Calendar with Gods Photo: ಮನೆಯಲ್ಲಿ ದೇವರ ಫೋಟೊ ಇರುವ ಕ್ಯಾಲೆಂಡರ್ ಇಡೋದು ಸರೀನಾ?
ನಮ್ಮ ಮನೆಗಳಲ್ಲಿ ದೇವರುಗಳಿರುವ ಕ್ಯಾಲೆಂಡರ್‌ಗಳು ಹೆಚ್ಚಾಗಿ ಇರುತ್ತವೆ, ಆದರೆ ಅವುಗಳನ್ನು ಹಾಕುವುದು ಸರಿಯೋ ಇಲ್ಲವೋ ಎಂದು ನಿಮಗೆ ತಿಳಿದಿದೆಯೇ?

ಸಾಮಾನ್ಯವಾಗಿ ಹಿಂದೂಗಳು ತಮ್ಮ ಮನೆಯಲ್ಲಿ ದೇವರು ಮತ್ತು ದೇವತೆಗಳ ಫೋಟೋಗಳನ್ನು ಹೊಂದಿರುವ ಕ್ಯಾಲೆಂಡರ್ (Hindu Calendar) ಅನ್ನ ಹಾಕುತ್ತಾರೆ. ಆದಾರೆ ವಾಸ್ತು ಶಾಸ್ತ್ರಗಳ ಪ್ರಕಾರ, ಈ ರೀತಿ ದೇವರ ಫೋಟೊ ಇರುವಂತಹ ಕ್ಯಾಲೆಂಡರ್ ಹಾಕೋದು ಸರೀನಾ?
ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ದೇವರ ಫೋಟೊ ಇರುವಂತಹ ಕ್ಯಾಲೆಂಡರ್ ಮನೆಯಲ್ಲಿ ಇಡೋದು ಸರಿ. ಆದರೆ ಕೆಲವು ನಿಯಮಗಳು ಮತ್ತು ನಿರ್ದೇಶನಗಳನ್ನು ಪಾಲಿಸಿದರೆ ಮಾತ್ರ ಅದೃಷ್ಟ ಪ್ರಾಪ್ತಿಯಾಗುತ್ತದೆ.
ದೇವರು ಮತ್ತು ದೇವತೆಗಳ ಚಿತ್ರಗಳಿರುವ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಸರಿಯಾದ ನಿಯಮಗಳೊಂದಿಗೆ ಇರಿಸಿದರೆ ಮಾತ್ರ ನಿಮ್ಮ ಮನೆಗೆ ಒಳ್ಳೆಯದಾಗುತ್ತೆ. ಇಲ್ಲವಾದರೆ ಅದರಿಂದಾ ಯಾವ ಪ್ರಯೋಜನಗಳು ಸಹ ಇರೋದಿಲ್ಲ.
ಮನೆಯಲ್ಲಿ ದೇವರ ಫೋಟೊ ಇರುವಂತಹ ಕ್ಯಾಲೆಂಡರ್ ಹಾಕೋದರಿಂದ ಸಕಾರಾತ್ಮಕ ಶಕ್ತಿ (positive energy), ಸಂತೋಷ, ಸಮೃದ್ಧಿ ಮತ್ತು ಆಧ್ಯಾತ್ಮಿಕ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಮನೆ ಮಂದಿಗೂ ಕೂಡ ಶುಭವಾಗುತ್ತೆ.
ಕ್ಯಾಲೆಂಡರ್‌ನಲ್ಲಿ ದೇವರು ಮತ್ತು ದೇವತೆಗಳ ಚಿತ್ರಗಳಿದ್ದರೆ ಮನೆಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದ ಪಾಸಿಟಿವಿಟಿ ಮನೆಯಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗುತ್ತದೆ. ನೀವು ಅಂದುಕೊಂಡ ಕೆಲಸ ನಡೆಯುತ್ತೆ.
ಯಾವ ದಿಕ್ಕಿನಲ್ಲಿ ಈ ಕ್ಯಾಲೆಂಡರ್ ಇಡೋದು ಶುಭ ಅನ್ನೋದನ್ನು ನೋಡೋಣ. ಪೂರ್ವ ದಿಕ್ಕು ಸೂರ್ಯೋದಯದ ದಿಕ್ಕು ಮತ್ತು ಹೊಸ ಆರಂಭ ಮತ್ತು ಯಶಸ್ಸನ್ನು ಸಂಕೇತಿಸುವುದರಿಂದ ಆ ದಿಕ್ಕಿನಲ್ಲಿ ದೇವರ ಫೋಟೊ ಇರುವ ಕ್ಯಾಲೆಂಡರ್ ಇಡೋದು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಅದೇ ರೀತಿ ಉತ್ತರ ದಿಕ್ಕನ್ನು ಸಂಪತ್ತಿನ ದೇವರು ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಇಟ್ಟರೆ ಕುಬೇರನ (Lord Kubera) ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ. ಇನ್ನು ಕೊನೆಯದಾಗಿ ಪಶ್ಚಿಮವು ಹರಿವಿನ ದಿಕ್ಕು, ಇದು ಜೀವನದಲ್ಲಿ ದಕ್ಷತೆ ಮತ್ತು ವೇಗವನ್ನು ಪ್ರತಿನಿಧಿಸುತ್ತದೆ. ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಅನ್ನು ಇಡುವುದರಿಂದ ಕೆಲಸವು ವೇಗಗೊಳ್ಳುತ್ತದೆ.