ಕೂದಲು ಹೆಲ್ದಿ, ಶೈನ್ ಆಗಲು ಈ ಸೀಕ್ರೆಟ್ ಟಿಪ್ಸ್ ಫಾಲೋ ಮಾಡಿ
ಕೂದಲಿನ ಆರೈಕೆ ಬಗ್ಗೆ ಎಷ್ಟು ಕೇರ್ ತೆಗೊಂಡ್ರೂ ಕಡಿಮೇನೆ. ಕೂದಲು ಹುಡುಗಿಯರ ಲುಕ್‌ನ ಪ್ರಮುಖ ಆಕರ್ಷಣೆ. ಇದು ಉದ್ದ, ದಪ್ಪ ಮತ್ತು ಕಪ್ಪಾಗಿದ್ದರೆ ಸಾಕು ಎಂದು ಅನೇಕ ಮಹಿಳೆಯರು ಬಯಸುತ್ತಾರೆ. ಆದರೆ ಒಂದು ಮುಖ್ಯ ವಿಷಯವನ್ನು ಮರೆತುಬಿಡುತ್ತಾರೆ, ಅದುವೇ ಹೊಳಪು ಮತ್ತು ಕೂದಲಿನ ಸ್ಮೂತ್ ನೆಸ್ ಬಗ್ಗೆ ಗಮನ ಹರಿಸೋದು. ಕೂದಲು ಕಪ್ಪು, ದಪ್ಪ ಮತ್ತು ಉದ್ದವಾಗಿದೆ, ಆದರೆ ಅದು ಒರಟಾಗಿ ಮತ್ತು ನಿರ್ಜೀವವಾಗಿದ್ದರೆ, ಚೆನ್ನಾಗಿರಲ್ಲ ಅಲ್ವಾ? ಅಂತಹ ಒರಟಾದ ಕೂದಲಿನ ಸ್ಟೈಲಿಂಗ್ ಸುಲಭವಾಗಿರೋದಿಲ್ಲ. ಇದರಿಂದ ಲುಕ್ ಕೂಡ ಚೆನ್ನಾಗಿ ಕಾಣೋದಿಲ್ಲ. ಅಂದಹಾಗೆ, ಕೂದಲಿನ ರಫ್ ನೆಸ್ ತೆಗೆದು ಹಾಕಲು ಪ್ರಯತ್ನಿಸಬಹುದಾದ ಅಂತಹ ಅನೇಕ ಚಿಕಿತ್ಸೆಗಳಿವೆ. ಆದರೆ ಕೆಮಿಕಲ್ ಪ್ರಾಡಕ್ಟ್ ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುವ ಏನನ್ನಾದರೂ ಕೂದಲಿಗೆ ಹಚ್ಚೋದು ಒಳ್ಳೆಯದು.
ಕೂದಲಿನಲ್ಲಿ(Hair) ಬರುವ ಹೊಳಪು ತಾತ್ಕಾಲಿಕವಾಗಿರಬಾರದು, ಆದರೆ ಕೂದಲು ಉದ್ದವಾಗಿ, ಕಪ್ಪು ಮತ್ತು ದಟ್ಟವಾಗಿ ಉಳಿಯುವವರೆಗೆ, ಆ ಹೊಳಪು ಅದರಲ್ಲಿ ಉಳಿಯಬೇಕು ಎಂದು ಬಯಸಿದ್ರೆ ನೀವು ಅದರ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಕೇವಲ ಹತ್ತು ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ, ನೀವು ಕೂದಲಿಗೆ ಹೊಸ ಜೀವವನ್ನು ಮತ್ತು ನಿಮಗೆ ಬೇಕಾದ ಹೊಳಪನ್ನು ನೀಡಬಹುದು.
ಈ ವಸ್ತುವನ್ನು ಖರೀದಿಸಿ
ನಾವು ಯಾವ ವಸ್ತುವಿನ ಬಗ್ಗೆ ಮಾತಾಡ್ತಾ ಇದೀವಿ ಅನ್ನೋದು ನಿಮಗೆ ಗೊತ್ತಾ? ಇಲ್ಲಾ ಅಂದ್ರೆ ಕೇಳಿ. ನೀವು ಆಗಾಗ್ಗೆ ಸಲಾಡ್ ಗಳಲ್ಲಿ ಏನು ತಿನ್ನುತ್ತೀರಿ. ಸೌತೆಕಾಯಿ ಅಲ್ವಾ? ಯೆಸ್ ಸೌತೆಕಾಯಿಯನ್ನು ಕತ್ತರಿಸಿ ಅಥವಾ ಅದರ ರಸವನ್ನು ತೆಗೆದು ಮುಖಕ್ಕೆ ಹಚ್ಚಿಕೊಳ್ಳಿ. ಇದು ಕೂದಲಿಗೂ ಅದ್ಭುತ. ನೀವು ಹೊಳೆಯುವ ಕೂದಲನ್ನು ಬಯಸಿದರೆ, ನೀವು ಮಾಡಬೇಕಾಗಿರೋದು ಕೂದಲಿಗೆ ಹೊಸ ಚೈತನ್ಯವನ್ನು ನೀಡಲು ಮಾರುಕಟ್ಟೆಯಿಂದ ಹತ್ತು ರೂಪಾಯಿಗಳ ಸಲಾಡ್‌ನಲ್ಲಿ ಬಳಸುವ ಮುಳ್ಳು ಸೌತೆಕಾಯಿಯನ್ನು(Cucumber) ಖರೀದಿಸೋದು.
ಇದನ್ನು ಈ ರೀತಿ ಬಳಸಿ
ಕೂದಲಿನ ಹೊಳಪನ್ನು ಹೆಚ್ಚಿಸಲು ನೀವು ಈ ರೀತಿಯಾಗಿ ಸೌತೆಕಾಯಿ ಬಳಸಬೇಕು. ಮೊದಲನೆಯದಾಗಿ, ಸೌತೆಕಾಯಿಯನ್ನು ನುಣ್ಣಗೆ ತುರಿದು ಅದರ ರಸವನ್ನು ಹಿಂಡಿ.
ಈ ರಸದಲ್ಲಿ ನೀವು ಅಲೋವೆರಾ ಜೆಲ್(Aloevera), ನಿಂಬೆ ರಸ, ಆಪಲ್ ಸೈಡರ್ ವಿನೆಗರ್ ಸೇರಿಸಿ.
ಚಮಚದ ಸಹಾಯದಿಂದ ಅವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಈ ರಸ ಕೂದಲಿಗೆ ಹಚ್ಚಲು ರೆಡಿ.
ಈ ರೀತಿ ಹಚ್ಚಿ
ಈ ರಸವನ್ನು ಕೂದಲಿನ ಬೇರುಗಳಿಗೆ(Hair roots) ಹಚ್ಚುವ ಮೂಲಕ ಮಸಾಜ್ ಮಾಡಿ. ನಿಮ್ಮ ಕೂದಲನ್ನು ಕನಿಷ್ಠ ಒಂದು ಗಂಟೆಯಾದರೂ ಹಾಗೆ ಬಿಡಿ. ಇದರ ನಂತರ, ಉಗುರು ಬೆಚ್ಚಗಿನ ನೀರಿನಲ್ಲಿ ಕೈಯಿಂದ ಕೂದಲನ್ನು ತೊಳೆಯಿರಿ. ವಾರದಲ್ಲಿ ಕನಿಷ್ಠ ಎರಡು ಬಾರಿಯಾದರೂ ಈ ರಸವನ್ನು ನಿಮ್ಮ ಕೂದಲಿಗೆ ಹಚ್ಚಿ.
ಸೌತೆಕಾಯಿ ರಸದ ಪ್ರಯೋಜನಗಳು
ಸೌತೆಕಾಯಿ ರಸವು ಕೂದಲಿಗೆ ತುಂಬಾ ಪ್ರಯೋಜನಕಾರಿ. ಸೌತೆಕಾಯಿಯು ನೆತ್ತಿಯನ್ನು ಹೈಡ್ರೇಟ್ ಮಾಡುತ್ತೆ. ಅಲ್ಲದೆ, ಇದರಲ್ಲಿರುವ ವಿಟಮಿನ್-ಎ, ಫೋಲಿಕ್ ಆಸಿಡ್ ಮತ್ತು ವಿಟಮಿನ್-ಸಿ(Vitamin C) ಕೂದಲಿಗೆ ಪೋಷಣೆ ನೀಡುತ್ತೆ. ಇದು ಕೂದಲಿಗೆ ಹೊಸ ಹೊಳಪನ್ನು ತರುತ್ತೆ ಮತ್ತು ನೆತ್ತಿಯನ್ನೂ ಸಹ ಆರೋಗ್ಯಕರವಾಗಿರುಸುತ್ತೆ. ಕೂದಲು ಹೆಚ್ಚು ಹೈಡ್ರೇಟ್ ಆಗುತ್ತೆ, ಇದು ಅವುಗಳನ್ನು ಮೃದುವಾಗಿಡಲು ಸಹಾಯ ಮಾಡುತ್ತೆ. ಈ ಹೇರ್ ಮಾಸ್ಕ್ ನಿರ್ಜೀವ ಕೂದಲಿಗೆ ಹೊಸ ಜೀವ ನೀಡುತ್ತೆ.
ಸೌತೆಕಾಯಿ ರಸವನ್ನು ಯಾವಾಗ ಹಚ್ಚಬಾರದು
ಸೌತೆಕಾಯಿ ರಸವು ಯಾವಾಗಲೂ ಕೂದಲಿಗೆ ಪ್ರಯೋಜನಕಾರಿ. ಆದರೆ ಅದು ಕೂದಲಿಗೆ ಪ್ರಯೋಜನಕಾರಿಯಾಗುವ ಬದಲು ಹಾನಿಕಾರಕವಾಗುವ ಕೆಲವು ಪರಿಸ್ಥಿತಿಗಳಿವೆ. ಅವುಗಳ ಬಗ್ಗೆ ನೀವು ತಿಳಿದುಕೊಂಡರೆ, ಕೂದಲನ್ನು ಆರೋಗ್ಯಕರವಾಗಿರುವಂತೆ (Healthy hair) ನೋಡಿಕೊಳ್ಳಬಹುದು.
ನೀವು ಈಗಾಗಲೇ ನಿಮ್ಮ ಕೂದಲಿಗೆ ಯಾವುದೇ ಚಿಕಿತ್ಸೆಯನ್ನು ತೆಗೆದುಕೊಂಡಿದ್ದರೆ, ಅದು ಕೆರಾಟಿನ್(Keratin) ಅಥವಾ ಸ್ಪಾ ಚಿಕಿತ್ಸೆಯನ್ನು ಒಳಗೊಂಡಿದ್ದರೆ, ಆಗ ಈ ರಸವನ್ನು ಹಚ್ಚಲು ಹೋಗಬೇಡಿ. ಕೂದಲಿನ ನೆತ್ತಿ ತುಂಬಾ ಒಣಗಿದ್ದರೂ, ಈ ರಸವು ಇನ್ನೂ ಹಾನಿ ಮಾಡುತ್ತೆ. ಒಣ ಕೂದಲಿಗೆ ಈ ರಸವನ್ನು ಬಳಸುವಾಗ, ಕೆಲವು ಹನಿ ತೆಂಗಿನ ಎಣ್ಣೆಯನ್ನು ಸಹ ಮಿಕ್ಸ್ ಮಾಡಿ. ಈ ರಸ ಒರಟಾದ ಕೂದಲಿಗೆ ಪೋಷಣೆ ನೀಡುತ್ತೆ.