Asianet Suvarna News Asianet Suvarna News

ಇಂದಿನಿಂದ ಶನಿಯ ಹಿಮ್ಮುಖ ಚಲನೆ ನಿಮ್ಮ ರಾಶಿಗೆ ಲಾಭವೋ, ನಷ್ಟವೋ?

ಶನಿ ಗ್ರಹವು ಜೂನ್ 5ರಂದು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸುತ್ತದೆ. ಅಕ್ಟೋಬರ್ 23ರವರೆಗೂ ಅಲ್ಲಿಯೇ ಇರಲಿದ್ದಾನೆ. ಇದರ ಪರಿಣಾಮ ಎಲ್ಲ ದ್ವಾದಶ ರಾಶಿಚಕ್ರಗಳ ಮೇಲೆ ಏನು ಪರಿಣಾಮ ಬೀರಲಿವೆ ನೋಡೋಣ. 

how Saturn Retrograde 2022 will impact zodiac signs skr
Author
Bangalore, First Published Jun 4, 2022, 12:20 PM IST

ಶನಿಯು ನಮ್ಮ ಸೌರವ್ಯೂಹದಲ್ಲಿ ಎರಡನೇ ಅತಿ ದೊಡ್ಡ ಗ್ರಹವಾಗಿದೆ, ಇದು ತನ್ನದೇ ಆದ 50ಕ್ಕೂ ಹೆಚ್ಚು ಉಪಗ್ರಹಗಳನ್ನು ಹೊಂದಿದೆ. ವೈದಿಕ ಜ್ಯೋತಿಷ್ಯ ಮತ್ತು ಶೂನ್ಯ ಸಂಖ್ಯಾಶಾಸ್ತ್ರ(Zero Numerology)ದ ತತ್ವಗಳ ಪ್ರಕಾರ, ಶನಿಯು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಗ್ರಹವಾಗಿ ಪರಿಣಾಮ ಬೀರುತ್ತದೆ. ಇದು ಕಾಲ ಪುರುಷ ಕುಂಡಲಿಯ 10ನೇ ಮನೆ ಮತ್ತು 11ನೇ ಮನೆಯನ್ನು ಆಳುತ್ತದೆ. ಪ್ರಾಪಂಚಿಕ ಜ್ಯೋತಿಷ್ಯದಲ್ಲಿ, ಶನಿಯು ಪ್ರಜಾಪ್ರಭುತ್ವ,  ಸಾರ್ವಜನಿಕರ ಕಲ್ಯಾಣಕ್ಕೆ ಕಾರಣವಾಗಿದೆ. ಜೂನ್ 5ರಂದು, ಶನಿಯು ತನ್ನದೇ ಆದ ಚಿಹ್ನೆ ಕುಂಭದಲ್ಲಿ ಹಿಮ್ಮೆಟ್ಟುತ್ತಿದೆ. ಮತ್ತೆ ಜುಲೈ 12ರಂದು ಮಕರದಲ್ಲಿ ಹಿಮ್ಮುಖ ಚಲನೆಯಲ್ಲಿರಲಿದೆ. ಅಕ್ಟೋಬರ್ ಮಧ್ಯ ಭಾಗದವರೆಗೂ ಶನಿ ಇಲ್ಲಿಯೇ ಇರಲಿದ್ದಾನೆ. ಶನಿಯ ಈ ಹಿಮ್ಮುಖ ಚಲನೆಯು ನಮ್ಮಲ್ಲಿ ಪ್ರತಿಯೊಬ್ಬರಿಗೂ ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ಒಬ್ಬರ ಕ್ರಿಯೆಯನ್ನು ಗಮನಿಸಲು ಸುವರ್ಣಾವಕಾಶವಾಗಿದೆ. ಇದರ ಪರಿಣಾಮ ಯಾವ ರಾಶಿಗೆ ಏನಿರಲಿದೆ ನೋಡೋಣ. 

ಮೇಷ ರಾಶಿ(Aries)
ಶನಿಗ್ರಹವು ಈ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಖ್ಯಾತಿ ಮತ್ತು ಹೆಸರಿನೊಂದಿಗೆ ನಿಮ್ಮಿಷ್ಟದ ಕೆಲಸ ಪಡೆಯುತ್ತೀರಿ. ರಾಜಕೀಯದೊಂದಿಗೆ ನಂಟು ಹೊಂದಿರುವವರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ನೀವು ಕೆಲ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಯಾವುದರಲ್ಲೂ ಹೂಡಿಕೆ ಮಾಡದಿರುವುದು ಒಳ್ಳೆಯದು. ನಿಮ್ಮ ವೈವಾಹಿಕ ಜೀವನದಲ್ಲಿಯೂ ಶನಿಯ ಪ್ರಭಾವವನ್ನು ಕಾಣಬಹುದು. ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ಜಗಳಗಳು ಉಂಟಾಗುತ್ತವೆ, ಅದು ಉದ್ವಿಗ್ನತೆ ಮತ್ತು ತಪ್ಪುಗ್ರಹಿಕೆಗೆ ಕಾರಣವಾಗುತ್ತದೆ. ಆದರೆ ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ.

ವೃಷಭ ರಾಶಿ(Taurus)
ಶನಿ, ಅದರ ಚಲನೆಯು ಕೆಲವು ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ದೀರ್ಘಕಾಲ ಬಾಕಿ ಉಳಿದಿರುವ ನಿಮ್ಮ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸುತ್ತೀರಿ, ಆದರೆ  ಅದು ಸುಲಭವಾಗಿ ಯಶಸ್ವಿಯಾಗುವುದಿಲ್ಲ. ಈ ಸಮಯದಲ್ಲಿ, ನಿಮ್ಮ ಕುಟುಂಬದ ವಾತಾವರಣದ ಬಗ್ಗೆ ಎಚ್ಚರವಾಗಿರಿ. ಮನೆಯಲ್ಲಿ, ನಿಮ್ಮ ತಾಯಿ ಅಥವಾ ಇನ್ನೊಬ್ಬ ವಯಸ್ಸಾದ ಮಹಿಳೆಯ ಆರೋಗ್ಯ ಸಮಸ್ಯೆ ಆತಂಕ ತರಬಹುದು. ಕೆಲ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬ ಎದುರಿಸಬೇಕಾಗಬಹುದು. ಶಾಂತವಾಗಿರಿ ಮತ್ತು ಹೆಚ್ಚು ಚಿಂತಿಸಬೇಡಿ; ಶನಿಯು ನಿಮಗೆ ಧನಾತ್ಮಕ ಫಲಿತಾಂಶ ನೀಡುತ್ತಾನೆ.

ಮಿಥುನ ರಾಶಿ(Gemini)
ಶನಿಯ ಹಿಮ್ಮುಖ ಚಲನೆಯು ನಿಮ್ಮ ಕೆಲಸದ ಸ್ಥಳದ ಮೇಲೆ ಪರಿಣಾಮ ಬೀರಬಹುದು. ಇದು ನಿಮ್ಮ ಕೆಲಸದಲ್ಲಿ ಕೆಲ ಸಮಸ್ಯೆಗಳನ್ನು ತರುತ್ತದೆ. ಒಂದು ರೀತಿಯ ಋಣಾತ್ಮಕ ಕಂಪನಗಳು ಉಂಟಾಗಬಹುದು; ಮನೆಯಲ್ಲಿ ನಿಮ್ಮ ಅಣ್ಣನೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಕಚೇರಿಯಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಲು, ನೀವು ನಿಮ್ಮ ಕೆಲಸವನ್ನು ಸಮರ್ಪಣಾ ಭಾವದಿಂದ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕಾಗುತ್ತದೆ. ಶನಿಯ ಚಲನೆಯಿಂದಾಗಿ, ನೀವು ಮತ್ತೆ ಮತ್ತೆ ಕೆಲಸ ಬದಲಾಯಿಸಲು ಯೋಚಿಸುವಂತಾಗಬಹುದು. ಇದು ಯಾವುದೇ ಧಾರ್ಮಿಕ ಕಾರ್ಯವನ್ನು ಮಾಡದಂತೆ ನಿಮ್ಮನ್ನು ತಡೆಯುತ್ತದೆ. ಪರಿಸ್ಥಿತಿಯನ್ನು ನಿಭಾಯಿಸಲು ಶಾಂತವಾಗಿರುವುದು ಉತ್ತಮ.

ಈ ವಿಷ್ಯಗಳು ನಿಮ್ಮನ್ನು ಬಡವರಾಗುವಂತೆ ಮಾಡುತ್ತೆ, ಹುಷಾರು!

ಕರ್ಕಾಟಕ ರಾಶಿ(Cancer)
ಶನಿಯ ಸಂಚಾರದಿಂದಾಗಿ ನಿಮ್ಮ ಜೀವನದ ಹಲವು ಮುಖಗಳಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು. ನಿಮ್ಮಲ್ಲಿ ಕೆಲವರು ಅಪಘಾತ ಎದುರಿಸುವ ಸಾಧ್ಯತೆಗಳಿವೆ. ನೀವು ಗಾಯಗೊಳ್ಳಬಹುದು ಮತ್ತು ಮೂಗೇಟಿಗೊಳಗಾಗಬಹುದು. ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ. ಆರ್ಥಿಕ ಪರಿಸ್ಥಿತಿ ಹದಗೆಡಬಹುದು ಅಥವಾ ನಿಮ್ಮ ಆದಾಯದಲ್ಲಿ ಇಳಿಕೆಯಾಗಬಹುದು. ಪೂರ್ಣಗೊಳ್ಳುವ ಹಂತದಲ್ಲಿದ್ದ ಅನೇಕ ಕೆಲಸಗಳು ವಿಳಂಬವಾಗುತ್ತವೆ. ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯವಲ್ಲ. ಅಂಥ ನಿರ್ಧಾರಗಳಿಗೆ ತಡೆ ನೀಡುವುದು ಸೂಕ್ತ. ವೆಚ್ಚಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದು ಸಹ ಅಗತ್ಯವಾಗಿದೆ. ಎಚ್ಚರವಾಗಿರಬೇಕಾದ ಸಮಯ; ಇಲ್ಲದಿದ್ದರೆ, ಇದು ನಿಮಗೆ ಕೆಟ್ಟ ಫಲಿತಾಂಶಗಳನ್ನು ತರಬಹುದು.

ಸಿಂಹ ರಾಶಿ(Leo)
ಶನಿಯ ಸಂಚಾರವು ನೀವು ಅನುಸರಿಸುತ್ತಿರುವ ವೃತ್ತಿಗೆ ಅನೇಕ ಉತ್ತಮ ಫಲಿತಾಂಶಗಳನ್ನು ತರುತ್ತದೆ. ವೃತ್ತಿಪರ ಜೀವನದಲ್ಲಿ ಉತ್ತಮ ಫಲಿತಾಂಶಗಳ ಜೊತೆಗೆ, ನೀವು ವಿದೇಶಿ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ ಅಥವಾ ಹೊರಗೆ ನೆಲೆಸುವ ಅವಕಾಶವನ್ನು ಪಡೆಯಬಹುದು. ಯಶಸ್ಸಿನೊಂದಿಗೆ, ನೀವು ಅಹಂಕಾರ ಬೆಳೆಸಿಕೊಂಡರೆ ಸಾಮಾಜಿಕವಾಗಿ ಜನರನ್ನು ಕಳೆದುಕೊಳ್ಳಬೇಕಾಗುತ್ತದೆ. ಉತ್ತಮವಾಗಿ ವರ್ತಿಸುವತ್ತ ಗಮನ ನೀಡಿ. ಬದಲಾವಣೆಗಾಗಿ ಕಾಯುತ್ತಿರುವವರು ಅವಕಾಶವನ್ನು ಪಡೆಯುತ್ತಾರೆ.

ಕನ್ಯಾ ರಾಶಿ(Virgo)
ಶನಿಯ ಸಂಚಾರವು ನಿಮಗೆ ಒಳ್ಳೆ ಸಮಯವನ್ನು ತರುತ್ತಿದೆ. ಇದು ನೀವು ಪ್ರಗತಿ ಹೊಂದುವ ಮತ್ತು ಹೆಚ್ಚಿನ ಎತ್ತರವನ್ನು ಸಾಧಿಸುವ ಸಮಯವಾಗಿರುತ್ತದೆ. ಈ ಚಲನೆಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯುವ ಅವಕಾಶ ನೀಡುತ್ತದೆ ಮತ್ತು ಈಗಾಗಲೇ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ಬಹಳ ದಿನಗಳಿಂದ ನಡೆಯುತ್ತಿದ್ದ ಮಾತುಕತೆಯಲ್ಲಿ ಜಯ ಗಳಿಸುವಿರಿ. ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿ ಬರುವ ಸಾಧ್ಯತೆಗಳಿವೆ ಮತ್ತು ನಿಮ್ಮ ಶತ್ರುಗಳ ಮೇಲೆ ನೀವು ಜಯ ಸಾಧಿಸುವಿರಿ. ಸಾಮಾಜಿಕ ಪ್ರಗತಿ ಇರುತ್ತದೆ.

ಶನಿವಾರ ಜನಿಸಿದವರ ಸ್ವಭಾವ ಹೇಗಿರುತ್ತೆ ಗೊತ್ತಾ?

ತುಲಾ ರಾಶಿ(Libra)
ಶನಿಯು ನಿಮ್ಮ ರಾಶಿಯ ಐದನೇ ಮನೆಗೆ ಚಲಿಸುತ್ತಿದೆ. ಇದು ನಿಮಗೆ ಲಾಭದಾಯಕ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಚಲನೆಯು ಖಂಡಿತವಾಗಿಯೂ ಮಕ್ಕಳ ಏಳಿಗೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮಲ್ಲಿ ಅನೇಕರಿಗೆ, ಇದು ಹಾದಿಯಿಂದ ಎಲ್ಲ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಲಾಭ ಗಳಿಸುವ ಅವಕಾಶವಿದೆ. ಈ ಬಾರಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ತುಂಬಾ ಸಂತೋಷವಾಗಿರುತ್ತಾರೆ. ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ. 

ವೃಶ್ಚಿಕ ರಾಶಿ(Scorpio)
ನಿಮ್ಮ ರಾಶಿಯಲ್ಲಿ ಶನಿಯ ಚಲನೆಯು ಅಷ್ಟೊಂದು ಉತ್ತಮ ಫಲಿತಾಂಶಗಳನ್ನು ತರುವುದಿಲ್ಲ. ನೀವು ಯಾವುದೇ ತಪ್ಪಾದ ಪರಿಣಾಮಗಳನ್ನು ಎದುರಿಸಬೇಕಾಗಿಲ್ಲ. ಕೆಲಸದಲ್ಲಿ ವಿಳಂಬವಿರಬಹುದು, ಆದರೆ ಅದು ಪೂರ್ಣಗೊಳ್ಳುತ್ತದೆ. ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು, ನೀವು ಹಲವಾರು ಬಾರಿ ಕೆಲಸ ಮಾಡಬೇಕಾಗುತ್ತದೆ. ಸೋಮಾರಿತನ ಹೆಚ್ಚುತ್ತದೆ ಅಥವಾ ಕೆಲಸವನ್ನು ಮುಗಿಸುವಲ್ಲಿನ ವಿಳಂಬವು ನಿಮ್ಮಲ್ಲಿ ಕೋಪ  ಉಂಟು ಮಾಡಬಹುದು. ಅದರ ಹೊರತಾಗಿ ತಂದೆಯ ಅನಾರೋಗ್ಯದ ಚಿಂತೆ ಕಾಡಲಿದೆ. ನಿಮ್ಮ ಶತ್ರುಗಳು ನಿಮ್ಮ ವಿರುದ್ಧ ನಿಲ್ಲುತ್ತಾರೆ ಮತ್ತು ನಿಮ್ಮನ್ನು ನೋಯಿಸಲು ಪ್ರಯತ್ನಿಸುತ್ತಾರೆ. 

ಧನು ರಾಶಿ(Sagittarius)
ನೀವು ಬಹಳ ಸಮಯದಿಂದ ಬಳಲುತ್ತಿದ್ದೀರಿ, ಆದರೆ ಈಗ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಮಯ. ಶನಿಯ ಸಂಚಾರವು ಉತ್ತಮ ಫಲಿತಾಂಶಗಳನ್ನು ತರುತ್ತದೆ. ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗುತ್ತೀರಿ. ನಿಮ್ಮ ಜೀವನದ ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಕೆಲಸದಲ್ಲಿ ಪ್ರಗತಿ ಇರುತ್ತದೆ ಮತ್ತು ಹಣವನ್ನು ಗಳಿಸುವ ಹೊಸ ಅವಕಾಶಗಳು ಸಹ ಉತ್ಪತ್ತಿಯಾಗುತ್ತವೆ. ಈ ಕಾರಣದಿಂದಾಗಿ, ನೀವು ಸಮಾಜದಲ್ಲಿ ಪ್ರಶಂಸೆ, ಗೌರವ ಮತ್ತು ಖ್ಯಾತಿ ಪಡೆಯುತ್ತೀರಿ. ಆದರೆ ನಿಮ್ಮ ಮಗುವಿನ ಆರೋಗ್ಯ ಮತ್ತು ಅಧ್ಯಯನದ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ.

ಮಕರ ರಾಶಿ(Capricorn)
ಶನಿಯ ಈ ಚಲನೆಯ ಸಮಯದಲ್ಲಿ ಒಂದು ಸಲಹೆಯೆಂದರೆ ಜಾಗರೂಕರಾಗಿರಿ. ಇದು ನಿಮ್ಮ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ತೊಂದರೆಗಳನ್ನು ಎದುರಿಸಬೇಕಾದ ಸಾಧ್ಯತೆಗಳಿವೆ. ನಿಮ್ಮ ಕೋಪ ಮತ್ತು ಇತರರೊಂದಿಗೆ ಕಟುವಾಗಿ ಮಾತನಾಡುವ ಅಭ್ಯಾಸವು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಪತ್ನಿ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು. ನಿಮ್ಮ ಪಾಲುದಾರರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಮತ್ತು ಪಾಲುದಾರಿಕೆಯಲ್ಲಿ ಮಾಡಿದ ನಿಮ್ಮ ವ್ಯವಹಾರದಲ್ಲಿ ನಷ್ಟಗಳು ಉಂಟಾಗಬಹುದು. ತಾಳ್ಮೆಯಿಂದಿರಿ ಮತ್ತು ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಸಲಹೆ ನೀಡಲಾಗುತ್ತದೆ.

ಇದು ಮದುವೆ ವಿಷಯ, ಕುಜ ದೋಷದ ನಿರ್ಲಕ್ಷ್ಯ ಬೇಡ
 
ಕುಂಭ ರಾಶಿ(Aquarius)
ಶನಿಯ ಈ ಚಲನೆಯು ನಿಮಗೆ ಉತ್ತಮ ಫಲಿತಾಂಶಗಳನ್ನು ತರುವುದಿಲ್ಲ. ಶನಿಯ ಚಲನೆಯು ನಿಮ್ಮ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳನ್ನು ತರುತ್ತದೆ. ನಿಮ್ಮ ಮದುವೆ ಮುಗಿಯುವ ಸಾಧ್ಯತೆಗಳಿವೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಅನೇಕ ತಪ್ಪು ತಿಳುವಳಿಕೆಗಳಿರುತ್ತವೆ. ಯಾವುದೇ ಸ್ಥಳಗಳಲ್ಲಿ ಹೂಡಿಕೆ ಮಾಡುವುದನ್ನು ನಿಲ್ಲಿಸಿ. ಈ ಅವಧಿಯಲ್ಲಿ ಮದುವೆಯನ್ನು ಯೋಜಿಸಬೇಡಿ. ನಿಮ್ಮ ಸಂಬಂಧಿಕರೊಂದಿಗೆ ನಿಮ್ಮ ನಡವಳಿಕೆಯಲ್ಲಿ ನೀತಿವಂತರಾಗಿರಿ. ಕೆಲವು ಜನರಿಗೆ, ಅವರ ಜಾತಕದ ಪ್ರಕಾರ ಶನಿಯ ಚಲನೆಯು ಉತ್ತಮ ಫಲಿತಾಂಶಗಳನ್ನು ತರಬಹುದು. ನಿಮ್ಮ ಹೆಂಡತಿಯ ಆರೋಗ್ಯ ತಪಾಸಣೆ ಮಾಡಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ನಿಮ್ಮ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಏಕೆಂದರೆ ಈ ಪಾಲುದಾರಿಕೆಯನ್ನು ಮುರಿಯುವ ಸಾಧ್ಯತೆಗಳಿವೆ. ಅದು ಹಣಕಾಸಿನ ಸಮಸ್ಯೆಗಳನ್ನು ತರುತ್ತದೆ.

ಮೀನ ರಾಶಿ(Pisces)
ಈ ರಾಶಿಚಕ್ರ ಚಿಹ್ನೆಯ ಜನರಿಗೆ ಮಿಶ್ರ ಫಲಿತಾಂಶ ಕಾಯುತ್ತಿದೆ. ಕೆಲವು ಜನರು ಆರೋಗ್ಯ ಸಮಸ್ಯೆಗಳು, ಆರ್ಥಿಕ ನಷ್ಟ, ಸಾಮಾಜಿಕ ಅವಮಾನ ಮತ್ತು ಕುಟುಂಬದಲ್ಲಿ ಜಗಳಗಳನ್ನು ಎದುರಿಸಬಹುದು. ಶನಿ ಗ್ರಹವು ನಿಮ್ಮ ಜಾತಕದ ಪ್ರಗತಿಪರ ಭಾಗದಲ್ಲಿದ್ದರೆ ಯಾವುದೇ ನಿರಾಶಾವಾದಿ ಫಲಿತಾಂಶಗಳು ಕಂಡುಬರುವುದಿಲ್ಲ. ಸಾಮರಸ್ಯವನ್ನು ತರಲು, ನೀವು ಹಿರಿಯರನ್ನು ಗೌರವಿಸಬೇಕು ಮತ್ತು ಕುಟುಂಬದ ಎಲ್ಲ ಸದಸ್ಯರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಾಮರಸ್ಯದ ವಾತಾವರಣವನ್ನು ಸೃಷ್ಟಿಸಲು ನಿಮ್ಮ ನೆರೆಹೊರೆಯವರಿಗೆ ನೀವು ಸಭ್ಯರಾಗಿರಬೇಕು ಮತ್ತು ಸಹಾಯಕರಾಗಿರಬೇಕು.

Follow Us:
Download App:
  • android
  • ios