ನೆಮ್ಮದಿ ನೀಡುವ ತಾಣ ಮನೆ. ಅಲ್ಲಿಯೇ ಅಶಾಂತಿ ನೆಲೆಸಿದ್ರೆ ಜೀವನ ಕಷ್ಟ. ಹೊಸ ಮನೆ ಕಟ್ಟಿದ್ರೆ ಆಗ್ಲಿಲ್ಲ, ಸಣ್ಣಪುಟ್ಟ ವಿಷ್ಯಗಳ ಬಗ್ಗೆ ಗಮನ ಹರಿಸಿದ್ರೆ ಮಾತ್ರ ಜೀವನ ಸುಖವಾಗಿರಲು ಸಾಧ್ಯ
ಸ್ವಂತ ಮನೆ (own house) ಪ್ರತಿಯೊಬ್ಬರ ಕನಸು. ಜೀವನ ಪರ್ಯಂತ ಹಣ ಕೂಡಿಹಾಕಿ, ಸಾಲ ಮಾಡಿ ಮನೆ ಕಟ್ಟುತ್ತಾರೆ .ಆದ್ರೆ ಹೊಸ ಮನೆ ಪ್ರವೇಶ ಮಾಡಿದ ನಂತ್ರ ನಾನಾ ಸಮಸ್ಯೆಗಳನ್ನು ಜನರು ಎದುರಿಸೋದಿದೆ. ಹಳೆ ಬಾಡಿಗೆ ಮನೆಯೇ ವಾಸಿಯಿತ್ತು ಎನ್ನುವ ಸ್ಥಿತಿ ಅನೇಕರಿಗೆ ಬರುತ್ತೆ. ನಿಮ್ಮಿಷ್ಟದಂತೆ ಅದ್ಧೂರಿಯಾಗಿ ಮನೆ ನಿರ್ಮಾಣ ಮಾಡಿ, ಒಂದಿಷ್ಟು ಹಣ ಖರ್ಚು ಮಾಡಿ ಗೃಹ ಪ್ರವೇಶ ಮಾಡಿದ್ರೆ ಮುಗಿಯಲಿಲ್ಲ. ಗೃಹ ಪ್ರವೇಶದ ವೇಳೆ ಕೆಲವೊಂದು ವಿಷ್ಯಗಳನ್ನು ತಪ್ಪದೆ ಪಾಲನೆ ಮಾಡ್ಬೇಕು. ಹಾಗೆ ಮಾಡಿದ್ರೆ ಬಾಗಿಲು ಒದ್ದು ಲಕ್ಷ್ಮಿ ಮನೆಯೊಳಗೆ ಪ್ರವೇಶ ಮಾಡ್ತಾಳೆ. ಯಾವುದೇ ಆರ್ಥಿಕ ಸಮಸ್ಯೆಯಾಗ್ಲಿ, ಆರೋಗ್ಯ ಸಮಸ್ಯೆಯಾಗ್ಲಿ ನಿಮ್ಮನ್ನು ಕಾಡೋದಿಲ್ಲ.
ಗೃಹ ಪ್ರವೇಶ (house warming )ದ ವೇಳೆ ಈ ಕೆಲ್ಸ ಮಾಡಿ :
ವಾಸ್ತು ನಿಯಮಗಳ ಪ್ರಕಾರ, ಗೃಹ ಪ್ರವೇಶದ ಮೊದಲು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಗೃಹ ಪ್ರವೇಶದ ದಿನದಂದು ನಿಮ್ಮ ಮನೆಯ ಮುಖ್ಯ ಸ್ಥಳದಲ್ಲಿ, ಎಲ್ಲರ ಕಣ್ಣಿಗೆ ಕಾಣುವಂತೆ ಪೊರಕೆಯನ್ನು ಇಡಬೇಡಿ. ಮನೆಯ ಯಾವುದಾದ್ರೂ ಮೂಲೆಯಲ್ಲಿ, ಯಾರ ಕಣ್ಣಿಗೂ ಕಾಣದ ಜಾಗದಲ್ಲಿ ಪೊರಗೆ ಇಡೋದನ್ನು ಮರೆಯಬೇಡಿ. ಹೀಗೆ ಮಾಡಿದ್ರೆ ದೇವಿ ಲಕ್ಷ್ಮಿಯ (Lakshmi) ಆಶೀರ್ವಾದ ನಿಮಗೆ ಸಿಗುತ್ತದೆ.
ನಿಮ್ಮ ಸ್ವಂತ ಮನೆಯಾಗಿರಲಿ ಇಲ್ಲ ಬಾಡಿಗೆ ಮನೆ (Rent House)ಗೆ ನೀವು ಹೋಗ್ತಿರಲಿ, ಯಾವುದೆ ಕಾರಣಕ್ಕೂ ಬರಿಗೈನಲ್ಲಿ ಮನೆಯನ್ನು ಪ್ರವೇಶ ಮಾಡಬೇಡಿ. ಮನೆಯ ಒಳಗೆ ಹೋಗುವ ವೇಳೆ ನಿಮ್ಮ ಕೈನಲ್ಲಿ ಶುಭ ವಸ್ತುಗಳನ್ನು ಹಿಡಿದುಕೊಂಡು ಹೋಗಿ. ಹಣ ಅಥವಾ ಅಕ್ಷತೆ, ಹಣ್ಣುಗಳು ಅಥವಾ ಹೂವುಗಳನ್ನು ನಿಮ್ಮ ಕೈಯಲ್ಲಿ ಇಟ್ಟುಕೊಳ್ಳಿ. ಇದು ಮನೆಯೊಳಗೆ ಸಕಾರಾತ್ಮಕತೆಯನ್ನು ತರುತ್ತದೆ. ತಾಯಿ ಲಕ್ಷ್ಮಿಯ ಸಂತೋಷಕ್ಕೆ ಇದು ಕಾರಣವಾಗುತ್ತದೆ.
ಗೃಹ ಪ್ರವೇಶದ ದಿನದಂದು, ಮನೆಯಲ್ಲಿ ಕನ್ಯಾ ಪೂಜೆ ಮಾಡಿ. ಕನ್ಯೆಯರಿಗೆ ಆಹಾರ ನೀಡಿ. ನಿಮ್ಮ ಸಾಮರ್ಥ್ಯ ಮತ್ತು ಇಚ್ಛೆಗೆ ಅನುಗುಣವಾಗಿ ಅವರಿಗೆ ಏನಾದ್ರೂ ಉಡುಗೊರೆಯಾಗಿ ನೀಡಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಆರೋಗ್ಯ ಪ್ರಾಪ್ತಿಯಾಗುತ್ತದೆ.
ಗೃಹ ಪ್ರವೇಶದ ದಿನ ಅಥವಾ ಹೊಸ ಮನೆ ಪ್ರವೇಶದ ದಿನ ನೀವು ಯಾವ ಬಟ್ಟೆ ಧರಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ. ಹೊಸ ಮನೆಗೆ ಹೋಗುವ ವೇಳೆ ನೀವು ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಯಿಂದ ದೂರವಿರಿ. ಈ ಎರಡು ಬಣ್ಣದ ಬಟ್ಟೆಯನ್ನು ಧರಿಸಬೇಡಿ. ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಗೆ ಆದ್ಯತೆ ನೀಡಿ. ವಾಸ್ತು ಪ್ರಕಾರ, ಇವುಗಳನ್ನು ಶುಭ ಬಣ್ಣಗಳೆಂದು ಪರಿಗಣಿಸಲಾಗಿದೆ. ಈ ಬಣ್ಣದ ಬಟ್ಟೆ ಧರಿಸಿ ಹೊಸ ಮನೆಗೆ ಹೋದ್ರೆ ಮಂಗಳವಾಗಲಿದೆ.
ವಾಸ್ತು ಶಾಸ್ತ್ರದ ಪ್ರಕಾರ, ನೀವು ಹೊಸ ಮನೆಗೆ ಪ್ರವೇಶ ಮಾಡ್ತಿದ್ದರೆ ಮೊದಲು ಬಲಗಾಲನ್ನಿಟ್ಟು ಮನೆ ಪ್ರವೇಶ ಮಾಡಿ. ವಿಶೇಷವಾಗಿ ಮಹಿಳೆಯರು ಮೊದಲು ತಮ್ಮ ಬಲಗಾಲನ್ನು ಮನೆಯೊಳಗೆ ಇಡಬೇಕು. ಇದು ಲಕ್ಷ್ಮಿ ದೇವಿಯನ್ನು ಸಂತೋಷಗೊಳಿಸುತ್ತದೆ. ಮನೆಯೊಳಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.
ಆತುರದಲ್ಲಿ ದಿನ, ತಿಥಿ ನೋಡ್ದೆ ಮನೆ ಬದಲಿಸಬೇಡಿ. ಗೃಹ ಪ್ರವೇಶವನ್ನು ಯಾವಾಗಲೂ ಶುಭ ಸಮಯದಲ್ಲಿ ಮಾಡಬೇಕು. ಇದಕ್ಕಾಗಿ ದಿನ, ತಿಥಿ ಮತ್ತು ನಕ್ಷತ್ರ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಮಾಘ, ಫಾಲ್ಗುಣ, ವೈಶಾಖ, ಜ್ಯೇಷ್ಠ ಮಾಸಗಳು ಗೃಹ ಪ್ರವೇಶಕ್ಕೆ ಉತ್ತಮವೆಂದು ಹೇಳಲಾಗುತ್ತದೆ.
