Kanjivaram Saree Storage Tips: ಕಾಂಜೀವರಂ ಸೀರೆಗಳು ಹಾಳಾಗದಂತೆ ಕಾಪಾಡಲು ಸೂಪರ್ ಟ್ರಿಕ್ಸ್
ಕಾಂಜೀವರಂ ಸೀರೆಗಳು ಪರಂಪರೆಯನ್ನು ಪ್ರಸ್ತುತಪಡಿಸುವ ಸೀರೆಗಳಾಗಿವೆ. ಅವುಗಳನ್ನು ಸುರಕ್ಷಿತವಾಗಿ ರಕ್ಷಿಸೋದು ತುಂಬಾನೆ ಕಷ್ಟದ ಕೆಲಸ. ಹಾಗಾಳಾದಂತೆ, ಬಣ್ಣ ಮಾಸದಂತೆ ಕಾಂಜೀವರಂ ಸೀರೆಗಳನ್ನು ದೀರ್ಘ ಬಾಳಿಕೆ ಬರುವಂತೆ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್.

ಕಾಂಜೀವರಂ ಸೀರೆಗಳು
ನೀವು ಕೂಡ ನಿಮ್ಮ ಅಮ್ಮನ ಹಳೆಯ ಕಾಂಜೀವರಂ ಸೀರೆಗಳನ್ನು ಉಡುತ್ತಿದ್ದೀರಿ ಅಲ್ವಾ? ಹಳೆಯ ಸೀರೆಗಳನ್ನು ಈವಾಗ್ಲೂ ಚೆನ್ನಾಗಿ ಉಡಬಹುದು ಅಂದ್ರೆ, ಅದನ್ನು ಅವರು ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದಾರೆ ಎಂದು ಅರ್ಥ. ನಿಮಗೆ ಅದನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವುದು ಹೇಗೆ ಎಂದು ತಿಳಿಯದೇ ಇದ್ದರೆ, ಇಲ್ಲಿದೆ ಅದಕ್ಕಾಗಿ ಟಿಪ್ಸ್.
ಸೀರೆಗಳ ರಕ್ಷಣೆ ಹೇಗೆ?
ಕಾಂಜೀವರಂ ಸೀರೆಗಳು ಪರಂಪರೆಯನ್ನು ಪ್ರತಿನಿಧಿಸುವ ವಸ್ತುಗಳು. ಪೀಳಿಗೆಯಿಂದ ಪೀಳಿಗೆಗೆ ರವಾನಿಸಬೇಕಾದ ಸಂಪತ್ತು. ಸ್ವಲ್ಪ ಕಾಳಜಿ ವಹಿಸಿದರೆ, ಅವುಗಳ ಹೊಳಪು ಮತ್ತು ಸೌಂದರ್ಯವು ದೀರ್ಘ ಕಾಲದವರೆಗೆ ಉಳಿಯುತ್ತದೆ. ಇಲ್ಲಿ ಒಂದಷ್ಟು ಟಿಪ್ಸ್ ಕೊಡಲಾಗಿದೆ. ಅವುಗಳನ್ನು ಅನುಸರಿಸಿದ್ರೆ ಕಾಂಜೀವರಂ ಸೀರೆ ದೀರ್ಘ ಬಾಳಿಕೆ ಬರುತ್ತೆ.
ಟಿಪ್ಸ್ 1
ಯಾವತ್ತೂ ಕಾಂಜೀವರಂ ಸೀರೆಗಳನ್ನು ನಿಮ್ಮ ವಾರ್ಡ್ ರೋಬಲ್ಲಿ ಹ್ಯಾಂಗರ್ ಮೂಲಕ ಹ್ಯಾಂಗ್ ಮಾಡಬೇಡಿ. ಯಾಕಂದ್ರೆ ಈ ಸೀರೆಗಳಲ್ಲಿ ಯಾವಾಗ್ಲೂ ಜರಿಯು ಸೀರೆಗಿಂತ ಭಾರವಾಗಿರುತ್ತೆ. ಒಂದು ವೇಳೆ ನೀವು ಸೀರೆಯನ್ನು ಹ್ಯಾಂಗರ್ ನಲ್ಲಿ ನೇತು ಹಾಕಿದ್ರೆ, ಜರಿ ಸೀರೆಯನ್ನು ಕೆಳಕ್ಕೆ ಎಳೆಯುತ್ತದೆ. ಇದರಿಂದ ಸೀರೆಯ ಆಕಾರವೇ ಹಾಳಾಗುತ್ತದೆ.
ಟಿಪ್ಸ್ 2
ನಿಮ್ಮ ಕಾಂಜೀವರಂ ಸೀರೆಯನ್ನು ತೆರೆದಿಡಬೇಡಿ. ಅವುಗಳನ್ನು ತೇವಾಂಶ ಮತ್ತು ಪ್ಲಾಸ್ಟಿಕ್‌ನಿಂದ ದೂರದಲ್ಲಿಡುವುದು ಉತ್ತಮ. ಅದಕ್ಕಾಗಿ ಮೃದುವಾದ ಹತ್ತಿ ಅಥವಾ ಮಸ್ಲಿನ್ ಬಟ್ಟೆಯಲ್ಲಿ ಅವುಗಳನ್ನು ಮಡಚಿಡಿ. ಸಾಧ್ಯವಾದಷ್ಟು ಬಿಳಿ ಬಣ್ಣದ ಬಟ್ಟೆಯಲ್ಲಿ ಮಡಚಿಡಿ, ಇಲ್ಲವಾದರೆ ಬಟ್ಟೆಯ ಬಣ್ಣ ಬಿಡುವ ಸಾಧ್ಯತೆ ಹೆಚ್ಚಾಗಿದೆ.
ಟಿಪ್ಸ್ 3
ಯಾವತ್ತೂ ಕಾಂಜೀವರಂ ಸೀರೆಯ ಜೊತೆ ನ್ಯಾಪ್ಥಲಿನ್ ಕಾಯಿಗಳನ್ನು ಇಡಬೇಡಿ, ಇದರಿಂದ ಸೀರೆ ಹಾಳಾಗುವ ಸಾಧ್ಯತೆ ಇದೆ. ಸಾಧ್ಯವಾದಷ್ಟು ನ್ಯಾಚುರಲ್ ಪರಿಮಳ ಬೀರುವ ಲ್ಯಾವೆಂಡ ಹೂವು ಅಥವಾ ಎಲೆಗಳು, ಬೇವಿನ ಎಲೆಗಳನ್ನು ಮಸ್ಲಿನ್ ಬ್ಯಾಗಲ್ಲಿ ಹಾಕಿ ಬಟ್ಟೆ ಇಟ್ಟ ವಾರ್ಡ್ ರೋಬಲ್ಲಿ ಇಡಿ.
ಟಿಪ್ಸ್ 4
ಸೀರೆ ತುಂಬಾ ಕಾಲ ಬಾಳಿಕೆ ಬರಬೇಕು ಅಂದ್ರೆ, ಪ್ರತಿ ಮೂರು ತಿಂಗಳಿಗೊಮ್ಮೆ ಸೀರೆಯನ್ನು ಬಿಡಿಸಿಟ್ಟು ಮತ್ತೆ ಮಡಚಿಡಿ. ಇದರಿಂದ ಜರಿ ಮುರಿಯೋದನ್ನು ತಪ್ಪಿಸಬಹುದು. ಇದರಿಂದ ಸೀರೆ ಹೆಚ್ಚು ಕಾಲ ಬಾಳಿಕೆ ಬರುತ್ತೆ.
ಟಿಪ್ಸ್ 5
ಕಾಂಜೀವರಂ ಸೀರೆಗಳನ್ನು ದೀರ್ಘಕಾಲ ಉಳಿಯುವಂತೆ ಮಾಡಲು ಅವುಗಳನ್ನು ಉಟ್ಟ ಬಳಿಕ ಒಂದು ದಿನ ಪೂರ್ತಿ ಹೊರಗಡೆ ನೆರಳಿನಲ್ಲಿ ಒಣಗಲು ಬಿಡಿ. ಏರ್ ಡ್ರೈ ಆಗೋದು ಮುಖ್ಯ. ಆದರೆ ಯಾವತ್ತೂ ಸೀರೆಯನ್ನು ನೇರವಾಗಿ ಸೂರ್ಯನ ಬಿಸಿಲಿಗೆ ಇಡಬೇಡೀ. ಇದರಿಂದ ಸೀರೆಯ ಹೊಳಪು ಕಡಿಮೆಯಾಗುತ್ತದೆ.
ಟಿಪ್ಸ್ 6
ಕಾಂಜೀವರಂ ಸೀರೆಗೆ ಐರನ್ ಮಾಡುವಾಗ ಜರಿಯ ಮೇಲೆ ನೇರವಾಗಿ ಇಸ್ತ್ರಿ ಪೆಟ್ಟಿಗೆ ಇಡಬೇಡಿ. ಇದರಿಂದ ಜರಿ ಹಾಳಾಗುತ್ತದೆ. ಅದರ ಬದಲಾಗಿ ಜರಿಯ ಮೇಲೆ ಒಂದು ಮೃದುವಾದ ಹತ್ತಿಯ ಬಟ್ಟೆಯನ್ನಿಟ್ಟು ಅದರ ಮೇಲೆ ಐರನ್ ಮಾಡಿ.
ಟಿಪ್ಸ್ 7
ಕೊನೆಯ ಟಿಪ್ಸ್ ಹಾಗೂ ತುಂಬಾನೆ ಮುಖ್ಯವಾದ ಟಿಪ್ಸ್ ಇದು. ತಿಂಗಳಲ್ಲಿ ಒಂದು ಸಲವಾದರೂ ನೀವು ಕಾಂಜೀವರಂ ಸೀರೆಯನ್ನು ಧರಿಸಿ. ದೇವಸ್ಥಾನಕ್ಕೆ ಹೋಗಲು, ಹಬ್ಬ, ಪೂಜೆಯ ಸಂದರ್ಭದಲ್ಲಿ ಸೀರೆ ಧರಿಸಿ. ಯಾಕಂದ್ರೆ ನೀವು ಹೆಚ್ಚು ಹೆಚ್ಚು ಸೀರೆ ಉಟ್ಟಷ್ಟೂ ಕಾಂಜೀವರಂ ಸೀರೆ ಹೆಚ್ಚು ಕಾಲ ಬಾಳಿಕೆ ಬರುತ್ತೆ.