Garuda Puranaದ ಈ ರಹಸ್ಯಗಳಲ್ಲಿದೆ ಯಶಸ್ಸಿನ ಕೀಲಿಕೈ
18 ಪುರಾಣಗಳಲ್ಲಿ ಗರುಡ ಪುರಾಣವೂ ಒಂದು. ಇದು ವ್ಯಕ್ತಿಯ ಕರ್ಮಗಳಿಗೆ ಅನುಗುಣವಾಗಿ ಲಭ್ಯವಿರುವ ಫಲಗಳ ಬಗ್ಗೆ ಉಲ್ಲೇಖಿಸುತ್ತದೆ. ಗರುಡ ಪುರಾಣದಲ್ಲಿ ಜೀವನವನ್ನು ಯಶಸ್ವಿಗೊಳಿಸಲು ಮತ್ತು ಪ್ರಗತಿಯನ್ನು ಪಡೆಯಲು ಅನೇಕ ಮಂತ್ರಗಳನ್ನು ಉಲ್ಲೇಖಿಸಲಾಗಿದೆ. ಅವುಗಳ ಅರ್ಥವನ್ನು ತಿಳಿದುಕೊಂಡರೆ, ಜೀವನದಲ್ಲಿ ಯಶಸ್ಸು ಪಡೆಯಬಹುದು.
garuda puran
ಗರುಡ ಪುರಾಣದಲ್ಲಿ(Garuda Puran) ಈ 6 ವಿಷಯಗಳನ್ನು ಪೂಜಿಸುವ ಮೂಲಕ, ವ್ಯಕ್ತಿಯು ಜೀವನದ ಎಲ್ಲ ದುಃಖಗಳನ್ನು ತೊಡೆದುಹಾಕಬಹುದು ಮತ್ತು ಯಶಸ್ಸಿನ ಏಣಿ ಏರಬಹುದು ಎಂದು ಉಲ್ಲೇಖಿಸಲಾಗಿದೆ. ಆ ಆರು ವಿಷಯಗಳು ಯಾವುವು? ಅವುಗಳನ್ನು ಪೂಜಿಸುವುದರಿಂದ ಏನೇನು ಬದಲಾವಣೆ ಕಾಣುತ್ತದೆ ಅನ್ನೋದನ್ನು ನೋಡೋಣ.
puran
ಭಗವಾನ್ ವಿಷ್ಣು (Lord Vishnu)
ಧಾರ್ಮಿಕ ಗ್ರಂಥಗಳ ಪ್ರಕಾರ, ಭಗವಾನ್ ವಿಷ್ಣುವು ಭಕ್ತರ ಎಲ್ಲ ದುಃಖಗಳನ್ನು ತೆಗೆದುಹಾಕುತ್ತಾನೆ ಮತ್ತು ಅವರ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಒದಗಿಸುತ್ತಾನೆ. ದಿನವನ್ನು ದೇವರ ನೆನೆದು ಪ್ರಾರಂಭಿಸಬೇಕು. ಇದರಿಂದ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ವಿಷ್ಣುವನ್ನು ನಿಯಮಿತವಾಗಿ ಪೂಜಿಸಬೇಕು.
puran
ಏಕಾದಶಿ(Ekadashi) ವ್ರತ
ಏಕಾದಶಿಯ ಉಪವಾಸವನ್ನು ಸಹ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಏಕಾದಶಿಯ ಉಪವಾಸವು ಎಲ್ಲ ವ್ರತಗಳಲ್ಲಿ ಅತ್ಯುತ್ತಮವಾಗಿದೆ. ಏಕಾದಶಿಯ ಉಪವಾಸವನ್ನು ಪೂರ್ಣ ಭಕ್ತಿಯಿಂದ ಆಚರಿಸುವ ವ್ಯಕ್ತಿಯು ಜೀವನದಲ್ಲಿ ಶುಭ ಫಲಗಳನ್ನು ಪಡೆಯುತ್ತಾನೆ. ಆದ್ದರಿಂದ, ಜೀವನದಲ್ಲಿ ಸಂತೋಷವನ್ನು ಪಡೆಯಲು, ಏಕಾದಶಿಯಂದು ಉಪವಾಸ ಮಾಡುವುದನ್ನು ಖಚಿತಪಡಿಸಿಕೊಳ್ಳಿ.
puran
ಗಂಗಾ ನದಿ(River Ganga)
ಗರುಡ ಪುರಾಣದ ಪ್ರಕಾರ, ಗಂಗೆಯ ನೀರು ಎಲ್ಲ ಪಾಪಗಳಿಂದ ಮುಕ್ತವಾದುದು. ಆದ್ದರಿಂದ ಗಂಗಾಜಲವನ್ನು ಯಾವುದೇ ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಗಂಗಾಜಲದೊಂದಿಗೆ ಶುದ್ಧೀಕರಣವನ್ನು ಮಾಡಲಾಗುತ್ತದೆ. ಆದ್ದರಿಂದ, ನೀವು ಗಂಗಾಜಲವನ್ನು ಪೂಜಿಸಬೇಕು.
puran
ಪವಿತ್ರ ತುಳಸಿ (Tulasi)
ತುಳಸಿ ಸಸ್ಯವು ತಾಯಿ ಲಕ್ಷ್ಮಿಗೆ ಸಂಬಂಧಿಸಿದೆ ಮತ್ತು ಭಗವಾನ್ ವಿಷ್ಣುವು ತುಳಸಿ ಸಸ್ಯವನ್ನು ತುಂಬಾ ಇಷ್ಟಪಡುತ್ತಾನೆ. ಅದಕ್ಕಾಗಿಯೇ ಭಗವಾನ್ ಶ್ರೀ ಹರಿಯ ಅನುಗ್ರಹವನ್ನು ಪಡೆಯಲು ತುಳಸಿ ಸಸ್ಯವನ್ನು ಪೂಜಿಸಲಾಗುತ್ತದೆ. ತುಳಸಿ ಸಸ್ಯವನ್ನು ನಿಯಮಿತವಾಗಿ ಪೂಜಿಸುವುದರಿಂದ ಜೀವನದ ಎಲ್ಲ ದುಃಖಗಳು ನಿವಾರಣೆಯಾಗುತ್ತವೆ. ತುಳಸಿಯ ಕೆಳಗೆ ದೀಪವನ್ನು ನಿಯಮಿತವಾಗಿ ಬೆಳಗಿಸಬೇಕು.
puran
ಬುದ್ಧಿವಂತ(Intelligent) ವ್ಯಕ್ತಿ
ಧಾರ್ಮಿಕ ಗ್ರಂಥಗಳ ಪ್ರಕಾರ, ಬುದ್ಧಿವಂತ ಮನುಷ್ಯನನ್ನು ಅಥವಾ ಪಂಡಿತನನ್ನು ಗೌರವಿಸುವ ಮೂಲಕ, ಒಬ್ಬ ವ್ಯಕ್ತಿಯು ಯಶಸ್ಸನ್ನು ಪಡೆಯುತ್ತಾನೆ. ಧರ್ಮಗ್ರಂಥಗಳಲ್ಲಿ, ಬುದ್ಧಿವಂತ ಮನುಷ್ಯನನ್ನು ಅವಮಾನಿಸುವುದನ್ನು ಅನ್ಯಾಯವೆಂದು ವರ್ಣಿಸಲಾಗಿದೆ. ಈ ಕೆಲಸ ಎಂದಿಗೂ ಮಾಡದಿರಿ.
puran
ಹಸು(Cow)
ಹಿಂದೂ ಧರ್ಮದಲ್ಲಿ ಗೋವಿಗೆ ಬಹಳಷ್ಟು ಮಹತ್ವ ನೀಡಲಾಗಿದೆ. ಗರುಡ ಪುರಾಣದ ಪ್ರಕಾರ, ಎಲ್ಲ ದೇವರು ಮತ್ತು ದೇವತೆಗಳು ಹಸುವಿನಲ್ಲಿ ವಾಸಿಸುತ್ತಾರೆ ಎಂದು ನಂಬಲಾಗಿದೆ. ಜೀವನದಲ್ಲಿನ ಹಲವು ತೊಂದರೆಗಳನ್ನು ತೊಡೆದುಹಾಕಲು ಹಸುವನ್ನು ದೇವತೆಯಾಗಿ ಪೂಜಿಸಲಾಗುತ್ತದೆ.