- Home
- Life
- Fashion
- ಹೆವಿ ವರ್ಕ್ ಸೀರೆಯಲ್ಲಿ ಮಿಂಚಿದ ಮಂಗಳೂರಿನ ಬೆಡಗಿ ಕೃತಿ ಶೆಟ್ಟಿ.. Saree ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
ಹೆವಿ ವರ್ಕ್ ಸೀರೆಯಲ್ಲಿ ಮಿಂಚಿದ ಮಂಗಳೂರಿನ ಬೆಡಗಿ ಕೃತಿ ಶೆಟ್ಟಿ.. Saree ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
Krithi Shetty traditional look: ನಟಿ ಕೃತಿ ಶೆಟ್ಟಿ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿವೆ. ಫೋಟೋದಲ್ಲಿ ದಂತದ ಗೊಂಬೆಯಂತೆ ಕಂಗೊಳಿಸುತ್ತಿರುವ ಕೃತಿ, ಹೆವಿ ವರ್ಕ್ ಸೀರೆಯಲ್ಲಿ ಕಾಣಿಸಿಕೊಂಡಿದ್ದು ಸದ್ಯ ಸೀರೆ ಬೆಲೆ ಎಲ್ಲರ ಗಮನ ಸಳೆದಿದೆ.

ಥೇಟ್ ದಂತದ ಗೊಂಬೆ
ನಟಿ ಕೃತಿ ಶೆಟ್ಟಿ ಅವರ ಇತ್ತೀಚಿನ ಫೋಟೋಶೂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿವೆ. ಫೋಟೋದಲ್ಲಿ ಥೇಟ್ ದಂತದ ಗೊಂಬೆಯಂತೆ ಕಂಗೊಳಿಸುತ್ತಿದ್ದಾರೆ ಕೃತಿ.
ಮೊದಲ ಚಿತ್ರವಿದು
ತೆಲುಗು ಚಿತ್ರ 'ಉಪ್ಪೇನ’ (Uppena)ದಲ್ಲಿ ವಿಜಯ್ ಸೇತುಪತಿ ಜೊತೆ ನಟಿಸಿದ ಕೃತಿ ಶೆಟ್ಟಿ, ತಮ್ಮ ಮೊದಲ ಚಿತ್ರದ ಅಭಿನಯಕ್ಕಾಗಿಯೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಅಭಿಮಾನಿಗಳ ಮನ ಗೆದ್ದ ಕೃತಿ ಶೆಟ್ಟಿ
ಅದಾದ ನಂತರ ಕೃತಿ ಶೆಟ್ಟಿ ನಾನಿ ಜೊತೆ 'ಶ್ಯಾಮ್ ಸಿಂಘ ರಾಯ್ (Shyam Singha Roy)' ಮತ್ತು ರಾಮ್ ಪೋತಿನೇನಿ ಜೊತೆ 'ದಿ ವಾರಿಯರ್' ಸೇರಿದಂತೆ ಹಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಹೊಸ ಚಿತ್ರಗಳಲ್ಲಿ ನಟನೆ
ಕೃತಿ ಶೆಟ್ಟಿ ಕೇವಲ 17 ನೇ ವಯಸ್ಸಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಪ್ರಸ್ತುತ ತಮಿಳಿನಲ್ಲಿ ಮೂರು ಹೊಸ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಹೆವಿ ವರ್ಕ್ ಸೀರೆಯಲ್ಲಿ ಫೋಟೋಶೂಟ್
ಅಂದಹಾಗೆ ಕೃತಿ ಶೆಟ್ಟಿ, ಇತ್ತೀಚೆಗೆ ಕಸೂತಿ ಮಾಡಿದ ಹೆವಿ ವರ್ಕ್ ಸೀರೆಯಲ್ಲಿ ಫೋಟೋಶೂಟ್ ಮಾಡಿ, ಆ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
ಸೀರೆ ಬೆಲೆ ಎಷ್ಟು?
ಕೃತಿ ಶೆಟ್ಟಿ ಧರಿಸಿರುವ ಬೆಲೆಬಾಳುವ ಈ ಸೀರೆಯ ಬೆಲೆ ಸುಮಾರು 3 ಲಕ್ಷದಿಂದ 7 ಲಕ್ಷ ರೂಪಾಯಿ ಎನ್ನಲಾಗಿದ್ದು, ತಮ್ಮ ಗ್ಲಾಮರ್ ಲುಕ್‌ನಿಂದ ಅಭಿಮಾನಿಗಳ ಮನಗೆದ್ದಿದ್ದಾರೆ.