ಶನಿ ದೋಷವಿದ್ರೆ ನಿಮ್ಮಲ್ಲಿ ಈ ಸಮಸ್ಯೆಗಳು ಕಂಡು ಬರುತ್ತೆ!
ಜ್ಯೋತಿಷ್ಯದಲ್ಲಿ ಶನಿಯನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ. ಭಗವಾನ್ ಶಿವನು (Lord Shiva) ಸ್ವತಃ ಶನಿದೇವನಿಗೆ ಎಲ್ಲಾ ಗ್ರಹಗಳ ನ್ಯಾಯ ನಿರ್ಣಯಿಸುವ ಕೆಲಸ ನೀಡಿದ್ದಾನೆ. ಈ ಕಾರಣಕ್ಕಾಗಿಯೇ ಶನಿಯನ್ನು ಕರ್ಮಫಲದಾತ ಎಂದೂ ಕರೆಯಲಾಗುತ್ತೆ ಎನ್ನುವ ನಂಬಿಕೆ ಇದೆ.
ಶನಿಯು ಕಲಿಯುಗದ ದಂಡಾಧಿಕಾರಿಯೂ ಹೌದು. ಮಾನವನ ಕರ್ಮಗಳ ಫಲವನ್ನು ಶನಿದೇವನು (shani deva) ನೀಡುತ್ತಾನೆ. ಮನುಷ್ಯನು ಈ ಕೆಲವೊಂದು ಸಂಕೇತಗಳನ್ನು ಪಡೆಯಲು ಪ್ರಾರಂಭಿಸಿದರೆ, ಶನಿದೇವನು ಕೋಪಗೊಂಡಿದ್ದಾನೆ ಎಂದು ಅರ್ಥಮಾಡಿಕೊಳ್ಳಬೇಕು. ಹಾಗಾದರೆ ಆ ಸಂಕೇತಗಳು ಯಾವುವು ಅನ್ನೋದನ್ನು ನೋಡೋಣ.
ಶನಿ ಕೆಟ್ಟವನಾದರೆ ಏನಾಗುತ್ತದೆ?
ಶನಿಯು ಕೋಪಗೊಂಡರೆ ನಮ್ಮ ದೇಹದ ಕೂದಲು ತುಂಬಾ ವೇಗವಾಗಿ ಉದುರಲು ಪ್ರಾರಂಭಿಸುತ್ತೆ ಎಂದು ನಂಬಲಾಗಿದೆ. ಎಲ್ಲೋ ಒಂದು ಕಡೆ ಕೂದಲು ಉದುರುವುದು (hair fall) ಶನಿಯ ದುರ್ಬಲ ಸ್ಥಿತಿಯನ್ನು ಸೂಚಿಸುತ್ತದೆ. ಆದ್ದರಿಂದ ಕೂದಲು ಉದುರಲು ಪ್ರಾರಂಭಿಸಿದರೆ, ಶನಿಯ ಆರಾಧನೆ ಪ್ರಾರಂಭವಾಗಬೇಕು ಎಂದರ್ಥ.
ಅಕಾಲಿಕವಾಗಿ ಹಲ್ಲುಗಳು ದುರ್ಬಲಗೊಳ್ಳುವುದು
ಸಮಯಕ್ಕೆ ಮುಂಚಿತವಾಗಿ, ಹಲ್ಲುಗಳು ದುರ್ಬಲಗೊಳ್ಳಲು (weak teeth) ಪ್ರಾರಂಭಿಸಿದರೆ, ಅವು ನೋವನ್ನು ನೀಡಲು ಪ್ರಾರಂಭಿಸಿದರೆ ಮತ್ತು ಅವುಗಳ ಸೌಂದರ್ಯವು ಕಡಿಮೆಯಾಗಲು ಪ್ರಾರಂಭಿಸಿದರೆ, ಇದು ಶನಿಯ ದುರ್ಬಲತೆಯ ಸಂಕೇತವಾಗಿದೆ. ಇದನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸಬೇಕು ಮತ್ತು ಶನಿಯ ಆರಾಧನೆ ಶನಿವಾರದಿಂದ ಪ್ರಾರಂಭಿಸಬೇಕು.
ಕಣ್ಣು ದುರ್ಬಲಗೊಳ್ಳುವುದು
ಕಣ್ಣುಗಳೊಂದಿಗಿನ ಶನಿಯ ಸಂಬಂಧವಿದೆ ಎಂದು ಹೇಳಲಾಗುತ್ತೆ. ಕಣ್ಣಿನ ದೃಷ್ಟಿ ದುರ್ಬಲಗೊಳ್ಳಲು (weak eyesight) ಪ್ರಾರಂಭಿಸಿದರೆ, ಶನಿದೇವನು ಈಗ ಕೆಟ್ಟ ಫಲಿತಾಂಶ ನೀಡಲಿದ್ದಾನೆ ಎಂದು ಅರ್ಥಮಾಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಶನಿಯನ್ನು ಪೂಜಿಸಲು ಪ್ರಾರಂಭಿಸಿ ಮತ್ತು ಶನಿವಾರ ದಾನ ಮಾಡಿ.
ಶನಿಯ ಪರಿಹಾರಗಳು
ಶನಿದೇವನನ್ನು ಸಂತೋಷವಾಗಿಡಲು ಈ ವಿಷಯಗಳನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು :
ಬಡವರನ್ನು, ದುರ್ಬಲರನ್ನು, ದುಡಿಯುವವರನ್ನು ಎಂದಿಗೂ ಹಿಂಸಿಸಬೇಡಿ. ನಿಮಗೆ ಸಾಧ್ಯವಾದಷ್ಟು ಮಟ್ಟಿಗೆ, ಅವರಿಗೆ ಸಹಾಯ ಮಾಡಿ, ಅವರನ್ನು ಬೆಂಬಲಿಸಿ. ಇದನ್ನು ಮಾಡುವ ಮೂಲಕ, ಶನಿಯು ಶೀಘ್ರದಲ್ಲೇ ಸಂತೋಷಪಡುತ್ತಾನೆ ಮತ್ತು ಶುಭ ಫಲಗಳನ್ನು ನೀಡುತ್ತಾನೆ.
ಮಂಗಳವಾರ ಹನುಮಂತನನ್ನು ಪೂಜಿಸುವುದರಿಂದ ಶನಿಯ ಅಶುಭತೆ ಕಡಿಮೆಯಾಗುತ್ತದೆ. ಈ ದಿನದಂದು, ಹನುಮಾನ್ ಚಾಲೀಸಾ (Hanuman chalisa) ಮತ್ತು ಸುಂದರಖಾಂಡ ಪಠಣವು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಆದುದರಿಂದ ಇದನ್ನು ತಪ್ಪದೇ ಮಾಡಿ.
ಶನಿವಾರ ಶನಿದೇವನಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನದಂದು, ಶನಿ ದೇವಾಲಯದಲ್ಲಿ ಶನಿಯನ್ನು ಪೂಜಿಸಿ ಮತ್ತು ಸಾಸಿವೆ ಎಣ್ಣೆ, ಕಪ್ಪು ಉದ್ದು ಇತ್ಯಾದಿಗಳನ್ನು ದಾನ ಮಾಡಿ. ಇದರಿಂದ ಶನಿ ದೋಷವಿದ್ದರೆ ಆ ಸಮಸ್ಯೆಗಳೆಲ್ಲಾ ದೂರವಾಗಿ ನಿಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತೆ.