ದೆವ್ವಗಳು ನಿಮ್ಮನ್ನು ಫಾಲೋ ಮಾಡ್ತಿದೆಯೋ? ಇಲ್ಲವೋ ಎಂಬುದನ್ನು ಪತ್ತೆ ಮಾಡೋದು ಹೇಗೆ?
ವಿವಿಧ ಧರ್ಮಗಳಲ್ಲಿ ದೆವ್ವದ ಪರಿಕಲ್ಪನೆಯನ್ನು ವಿವರಿಸಲಾಗಿದ್ದು, ಅದರ ಪ್ರಭಾವದ ಚಿಹ್ನೆಗಳನ್ನು ಪಟ್ಟಿ ಮಾಡಲಾಗಿದೆ. ನಕಾರಾತ್ಮಕ ಆಲೋಚನೆಗಳು, ದುಶ್ಚಟಗಳು, ಮತ್ತು ದೇವರ ಬಗ್ಗೆ ದ್ವೇಷದಂತಹ ಲಕ್ಷಣಗಳು ನಿಮ್ಮ ಮೇಲೆ ದುಷ್ಟಶಕ್ತಿಯ ಪ್ರಭಾವವಿರುವುದನ್ನು ಸೂಚಿಸಬಹುದು.

ದೆವ್ವದ ಪರಿಕಲ್ಪನೆ
ಎಲ್ಲಾ ಧರ್ಮ ಮತ್ತು ದೇಶಗಳಲ್ಲಿ ದೆವ್ವದ ಪರಿಕಲ್ಪನೆಗಳಿವೆ. ಕೆಲವರು ಮನುಷ್ಯರಲ್ಲಿನ ನಕಾರಾತ್ಮಕ ಚಿಂತನೆಗಳೇ ದೆವ್ವ ಎಂದು ವ್ಯಾಖ್ಯಾನಿಸುತ್ತಾರೆ. ದೆವ್ವದಿಂದ ಮನುಷ್ಯರನ್ನು ಆ ದೇವರು ರಕ್ಷಣೆ ಮಾಡುತ್ತಾನೆ ಎಂಬ ನಂಬಿಕೆ ಭಾರತದಲ್ಲಿದೆ. ದೇವರ ವಿರುದ್ಧ ದಂಗೆ ಎದ್ದ ಕಾರಣವನ್ನು ದೇವರನ್ನು ಸ್ವರ್ಗದಿಂದ ಹೊರಗೆ ಹಾಕಲಾಯ್ತು ಎಂಬ ಕಥೆಗಳು ನಮ್ಮ ಸುತ್ತಲಿವೆ.
ದೆವ್ವದ ವ್ಯಾಖ್ಯಾನ
ಕ್ರಿಶ್ಚಿಯನ್ ಧರ್ಮದಲ್ಲಿ ಸೈತಾನನನ್ನು ದುಷ್ಟತನದ ಮೂಲವೆಂದು ಪರಿಗಣಿಸಲಾಗುತ್ತದೆ. ಇಸ್ಲಾಂನಲ್ಲಿ ಇಬ್ಲಿಸ್ ಎಂದು ಕರೆಯಲಾಗುತ್ತದೆ. ಇಬ್ಲಿಸ್ ಅನ್ನೋದು ದುಷ್ಟಶಕ್ತಿಗಳ ನಾಯಕ ಮತ್ತು ಜನರನ್ನು ದಿಕ್ಕು ತಪ್ಪಿಸಿತ್ತಾನೆ ಎಂದರ್ಥ. ಯಹೂದಿ ಧರ್ಮದಲ್ಲಿ ಮಾನವರನ್ನ ಪಾಪದತ್ತ ತೆಗೆದುಕೊಂಡು ಹೋಗುವುದನ್ನು ದೆವ್ವ ಎಂದು ಪರಿಗಣಿಸಲಾಗುತ್ತದೆ.
ದೆವ್ವ ನಿಮ್ಮನ್ನು ಫಾಲೋ ಮಾಡುತ್ತಿರೋದನ್ನು ಪತ್ತೆ ಮಾಡೋದು ಹೇಗೆ?
ದೆವ್ವ ನಿಮ್ಮನ್ನು ಹಿಂಬಾಲಿಸುತ್ತಿದೆಯೋ ಎಂದು ಕಂಡು ಹಿಡಿಯಲು ನಿಮ್ಮ ಮನಸ್ಸು, ಅಲೋಚನೆಗಳು ಮತ್ತು ಮಾಡುವ ಕೆಲಸಗಳ ಬಗ್ಗೆ ಗಮನ ಕೊಡಿ. ವಿಚಿತ್ರ ಆಲೋಚನೆಗಳು, ಅಶ್ಲೀಲತೆ ಅಥವಾ ಮಾದಕ ವ್ಯಸನದಂತಹ ದುಷ್ಟ ಚಟಗಳು, ದೇವರ ಬಗ್ಗೆ ಅಪನಂಬಿಕೆ, ದ್ವೇಷ ಮತ್ತು ಕೋಪವನ್ನು ಹೊಂದಿದ್ರೆ ಇದು ದೆವ್ವದ ಚಿಹ್ನೆಗಳು. ಈ ಲಕ್ಷಣಗಳು ನಿಮ್ಮಲ್ಲಿದ್ರೆ ನಿಮ್ಮ ನಕಾರಾತ್ಮಕ ಶಕ್ತಿಯ ವ್ಯೂಹದಲ್ಲಿದ್ದೀರಿ ಎಂದು ಅರ್ಥ ಮಾಡಿಕೊಳ್ಳಬೇ
ದೆವ್ವದ ಪ್ರಭಾವದ ಸಂಭಾವ್ಯ ಚಿಹ್ನೆಗಳು
ನಿಷೇಧಿತ ಚಟುವಟಿಕೆಗಳಾದ ಮದ್ಯಪಾನ, ಮಾದಕ ದ್ರವ್ಯ ಸೇವನೆ, ಅಶ್ಲೀಲತೆ ಅಂತಹ ಚಟಗಳ ಮೇಲೆ ನಿಯಂತ್ರಿಸಲಾಗದೇ ಹಂಬಲ ಹೊಂದಿದ್ರೆ ಇದು ದುಷ್ಟಶಕ್ತಿಯ ಪ್ರಭಾವದ ಸಂಕೇತವಾಗಿರುವ ಸಾಧ್ಯತೆಗಳಿರುತ್ತವೆ.
ದೇವರ ಬಗ್ಗೆ ದ್ವೇಷ
ಸೈತಾನ ಪ್ರಭಾವ ನಿಮ್ಮ ಮೇಲಿದ್ರೆ ದೇವರು, ಒಳ್ಳೆಯತನ, ಪ್ರೀತಿಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುತ್ತಾನೆ. ಯಾರಾದ್ರೂ ದೇವರು ಹೀಗೆಕೆ ಎಂದು ಪ್ರಶ್ನಿಸಿದ್ರೆ, ನಿಮ್ಮಿಂದ ಆತನು ಓರ್ವ ದುಷ್ಟ ಎಂಬ ಉತ್ತರ ಬರುತ್ತದೆ. ಈ ಲಕ್ಷಣವೂ ರಾಕ್ಷಸ ಪ್ರಭಾವದ ಸಂಕೇತವಾಗಿರುತ್ತದೆ.
ಕೆಟ್ಟ ಆಸೆಗಳು ಮತ್ತು ತಪ್ಪುಗಳ ಸಮರ್ಥನೆ
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದಲ್ಲ, ಒಮ್ಮೆ ಕೆಟ್ಟ ಆಲೋಚನೆ ಬರುತ್ತವೆ. ಈ ಆಲೋಚನೆಗಳು ಕಾಮ, ಭಯ, ಮೋಸ, ಕೋಪ,ಆತಂಕದಿಂದ ಪ್ರಾರಂಭವಾಗಿ ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಈ ರೀತಿಯ ಆಲೋಚನೆಗಳು ದುಷ್ಟಶಕ್ತಿಯ ಪ್ರಭಾವದ ಸಂಕೇತಗಳಾಗಿವೆ.
ಸೈತಾನ ಅಥವಾ ದೆವ್ವದ ಪ್ರಭಾವಕ್ಕೊಳಗಾಗಿದ್ರೆ ನಿಮ್ಮಿಂದಾದ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತೀರಿ. ತಪ್ಪು ಎಂದು ತಿಳಿದಿದ್ರೂ ಸಮರ್ಥನೆಗೆ ಇಳಿದು ಮನಸ್ತಾಪ ಕಟ್ಟಿಕೊಳ್ಳುತ್ತೀರಿ.

