Asianet Suvarna News Asianet Suvarna News

Shani Vakri: 141 ದಿನಗಳ ಕಾಲ ಈ ಮೂರು ರಾಶಿಗಳಿಗೆ ಅದೃಷ್ಟದ ಮಳೆ ಸುರಿಸಲಿದ್ದಾನೆ ಶನಿ

ಜೂನ್ 5ರಿಂದ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಸುಮಾರು 141 ದಿನಗಳ ಕಾಲ ಅಲ್ಲಿಯೇ ಇರಲಿದ್ದಾನೆ. ಇದರಿಂದ ಮೂರು ರಾಶಿಗಳಿಗೆ ಬಂಪರ್ ಅದೃಷ್ಟ ದೊರೆಯಲಿದೆ. 

Shani Vakri will bring luck to 3 zodiac signs skr
Author
Bangalore, First Published Jun 2, 2022, 10:53 AM IST

ವೈದಿಕ ಜ್ಯೋತಿಷ್ಯದ ಪ್ರಕಾರ, ಒಂದು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಿದಾಗ ಅದು ಮಾನವ ಜೀವನ ಮತ್ತು ಭೂಮಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಕರ್ಮಫಲವನ್ನು ನೀಡುವ ಶನಿದೇವ(Shani Dev)ನು ಜೂನ್ 5, ಭಾನುವಾರದಂದು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ(retrograde motion) ಆರಂಭಿಸಲಿದ್ದಾನೆ. ಅಕ್ಟೋಬರ್ 23ರವರೆಗೂ ಇಲ್ಲಿಯೇ ಇರಲಿದ್ದಾನೆ. ಶನಿ ವಕ್ರಿಯ ಪ್ರಭಾವವು ಎಲ್ಲ ರಾಶಿಚಕ್ರಗಳ ಮೇಲಾಗಲಿದೆ.  ಆದರೆ ಈ 3 ರಾಶಿಚಕ್ರ ಚಿಹ್ನೆಗಳು, ಈ ಸಮಯದಲ್ಲಿ ವಿಶೇಷ ವಿತ್ತೀಯ ಪ್ರಯೋಜನಗಳನ್ನು(monetary benefits) ಪಡೆಯುತ್ತಿವೆ. ಈ 3 ರಾಶಿಗಳು(zodiac signs) ಯಾವುವು ಎಂದು ತಿಳಿಯೋಣ.

ವೃಷಭ ರಾಶಿ(Taurus): ನಿಮ್ಮ ರಾಶಿಯಿಂದ ಶನಿ ದೇವನು ಹತ್ತನೇ ಮನೆಯಲ್ಲಿ ಹಿಮ್ಮುಖವಾಗಲಿದ್ದಾನೆ. ಇದನ್ನು ಉದ್ಯೋಗ ಸ್ಥಳ ಎಂದು ಕರೆಯಲಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ವೃತ್ತಿ ಕ್ಷೇತ್ರದಲ್ಲಿ  ಪ್ರತಿಷ್ಠೆಯ ಹೆಚ್ಚಳವಾಗಲಿದೆ. ಅಲ್ಲದೆ, ಈ ಸಮಯದಲ್ಲಿ ನೀವು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು ಅಥವಾ ಉತ್ತಮ ಇನ್ಕ್ರಿಮೆಂಟ್(increment) ಪಡೆಯಬಹುದು. ಈ ಅವಧಿಯಲ್ಲಿ ಬೇರೆ ಯಾವುದೇ ವ್ಯವಹಾರದಲ್ಲಿ ಉತ್ತಮ ಹಣ ಗಳಿಸಬಹುದು. ಇದರೊಂದಿಗೆ, ಈ ಸಮಯದಲ್ಲಿ ನಿಮ್ಮ ಕಾರ್ಯಶೈಲಿಯಲ್ಲಿ ಸುಧಾರಣೆಯೂ ಇರುತ್ತದೆ. ಈ ಕಾರಣದಿಂದಾಗಿ ನೀವು ಕೆಲಸದ ಸ್ಥಳದಲ್ಲಿ ಪ್ರಶಂಸೆಗೆ ಒಳಗಾಗಬಹುದು. ಬಾಸ್ ನಿಮ್ಮೊಂದಿಗೆ ಸಂತೋಷವಾಗಿರಬಹುದು. ಇದರೊಂದಿಗೆ ಈ ಸಮಯದಲ್ಲಿ ರಾಜಕೀಯ(politics)ದಲ್ಲಿಯೂ ಯಶಸ್ಸನ್ನು ಪಡೆಯಬಹುದು. ವೃಷಭ ರಾಶಿಯನ್ನು ಶುಕ್ರನು ಆಳುತ್ತಾನೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಮತ್ತು ಶುಕ್ರನ ನಡುವೆ ಸ್ನೇಹದ ಭಾವನೆ ಇದೆ. ಆದ್ದರಿಂದ, ಶನಿದೇವನ ಹಿಮ್ಮುಖ ಚಲನೆಯು ನಿಮಗೆ ಬಹು ಲಾಭಕಾರಿಯಾಗಿರುತ್ತದೆ.

ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ತರುತ್ತೆ ಗೊತ್ತಾ..?

ಮಕರ ರಾಶಿ(Capricorn): ಜೂನ್ 5ರಿಂದ ನಿಮಗೆ ಒಳ್ಳೆಯ ದಿನಗಳು ಪ್ರಾರಂಭವಾಗಬಹುದು. ಏಕೆಂದರೆ ಶನಿದೇವನು ನಿಮ್ಮ ರಾಶಿಯ ಎರಡನೇ ಮನೆಯಲ್ಲಿ ಹಿಮ್ಮುಖ ಚಲನೆ ಆರಂಭಿಸುತ್ತಿದ್ದಾವೆ. ಇದನ್ನು ಸಂಪತ್ತು ಮತ್ತು ಮಾತಿನ ಸ್ಥಳ ಎಂದು ಕರೆಯಲಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ಹಠಾತ್ ವಿತ್ತೀಯ ಲಾಭದ ಸಾಧ್ಯತೆಗಳಿವೆ. ಎಲ್ಲೋ ಸಿಕ್ಕಿಕೊಂಡ ಹಣ ಕೈಗೆ ಬರಬಹುದು. ಭಾಷಣ, ಮಾತುಗಾರಿಕೆಗೆ ಸಂಬಂಧಿಸಿದ ವೃತ್ತಿಜೀವನದವರಿಗೆ ಈ ಸಮಯವು ಉತ್ತಮವಾಗಿರುತ್ತದೆ. ಅದೇ ಸಮಯದಲ್ಲಿ, ವಾಹನ, ಭೂಮಿ, ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಸಮಯ ಉತ್ತಮವಾಗಿದೆ. ಹೊಸ ವಸ್ತುಗಳ ಖರೀದಿಗೆ ಮನಸ್ಸು ಮಾಡಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ರಾಜಕೀಯದಲ್ಲಿ ಯಶಸ್ಸನ್ನು ಪಡೆಯಬಹುದು ಮತ್ತು ಬಯಸಿದ ಸ್ಥಾನ ಪಡೆಯಬಹುದು. ನಿಮ್ಮ ವ್ಯವಹಾರವು ಗುರು ಗ್ರಹ(Jupiter)ಕ್ಕೆ ಸಂಬಂಧಿಸಿದ್ದರೆ, ಈ ಅವಧಿಯಲ್ಲಿ ನೀವು ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಮಕರ ರಾಶಿಯನ್ನು ಶನಿ ದೇವನೇ ಆಳುತ್ತಾನೆ. ಆದ್ದರಿಂದ, ಈ ಸಮಯವು ನಿಮಗೆ ಲಾಭದಾಯಕವಾಗಿದೆ.

ಬುಧ ಮಾರ್ಗಿ: ಮೂರು ರಾಶಿಗಳಿಗೆ ಲಾಭಕಾರಿ, ಎರಡಕ್ಕೆ ಅಪಾಯಕಾರಿ!

ಮೇಷ ರಾಶಿ(Aries): ನಿಮ್ಮ ರಾಶಿಯ 11ನೇ ಮನೆಯಲ್ಲಿ ಶನಿದೇವನು ಹಿಮ್ಮುಖವಾಗಲಿದ್ದಾನೆ. ಇದನ್ನು ಆದಾಯ ಮತ್ತು ಲಾಭದ ಸ್ಥಳ ಎಂದು ಕರೆಯಲಾಗುತ್ತದೆ. ಆದ್ದರಿಂದ, ಈ ಅವಧಿಯಲ್ಲಿ ನಿಮ್ಮ ಆದಾಯವು ಚೆನ್ನಾಗಿ ಹೆಚ್ಚಾಗಬಹುದು. ಇದರೊಂದಿಗೆ ಹೊಸ ಆದಾಯದ ಮೂಲಗಳೂ ಸೃಷ್ಟಿಯಾಗಲಿವೆ. ವ್ಯವಹಾರದಲ್ಲಿ ಹೊಸ ಸಂಬಂಧಗಳು ರೂಪುಗೊಳ್ಳಬಹುದು. ಅದೇ ಸಮಯದಲ್ಲಿ, ನೀವು ಹೊಸ ವ್ಯವಹಾರಗಳನ್ನು ಅಂತಿಮಗೊಳಿಸಬಹುದು. ಅಲ್ಲದೆ, ವ್ಯಾಪಾರದಲ್ಲಿ ಲಾಭವು ಉತ್ತಮವಾಗಿರುತ್ತದೆ. ಮತ್ತೊಂದೆಡೆ, ನಿಮ್ಮ ವ್ಯಾಪಾರ ಅಥವಾ ವೃತ್ತಿಯು ಗುರು ಗ್ರಹಕ್ಕೆ ಸಂಬಂಧಿಸಿದ್ದರೆ, ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ವಿದೇಶದಿಂದ ಉತ್ತಮ ಹಣವನ್ನು ಪಡೆಯಬಹುದು. ಅಲ್ಲದೆ, ನೀವು ವ್ಯವಹಾರದಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಸಮಯ ಅನುಕೂಲವಿದೆ.

Follow Us:
Download App:
  • android
  • ios