇಳುತ್ತಾರೆ. ಹಿಂದೂ ಪಂಚಾಗದ ಪ್ರಕಾರ ಈ ಬಾರಿಯ ವೈಕುಂಠ ಏಕಾದಶಿ ಜನವರಿ 10 ಶುಕ್ರವಾರದಂದು ಆಚರಿಸಲಾಗುತ್ತದೆ. ಈ ಏಕಾದಶಿ ತಿಥಿಯು ಜನವರಿ 9 ರಂದು ಮಧ್ಯಾಹ್ನ 12:22 ಕ್ಕೆ ಪ್ರಾರಂಭವಾಗಿ, ಜನವರಿ 10 ರಂದು ಬೆಳಗ್ಗೆ 10:19 ಕ್ಕೆ ಮುಗಿಯುತ್ತದೆ.. ಹೀಗಾಗಿ ಜನವರಿ 10 ರಂದು ಉದಯ ತಿಥಿಯಂತೆ ವೈಕುಂಠ ಏಕಾದಶಿ ಉಪವಾಸ ಕೈಗೊಳ್ಳಲಾಗುತ್ತದೆ.
ದಕ್ಷಿಣಾಯನದಲ್ಲಿ ನಿದ್ರಿಸುವ ವಿಷ್ಣು ಉತ್ತರಾಯಣದಲ್ಲಿ ಏಳುತ್ತಾನೆ ಎನ್ನುವುದು ಪ್ರತೀತಿ. ಈ ದಿನ ಮೂರು ಕೋಟಿ ದೇವರಿಗೆ ದರ್ಶನ ನೀಡುತ್ತಾನೆ ಎನ್ನುವ ಕಾರಣಕ್ಕೆ ಮುಕ್ಕೋಟಿ ಏಕಾದಶಿ ಎನ್ನುವ ಹೆಸರೂ ಇದಕ್ಕಿದೆ. ಈ ದಿನದಂದು ವೈಕುಂಠದ ಬಾಗಿಲು ತೆರೆಯುತ್ತದೆ, ಈ ಏಕಾದಶಿಯಂದು ವಿಷ್ಣುವಿನ ಸ್ಮರಣೆ ಹಾಗೂ ಉಪವಾಸ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎನ್ನಲಾಗುತ್ತದೆ.
ವೈಕುಂಠ ಏಕಾದಶಿಯಂದು ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನ ಮಾಡಬೇಕು. ಈ ದಿನ ಮುಂಜಾನೆ ಸ್ನಾನದ ಬಳಿಕ ಹಳದಿ ಬಟ್ಟೆಯನ್ನು ಧರಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಹಳದಿ ವಿಷ್ಣುವಿನ ಶ್ರೇಷ್ಣ ಬಣ್ಣ ಎನ್ನಲಾಗುತ್ತದೆ.
Kitchen Hacks: ಮೊಳಕೆ ಬರದ ಹಾಗೆ ಆಲೂಗಡ್ಡೆಯನ್ನು ತಾಜಾವಾಗಿ ಹೀಗೆ ಶೇಖರಿಸಿಡಿ!
ವೈಕುಂಠ ಏಕಾದಶಿಯಂದು ಬೆಳಗ್ಗೆಯಿಂದ ಉಪವಾಸ ಇದ್ದು, ವಿಷ್ಣುವಿನ ದೇವಸ್ಥಾನದಲ್ಲಿ ವೈಕುಂಠ ದ್ವಾರದ ಮೂಲಕ ಹಾದು ಹೋಗಿ ಆಶೀರ್ವಾದ ಪಡೆಯುತ್ತಾರೆ. ದೇವಸ್ಥಾನಗಳಲ್ಲಿ ಪೂಜೆ, ಹೋಮ ಹವನಗಳು ಸೇರಿದಂತೆ ಭಜನಾ ಕಾರ್ಯಕ್ರಮಗಳು ನಡೆಯುತ್ತವೆ.
ತಿರುಪತಿಯಲ್ಲಿ ಭಾರೀ ಕಾಲ್ತುಳಿತ, 6 ಮಂದಿ ದುರ್ಮರಣ, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ