Zodiac Sign: ಸ್ನೇಹಿತರು ಅವಾಯ್ಡ್‌ ಮಾಡ್ತಾರಾ? ಯೋಚ್ನೆ ಮಾಡಿ

ಕೆಲ ರಾಶಿಗಳ ಜನ ಸ್ನೇಹಿತರಿಂದ ನಿರ್ಲಕ್ಷ್ಯಕ್ಕೆ ತುತ್ತಾಗುತ್ತಾರೆ. ಕೆಲವು ಗುಣದಿಂದಾಗಿ ಇವರು ಸ್ನೇಹ ವಲಯದಲ್ಲಿ ಅಷ್ಟೊಂದು ಆತ್ಮೀಯರಾಗಿ ಉಳಿಯುವುದಿಲ್ಲ. ಸ್ನೇಹಕ್ಕೂ ಅದರದ್ದೇ ಮಿತಿಗಳಿರುತ್ತವೆ ಎನ್ನುವುದು ಸತ್ಯವಾದ ಮಾತು.

 

These zodiac sings frequently ignored by friends

ಸ್ನೇಹಿತರ ಜತೆ ಒಡನಾಡುವುದು ಎಲ್ಲರಿಗೂ ಖುಷಿ ಎನಿಸುವ ಸಂಗತಿ. ಆದರೂ ಕೆಲವೊಮ್ಮೆ ಸ್ನೇಹಿತರ ನಡುವೆ ಮುಜುಗರದ ಸನ್ನಿವೇಶಗಳೂ ಘಟಿಸಿ ಹೋಗುತ್ತವೆ. ಮಾತನಾಡುವ ಭರದಲ್ಲಿ ನಮ್ಮದೇ ತಪ್ಪು ಮಾತುಗಳಿಂದಲೋ, ಅವರ ತಪ್ಪು ಗ್ರಹಿಕೆಯಿಂದಲೋ ಒಟ್ಟಿನಲ್ಲಿ ಕೆಲವೊಮ್ಮೆ ಬೇಸರ, ಮುಜುಗರದ ಘಟನೆಗಳು ನಡೆದುಬಿಡುತ್ತವೆ. ಅವು ದೀರ್ಘಕಾಲ ಸಂಬಂಧದಲ್ಲಿ ಅಸಮಾಧಾನ ಮೂಡಿಸಲೂ ಕಾರಣವಾಗುತ್ತವೆ. ಸ್ನೇಹಿತರ ವಲಯದಲ್ಲಿ ಸದಾಕಾಲ ಗ್ರೇಟ್‌ ಎನಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಏನಾದರೊಂದು ಕಾರಣದಿಂದ ಆಗಾಗ ಸಣ್ಣಪುಟ್ಟ ಕಿರಿಕಿರಿಗಳೂ ನಡೆಯಬಹುದು. ಆದರೆ, ನಿಮಗೆ ಯಾವತ್ತಾದರೂ ಸ್ನೇಹಿತರು ನಿಮ್ಮನ್ನು ಅವಾಯ್ಡ್‌ ಮಾಡುತ್ತಿದ್ದಾರೆ, ಅವರ ವಲಯಕ್ಕೆ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಅಥವಾ ನಿಮ್ಮನ್ನು ಸ್ವಲ್ಪ ದೂರವಿಡುತ್ತಿದ್ದಾರೆ ಎಂದು ಎನಿಸುತ್ತಿದೆಯೇ? ನಿಮ್ಮ ಬಗ್ಗೆ ಅವರು ಮಾತನಾಡಿಕೊಳ್ಳುತ್ತಾರೆಯೇ?ಹಾಗಿದ್ದರೆ ನಿಮ್ಮದು ಯಾವ ರಾಶಿ ಎಂದು ಕೇಳಬೇಕಾಗುತ್ತದೆ! ಏಕೆಂದರೆ, ಕೆಲವು ರಾಶಿಗಳ ಜನ ಸ್ನೇಹ ವಲಯದಲ್ಲಿ ಪದೇ ಪದೆ ಅವಗಣನೆಗೆ ತುತ್ತಾಗುತ್ತಿರುತ್ತಾರೆ. ಯಾವಾಗಲೋ ಒಮ್ಮೆ ಹೀಗಾದರೆ ಪರವಾಗಿಲ್ಲ, ಆದರೆ ಪದೇ ಪದೆ ಹೀಗಾದರೆ ಅದೊಂಥರ ವ್ಯಕ್ತಿತ್ವಕ್ಕೆ ಅಗೌರವ ಸೂಚಿಸಿದಂತೆ ಆಗುತ್ತದೆ. ನಿಮಗೂ ಹೀಗೆಯೆ ಆಗುತ್ತಿದ್ದರೆ ಬೇಸರ ಬೇಡ, ಅದಕ್ಕೆ ನಿಮ್ಮ ರಾಶಿ ಹಾಗೂ ಕೆಲವು ಗುಣಗಳು ಕಾರಣ.

•    ಮೀನ (Pisces)
ಮೀನ ರಾಶಿಯ (Zodiac Sign) ಜನರಿಗೆ ಸ್ನೇಹಿತರೆಂದರೆ (Friend) ಭಾರೀ ಇಷ್ಟ. ಆದರೆ, ಇವರಿಗೆ ಖಾಸಗಿ (Privacy) ಗುಟ್ಟನ್ನು ಕಾಪಾಡಲು ಬರುವುದಿಲ್ಲ. ಮೀನ ರಾಶಿಯವರು ತಿಳಿದುಕೊಳ್ಳಬೇಕಾದ ವಿಚಾರವೆಂದರೆ, ಕೆಲವು ಜನ ತಮ್ಮ ಖಾಸಗಿತನಕ್ಕೆ ಅಪಾರ ಬೆಲೆ ನೀಡುತ್ತಾರೆ. ಕೆಲವು ಖಾಸಗಿ ವಿಚಾರಗಳನ್ನು ಅವರು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಆದರೆ, ಮೀನ ರಾಶಿಯವರು ಇದಕ್ಕೆಲ್ಲ ಬೆಲೆ (Respect) ನೀಡುವುದನ್ನು ಮರೆತುಬಿಡುತ್ತಾರೆ. ಸ್ನೇಹಿತರ ನಡುವೆ ಸಲುಗೆ ಇರುವುದು ನಿಜವಾದರೂ ಅದರಲ್ಲೂ ಒಂದು ಚೌಕಟ್ಟು (Boundary) ಇರಬೇಕಾಗುತ್ತದೆ. ಅದನ್ನು ಮೀರಿ ವರ್ತಿಸಿದರೆ ಅವರಿಗೆ ಬೇಸರವಾಗಬಹುದು. ಇದೇ ಗುಣ ಮುಂದುವರಿಸಿದರೆ ಸ್ನೇಹ ಬಳಗ ದೂರವಿಡಲು ಆರಂಭಿಸುತ್ತದೆ. 

ಇದನ್ನೂ ಓದಿ: ನಿಮಗೆ ಎಷ್ಟು ಮದುವೆಯಾಗೋ ಯೋಗವಿದೆ? ನಿಮ್ಮ ಜಾತಕ ಏನನ್ನುತ್ತೆ?

•    ವೃಷಭ (Taurus)
ಈ ರಾಶಿಯ ಜನ ಸ್ವಲ್ಪ ಸೋಮಾರಿಗಳು (Lazy) ಹಾಗೂ ಮನೆಯೆಂದರೆ ಸರ್ವಸ್ವ. ತಾವು ಕಂಫರ್ಟ್‌ (Comfort) ವಲಯದಲ್ಲಿರುವಾಗ ಇತರರನ್ನು ವರ್ಗೀಕರಿಸಿ ದೂರವಿಡುತ್ತಾರೆ. ಅದನ್ನಿವರು ಬೇಕೆಂದೇ ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ. ಆದರೆ, ಈ ಗುಣ ಇತರರಿಗೆ ಸೊಕ್ಕು ಎನ್ನುವಂತೆ ತೋರುತ್ತದೆ. ಧಾರ್ಷ್ಟ್ಯತನವಾಗಿ ಕಾಣುತ್ತದೆ. ನಿಗದಿತ ಜನ ಹಾಗೂ ಮನೆಗೆ ಸೀಮಿತವಾಗಿ ಇರುವುದರಿಂದ ಕೆಲವೊಮ್ಮೆ ಸ್ನೇಹಿತರು ಇವರನ್ನು ದೂರವಿಡುತ್ತಾರೆ. ಅಲ್ಲದೆ, ತಮಗೆ ಬೇಕೆಂದಾಗ ಇವರು ನಿಗದಿತ ಯೋಜನೆಯನ್ನು ರದ್ದು (Cancel) ಮಾಡಿಬಿಡುತ್ತಾರೆ. ಹೀಗಾಗಿ, ಇವರನ್ನೂ ಸೇರಿಸಿಕೊಂಡು ಪ್ಲ್ಯಾನ್‌ (Plan) ಮಾಡುವುದನ್ನು ಸ್ನೇಹಿತರು ಬಿಟ್ಟುಬಿಡುತ್ತಾರೆ.

•    ಕರ್ಕಾಟಕ (Cancer)
ಕರ್ಕಾಟಕ ರಾಶಿಯವರು ಅಟ್ಯಾಚ್ಮೆಂಟಿಗೆ (Attachment) ಮತ್ತೊಂದು ಹೆಸರು. ಇತರರ ಬಗ್ಗೆ ಸಹಾನುಭೂತಿ (Empathetic) ಹೊಂದಿರುತ್ತಾರೆ, ಹಾಗೆಯೇ ಅವರಿಗೆ ತೀರ ಅಂಟಿಕೊಳ್ಳುತ್ತಾರೆ. ದೈನಂದಿನ ಪ್ರತಿಯೊಂದು ಆಗುಹೋಗುಗಳನ್ನು ಹೇಳಿಕೊಳ್ಳಬೇಕು ಎನ್ನುವಷ್ಟರ ಮಟ್ಟಿಗೆ ನಿಕಟ ಸಂಪರ್ಕ (Close Contact)ದಲ್ಲಿರುತ್ತಾರೆ. ಉದಾಹರಣೆಗೆ, ಸ್ನೇಹಿತರೊಂದಿಗೆ ದಿನವೂ ಫೋನ್‌ ಮಾಡಿ ಮಾತನಾಡಲು ಇಷ್ಟಪಡುತ್ತಾರೆ. ಆದರೆ, ಆಗ ತಾನೇ ಸುಸ್ತಾಗಿ ಮನೆಗೆ ಬಂದಿರುವ ಸ್ನೇಹಿತ ಇವರ ಕಾಲ್‌ ಅನ್ನು ಅವಾಯ್ಡ್‌ (Avoid) ಮಾಡಬಹುದು. ಅತಿಯಾಗಿ ಅಂಟಿಕೊಳ್ಳುವ ಗುಣದಿಂದಲೇ ಕೆಲವು ಸ್ನೇಹಿತರು ಇವರನ್ನು ದೂರವಿಡುತ್ತಾರೆ.

ಇದನ್ನೂ ಓದಿ: Zodiac Sign: ಈ ರಾಶಿಯವರು ಸಂಬಂಧಗಳಿಗೆ ತುಂಬಾ ಬೆಲೆ ನೀಡುತ್ತಾರೆ

•    ತುಲಾ (Libra)
ತುಲಾ ರಾಶಿಯ ಜನ ಅತಿಯಾಗಿ ಚಿಂತನೆ ಮಾಡುವವರು. ಆದರೆ, ಸ್ನೇಹಿತರ ಜತೆಗೂಡಿ ತಾವೇ ಮಾಡಿದ ಪ್ಲಾನ್‌ ಅನ್ನು ಮರೆಯಬಲ್ಲರು. ಸ್ನೇಹಿತರ ವಲಯಕ್ಕೆ ಬದ್ಧರಾಗಿ ಇರುವುದಿಲ್ಲ. ಈ ಗುಣವೇ ಇವರನ್ನು ಸ್ನೇಹಿತರಿಂದ ದೂರ ಮಾಡುತ್ತದೆ. ಪದೇ ಪದೆ ಹೀಗಾಗುತ್ತಿದ್ದರೆ ಇವರನ್ನು ಯಾರೂ ನಂಬುವುದಿಲ್ಲ. ಆದರೆ, ತಮಗೆ ಅಗತ್ಯವಿದ್ದಾಗ ಇವರ ಸಹಕಾರ (Help) ಪಡೆದುಕೊಳ್ಳುತ್ತಾರೆ. ಅನಗತ್ಯವೆಂದು ಕಂಡುಬಂದಾಗ ದೂರವಿಡುತ್ತಾರೆ. 
 

Latest Videos
Follow Us:
Download App:
  • android
  • ios