MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • Lord Shiva's Parents: ಜಗದೊಡೆಯನಾದ ಶಿವನ ತಂದೆ -ತಾಯಿ ಯಾರು?

Lord Shiva's Parents: ಜಗದೊಡೆಯನಾದ ಶಿವನ ತಂದೆ -ತಾಯಿ ಯಾರು?

ಭಗವಂತ ಶಿವನ ಹುಟ್ಟಿನ ಬಗ್ಗೆ ಹಲವಾರು ಕಥೆಗಳಿವೆ. ಜಗದೊಡೆಯನಾದ ಶಿವನ ಕುಟುಂಬದ ಬಗ್ಗೆಯೂ ನೀವು ಕೇಳಿರಬಹುದು. ಆದರೆ ಶಿವನ ತಂದೆ -ತಾಯಿ ಯಾರು? ಅನ್ನೋದನ್ನು ನೀವು ಬಲ್ಲಿರಾ? 

2 Min read
Pavna Das
Published : Jun 17 2025, 04:21 PM IST| Updated : Jun 17 2025, 04:23 PM IST
Share this Photo Gallery
  • FB
  • TW
  • Linkdin
  • Whatsapp
19
Image Credit : our own

ದೇವತೆಗಳ ದೇವರಾದ ಮಹಾದೇವನು ವಿಶ್ವದ ಸೃಷ್ಟಿಕರ್ತ ಶಿವ ಮತ್ತು ಇಡೀ ವಿಶ್ವವು ಅವನಲ್ಲಿ ಅಡಕವಾಗಿದೆ ಎಂದು ಹೇಳಲಾಗುತ್ತದೆ. ಆದರೆ ಶಿವನ ಪೋಷಕರು ಯಾರು ಎಂದು ನಿಮಗೆ ತಿಳಿದಿದೆಯೇ?

29
Image Credit : Freepik

ಇಡೀ ವಿಶ್ವವು ಶಿವನಲ್ಲಿದೆ (Lord Shiva) ಮತ್ತು ಅವನನ್ನು ಪೂಜಿಸುವುದರಿಂದ ಭಕ್ತರ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ. ಶಿವನನ್ನು ದೇವರ ದೇವ ಎನ್ನುತ್ತಾರೆ. ಆದರೆ ಶಿವನ ಕುರಿತಾದ ವಿಶೇಷ ವಿಷಯವೊಂದು ನಿಮಗೆ ಗೊತ್ತಿದ್ಯಾ?

Related Articles

Related image1
Now Playing
ಗಂಗಾಸ್ನಾನದ ಮಹತ್ವವೇನು? Brahmanda Guruji | Prayagraj | Lord Shiva | Suvarna News
Related image2
Now Playing
ಶೂಲ ಪಾಣಿ ಎಂದರೇನು..? | Brahmanda Guruji | Prayagraj | Lord Shiva | Suvarna News
39
Image Credit : Google

ಜಗದೊಡೆಯನಾದ ಶಿವ ಹಾಗೂ ಶಿವನ ಕುಟುಂಬದಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದು ನಿಮಗೆ ಗೊತ್ತೆ ಇದೆ ಅಲ್ವಾ? ಮಾತಾ ಪಾರ್ವತಿ, ಗಣೇಶ ಮತ್ತು ಕಾರ್ತಿಕೇಯ ಸೇರಿದ ತುಂಬಿದ ಕುಟುಂಬ. ಆದರೆ ಪರಮಾತ್ಮ ಶಿವನ ತಂದೆ ಯಾರು ಅನ್ನೋದು ನಿಮಗೆ ತಿಳಿದಿದೆಯೆ?

49
Image Credit : Google

ಧಾರ್ಮಿಕ ಗ್ರಂಥಗಳು(mythology) ಶಿವನ ತಂದೆಯ ಕುರಿತಾಗಿ ಏನು ಹೇಳುತ್ತವೆ ಅನ್ನೋದನ್ನು ತಿಳಿಯೋಣ. ಶಿವ ಮಹಾಪುರಾಣದಲ್ಲಿ, ಶಿವನ ಜನನ ಮತ್ತು ಅವನ ತಂದೆ ತಾಯಿಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಶಿವ ಮಹಾಪುರಾಣದಲ್ಲಿ ಶಿವನಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನೀವು ತಿಳಿಯಬಹುದು.

59
Image Credit : Google

ಇನ್ನು ಶ್ರೀ ಮಹಾದೇವಿ ಮಹಾಪುರಾಣದಲ್ಲಿ (Mahadevi Mahapurana) ಶಿವನ ಕುರಿತಾಗಿ ಕಥೆಯೇ ಇದೆ. ಆ ಕಥೆಯಲ್ಲಿ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರ ಅಂದರೆ ಶಿವನ ಕುರಿತಾದ ತುಂಬಾನೆ ಮಹತ್ವವಾದ ಮಾಹಿತಿಯನ್ನು ನೀಡಲಾಗಿದೆ. ಆ ಕಥೆ ಏನು ಅನ್ನೋದನ್ನು ನೋಡೋಣ.

69
Image Credit : Google

ಒಮ್ಮೆ ಬ್ರಹ್ಮ ಮತ್ತು ವಿಷ್ಣು (Bramha and Vishnu)ನಡುವೆ ಯಾವುದೋ ವಿಷಯಕ್ಕೆ ಜಗಳವಾಗಿತ್ತು. ಆಗ ಬ್ರಹ್ಮನು ವಿಷ್ಣುವಿಗೆ, ನಾನು ನಿನ್ನ ತಂದೆ ಮತ್ತು ನೀನು ನನ್ನಿಂದ ಹುಟ್ಟಿದ್ದೀಯ ಎಂದು ಹೇಳಿದರಂತೆ. ಈ ವಿಷಯದ ಕುರಿತು ಇಬ್ಬರ ನಡುವೆ ಸಾಕಷ್ಟು ಚರ್ಚೆ ನಡೆಯಿತು ಮತ್ತು ಯಾವುದೇ ಪರಿಹಾರ ಸಿಗಲಿಲ್ಲ.

79
Image Credit : Asianet News

ಆಗ ಸದಾಶಿವನು(Sadashiv) ಅಲ್ಲಿಗೆ ತಲುಪಿ, ಮಕ್ಕಳೇ, ನಾನು ನಿಮ್ಮನ್ನು ಲೋಕ ಸೃಷ್ಟಿಗೆ ಕಳುಹಿಸಿದ್ದೇನೆ ಮತ್ತು ಸೃಷ್ಟಿಯನ್ನು ಲಯಗೊಳಿಸುವ ಕೆಲಸವನ್ನು ಶಿವನಿಗೆ ನೀಡಿದ್ದೇನೆ ಎಂದರಂತೆ. ಹಾಗಾಗಿ ಮಹಾದೇವಿ ಪುರಾಣದ ಪ್ರಕಾರ ಶಿವ, ವಿಷ್ಣು , ಬ್ರಹ್ಮ ಸದಾಶಿವನ ಮಕ್ಕಳು. ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ಪ್ರಕಾರ, ಶಿವನ ತಾಯಿಯ ಹೆಸರು ಅಷ್ಟಾಂಗಿ ದೇವಿ ಮತ್ತು ಅವನ ತಂದೆಯ ಹೆಸರು ಸದಾಶಿವ.

89
Image Credit : Getty

ಆದರೆ ಪುರಾಣಗಳ ಕೆಲವು ಕಥೆಗಳ ಆಧಾರದ ಮೇಲೆ, ಬ್ರಹ್ಮಾಂಡದ ಸೃಷ್ಟಿಕರ್ತ ಬ್ರಹ್ಮನನ್ನು ಶಿವನ ತಂದೆ ಎನ್ನಲಾಗುತ್ತೆ. ಆದರೆ ಶಿವನ ಜನನವು ಜೈವಿಕ ವಿಧಾನಗಳ ಮೂಲಕವಲ್ಲ, ಬದಲಾಗಿ ವಿಶ್ವ ಶಕ್ತಿಗಳ ಮೂಲಕ ಆಗಿದೆ. ಶಿವನಿಗೆ ಜನನವೂ , ಇಲ್ಲ ಮರಣವೂ ಇಲ್ಲ ಎನ್ನುವ ಮಾತು ಕೂಡ ಇದೆ.

99
Image Credit : Google

ಶಿವನ ಜನನವು ಹಿರಣ್ಯಘರ್ಭ (Hiranyagarbha) ಎಂದು ಕರೆಯಲ್ಪಡುವ ವಿಶ್ವ ಮೊಟ್ಟೆಯ ಮೂಲಕ ಆಗಿದೆ ಎಂದು ಹೇಳಲಾಗುತ್ತದೆ, ಇದು ಬ್ರಹ್ಮಾಂಡದ ಆದಿಮಾನವ ಸ್ಥಿತಿ ಮತ್ತು ಅದರ ಮೂಲಕವೇ ಬ್ರಹ್ಮ ಮತ್ತು ವಿಷ್ಣು ಇಬ್ಬರೂ ಜನಿಸಿದರು. ಬ್ರಹ್ಮನು ವಿಷ್ಣುವಿನ ನಾಭಿಯಿಂದ ಕಮಲದ ಹೂವಿನಂತೆ ಜನಿಸಿದನು ಎನ್ನುವ ಮಾತು ಕೂಡ ಇದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಹಬ್ಬ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved