- Home
- Astrology
- Festivals
- Lord Shiva's Ornaments: ಶಿವನ ಅಭರಣಗಳ ರಹಸ್ಯ… ಇವುಗಳನ್ನ ಮನೆಯಲ್ಲಿ ಇಡೋದ್ರಿಂದ ಭಾರಿ ಲಾಭ
Lord Shiva's Ornaments: ಶಿವನ ಅಭರಣಗಳ ರಹಸ್ಯ… ಇವುಗಳನ್ನ ಮನೆಯಲ್ಲಿ ಇಡೋದ್ರಿಂದ ಭಾರಿ ಲಾಭ
ಶಿವನ ಆಭರಣಗಳು ಅವನಿಗೆ ತುಂಬಾನೇ ಪ್ರಿಯ. ಶಿವನ ಪ್ರತಿಯೊಂದು ಆಭರಣದ ಅರ್ಥವು ಜೀವನೋಪಾಯಕ್ಕೆ ಸಂಬಂಧಿಸಿದೆ. ಶಿವನ ಆಭರಣಗಳ ಮಹತ್ವ ಮತ್ತು ಅವುಗಳನ್ನು ಮನೆಯಲ್ಲಿ ಇಡುವುದರಿಂದ ಏನಾಗುತ್ತದೆ ಎಂದು ತಿಳಿಯಿರಿ?

ಶಿವನ ಆಭರಣಗಳ ಮಹತ್ವ
ಹಿಂದೂ ಧರ್ಮದಲ್ಲಿ, ಶಿವನ (Lord Shiva) ಆಭರಣಗಳಿಗೆ ಹೆಚ್ಚಿನ ಮಹತ್ವವಿದೆ. ಶಿವನ ಆಭರಣಗಳನ್ನು ಮನೆಯಲ್ಲಿ ಇಡುವುದರಿಂದ ಪ್ರಯೋಜನಗಳಲ್ಲದೆ ಆತನ ಆಶೀರ್ವಾದವೂ ಸಿಗುತ್ತದೆ.
ಶಿವನ ಜೊತೆಗಿರುವ ಬಸವನನ್ನು ನಂದಿ ಎಂದು ಕರೆಯಲಾಗುತ್ತೆ. ನಂದಿ ಮಹಾರಾಜನ ಮೇಲೆ ಸವಾರಿ ಮಾಡುವ ಶಿವ ಎಂದರೆ ಶಿವ ಯಾವಾಗಲೂ ಧರ್ಮದ ಮೇಲೆ ಸವಾರಿ ಮಾಡುತ್ತಾನೆ ಎಂದರ್ಥ. ಮನೆಯಲ್ಲಿ ನಂದಿಯ ಸಣ್ಣ ವಿಗ್ರಹವನ್ನು ಇಡುವುದರಿಂದ ದುಷ್ಟ ಶಕ್ತಿ (evil energy) ನಿಮ್ಮ ಮನೆಗೆ ಎಂದಿಗೂ ಪ್ರವೇಶಿಸುವುದಿಲ್ಲ.
ಚಂದ್ರನು ಮನಸ್ಸು ಮತ್ತು ಶೀತಲತೆಗೆ ಸಂಬಂಧಿಸಿದೆ. ಚಂದ್ರನು ಶಿವನ ತಲೆಯ ಮೇಲೆ ಕುಳಿತಿದ್ದಾನೆ. ಶಿವನ ತಲೆಯ ಮೇಲೆ ಇರುವ ಚಂದ್ರನ ಅರ್ಥ ಮನಸ್ಸು ನಿಮ್ಮ ಮೇಲೆ ಎಂದಿಗೂ ಪ್ರಾಬಲ್ಯ ಸಾಧಿಸಲು ಬಿಡಬೇಡಿ, ಏಕೆಂದರೆ ಮನಸ್ಸು ಚಂಚಲವಾಗಿರುತ್ತದೆ. ಹಾಗಾಗಿ ಲೋಹದಿಂದ ಮಾಡಿದ ಚಂದ್ರನನ್ನು ಮನೆಯಲ್ಲಿ ಇಡುವುದರಿಂದ ಮನಸ್ಸು ಶಾಂತ (peaceful mind) ಮತ್ತು ಸಂತೋಷವಾಗಿರುತ್ತದೆ.
ಶಿವನ ಆಭರಣಗಳಲ್ಲಿ, ಅವನ ಡಮರು ಕೂಡ ಬಹಳ ಮಹತ್ವದ್ದಾಗಿದೆ. ಡಮರುಗ ವಿಶ್ವವನ್ನು ಪ್ರತಿನಿಧಿಸುತ್ತದೆ. ಡಮರುವನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವುದರಿಂದ ವಿಷಯಗಳು ಎಂದಿಗೂ ನಿಯಂತ್ರಣ ತಪ್ಪದಂತೆ ನೋಡಿಕೊಳ್ಳುತ್ತದೆ.
ಶಿವನ ತ್ರಿಶೂಲವು ಸತ್, ರಜ ಮತ್ತು ತಮ ಎಂಬ ಮೂರು ಗುಣಗಳನ್ನು ಪ್ರತಿನಿಧಿಸುತ್ತದೆ. ಶಿವನ ಈ ಆಭರಣವು ಈ ಮೂರು ಗುಣಗಳೂ ಶಿವನ ನಿಯಂತ್ರಣದಲ್ಲಿವೆ ಎನ್ನುವ ಅರ್ಥವನ್ನು ನೀಡುತ್ತದೆ. ಮನೆಯಲ್ಲಿ ತ್ರಿಶೂಲವನ್ನು ಇಟ್ಟುಕೊಳ್ಳುವುದರಿಂದ ಮನಸ್ಸು, ಮೆದುಳು (brain) ಮತ್ತು ದೇಹವು ಚೈತನ್ಯಶೀಲವಾಗಿರುತ್ತದೆ.
ಶಿವನ ಆಭರಣಗಳಲ್ಲಿ (ornaments of shiva) ಹಾವು ಕೂಡ ಸೇರಿದೆ, ಹಾವು ಎಚ್ಚರಿಕೆ ಮತ್ತು ಜಾಗರೂಕತೆಯ ಸಂಕೇತವೂ ಆಗಿದೆ. ಹಾವನ್ನು ಧರಿಸುವ ಮೂಲಕ ಶಿವನು ಯಾವಾಗಲೂ ಜಾಗರೂಕನಾಗಿರುತ್ತಾನೆ ಎಂಬ ಸಂದೇಶವನ್ನು ನೀಡುತ್ತಾನೆ. ಮನೆಯಲ್ಲಿ ಹಾವಿನ ಪ್ರತಿಮೆಯನ್ನು ಇಡುವುದರಿಂದ ಶತ್ರುಗಳನ್ನು ತೊಡೆದುಹಾಕಲು ಸಹಾಯವಾಗುತ್ತದೆ.