ಈ ಫೇಸ್ ಪ್ಯಾಕ್ ಹಾಕಿದ್ರೆ ಬ್ಯೂಟಿ ಪಾರ್ಲರ್‌ಗೆ ಹೋಗೋದೇ ಬೇಡ, ಮಿರ ಮಿರ ಮಿಂಚ್ತೀರಿ
ವಿಶೇಷ ದಿನಗಳಲ್ಲಿ ಈ ಫೇಸ್ ಪ್ಯಾಕ್ ಹಾಕುವುದರಿಂದ ನಿಮ್ಮನ್ನ ಯಾರೂ ಮೀರಿಸೋಕೆ ಆಗಲ್ಲ. ಯಾರಾದ್ರೂ ಸರಿ ಸಕ್ಕತ್ತಾಗಿ ಮಿಂಚ್ತೀರಿ.

ವಿಶೇಷ ದಿನಗಳಲ್ಲಿ ಸುಂದರವಾಗಿ ಕಾಣಲು...
ಶ್ರಾವಣ ಮಾಸ ಬಂತೆಂದರೆ ಹಬ್ಬ ಹರಿದಿನಗಳ ಸಡಗರ. ಈ ಸಮಯದಲ್ಲಿ ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಬ್ಯೂಟಿ ಪಾರ್ಲರ್‌ಗಳಿಗೆ ಹೋಗದೆಯೇ ಮನೆಯಲ್ಲಿಯೇ ಫೇಸ್ ಪ್ಯಾಕ್ ಹಾಕಿಕೊಂಡು ಮಿಂಚಬಹುದು. ಯಾವ ಫೇಸ್ ಪ್ಯಾಕ್ ಅಂತ ನೋಡೋಣ ಬನ್ನಿ..
ಸೌತೆಕಾಯಿ ಫೇಸ್ ಪ್ಯಾಕ್...
ವಿಶೇಷ ದಿನಗಳಲ್ಲಿ ಮತ್ತಷ್ಟು ಸುಂದರವಾಗಿ ಕಾಣಲು ಈ ಸೌತೆಕಾಯಿ ಫೇಸ್ ಪ್ಯಾಕ್ ಟ್ರೈ ಮಾಡಿ. ಫೇಸ್ ಪ್ಯಾಕ್‌ಗೆ ಸೌತೆಕಾಯಿ, ಟೀ ಟ್ರೀ ಆಯಿಲ್, ಮೊಸರು, ಜಾಸ್ಮಿನ್ ಆಯಿಲ್ ಇದ್ದರೆ ಸಾಕು.
ಫೇಸ್ ಪ್ಯಾಕ್ ತಯಾರಿಸುವ ವಿಧಾನ
ಸೌತೆಕಾಯಿ ತುರಿದು 2 ಚಮಚ ಮೊಸರು, 2 ಹನಿ ಟೀ ಟ್ರೀ ಆಯಿಲ್ ಮತ್ತು 2 ಹನಿ ಜಾಸ್ಮಿನ್ ಆಯಿಲ್ ಹಾಕಿ ಮಿಶ್ರಣ ಮಾಡಿ. ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.
ಕಡಲೆ ಹಿಟ್ಟಿನ ಫೇಸ್ ಪ್ಯಾಕ್
ಸೌತೆಕಾಯಿ ಜೊತೆಗೆ ಕಡಲೆ ಹಿಟ್ಟಿನ ಫೇಸ್ ಪ್ಯಾಕ್ ಕೂಡ ಉಪಯೋಗಿಸಬಹುದು. ಕಡಲೆ ಹಿಟ್ಟು, ಮೊಸರು, ಕ್ರೀಮ್ ಮತ್ತು ಲ್ಯಾವೆಂಡರ್ ಆಯಿಲ್ ಬೇಕಾಗುತ್ತದೆ. ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟು, 2 ಚಮಚ ಮೊಸರು, ಸ್ವಲ್ಪ ಕ್ರೀಮ್ ಮತ್ತು ಲ್ಯಾವೆಂಡರ್ ಆಯಿಲ್ ಹಾಕಿ ಮಿಶ್ರಣ ಮಾಡಿ. ಮುಖಕ್ಕೆ ಹಚ್ಚಿ 30-40 ನಿಮಿಷ ಬಿಟ್ಟು ತೊಳೆಯಿರಿ. ವಾರಕ್ಕೆ ಎರಡು ಬಾರಿ ಬಳಸಿ.