Asianet Suvarna News Asianet Suvarna News

Religious Ritual: ಈ ವ್ರತ ಮಾಡಿ ಸಾವಿರ ಗೋದಾನದಷ್ಟು ಪುಣ್ಯ ಪಡ್ಕೊಳ್ಳಿ...!

ಅಮಲಕಿ ಏಕಾದಶಿ ಮಾರ್ಚ್ 13 ಮತ್ತು 14ರಂದು ಬಂದಿದ್ದು, ಈ ವ್ರತವನ್ನು ಆಚರಿಸಿದರೆ ಸಾವಿರ ಗೋವುಗಳ ದಾನ ಮಾಡಿದಷ್ಟು ಪುಣ್ಯ ಲಭ್ಯವಾಗುತ್ತದೆ. ಹೋಳಿ ಹಬ್ಬದ ಕೆಲವು ದಿನಗಳ ಮುಂಚೆ ಬರುವ ಏಕಾದಶಿಯೇ ಇದಾಗಿದ್ದು, ಇದನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಬೇಕಿದೆ. ಅಲ್ಲದೆ, ಇದನ್ನು ಉತ್ತರದಲ್ಲಿ ರಂಗ್‌ಬರಿ ಏಕಾದಶಿ ಅಂತಲೂ ಕರೆಯುತ್ತಾರೆ. ಹಾಗಾದರೆ ಈ ವ್ರತದ ವಿಶೇಷತೆ ನೋಡೋಣ...

Amalaka Ekadashi vrath would bring you luck of donating 1000 cows
Author
Bangalore, First Published Mar 4, 2022, 12:28 PM IST

ಅಮಲಕಿ ಏಕಾದಶಿಗೆ (Amalaki Ekadashi) ಬಹಳ ಪ್ರಾಶಸ್ತ್ಯವಿದೆ. ಈ ದಿನದಲ್ಲಿ ಮಾಡುವ ವ್ರತವು (Vrath) ಪುಣ್ಯವನ್ನು ದಯಪಾಲಿಸುತ್ತದೆ. ಸಾವಿರ ಗೋವುಗಳನ್ನು (Cow) ದಾನ (Donate) ಮಾಡಿದ ಪುಣ್ಯ ಸೇವೆ ಮಾಡಿದವರದ್ದಾಗಿರುತ್ತದೆ. ಪ್ರತಿ ಮಾಸದಲ್ಲಿ 2 ಏಕಾದಶಿ ಬರುತ್ತದೆ. ಪಾಲ್ಗುಣ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯನ್ನು ಅಮಲಕಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಏಕಾದಶಿಯಂದು ವಿಷ್ಣುವನ್ನು ಪೂಜಿಸಲಾಗುತ್ತದೆ. ಹೀಗಾಗಿ ಈ ದಿನ ವಿಷ್ಣುವಿಗೆ (Lord Vishnu) ಸಮರ್ಪಿತವಾಗಿದೆ. ಈ ದಿನ ಶ್ರೀಹರಿಯನ್ನು ಪೂಜಿಸುವುದರ ಜೊತೆಗೆ ನೆಲ್ಲಿಕಾಯಿ ಗಿಡವನ್ನೂ ಸಹ ಪೂಜೆಸಲಾಗುತ್ತದೆ. ಈ ಬಾರಿ ಮಾರ್ಚ್ 14, 2022ರ ಸೋಮವಾರ ಅಮಲಕಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಆದರೆ, ಹಿಂದೂ ಪಂಚಾಂಗದ (Hindu Panchanga) ಅನುಸಾರ 13 ಮಾರ್ಚ್ (March) ಬೆಳಗ್ಗೆ 10.21ಕ್ಕೆ ಆರಂಭವಾಗುವ ಈ ಏಕಾದಶಿ, ಮಾರ್ಚ್ 14ರ ಮಧ್ಯಾಹ್ನ 12 ಗಂಟೆ 5 ನಿಮಿಷದ ವರೆಗೆ ಇರುತ್ತದೆ. 

ಸಾವಿರ ಹಸು ದಾನ ಮಾಡಿದಷ್ಟು ಪುಣ್ಯ
ಅಮಲಕಿ ಏಕಾದಶಿಯ ದಿನ, ನೆಲ್ಲಿ ಗಿಡದ (Amla Plant) ಕೆಳಗೆ ಕುಳಿತು ಶ್ರೀಹರಿಯನ್ನು ಪೂಜಿಸಬೇಕು. ಕಾರಣ ಸೃಷ್ಟಿಯ ಸೃಷ್ಟಿಗಾಗಿ ಶ್ರೀಹರಿಯು ಮೊದಲು ಬ್ರಹ್ಮ (Lord Brahma) ದೇವನಿಗೆ ಜನ್ಮ (Birth) ನೀಡುತ್ತಾನೆ. ಅದೇ ಸಮಯದಲ್ಲಿ ವಿಷ್ಣುವು ನೆಲ್ಲಿ ಗಿಡಕ್ಕೂ ಜನ್ಮ ನೀಡಿದ್ದಾನೆ ಎಂಬ ನಂಬಿಕೆ ಇದೆ. ಹೀಗಾಗಿ ಶ್ರೀ ವಿಷ್ಣುವಿಗೆ ನೆಲ್ಲಿ ಗಿಡ ಎಂದರೆ ಬಹಳ ಪ್ರಿಯ. ಈ ದಿನದಂದು ನೆಲ್ಲಿ ಗಿಡದ ಕೆಳಗೆ ಕುಳಿತು ನಾರಾಯಣನನ್ನು (Lord Narayana) ಪೂಜೆ (Pooja) ಮಾಡಿದ್ದೇ ಆದಲ್ಲಿ ಒಂದು ಸಾವಿರ ಗೋವುಗಳನ್ನು ದಾನ ಮಾಡಿ ಪುಣ್ಯವು ಪ್ರಾಪ್ತಿಯಾಗುತ್ತದೆ. 

ಇದನ್ನು ಓದಿ:  Sunday Born Personality: ಭಾನುವಾರ ಹುಟ್ಟಿದೋರು ಅಹಂಕಾರಿಗಳಾ? ಅವ್ರ್ ಲವ್ ಲೈಫ್ ಹೇಗೆ?

ಈ ದಿನ ಪೂಜೆಗಿಂತ ಮೊದಲು ನೆಲ್ಲಿ ನೀರಿನಲ್ಲಿ ಸ್ನಾನ ಮಾಡಬೇಕು. ಬಳಿಕ ಶ್ರದ್ಧಾ – ಭಕ್ತಿಯಿಂದ ಶ್ರೀ ವಿಷ್ಣುವನ್ನು ನೆನೆದು ಪೂಜೆಯಲ್ಲಿ ತೊಡಗಬೇಕು. ಪೂಜೆಯ ಸಮಯದಲ್ಲಿ (Time) ವಿಷ್ಣುವಿಗೆ ನೆಲ್ಲಿ ಗಿಡವನ್ನು ಅರ್ಪಣೆ ಮಾಡಬೇಕು. ಬಳಿಕ ನೆಲ್ಲಿಗೆ ಸಂಬಂಧಿಸಿದ ಆಹಾರವನ್ನು ನೈವೇದ್ಯ ಮಾಡಿ ನೆಲ್ಲಿಯನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಶ್ರೀಹರಿ ಪ್ರಸನ್ನಗೊಳ್ಳುತ್ತಾನೆ. ಇದರಿಂದ ಮನೆಯಲ್ಲಿ ಸುಖ, ಸಮೃದ್ಧಿ (Happiness, prosperity) ನೆಲೆಸಲಿದೆ. 

ಎರೆಡೆರಡು ಯೋಗ..!
ಈ ಬಾರಿಯ ಅಮಲಕಿ ಏಕಾದಶಿಗೆ ಸರ್ವಾರ್ಥ ಸಿದ್ಧಿ ಯೋಗವೋ ಜೊತೆಯಾಗಿದೆ. ಇದರಿಂದ ಈ ವ್ರತ ಆಚರಣೆ ಮಾಡುವವರ ಎಲ್ಲ ಇಷ್ಟಾರ್ಥಗಳೂ ಸಹ ನೆರವೇರುವುದಲ್ಲದೆ, ಮತ್ತಷ್ಟು ಶುಭ ಫಲವು ದೊರೆಯುತ್ತದೆ. ಅಂದಹಾಗೆ ಈ ಸರ್ವಾರ್ಥ ಸಿದ್ಧಿ ಯೋಗವು ಮುಂಜಾನೆ 6 ಗಂಟೆ 32 ನಿಮಿಷಕ್ಕೆ ಪ್ರಾರಂಭವಾಗಿ ರಾತ್ರಿ 10 ಗಂಟೆ 8 ನಿಮಿಷದವರೆಗೆ ಇರಲಿದೆ. ಇನ್ನೊಂದು ಸಂಗತಿಯೆಂದರೆ, ಈ ವ್ರತದ ಪಾರಾಯಣ ಮಾಡಲು ಸಹ ಸಾಕಷ್ಟು ಸಮಯವಿದ್ದು, ಮಾರ್ಚ್ 15ರ ಮುಂಜಾನೆ 6 ಗಂಟೆ 31 ನಿಮಿಷದಿಂದ 8 ಗಂಟೆ 55 ನಿಮಿಷದ ವರೆಗೆ ಇರುತ್ತದೆ. 

ಇದನ್ನು ಓದಿ: Personality Traits And Zodiacs: ಈ ನಾಲ್ಕು ರಾಶಿಯವರದು ಬಹಳ ಸೌಮ್ಯ ಸ್ವಭಾವ

ಪುಷ್ಯ ನಕ್ಷತ್ರದಲ್ಲಿ ವ್ರತ ಮಾಡಿದರೆ ಶುಭ
ಪುಷ್ಯ ನಕ್ಷತ್ರದಲ್ಲಿ ಉಪವಾಸ ಅತ್ಯಂತ ಶುಭಕರವಾಗಿದೆ. ಅಮಲಕಿ ಏಕಾದಶಿಯ ಉಪವಾಸವನ್ನು (Fasting) ಪುಷ್ಯ ನಕ್ಷತ್ರದಲ್ಲಿ (Pushya Nakshtra) ಆಚರಣೆ ಮಾಡಿದರೆ ಅದಕ್ಕೆ ಸಿಗುವ ಪುಣ್ಯ ಬಹಳ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಮನೆ-ಮನಗಳಿಗೆ ಒಳಿತಾಗುವುದಲ್ಲದೆ, ಶುಭ ಫಲಗಳು ಲಭ್ಯವಾಗುತ್ತದೆ. ಇಂತಹ ಪುಣ್ಯಕಾಲವನ್ನು ಮಾಡುವ ಪ್ರತಿಯೊಬ್ಬರಿಗೂ ಮರಣಾನಂತರೂ ಶುಭಕರವಾಗಲಿದ್ದು, ಜೀವನ - ಮರಣ ಚಕ್ರದಿಂದ ಮುಕ್ತನಾಗುತ್ತಾನೆ. ಈ ಬಾರಿ ಅಮಲಕಿ ಏಕಾದಶಿಯಂದು ಪುಷ್ಯ ನಕ್ಷತ್ರವೂ ಸಹ ರಾತ್ರಿ 10.08 ರವರೆಗೆ ಇರುತ್ತದೆ. ಹೀಗಾಗಿ ಈ ಬಾರಿಯ ಏಕಾದಶಿ ಆಚರಣೆ ಬಹಳ ಪ್ರಾಶಸ್ತ್ಯವುಳ್ಳದ್ದು, ಮತ್ತು ಶುಭದಾಯಕವಾಗಿದೆ ಎಂದು ವೇದಪಂಡಿತರು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಡುವ ಅನುಷ್ಠಾನವು ವ್ಯಕ್ತಿಯ ಕೈಹಿಡಿಯುತ್ತದೆ ಎಂತಲೂ ಹೇಳಲಾಗುತ್ತದೆ.

Follow Us:
Download App:
  • android
  • ios