ಸೀರೆ ಬ್ಯುಸಿನೆಸ್ ನಲ್ಲಿ ಉತ್ತಮ ಲಾಭವಿದೆ. ಮನೆಯಲ್ಲೇ ಕುಳಿತು ಸುಲಭವಾಗಿ ಈ ಬ್ಯುಸಿನೆಸ್ ಮಾಡ್ಬಹುದು. ಮಹಿಳೆಯರಿಗೆ ಹೇಳಿ ಮಾಡಿಸಿದ ಬ್ಯುಸಿನೆಸ್ ಇದು. ಹಾಗಾಗೇ ಸಾಮಾನ್ಯರು ಮಾತ್ರವಲ್ಲ ನಟಿಯರು ಕೂಡ ಈ ಬ್ಯುಸನೆಸ್ ನತ್ತ ಒಲವು ತೋರ್ತಿದ್ದಾರೆ. 

ನಾರಿಯ ಮನಸ್ಸು ಕದಿಯೋಕೆ ಸೀರೆ (Saree) ಇದ್ರೆ ಸಾಕು. ಸೀರೆ ಮಹಿಳೆ ಸೌಂದರ್ಯವನ್ನು ಡಬಲ್ ಮಾಡುತ್ತೆ. ಕಪಾಟಿನಲ್ಲಿ ಅದೆಷ್ಟೇ ಸೀರೆ ಇರ್ಲಿ, ಫಂಕ್ಷನ್ ಗೆ ಹೋಗ್ವಾಗ, ನನ್ನ ಹತ್ರ ಸೀರೆ ಇಲ್ಲ ಅಂತ ಟೆನ್ಷನ್ ಮಾಡ್ಕೊಳ್ಳೋದು ಮಾಮೂಲಿ. ಚೆಂದದ ಸೀರೆ ಕಣ್ಣಿಗೆ ಬಿದ್ರೆ ಅದನ್ನು ಖರೀದಿ ಮಾಡ್ದೆ ಬಿಡೋಕಾಗಲ್ಲ. ಹೆಣ್ಣಿನ ಈ ಸ್ವಭಾವಕ್ಕೆ ಬ್ರೇಕ್ ಹಾಕೋಕೆ ಸಾಧ್ಯ ಇಲ್ಲ. ಈಗಿನ ದಿನಗಳಲ್ಲಿ ಸೀರೆ ಟ್ರೆಂಡ್ ಜಾಸ್ತಿ ಆಗಿದೆ. ಮಹಿಳೆಯರು ಹಬ್ಬಗಳಲ್ಲಿ ಕಂಪಲ್ಸರಿ ಸೀರೆ ಉಡ್ತಿದ್ದಾರೆ. ಉಳಿದ ಟೈಂನಲ್ಲೂ ಸಿಂಪಲ್ ಆಗಿರುವ ಸೀರೆಯುಟ್ಟು ಆಫೀಸ್ ಗೆ ಹೋಗಲು ಇಷ್ಟಪಡ್ತಿದ್ದಾರೆ. ಇದೇ ಕಾರಣಕ್ಕೆ ಈಗ ಸೀರೆ ಮಾರಾಟಗಾರರ ಸಂಖ್ಯೆ ಕೂಡ ಹೆಚ್ಚಾಗಿದೆ. ವಿಶೇಷವಾಗಿ ಆಕ್ಟರ್ಸ್ ತಮ್ಮ ಪ್ರಸಿದ್ಧಿ ಬಳಸಿಕೊಂಡು ಬ್ಯುಸಿನೆಸ್ ಗೆ ಇಳಿತಿದ್ದಾರೆ.

ಸೀರೆ ಮಾರಾಟಕ್ಕಿಳಿದ ಕಲಾವಿದರು : 

ದುಬಾರಿ ಜೀವನದಲ್ಲಿ ಒಂದೇ ಆದಾಯದ ಮೂಲ ನಂಬ್ಕೊಂಡಿರೋಕೆ ಸಾಧ್ಯವಿಲ್ಲ. ಒಂದ್ರ ಜೊತೆ ಇನ್ನೊಂದೆರಡು ಸೈಡ್ ಬ್ಯುಸಿನೆಸ್ ಅತ್ಯಗತ್ಯ. ಸಿನಿಮಾ, ಸೀರಿಯಲ್ ನಲ್ಲಿ ಬ್ಯುಸಿ ಇರುವ ಕೆಲ ನಟಿಯರು ಈಗ ಬ್ಯುಸಿನೆಸ್ ಶುರು ಮಾಡಿದ್ದಾರೆ. ಸೀರೆ ಬ್ಯುಸಿನೆಸ್ ಗೆ ಇಳಿದವರ ಸಂಖ್ಯೆ ಸಾಕಷ್ಟಿದೆ. ಸೋಶಿಯಲ್ ಮೀಡಿಯಾವನ್ನು ಸದುಪಯೋಗಪಡಿಸಿಕೊಳ್ತಿರುವ ಕಲಾವಿದೆಯರು ಸೀರೆ ಮಾರಾಟದಲ್ಲಿ ಯಶಸ್ಸು ಕಾಣ್ತಿದ್ದಾರೆ.

ಮಾತಿನ ಮೂಲಕ ಲಕ್ಷಾಂತರ ಮಂದಿಯನ್ನು ಸೆಳೆದಿರುವ, ಈಗ ಯೂಟ್ಯೂಬ್ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿರುವ ರ್ಯಾಪಿಡ್ ರಶ್ಮಿ (Rapid Rashmi) ಹೊಸ ಬ್ಯುಸಿನೆಸ್ ಆರಂಭಿಸಿದ್ದಾರೆ. ರಶ್ಮಿ ಅವರದ್ದೂ ಸೀರೆ ಬ್ಯುಸಿನೆಸ್. ರ್ಯಾಪಿಡ್ ರಶ್ಮಿ ಅದಕ್ಕೆ ರಾಧ ಅಂತ ನಾಮಕರಣ ಮಾಡಿದ್ದಾರೆ. ಆರಂಭದಲ್ಲಿ ಸುಂದರ ಸೀರೆಗಳನ್ನು ಮಾರಾಟ ಮಾಡ್ತೇನೆ. ನಂತ್ರ ನಮ್ಮ ಬ್ಯುಸಿನೆಸ್ ವಿಸ್ತಾರಗೊಳ್ಳುತ್ತೆ ಅಂತ ರಶ್ಮಿ ಹೇಳಿಕೊಂಡಿದ್ದಾರೆ.

ಝೋಹೋ to ಝಿರೋಧ, ಭಾರತದ ಯಶಸ್ವಿ ಉದ್ಯಮಿಗಳ ಹಿಂದಿದೆ Z ಸೀಕ್ರೆಟ್

ರಶ್ಮಿಗಿಂತ ಮೊದಲೇ ಅನೇಕರು ಈ ಬ್ಯುಸಿನೆಸ್ ನಲ್ಲಿದ್ದಾರೆ. ಅದ್ರಲ್ಲಿ ನಟಿ ಅಮೃತಾ ರಾಮಮೂರ್ತಿ ಒಬ್ಬರು. ಅಮೃತಾ ರಾಮಮೂರ್ತಿ ಕಳೆದ ವರ್ಷವೇ ಈ ಬ್ಯುಸಿನೆಸ್ ಗೆ ಇಳಿದಿದ್ದಾರೆ. ನೀರೆ ಸೀರೆ ಹೆಸರಿನ ಇನ್ಸ್ಟಾ ಖಾತೆ ಮೂಲಕ ಅವರು ಸೀರೆ ಸೇಲ್ ಮಾಡ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಹೊಸ ಹೊಸ ಸೀರೆಗಳನ್ನು ತೋರಿಸುವ ಅವರು, ವಾಟ್ಸ್ ಅಪ್ ಮೂಲಕ ಆರ್ಡರ್ ಪಡೆದು ಅದನ್ನು ಸೇಲ್ ಮಾಡ್ತಿದ್ದಾರೆ. ಈಗಾಗಲೇ 2 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಅಮೃತಾ ರಾಮಮೂರ್ತಿ ಹೊಂದಿದ್ದಾರೆ. ತಮ್ಮ ಖಾಯಂ ಗ್ರಾಹಕರಿಗೆ ಆಫರ್ ಗಳನ್ನು ನೀಡ್ತಾ, ಸಾಕಷ್ಟು ಭಿನ್ನ ಸೀರೆಗಳನ್ನು ಅಮೃತಾ ಮಾರಾಟ ಮಾಡ್ತಿದ್ದಾರೆ.

ಅಮೃತಾ ರಾಮಮೂರ್ತಿ ಮಾತ್ರವಲ್ಲ ಜನಪ್ರಿಯ ನಟಿಯಾದ ನಯನಾ ಕೆಎಫ್ ಕೂ ಸೀರೆ ಬ್ಯುಸಿನೆಸ್ ಮಾಡ್ತಿದ್ದಾರೆ. ಅವರು ದೊಡ್ಡ ಶೋ ರೂಮ್ ಹೊಂದಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ದವಳು ವೇವ್ ಯುವರ್ ಸ್ಟೋರಿ ಹೆಸರಿನ ಶಾಪ್ ಇದೆ. ಅವರು ಕೂಡ ಸೀರೆಯುಟ್ಟು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ನಯನಾ ಹಾಗೂ ಅಮೃತಾ ರಾಮಮೂರ್ತಿ ಅವರ ಬಳಿ ಅನೇಕ ಸೆಲೆಬ್ರಿಟಿಗಳು ಈಗಾಗಲೇ ಸೀರೆ ಖರೀದಿ ಮಾಡ್ತಿದ್ದಾರೆ.

ಸಣ್ಣ ವ್ಯಾಪಾರಿಗಳಿಗೂ ಸಿಗಲಿದೆ 24‍‍‍‍‍x7 'ಜಿಯೋ ಏಜೆಂಟಿಕ್ ಎಐ' ಸಹಾಯಕ!

ಸೀರೆ ವ್ಯಾಪಾರದಿಂದ ಲಾಭ : 

ಭಾರತದಲ್ಲಿ ಸದಾ ಬೇಡಿಕೆಯಲ್ಲಿರುವ ವಸ್ತುಗಳಲ್ಲಿ ಸೀರೆ ಸೇರಿದೆ. ವಿಶ್ವದಾದ್ಯಂತ ಇರುವ ಭಾರತೀಯರು, ಭಾರತದ ಸೀರೆ ವ್ಯಾಪಾರಿಗಳಿಂದ ಸೀರೆ ಖರೀದಿ ಮಾಡ್ತಾರೆ. ನೀವುಸ್ಥಳೀಯವಾಗಿ ಮಾತ್ರವಲ್ಲ ವಿದೇಶಕ್ಕೂ ನಿಮ್ಮ ಸೀರೆ ಮಾರಾಟ ಮಾಡ್ಬಹುದು. ಪ್ರಸಿದ್ಧಿ ಹೆಚ್ಚಾಗ್ತಿದ್ದಂತೆ, ಉತ್ತಮ ಕ್ವಾಲಿಟಿ ಹಾಗೂ ಬೆಲೆಯನ್ನು ನೀವು ಕಾಯ್ದುಕೊಂಡು ಹೋದ್ರೆ ವ್ಯಾಪಾರ ಸುಲಭ. ಇತ್ತೀಚಿಗೆ ಬಟ್ಟೆ ಅದ್ರಲ್ಲೂ ಸೀರೆ ವ್ಯಾಪಾರಿಗಳ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿರುವ ಕಾರಣ ವ್ಯಾಪಾರಕ್ಕೆ ಇಳಿಯುವ ಮುನ್ನ ಎಲ್ಲ ವಿಷ್ಯವನ್ನು ಸರಿಯಾಗಿ ತಿಳಿದುಕೊಳ್ಳೋದು ಮುಖ್ಯ.