ಬಿಳಿ ಕೂದಲನ್ನು ಕಪ್ಪಾಗಾಗಿಸುತ್ತೆ ಈ ಬೀಟ್‌ರೂಟ್ ಹೇರ್ ಡೈ, ನೀವೂ ಒಮ್ಮೆ ಟ್ರೈ ಮಾಡಿ
ನೀವು ಪಲ್ಯ ಮಾಡಿ ತಿನ್ನುವ ಜ್ಯೂಸ್ ಮಾಡಿ ಕುಡಿಯುವ ಬೀಟ್ರೂಟ್ ಸಾಕು. ನೀವು ಓದಿದ್ದು ನಿಜ... ಬೀಟ್ರೂಟ್ ಬಳಸಿ ಬಿಳಿ ಕೂದಲನ್ನು ಪೂರ್ತಿ ಕಪ್ಪಗೆ ಮಾಡಬಹುದು. ಹೇಗೆ ಅಂತ ನೋಡೋಣ....

ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ತುಂಬಾ ಜನರಿಗೆ ಇದೆ. 30 ವರ್ಷ ತುಂಬುವ ಮೊದಲೇ ಬಿಳಿ ಕೂದಲು ಬರಲು ಶುರುವಾಗುತ್ತೆ. ಹೀಗಾಗಿ, ಕೂದಲು ಬಣ್ಣ ಹಾಳಾಗುತ್ತೆ ಅಂತ ಡೈ ಹಾಕೋಕೆ ಶುರು ಮಾಡ್ತಾರೆ. ಆದ್ರೆ, ಅದರಿಂದ ಇರುವ ಕಪ್ಪು ಕೂದಲು ಕೂಡ ಬಿಳಿ ಆಗುತ್ತೆ. ಕೂದಲು ಉದುರುತ್ತೆ. ಆದರೆ ಈ ಸಮಸ್ಯೆಗೆ ಬೀಟ್ರೂಟ್ ಸಾಕು. ಬೀಟ್ರೂಟ್ ಬಳಸಿ ಬಿಳಿ ಕೂದಲನ್ನು ಪೂರ್ತಿ ಕಪ್ಪಗೆ ಮಾಡಬಹುದು. ಹೇಗೆ ಅಂತ ನೋಡೋಣ....
ಬೀಟ್ರೂಟ್ ಜ್ಯೂಸ್
ಬೀಟ್ರೂಟ್‌ನಲ್ಲಿ ಐರನ್ ಸಿಕ್ಕಾಪಟ್ಟೆ ಇದೆ. ಕೂದಲು ಬೆಳವಣಿಗೆಗೆ ಬೇಕಾದ ಪೋಷಕಾಂಶಗಳು ಇದರಲ್ಲಿವೆ. ಪೊಟ್ಯಾಶಿಯಂ, ಐರನ್, ಫೋಲೇಟ್, ವಿಟಮಿನ್ ಎ, ಸಿ, ಪ್ರೋಟೀನ್, ಮೆಗ್ನೀಷಿಯಂ, ಕ್ಯಾಲ್ಸಿಯಂ ಇದೆ. ಇವು ಕೂದಲಿನ ಬುಡವನ್ನು ಗಟ್ಟಿ ಮಾಡುತ್ತೆ. ಬೀಟ್ರೂಟ್ ಜ್ಯೂಸ್ ಕೂದಲಿಗೆ ತುಂಬಾ ಒಳ್ಳೆಯದು. ಕೂದಲು ಹೊಳೆಯುವಂತೆ ಮಾಡುತ್ತೆ. ಒರಟು ಕೂದಲನ್ನು ಮೃದುವಾಗಿಸುತ್ತೆ. ಬಿಳಿ ಕೂದಲನ್ನು ಕಪ್ಪಗೆ ಮಾಡುತ್ತೆ. ಹಾಗಿದ್ರೆ ಬೀಟ್ರೂಟ್ ಜ್ಯೂಸ್ ಹೇರ್ ಡೈ ಹೇಗೆ ಹಾಕೋದು ಅಂತ ನೋಡೋಣ
ಬೀಟ್ರೂಟ್ ರಸದ ಹೇರ್ ಮಾಸ್ಕ್...
ಬೀಟ್ರೂಟ್ ರಸವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಕೂದಲಿನ ತೇವಾಂಶ ಉಳಿಸುತ್ತದೆ. ಒರಟು ಕೂದಲಿಗೆ ಬೀಟ್ರೂಟ್ ರಸ ಮತ್ತು ತೆಂಗಿನ ಎಣ್ಣೆ ಹಚ್ಚಿ. 2 ಗಂಟೆ ಬಿಟ್ಟು ತೊಳೆಯಿರಿ. ಕೂದಲು ಕಪ್ಪಾಗುತ್ತದೆ.
ಕ್ಯಾರೆಟ್, ಬೀಟ್ರೂಟ್ ಜ್ಯೂಸ್ ಹೇರ್ ಮಾಸ್ಕ್
ಕ್ಯಾರೆಟ್, ಬೀಟ್ರೂಟ್ ರಸವನ್ನು ಕೂದಲಿಗೆ ಹಚ್ಚಬಹುದು. ಎರಡು ಚಮಚ ಕ್ಯಾರೆಟ್ ರಸಕ್ಕೆ 4-5 ಚಮಚ ಬೀಟ್ರೂಟ್ ರಸ ಸೇರಿಸಿ. ಕೂದಲಿಗೆ ಹಚ್ಚಿ. ತಲೆಹೊಟ್ಟು ಇದ್ದರೆ ನಿಂಬೆರಸ ಸೇರಿಸಿ. ಒಂದು ಗಂಟೆ ಬಿಟ್ಟು ತೊಳೆಯಿರಿ. ವಾರಕ್ಕೆ 2-3 ಬಾರಿ ಹಚ್ಚಬಹುದು. ಕೂದಲು ಮೃದುವಾಗುತ್ತದೆ.
ಹೇರ್ ಮಾಸ್ಕ್
ಬೀಟ್ರೂಟ್ ಜ್ಯೂಸ್, ಹೆನ್ನಾ, ಬ್ಲ್ಯಾಕ್ ಟೀ ಹೇರ್ ಮಾಸ್ಕ್
ಟೀ ಪುಡಿಯನ್ನು ನೀರಿನಲ್ಲಿ ಕುದಿಸಿ. ಒಂದು ಲೋಟ ನೀರಿಗೆ 2ಚಮಚ ಟೀ ಪುಡಿ ಹಾಕಿ ಕುದಿಸಿ, ಸೋಸಿ. 2 ಚಮಚ ಬೀಟ್ರೂಟ್ ರಸ, 2 ಚಮಚ ಹೆನ್ನಾ ಪುಡಿ ಸೇರಿಸಿ. ಕಲಸಿ, ಕೂದಲಿಗೆ ಹಚ್ಚಿ. ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಬೇಕಾದಾಗ ಇದನ್ನು ಮಾಡಬಹುದು. ವಾರಕ್ಕೆ ಎರಡು ಬಾರಿ ಹೇರ್ ಮಾಸ್ಕ್ ಹಚ್ಚಿದರೆ ಕೂದಲು ಕಪ್ಪಾಗಿ ಹೊಳೆಯುತ್ತದೆ.