Vastu Tips: ಮನೆಯಲ್ಲಿ ಈ 5 ಜಾಗದಲ್ಲಿ ಹಣ ಇಟ್ಟರೆ ಬಡವರಾಗೋದು ಖಚಿತಾ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ಜಾಗಗಳಲ್ಲಿ ಹಣವನ್ನು ಇಡಬಾರದು ಹೀಗೆ ಹಣ ಇಡೋದ್ರಿಂದ ಮನೆಯಲ್ಲಿ ಹಣದ ಕೊರತೆ ಉಂಟಾಗಿ ಬಡವರಾಗ್ತೀರಿ.

ವಾಸ್ತು ಶಾಸ್ತ್ರದಲ್ಲಿ (Vaastu shastra) ಎಲ್ಲಾದಕ್ಕೂ ನಿಯಮಗಳಿವೆ. ಹಣವನ್ನು ಇಡೋದಕ್ಕೂ ನಿಯಮಗಳಿವೆ. ಯಾಕಂದ್ರೆ ನೀವು ಹಣವನ್ನು ತಪ್ಪಾದ ಜಾಗದಲ್ಲಿ ಇಟ್ಟರೆ ಮನೆಯಲ್ಲಿ ಕಡು ಬಡತನ ಕಾಡುತ್ತೆ. ಹಾಗಿದ್ರೆ ಮನೆಯಲ್ಲಿ ಹಣವನ್ನು ಯಾವ ಜಾಗದಲ್ಲಿ ಇಡಬಾರದು ಅನ್ನೋದನ್ನು ನೋಡೋಣ.
ಮೊದಲನೇಯದಾಗಿ ಮನೆಯಲ್ಲಿ ಹಣವನ್ನು ಎಂದಿಗೂ ಕತ್ತಲೆಯ ಸ್ಥಳದಲ್ಲಿ (dark place) ಇಡಬಾರದು. ನೀವು ಹಣವನ್ನು ಇಡೋದಾದರೆ ಬೆಳಕಿರುವಂತಹ ಜಾಗದಲ್ಲಿ ಇಡಿ. ಕತ್ತಲೆಯಾಗಿರುವ ಜಾಗದಲ್ಲಿ ಇಡಬೇಡಿ.
ಅದೇ ರೀತಿ, ಹಣವನ್ನು ಅಪ್ಪಿ ತಪ್ಪಿಯೂ ಸ್ನಾನಗೃಹದ (near bathroom)ಬಳಿ ಇಡಬಾರದು. ಬಾತ್ ರೂಮಿನಿಂದ ನೆಗೆಟಿವಿಟಿ ಹೆಚ್ಚಾಗಿ ಹೊರ ಬರುತ್ತದೆ. ಹಾಗಾಗಿ ಅದರ ಹತ್ತಿರದ ಜಾಗದಲ್ಲೂ ಹಣವನ್ನು ಇಡಬಾರದು. ಇದರಿಂದ ಬಡತನ ನಿಮ್ಮನ್ನು ಕಾಡುತ್ತೆ.
ಇನ್ನು ಯಾವಾಗಲೂ ಹಣವನ್ನು ಇಡೋವಾಗ ಶುಚಿಯಾದ ಶುದ್ಧವಾದ ಜಾಗದಲ್ಲಿ ಇಡಿ. ತಪ್ಪಿಯೂ ಕೊಳಕು ಇರುವಲ್ಲಿ (dirty place) ಹಣವನ್ನು ಇಡಬಾರದು. ಹಣ ಎಂದರೆ ಲಕ್ಷ್ಮೀ ದೇವಿ, ಕೊಳಕು ಇರುವಲ್ಲಿ ಲಕ್ಷ್ಮೀ ದೇವಿ ಎಂದಿಗೂ ನೆಲೆಸೋದಿಲ್ಲ. ಹಾಗಾಗಿ ಅಂತಹ ಜಾಗದಲ್ಲಿ ಹಣ ಇಡಬೇಡಿ.
ಇದಲ್ಲದೇ ನೀವು ಹಣ ಇಡುವಂತಹ ಜಾಗದಲ್ಲಿ ತಪ್ಪಿಯೂ ಪೊರಕೆಯನ್ನು ಇಡಬೇಡಿ. ಪೊರಕೆ ಅಂದ್ರೆ ಅದು ಮನೆಯನ್ನು ಸ್ವಚ್ಚ ಮಾಡುವ ವಸ್ತು, ಅದರ ಬಳಿ ಹಣವನ್ನು ಇಡುವಂತಹ ತಪ್ಪು ಮಾಡ್ಲೇ ಬೇಡಿ.
ಇನ್ನು ಕೊನೆಯದಾಗಿ ಹೇಳೋದಾದರೆ ನಿಮಗೆ ಯಾರಾದರೂ ಏನಾದರು ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ರೆ, ಅಂತಹ ವಸ್ತುಗಳೊಂದಿಗೆ ಹಣವನ್ನು ಇಟ್ಟುಕೊಳ್ಳಬಾರದು. ಇದರಿಂದ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ (financial problem) ಕಾಣಿಸಿಕೊಳ್ಳೋದಕ್ಕೆ ಶುರುವಾಗುತ್ತೆ. ಅಷ್ಟೇ ಅಲ್ಲ ನೀವು ಬಡವರಾಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ.