Asianet Suvarna News Asianet Suvarna News

Zodiacs Compatibility: ಧನು ರಾಶಿಗೂ ಮೇಷಕ್ಕೂ ಸಂಬಂಧ ಹೊಂದುತ್ತಾ?

ನಿಮ್ಮ ರಾಶಿಯು ಧನು ಅಥವಾ ಮೇಷವಾಗಿದ್ದರೆ, ನಿಮಗೆ ಮೇಷ ಇಲ್ಲವೇ ಧನುವಿನೊಂದಿಗೆ ಸಂಬಂಧ ಏರ್ಪಡುತ್ತಿದ್ದರೆ, ಮುಂದಿನ ಭವಿಷ್ಯ ಹೇಗಿರಲಿದೆ? ಈ ಎರಡು ರಾಶಿಗಳ ಹೊಂದಾಣಿಕೆ ಹೇಗಿರುವುದು? ಪೋಷಕ-ಮಗುವಾಗಿ, ಬಾಸ್- ಉದ್ಯೋಗಿಯಾಗಿ, ಸಂಗಾತಿಗಳಾಗಿ ಈ ರಾಶಿಗಳ ನಡುವಿನ ಹೊಂದಾಣಿಕೆ ಹೇಗಿರಲಿದೆ ಎಂದು ಇಲ್ಲಿ ತಿಳಿಯಿರಿ..

How is the relation of Aries with Sagittarius skr
Author
First Published Sep 3, 2022, 9:44 AM IST

ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರು ಕೆಲವು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ವ್ಯಕ್ತಿಯಿಂದ ವ್ಯಕ್ತಿಗೂ ವಿಭಿನ್ನ ಸ್ವಭಾವವೇ ಇರುತ್ತದೆ. ಹಾಗಿದ್ದೂ, ಒಂದೇ ರಾಶಿಯ ಜನರ ಸ್ವಭಾವದಲ್ಲಿ ಕೆಲ ಸಾಮ್ಯತೆಗಳಿರುತ್ತವೆ. ಈ ಆಧಾರದಲ್ಲಿ ಎಲ್ಲ ರಾಶಿಗಳ ಸ್ವಭಾವವನ್ನು ಜ್ಯೋತಿಷ್ಯದಲ್ಲಿ ಕಂಡುಕೊಳ್ಳಲಾಗಿದೆ. ಈ ಮೂಲಕ ಯಾವ ರಾಶಿಗೆ ಯಾವ ರಾಶಿಯವರು ಸ್ನೇಹಿತರಾಗಬಲ್ಲರು, ಯಾರು ಶತ್ರುವಾಗಬಲ್ಲರು, ಯಾವೆರಡು ರಾಶಿಗಳ ನಡುವೆ ಹೊಂದಾಣಿಕೆ ಚೆನ್ನಾಗಿರುತ್ತದೆ ಎಲ್ಲವನ್ನೂ ತಿಳಿಯಬಹುದು. ಜಾತಕ(horoscope) ನೋಡುವಾಗ ಕೂಡಾ ಇದನ್ನೇ ಮಾಡಲಾಗುತ್ತದೆ. 

ಕೆಲವು ರಾಶಿಚಕ್ರದ ಚಿಹ್ನೆಗಳು ಕೋಪದ ಸ್ವಭಾವದವರಾಗಿದ್ದರೆ, ಕೆಲವು ರಾಶಿಚಕ್ರ(Zodiac sign)ದ ಜನರು ಸೌಮ್ಯ ಸ್ವಭಾವದವರಾಗಿರುತ್ತಾರೆ. ಸಂಬಂಧಗಳ ಮಾಧುರ್ಯದ ವಿಷಯಕ್ಕೆ ಬಂದರೆ, ಪ್ರತಿಯೊಬ್ಬರೂ ಪರಸ್ಪರ ವಿಭಿನ್ನ ಸಂಬಂಧ(relationship)ವನ್ನು ಹೊಂದಿರುತ್ತಾರೆ. ಈಗ ಮೇಷ ರಾಶಿಯೊಂದಿಗೆ ಧನು ರಾಶಿಯ ಹೊಂದಾಣಿಕೆ ಹೇಗಿರುತ್ತದೆ ತಿಳಿಯೋಣ. ಈ ಎರಡು ರಾಶಿಯವರು ಲೈಫ್ ಪಾರ್ಟ್ನರ್ಸ್ ಆಗಬಹುದೇ? ಅವರ ನಡುವೆ ಪ್ರೀತಿ ಶಾಶ್ವತವಾಗಿರುವುದೇ ನೋಡೋಣ. 

ಮೇಷ ರಾಶಿಯ ಸ್ವಭಾವ
ಮೇಷ ರಾಶಿ(Aries)ಯವರು ಸ್ವಭಾವತಃ ಹಣದ ಜನರು. ಈ ಮನೋಧರ್ಮವು ಅವರನ್ನು ಆರ್ಥಿಕ ನಿರ್ವಹಣೆಯಲ್ಲಿ ಉತ್ತಮಗೊಳಿಸುತ್ತದೆ. ಕೆಲವೊಮ್ಮೆ ಅವರು ಇತರರನ್ನು ಕುರುಡಾಗಿ ನಂಬುತ್ತಾರೆ ಮತ್ತು ಏನಾದರೂ ತಪ್ಪಾದಲ್ಲಿ ಅವರು ತಮ್ಮ ಜೀವನದುದ್ದಕ್ಕೂ ವಿಷಾದಿಸುತ್ತಾರೆ.

Astrology Tips: ಕಾಗೆ ನಿಮ್ಮ ಮುಂದೆ ಹೀಗೆ ಮಾಡಿದ್ರೆ ಸಾವು ನಿಶ್ಚಿತ

ಮೇಷ ಮತ್ತು ಧನು ರಾಶಿಯ ಸ್ನೇಹಿತರು ಹೇಗಿರುತ್ತಾರೆ?
ಮೇಷ ರಾಶಿಯವರು ಧನು ರಾಶಿ(Sagittarius)ಗೆ ಅಷ್ಟಾಗಿ ಉತ್ತಮ ಸ್ನೇಹಿತನಲ್ಲ. ಎರಡೂ ಕಡೆ ಗೌರವ ಮತ್ತು ತಿಳುವಳಿಕೆ ಇದ್ದರೆ ಸ್ನೇಹ ಮುಂದುವರಿಯುತ್ತದೆ. ಮೇಷ ಮತ್ತು ಧನು ರಾಶಿ ಇಬ್ಬರೂ ಸ್ವತಂತ್ರ ಮನೋಭಾವದವರು ಮತ್ತು ಕೆಲವೊಮ್ಮೆ ಘರ್ಷಣೆಗೆ ಒಳಗಾಗುವ ತಮ್ಮದೇ ಆದ ಆಲೋಚನೆಗಳನ್ನು ಹೊಂದಿದ್ದಾರೆ. ಮೇಷ ರಾಶಿಯು ಯಾವಾಗಲೂ ಧನು ರಾಶಿಯವರು ತಮ್ಮ ಮಾತುಗಳನ್ನು ಕೇಳಬೇಕು ಮತ್ತು ಕಠಿಣವಾದ ತಮ್ಮ ಮಾರ್ಗವನ್ನು ಅನುಸರಿಸಬೇಕು ಎಂದು ಬಯಸುತ್ತಾರೆ. ಅಲ್ಲದೆ ಮೇಷ ರಾಶಿಯವರಿಗೆ ಕೋಪ ಹೆಚ್ಚು. ಇನ್ನು ಧನುವು ಯಾರ ಮಾತನ್ನೂ ಕೇಳಲು ಬಯಸುವುದಿಲ್ಲ. ಸ್ವತಂತ್ರವಾಗಿರುವುದೇ ಅವರ ಬಯಕೆ. ಹೆಚ್ಚಿನ ಸಂದರ್ಭಗಳಲ್ಲಿ ಈ ರಾಶಿಗಳ ನಡುವೆ ಯಾವುದೇ ಹೊಂದಾಣಿಕೆ ಇರುವುದಿಲ್ಲ.

ಮೇಷ ಮತ್ತು ಧನು ರಾಶಿ ಜೀವನ ಸಂಗಾತಿಯಾಗಿ ಹೇಗಿರುತ್ತಾರೆ?
ಧನು ರಾಶಿಯೊಂದಿಗೆ ಮೇಷ ರಾಶಿಯ ಹೊಂದಾಣಿಕೆಯು ಪಾಲುದಾರನಾಗಿ ಉತ್ತಮವಾಗಿರುವುದಿಲ್ಲ. ಬಲವಂತವಿಲ್ಲದಿದ್ದರೆ, ಧನು ರಾಶಿಯು ಮೇಷ ರಾಶಿಯೊಂದಿಗೆ ಎಂದಿಗೂ ಸಂತೋಷದಿಂದ ಬದುಕುವುದಿಲ್ಲ. ಮೇಷ ರಾಶಿಯವರಿಗೆ ಧನು ರಾಶಿಯನ್ನು ಎದುರಿಸಲು ಕಷ್ಟವಾಗುತ್ತದೆ. ಅವೆರಡೂ ವಿಪರೀತದ ಸ್ವಭಾವದವು, ಕುರುಡು ಪ್ರೀತಿ ಅಥವಾ ಕೆಲವು ರೀತಿಯ ಅವಲಂಬನೆ ಮಾತ್ರ ಅವರನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಲು ಸಾಧ್ಯ. 

ಪೋಷಕರು ಮತ್ತು ಮಕ್ಕಳಾಗಿ ಮೇಷ ಮತ್ತು ಧನು ರಾಶಿ ಸಂಬಂಧ
ಮೇಷ ರಾಶಿಯು ಪೋಷಕನಿಗೆ(parent) ಧನು ರಾಶಿಯ ಮಗು(Child)ವಿದ್ದರೆ ಅವರಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇರುವುದು. ಮೇಷ ರಾಶಿಯ ಪೋಷಕರು ಧನು ರಾಶಿಯನ್ನು ಸರಿಯಾದ ಮಾರ್ಗದಲ್ಲಿ ವಿಶೇಷವಾಗಿ ವೃತ್ತಿಜೀವನದ ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಾರೆ. ಮತ್ತು ಧನು ರಾಶಿಯ ಮಗು ಮೇಷ ರಾಶಿಯ ಪೋಷಕರ ಮಾತನ್ನು ಕೇಳುತ್ತದೆ. 

Zodiac Sign Special: ಜನ್ಮರಾಶಿಯ ಪ್ರಕಾರ ಇದನ್ನು ಸಾಧಿಸದೇ ನೀವು ಸಾಯುವುದಿಲ್ಲ!

ಬಾಸ್ ಮತ್ತು ಉದ್ಯೋಗಿಯಾಗಿ ಮೇಷ ಮತ್ತು ಧನು ರಾಶಿ
ಮೇಷ ಮತ್ತು ಧನು ರಾಶಿಯವರು ಬಾಸ್ ಮತ್ತು ಉದ್ಯೋಗಿ ಸಂಬಂಧಗಳ ಅಡಿಯಲ್ಲಿ ಪರಸ್ಪರ ಉತ್ತಮವಾಗಿ ಕಂಪನಿಯನ್ನು ನಿರ್ವಹಿಸುತ್ತಾರೆ. ಧನು ರಾಶಿ ಉದ್ಯೋಗಿ ಸ್ವಭಾವತಃ ಒಳ್ಳೆಯ ಕೆಲಸಗಾರರು. ಮೇಷ ರಾಶಿಯ ಮುಖ್ಯಸ್ಥರು ವಿಷಯಗಳನ್ನು ಸರಿಯಾಗಿ ಯೋಜಿಸುತ್ತಾರೆ. ಧನು ರಾಶಿಯ ಮುಖ್ಯಸ್ಥರು ಮೇಷ ರಾಶಿಯನ್ನು ಹೆಚ್ಚು ಸೃಜನಶೀಲರಾಗಿರಲು ಮತ್ತು ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಪ್ರೋತ್ಸಾಹಿಸುತ್ತಾರೆ. ಮೇಲಿನ ಎರಡೂ ಸಂದರ್ಭಗಳಲ್ಲಿ, ಧನು ರಾಶಿ ಮತ್ತು ಮೇಷವು ವೃತ್ತಿಪರವಾಗಿ ಲಾಭವನ್ನು ನೀಡುತ್ತದೆ.

Follow Us:
Download App:
  • android
  • ios