Zodiac Psycology: ಈ ರಾಶಿಯ ಜನರು ಇತರರನ್ನು ಕಾಪಿ ಮಾಡೋದ್ರಲ್ಲಿ ನಿಪುಣ್ರಂತೆ
ಪ್ರತಿಯೊಬ್ಬ ವ್ಯಕ್ತಿಯ ಮನಸ್ಸು ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತೆ. ಪ್ರತಿಯೊಬ್ಬರಿಗೂ ಅವರವರ ಸೃಜನಶೀಲತೆ ಮತ್ತು ಇಷ್ಟ ಕಷ್ಟವೆಲ್ಲಾ ಇರುತ್ತೆ. ಆದರೆ ಕೆಲವು ಜನರು ತಮ್ಮ ಮನಸ್ಸಿನಲ್ಲಿದ್ದುದನ್ನು ಯಾವುದನ್ನೂ ಹಚ್ಚಿಕೊಳ್ಳೋದಿಲ್ಲ, ಆದರೆ ಇತರರ ಆಲೋಚನೆಗಳನ್ನು ನಕಲು ಮಾಡುತ್ತಾರೆ. ಜ್ಯೋತಿಷ್ಯದಲ್ಲಿ, ಅಂತಹ 5 ರಾಶಿಗಳನ್ನು ಹೇಳಲಾಗಿದೆ, ಇವರನ್ನು ಕಾಪಿ ಕ್ಯಾಟ್ ಎಂದು ಕರೆಯಲಾಗುತ್ತೆ. ಈ ರಾಶಿಗಳು ಯಾವುವು ಎಂದು ತಿಳಿಯಿರಿ.
ಮಿಥುನ ರಾಶಿ:(Gemini)
ಮಿಥುನ ರಾಶಿಯ ಜನರು ಇತರರ ಆಲೋಚನೆಗಳನ್ನು ನಕಲು ಮಾಡುವಲ್ಲಿ ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಅವರು ಇತರರ ಆಲೋಚನೆಗಳನ್ನು ಕದಿಯುತ್ತಾರೆ, ಆದರೆ ಅವರು ಸ್ವಂತ ಬುದ್ಧಿಜೀವಿಯಂತೆ ನಟಿಸುತ್ತಾರೆ. ಅವರು ಇತರರ ಆಲೋಚನೆಗಳನ್ನು ತಮ್ಮ ಸ್ವಂತ ಮನಸ್ಸಿನಿಂದ ಸೃಷ್ಟಿಸಿರುವಂತೆ ಇತರರಿಗೆ ಪ್ರಸ್ತುತಪಡಿಸಲು ಪ್ರಯತ್ನಿಸುತ್ತಾರೆ. ಅನೇಕ ಬಾರಿ ಅವರ ಈ ಬುದ್ಧಿವಂತಿಕೆಯು ಅವರನ್ನು ತೊಂದರೆಗೆ ಸಿಲುಕಿಸುತ್ತೆ. ಈ ರಾಶಿಯ ಜನರು ಆ ವಿಷಯದ ಬಗ್ಗೆ ತಮಗೆ ಎಲ್ಲವೂ ತಿಳಿದಿದೆ ಎಂದು ತೋರಿಸಲು ಪ್ರಯತ್ನಿಸುತ್ತಾರೆ.
ಕರ್ಕಾಟಕ ರಾಶಿ:(Cancer)
ಕರ್ಕಾಟಕ ರಾಶಿಯವರು ತಮ್ಮ ಭಾವನಾತ್ಮಕ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದರೂ, ಇತರರ ಆಲೋಚನೆಗಳನ್ನು ಕದಿಯುವ ವಿಷಯಕ್ಕೆ ಬಂದಾಗ, ಅವರ ಎಲ್ಲಾ ಎಮೋಷನ್ಸ್ ಒಂದು ಬದಿಯಲ್ಲಿಡುತ್ತಾರೆ. ಇತರ ಭಾವನೆಯೊಂದಿಗೆ ಆಡುವ ಮೂಲಕ ಅವರ ಮನಸ್ಸಿನಲ್ಲಿ ಏನು ವ್ಯತ್ಯಾಸವಾಗುತ್ತಿದೆ ತಿಳಿಯಲು ಪ್ರಯತ್ನಿಸುತ್ತಾರೆ.
ಈ ರಾಶಿಯವರು ತಮ್ಮ ಎದುರು ಇರುವವರ ಉದ್ದೇಶಗಳನ್ನು ಅರ್ಥಮಾಡಿಕೊಂಡಾಗ, ಇವರು ಅವರ ಮುಂದೆ ತುಂಬಾ ಮುಗ್ಧರಾಗಲು ಪ್ರಯತ್ನಿಸುತ್ತಾರೆ. ಇವರ ಮಾತುಗಳಿಂದ, ಇಡೀ ಭೂಮಿಯ ಮೇಲೆ ಅವರಿಗಿಂತ ಹೆಚ್ಚು ಮೂರ್ಖ ವ್ಯಕ್ತಿ ಯಾರೂ ಇಲ್ಲ ಎಂದು ತೋರುತ್ತೆ. ಕೆಲವೊಮ್ಮೆ ಇವರು ಭಾವನಾತ್ಮಕ ಮಾತುಗಳಿಂದಲೇ ಜನರನ್ನು ಮೋಡಿ ಮೋಡುತ್ತಾರೆ.
ತುಲಾ ರಾಶಿ:(Libra)
ತುಲಾ ರಾಶಿಯ ಜನರು ವಿಭಿನ್ನವಾದದ್ದನ್ನು ಮಾಡಲು ಅಥವಾ ಹೊಸದನ್ನು ಪ್ರಯತ್ನಿಸಲು ಸ್ವಲ್ಪ ಹಿಂಜರಿಯುತ್ತಾರೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿಯೇ ಅವರ ಇಡೀ ಜೀವನವು ಇತರರನ್ನು ಹಿಂಬಾಲಿಸುವುದರಲ್ಲಿ ಅಥವಾ ಅವರನ್ನು ಅನುಕರಿಸುವುದರಲ್ಲಿ ಕಳೆಯುತ್ತೆ.
ತುಲಾ ರಾಶಿಯವರು ವಿಫಲರಾಗುವ ಭಯದಲ್ಲಿರುತ್ತಾರೆ, ಆದ್ದರಿಂದ ಯಾವಾಗಲೂ ಯಾವುದೇ ವಿಷಯಗಳನ್ನು ತಮ್ಮ ಮನಸಿನಲ್ಲಿ ಹಚ್ಚಿಕೊಳ್ಳುವ ಬದಲು ಇತರರನ್ನು ಅನುಸರಿಸುತ್ತಾರೆ. ಅವರ ಅಭ್ಯಾಸ ಎಷ್ಟಿವೆಯೆಂದರೆ ಅವರು ಇತರರನ್ನು ಕಾಪಿ (Copy) ಮಾಡಲು ಸಹ ಹಿಂಜರಿಯೋದಿಲ್ಲ. ಅನೇಕ ಬಾರಿ ಅವರು ಇತರರಿಂದ ಪ್ರೇರಿತರಾದ ನಂತರವೂ ಅವರನ್ನು ಅನುಸರಿಸುತ್ತಾರೆ.
ಧನು ರಾಶಿ:(Sagittarius)
ಧನು ರಾಶಿಯ ಜನರು ಇತರರನ್ನು ನಕಲು ಮಾಡುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ, ಆದರೆ ಒಳ್ಳೆಯ ವಿಷಯವೆಂದ್ರೆ ಇವರು ಯಾರ ಆಲೋಚನೆಗಳನ್ನು ಕಾಪಿ ಮಾಡುತ್ತಾರೋ ಆ ವ್ಯಕ್ತಿಯು ಇವರೊಂದಿಗೆ ಸಂತೋಷವಾಗಿರುತ್ತಾನೆ ಮತ್ತು ಇಬ್ಬರ ನಡುವಿನ ಸಂಬಂಧವು ಬಲಗೊಳ್ಳುತ್ತೆ.
ಧನು ರಾಶಿಯವರ ವಿಶೇಷವೆಂದರೆ ಇವರು ಯಾವುದೇ ಹೊಸ ಪರಿಸರಕ್ಕೆ ಹೋದರೂ ಸಹ, ಇವರು ಅಲ್ಲಿ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಾರೆ. ಇತರರನ್ನು ಮೆಚ್ಚಿಸಲು ಇವರು ಅವರನ್ನು ಅನೇಕ ಬಾರಿ ಕಾಪಿ ಮಾಡುತ್ತಾರೆ. ಇದರಿಂದ ಎದುರಿರುವವರು ಇಂಪ್ರೆಸ್ (Impress) ಕೂಡ ಆಗುತ್ತಾರೆ. ಜೊತೆಗೆ ಇವರೊಂದಿಗೆ ಉತ್ತಮ ಭಾಂದವ್ಯ ಸಹ ಹೊಂದುತ್ತಾರೆ.
ಮೀನ ರಾಶಿ:(Pisces)
ಮೀನ ರಾಶಿಯ ಜನರು ಇತರರ ಮೇಲೆ ಪ್ರಭಾವ ಬೀರಲು ಅವರನ್ನು ನಕಲು ಮಾಡಲು ಪ್ರಾರಂಭಿಸುತ್ತಾರೆ ಎಂದು ಹೇಳಲಾಗುತ್ತೆ. ಅಂತಹ ಜನರು ಯಾವುದೇ ಸಾರ್ವಜನಿಕ ವೇದಿಕೆಯಾಗಿರಲಿ, ಎಲ್ಲೆಡೆ ಹೊಗಳಿಕೆ ಪಡೆಯಲು ಪ್ರಯತ್ನಿಸುತ್ತಾರೆ. ಈ ಜನರು ಇತರರ ಉಡುಪನ್ನು ನಕಲು ಮಾಡಲು ಹಿಂಜರಿಯೋದಿಲ್ಲ. ಇವರು ತಮ್ಮನ್ನು ತಾವು ಆದರ್ಶವೆಂದು ಪರಿಗಣಿಸುತ್ತಾರೆ.