ಉರ್ಫಿ ಜಾವೇದ್ ಮೈಯಲ್ಲಿ ಬಟ್ಟೇನೆ ಇಲ್ಲ, ಯಾಕಮ್ಮಾ ಮೈಗೆ ಸೆಗಣಿ ಮೆತ್ತಿಕೊಂಡಿದ್ದೀ ಎಂದ ನೆಟ್ಟಿಗರು!
ವಿಚಿತ್ರ ಡ್ರೆಸ್ಸಿಂಗ್ ಸೆನ್ಸ್ನಿಂದ ನಟಿ ಉರ್ಫಿ ಜಾವೇದ್ ಆಗಾಗ ಸುದ್ದಿಯಾಗ್ತಾನೇ ಇರ್ತಾರೆ. ಸದ್ಯ ಅವರು ಧರಿಸಿರೋ ಮರದ ತೊಗಟೆಯ ಡ್ರೆಸ್ ಸಖತ್ ವೈರಲ್ ಆಗ್ತಿದೆ. ಜನರು ಇದೇನು ಮೈಗೆ ಸೆಗಣಿ ಮೆತ್ತಿಕೊಂಡು ಬಂದಿದ್ದೀರಿ ಎಂದು ಟ್ರೋಲ್ ಮಾಡ್ತಿದ್ದಾರೆ.
ಉರ್ಫಿ ಜಾವೇದ್ ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋದು ಹೊಸ ವಿಷಯವೇನಲ್ಲ.
ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್ ಆಗುವುದು ಎಂದರೆ ಈಕೆಗೆ ತುಂಬಾ ಖುಷಿ.
ಉರ್ಫಿ ಜಾವೇದ್ ಎಂದ ತಕ್ಷಣ ಆಕೆ ತೊಟ್ಟುಕೊಳ್ಳುವ ಚಿತ್ರವಿಚಿತ್ರ ಬಟ್ಟೆಗಳೆಲ್ಲ ಕಣ್ಣಮುಂದೆ ಬರುತ್ತವೆ. ಹಾಗೆಯೇ ಸದ್ಯ ಉರ್ಫಿ ಜಾವೇದ್, ಮರದ ತೊಗಟೆಯಿಂದ ಮಾಡಿದ ಡ್ರೆಸ್ ತೊಟ್ಟು ಸುದ್ದಿಯಾಗಿದ್ದಾರೆ. ಇದು ಡ್ರೆಸ್‌ಗಿಂತ ಹೆಚ್ಚಾಗಿ ಸೆಗಣಿಯಂತೆ ಕಾಣುತ್ತಿದೆ ('ಗೋಬರ್ ಝ್ಯಾದಾ ಲಗ್ ರಹಾ ಹೈ') ಎಂದು ಜನರು ಟೀಕಿಸಿದ್ದಾರೆ.
ಉರ್ಫಿ ಜಾವೇದ್, ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಹೊಸ ಉಡುಪನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮರದ ತೊಗಟೆಯಿಂದ ಮಾಡಿದ ಟಾಪ್ ಮತ್ತು ಹಳದಿ ಬಣ್ಣದ ಸ್ಕರ್ಟ್ ಧರಿಸಿದ್ದಾರೆ. 'ಇದನ್ನು ತಯಾರಿಸುವಾಗ ಯಾವುದೇ ಮರಗಳಿಗೆ ಹಾನಿಯಾಗಿಲ್ಲ' ಎಂದು ನಟಿ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.
ನೆಟಿಜನ್‌ಗಳು ಕಾಮೆಂಟ್ ವಿಭಾಗದಲ್ಲಿ ಡ್ರೆಸ್ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಇದು ಮರದ ತೊಗಟೆಗಿಂತ ಹಸುವಿನ ಸಗಣಿಯಿಂದ ಮಾಡಿದ ಉಡುಗೆಯಂತೆ ಕಾಣುತ್ತಿದೆ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು 'ಇದು ಹಸುವಿನ ಸಗಣಿ ಎಂದು ನಾನು ಭಾವಿಸಿದೆವು' ಎಂದರು.
ಮತ್ತೊಬ್ಬರು, 'ಈಗ ಅವಳಿಗೆ ಉಡುಗೆ ಮಾಡಲು ಗೋವಿನ ಸಗಣಿ ಮಾತ್ರ ಉಳಿದಿದೆ' ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಕಾಮೆಂಟ್‌ನಲ್ಲಿ,'"ನೀವು ತುಂಬಾ ಸೃಜನಶೀಲರಾಗಿದ್ದೀರಿ, ನೀವು ಕೇನ್ಸ್‌ನಲ್ಲಿ ಯಾಕೆ ಇಲ್ಲ' ಎಂದು ಪ್ರಶ್ನಿಸಿದ್ದಾರೆ.
ಜನಪ್ರಿಯ ಟೆಲಿವಿಷನ್ ಶೋ ಟೆಡಿ ಮೆಡಿ ಫ್ಯಾಮಿಲಿಯೊಂದಿಗೆ ಪಾದಾರ್ಪಣೆ ಮಾಡಿದ ಉರ್ಫಿ ಜಾವೇದ್ ಅವರು, ಕರಣ್ ಜೋಹರ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸಿದ ನಂತರ ಫೇಮಸ್ ಆದರು. ಮನೆಯಿಂದ ಹೊರಹಾಕಲ್ಪಟ್ಟ ಮೊದಲ ವ್ಯಕ್ತಿ ಅವರು ಆಗಿದ್ದರೂ ಸಹ, ಅವರ ಮನರಂಜನೆಯ ವ್ಯಕ್ತಿತ್ವವು ಪ್ರೇಕ್ಷಕರ ಗಮನವನ್ನು ಸೆಳೆಯಿತು.
ಉರ್ಫಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮತ್ತು ಹೊಸ ಲುಕ್ ಹಂಚಿಕೊಳ್ಳುವುದನ್ನು ಆಗಾಗ ಕಾಣಬಹುದು. ನಟಿ ಸ್ಪಿಟ್ಸ್‌ವಿಲ್ಲಾ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದರು.