ಸಮುದ್ರಶಾಸ್ತ್ರದ ಪ್ರಕಾರ ಮಹಿಳೆಯರಲ್ಲಿಯೇ ಐದು ವಿಧ, ಈ ಗುಣಗಳಿರುವ ಯುವತಿ ಹೆಂಡ್ತಿಯಾಗಿ ಸಿಕ್ಕರೆ ಅದೃಷ್ಟ!
ಸಮುದ್ರಶಾಸ್ತ್ರದಲ್ಲಿ ಮಹಿಳೆಯರ 5 ವಿಧಗಳನ್ನು ಹೇಳಲಾಗಿದೆ. ಇವೆಲ್ಲದರ ವಿಭಿನ್ನ ಲಕ್ಷಣಗಳ ಬಗ್ಗೆಯೂ ಈ ಗ್ರಂಥದಲ್ಲಿ ವಿವರವಾಗಿ ಹೇಳಲಾಗಿದೆ. ಈ 5 ವಿಧದ ಮಹಿಳೆಯರಲ್ಲಿ ಯಾರು ಅತ್ಯಂತ ಅದೃಷ್ಟವಂತರು ಅನ್ನೋದನ್ನು ತಿಳಿಯಿರಿ..
ಸಮುದ್ರಶಾಸ್ತ್ರದ ಪ್ರಕಾರ ಮಹಿಳೆಯರಲ್ಲಿ ಐದು ವಿಧ
ಸಮುದ್ರಶಾಸ್ತ್ರದಲ್ಲಿ ಮಹಿಳೆಯರ ದೇಹದ ಬಣ್ಣ, ರೂಪ, ಆಕಾರ-ವಿನ್ಯಾಸದ ಆಧಾರದ ಮೇಲೆ 5 ವಿಧಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಕೆಲವು ವಿಧದ ಮಹಿಳೆಯರು ಬಹಳ ಅದೃಷ್ಟವಂತರು ಎಂದು ಪರಿಗಣಿಸಲಾಗಿದ್ದರೆ, ಇನ್ನು ಕೆಲವರು ದುರದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಸಮುದ್ರಶಾಸ್ತ್ರದಲ್ಲಿ ಇವುಗಳ ಬಗ್ಗೆ ವಿವರವಾಗಿ ಹೇಳಲಾಗಿದೆ. ಮಹಿಳೆಯರ ಈ 5 ವಿಧಗಳ ಬಗ್ಗೆ ಮತ್ತು ಇವರಲ್ಲಿ ಯಾರು ಅತ್ಯಂತ ಅದೃಷ್ಟವಂತರು ಅನ್ನೋದನ್ನ ತಿಳಿಯಿರಿ..
ಕಾರಣವಿಲ್ಲದೆ ಕೋಪಿಸಿಕೊಳ್ಳುವ ಮಹಿಳೆಯರು ಶಂಖಿನಿ
- ಮಹಿಳೆಯರ ಮೊದಲ ವಿಧದ ಹೆಸರು ಶಂಖಿನಿ. ಈ ಮಹಿಳೆಯರು ಸ್ವಲ್ಪ ಎತ್ತರ ಮತ್ತು ಸ್ವಲ್ಪ ಸಣಕಲು ದೇಹವನ್ನು ಹೊಂದಿರುತ್ತಾರೆ. ಇವರ ಮೂಗು ದಪ್ಪವಾಗಿರುತ್ತದೆ ಮತ್ತು ಧ್ವನಿ ಭಾರವಾಗಿರುತ್ತದೆ. ಇವರು ಯಾವಾಗಲೂ ಕೋಪದಿಂದ ಕಾಣುತ್ತಾರೆ ಮತ್ತು ಯಾವುದೇ ಕಾರಣವಿಲ್ಲದೆ ಕೋಪಿಸಿಕೊಳ್ಳುತ್ತಾರೆ.
- ಇವರು ತಮ್ಮ ಗಂಡನ ಮಾತನ್ನು ಕೇಳುವುದಿಲ್ಲ ಮತ್ತು ಇವರಲ್ಲಿ ದಯೆಯ ಭಾವನೆಯೂ ಇರುವುದಿಲ್ಲ. ಇವರ ಮನಸ್ಸು ಯಾವಾಗಲೂ ಸುಖ-ಸೌಕರ್ಯಗಳಲ್ಲಿ ಮಗ್ನವಾಗಿರುತ್ತದೆ. ಅಂತಹ ಮಹಿಳೆಯರು ಕುಟುಂಬದಿಂದ ದೂರವಿರುವುದನ್ನು ಇಷ್ಟಪಡುತ್ತಾರೆ. ಇವರ ಜೀವಿತಾವಧಿ ಬಹಳ ದೀರ್ಘ.
- ಗಾಸಿಪ್ ಮಾಡುವುದು ಇವರಿಗೆ ತುಂಬಾ ಇಷ್ಟ, ಆದ್ದರಿಂದ ಇವರಿಗೆ ಯಾವುದೇ ಆಪ್ತ ಸ್ನೇಹಿತೆಯರು ಇರೋದಿಲ್ಲ.. ಇವರು ಹೆಚ್ಚು ಮಾತನಾಡುತ್ತಾರೆ, ಆದ್ದರಿಂದ ಜನರು ಇವರ ಮುಂದೆ ಕಡಿಮೆ ಮಾತನಾಡುತ್ತಾರೆ. ಕೆಲವೊಮ್ಮೆ ಇವರು ತುಂಬಾ ಬುದ್ಧಿವಂತರೂ ಆಗುತ್ತಾರೆ.
ಅದೃಷ್ಟವಂತರು ಮಹಿಳೆಯರು ಚಿತ್ರಿಣಿ
- ಸಮುದ್ರಶಾಸ್ತ್ರದಲ್ಲಿ ಮಹಿಳೆಯರ ಎರಡನೇ ವಿಧದ ಹೆಸರು ಚಿತ್ರಿಣಿ ಎಂದು ಹೇಳಲಾಗಿದೆ. ಇವರು ನೋಡಲು ತುಂಬಾ ಸುಂದರವಾಗಿರುತ್ತಾರೆ. ಬಿಳಿಯ ಬಣ್ಣ ಹಾಗೂ ಚಂಚಲವಾದ ಕಣ್ಣನ್ನು ಹೊಂದಿರುತ್ತಾರೆ. ಇವರ ಧ್ವನಿ ಕೋಗಿಲೆಯಂತೆ ಮತ್ತು ಕೂದಲು ಗಾಢ ಕಪ್ಪಾಗಿರುತ್ತದೆ.
- ಈ ಮಹಿಳೆಯರು ತಮ್ಮ ಗಂಡನನ್ನು ಪ್ರೀತಿಸುತ್ತಾರೆ. ಇವರ ದಾಂಪತ್ಯ ಜೀವನ ಸಾಕಷ್ಟು ಸಂತೋಷದಿಂದ ಕೂಡಿರುತ್ತದೆ. ಇವರು ಬಹಳ ಬುದ್ಧಿವಂತರೂ ಆಗಿರುತ್ತಾರೆ, ಇದರಿಂದಾಗಿ ಎಲ್ಲರೂ ಇವರನ್ನು ಹೊಗಳುತ್ತಾರೆ. ಇವರು ಸಂತರ ಸೇವೆ ಮಾಡುತ್ತಾರೆ.
- ಈ ರೀತಿಯ ಮಹಿಳೆಯರು ಬಡ ಕುಟುಂಬದಲ್ಲಿ ಜನಿಸಿದರೂ ಭವಿಷ್ಯದಲ್ಲಿ ಎಲ್ಲಾ ಸುಖಗಳನ್ನು ಅನುಭವಿಸುತ್ತಾರೆ. ಇವರ ಮಕ್ಕಳೂ ಸಹ ಬಹಳ ಅದೃಷ್ಟವಂತರು. ಇವರ ಜೀವಿತಾವಧಿ ಸುಮಾರು 60 ವರ್ಷಗಳು.
ಸೋಮಾರಿ ಮಹಿಳೆಯರು ಹಸ್ತಿನಿ..
- ಸಮುದ್ರಶಾಸ್ತ್ರದಲ್ಲಿ ಮಹಿಳೆಯರ ಮೂರನೇ ವಿಧದ ಹೆಸರು ಹಸ್ತಿನಿ ಎಂದು ಹೇಳಲಾಗಿದೆ. ಇವರು ಭೋಗ-ವಿಲಾಸಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇವರು ಹರ್ಷಚಿತ್ತದಿಂದ ಇರುತ್ತಾರೆ. ಇವರ ದೇಹ ದಪ್ಪವಾಗಿರುತ್ತದೆ ಅದಕ್ಕೆ ಕಾರಣ ಇವರು ಸೋಮಾರಿಗಳು.
- ಕೆಲವೊಮ್ಮೆ ಇವರ ಸ್ವಭಾವದಲ್ಲಿ ಬಹಳ ಕ್ರೌರ್ಯ ಬರುತ್ತದೆ, ಇದರಿಂದಾಗಿ ಇವರು ಯಾವುದೇ ತಪ್ಪು ಕೆಲಸ ಮಾಡಲು ಹೆದರುವುದಿಲ್ಲ. ಸೋಮಾರಿತನದಿಂದಾಗಿ ಇವರು ಯಾವಾಗಲೂ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಗಂಡನೊಂದಿಗೆ ಇವರ ಜಗಳ ನಡೆಯುತ್ತಲೇ ಇರುತ್ತದೆ.
- ಕುಟುಂಬದವರು ಇವರ ಸ್ವಭಾವದಿಂದ ದುಃಖಿತರಾಗುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಇವರಿಗೆ ಯಾವುದೇ ನಂಬಿಕೆ ಇರುವುದಿಲ್ಲ. ಇವರಿಗೆ ಹಲವು ಬಾರಿ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಇವರ ಸ್ವಭಾವದಿಂದಾಗಿ ಕುಟುಂಬದಲ್ಲಿ ಇವರನ್ನು ಯಾರೂ ಮಾತನಾಡಿಸುವುದೇ ಇಲ್ಲ.
ಇತರ ಪುರುಷರಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರು ಪುಂಶ್ಚಲಿ
- ಮಹಿಳೆಯರ ನಾಲ್ಕನೇ ವಿಧದ ಹೆಸರು ಪುಂಶ್ಚಲಿ. ಇವರು ದೊಡ್ಡ ಕಣ್ಣುಗಳು ಮತ್ತು ಚಿಕ್ಕ ಕೈ ಮತ್ತು ಕಾಲುಗಳನ್ನು ಹೊಂದಿರುತ್ತಾರೆ. ಧ್ವನಿ ತೀಕ್ಷ್ಣವಾಗಿರುತ್ತದೆ. ಇವರಲ್ಲಿ ಯೌವನದ ಲಕ್ಷಣಗಳು 12 ನೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇವರು ನೋಡಲು ಸಾಮಾನ್ಯವಾಗಿರುತ್ತಾರೆ.
- ತಮ್ಮ ಸ್ವಭಾವದಿಂದಾಗಿ ಈ ರೀತಿಯ ಮಹಿಳೆಯರು ಕುಟುಂಬಕ್ಕೆ ದುಃಖದ ಕಾರಣರಾಗುತ್ತಾರೆ. ಪರ ಪುರುಷರ ಮೇಲೆ ಇವರ ಆಕರ್ಷಣೆ ಸ್ವಲ್ಪ ಹೆಚ್ಚೇ ಇರುತ್ತದೆ. ಆದ್ದರಿಂದ ಇವರ ದಾಂಪತ್ಯ ಜೀವನ ಚೆನ್ನಾಗಿರುವುದಿಲ್ಲ.
- ಇವರು ಸಾಮಾನ್ಯವಾಗಿ ಯಾರೊಂದಿಗಾದರೂ ಮಾತನಾಡುತ್ತಿದ್ದರೂ, ಅವರು ಜಗಳವಾಡುತ್ತಿದ್ದಾರೆ ಎಂದು ತೋರುತ್ತದೆ. ಇವರ ಅದೃಷ್ಟ ಮತ್ತು ಪುಣ್ಯ ರೇಖೆಗಳು ಅನ್ನೋದೇ ಇರೋದಿಲ್ಲ. ಇವರ ಕೈಯಲ್ಲಿ ಎರಡು ಶಂಖದ ರೇಖೆಗಳು ಮತ್ತು ಮೂಗಿನ ಮೇಲೆ ಮಚ್ಚೆ ಇರುತ್ತದೆ.
ಅತ್ಯಂತ ಅದೃಷ್ಟವಂತೆಯರು ಪದ್ಮಿನಿ
- ಸಮುದ್ರಶಾಸ್ತ್ರದ ಪ್ರಕಾರ, ಮಹಿಳೆಯರ ಐದನೇ ವಿಧದ ಹೆಸರು ಪದ್ಮಿನಿ. ಈ ಮಹಿಳೆಯರು ನೋಡಲು ಸುಂದರವಾಗಿರುತ್ತಾರೆ ಮತ್ತು ಸುಶೀಲರಾಗಿರುತ್ತಾರೆ. ಇವರು ಚಿಕ್ಕ ಮೂಗು, ಕಿವಿ ಮತ್ತು ಬೆರಳುಗಳನ್ನು ಹೊಂದಿರುತ್ತಾರೆ. ಇವರ ಮುಖದಲ್ಲಿ ಯಾವಾಗಲೂ ನಗು ಕಾಣುತ್ತದೆ.
- ಈ ರೀತಿಯ ಮಹಿಳೆಯರು ಧರ್ಮದಲ್ಲಿ ಹೆಚ್ಚು ನಂಬಿಕೆ ಇಡುತ್ತಾರೆ ಮತ್ತು ಅತ್ತೆ-ಮಾವಂದಿರ ಸೇವೆ ಮಾಡುತ್ತಾರೆ. ಇವರ ಮಾತು ಸಿಹಿಯಾಗಿರುತ್ತದೆ, ಇದರಿಂದಾಗಿ ಎಲ್ಲರೂ ಇವರೊಂದಿಗೆ ಪ್ರೀತಿಯಿಂದ ಮಾತನಾಡುತ್ತಾರೆ. ಪತಿವೃತೆಯರು ಎಂದೂ ಕರೆಸಿಕೊಳ್ಳುತ್ತಾರೆ.
- ಈ ರೀತಿಯ ಮಹಿಳೆಯರು ಎಲ್ಲರ ಮನಸ್ಸನ್ನು ಗೆಲ್ಲುವ ಸಾಮರ್ಥ್ಯ ಹೊಂದಿರುತ್ತಾರೆ. ಇವರು ಅದೃಷ್ಟವಂತರು, ಅದೃಷ್ಟಶಾಲಿ ಮಕ್ಕಳಿಗೆ ಜನ್ಮ ನೀಡುತ್ತಾರೆ.
ಇದನ್ನೂ ಓದಿ-
CHANAKYA NEETI: ಚಾಣಕ್ಯ ಹೇಳುವ ಪ್ರಕಾರ, ಹೆಂಡತಿ ತನ್ನ ಗಂಡನಿಗೆ ಯಾವಾಗ ಸುಳ್ಳು ಹೇಳ್ತಾಳೆ ಗೊತ್ತಾ?
ಭಾರತದ 5 ಅತ್ಯಂತ ನಿಗೂಢ-ಪವಾಡ ದೇವಾಲಯಗಳು, ಇವುಗಳ ಮುಂದೆ ವಿಜ್ಞಾನವೂ ಫೇಲ್!
Disclaimer
ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸಲು ನಾವು ಕೇವಲ ಒಂದು ಮಾಧ್ಯಮ. ಬಳಕೆದಾರರು ಈ ಮಾಹಿತಿಯನ್ನು ಮಾಹಿತಿಗಾಗಿ ಮಾತ್ರ ಪರಿಗಣಿಸಬೇಕೆಂದು ನಾವು ವಿನಂತಿಸುತ್ತೇವೆ.