ಹೇರ್ ಡೈ ಮಾಡದೆ ಬೇರು ಸಹಿತ ಕೂದಲು ಕಪ್ಪಾಗಲು ಅಡುಗೆಮನೆಯಲ್ಲಿರೊ ಈ ಪದಾರ್ಥ ಬಳಸಿ
ಕೂದಲನ್ನು ಕಪ್ಪಾಗಿಸಲು ನೀವು ನೈಸರ್ಗಿಕ ವಿಧಾನಗಳ ಸಹಾಯ ಪಡೆಯಬಹುದು. ಇದಕ್ಕಾಗಿ ನೀವು ಮಾರುಕಟ್ಟೆಗೆ ಹೋಗಿ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ.

ಕೂದಲು ಬಿಳಿಯಾದಾಗ ಒಂದು ರೀತಿ ನಮ್ಮ ನಿದ್ದೆಗೆಡುತ್ತದೆ ಅಲ್ಲವೇ, ಅದಕ್ಕೆ ಜನರು ತಲೆಯ ಮೇಲೆ ಬಿಳಿ ಕೂದಲು ಕಾಣಿಸಿಕೊಂಡ ತಕ್ಷಣ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಮಿಕಲ್ ಹೇರ್ ಡೈ ಬಳಸುತ್ತಾರೆ. ಅದು ಕೂದಲನ್ನು ಕಪ್ಪಾಗಿಸುತ್ತದೆ. ಆದರೆ ಇವು ಕೂದಲನ್ನು ಕಪ್ಪಾಗಿಸುತ್ತದೆಯಾದರೂ ಕೆಲವೊಮ್ಮೆ ಅದರಲ್ಲಿರುವ ರಾಸಾಯನಿಕಗಳು ಕೂದಲಿಗೆ ಹಾನಿಯನ್ನುಂಟುಮಾಡುತ್ತವೆ.
ಕೆಲವು ಸಂದರ್ಭಗಳಲ್ಲಿಯಂತೂ ಬಣ್ಣ ಹಚ್ಚಿದ ನಂತರ ಕೂದಲು ಇನ್ನೂ ವೇಗವಾಗಿ ಬಿಳಿಯಾಗಲು ಪ್ರಾರಂಭಿಸುತ್ತದೆ ಎಂದು ಕಂಡುಬಂದಿದೆ. ಹೌದು, ಆದ್ದರಿಂದ ಕೂದಲನ್ನು ಕಪ್ಪಾಗಿಸಲು ನೀವು ನೈಸರ್ಗಿಕ ವಿಧಾನಗಳ ಸಹಾಯವನ್ನು ಪಡೆಯಬಹುದು. ಇದಕ್ಕಾಗಿ ನೀವು ಮಾರುಕಟ್ಟೆಗೆ ಹೋಗಿ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಅಂದಹಾಗೆ ಇಂದು ನಾವು ನಿಮ್ಮ ಕೂದಲನ್ನು ಬೇರುಗಳಿಂದ ಕಪ್ಪಾಗಿಸಲು ಸಹಾಯ ಮಾಡುವ ಒಂದು ನೈಸರ್ಗಿಕ ಬಣ್ಣದ ಬಗ್ಗೆ ಹೇಳಲಿದ್ದೇವೆ.
ನೈಸರ್ಗಿಕ ಬಣ್ಣವೆಂದರೆ ಅದು ಬೇರಾವುದೂ ಅಲ್ಲ, ನಿಮ್ಮ ಅಡುಗೆಮನೆಯಲ್ಲಿ ಸಿಗುವ ಪಟಿಕ. ಪಟಿಕವನ್ನು ಕೂದಲನ್ನು ಕಪ್ಪಾಗಿಸಲು ಬಳಸಬಹುದು. ಅದನ್ನು ಹೇಗೆ ಬಳಸುವುದು ಎಂದು ತಿಳಿಯೋಣ.
ಕೂದಲಿಗೆ ನ್ಯಾಚುರಲ್ ಹೇರ್ ಡೈ ತಯಾರಿಸುವ ಮೊದಲು ಅದು ಕೂದಲಿಗೆ ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ. ವಾಸ್ತವವಾಗಿ, ಪಟಿಕ(Alum)ದಲ್ಲಿ ಉತ್ಕರ್ಷಣ ನಿರೋಧಕಗಳು, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳು ಕಂಡುಬರುತ್ತವೆ. ಇದು ನೆತ್ತಿಯನ್ನು ಸ್ವಚ್ಛಗೊಳಿಸಲು ಮತ್ತು ತಲೆಹೊಟ್ಟು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರ ಬಳಕೆಯು ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ ಮತ್ತು ಕೂದಲು ಉದುರುವಿಕೆ ಮತ್ತು ಸತ್ತ ಕೂದಲಿನ ಸಮಸ್ಯೆಯನ್ನು ತೊಡೆದುಹಾಕುತ್ತದೆ.
ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ನೀವು ಪಟಿಕ ನೀರನ್ನು ಸಹ ಬಳಸಬಹುದು.
ಬೇಕಾಗುವ ಸಾಮಗ್ರಿಗಳು
2-3 ಚಮಚ ಪಟಿಕ ಪುಡಿ
2 ಚಮಚ ಒಣ ಆಮ್ಲಾ
10-15 ಕರಿಬೇವು ಎಲೆಗಳು
1 ಚಮಚ ನಿಂಬೆ ರಸ
ಮಾಡುವುದು ಹೇಗೆ?
ಇದಕ್ಕಾಗಿ ಒಂದು ಪ್ಯಾನ್‌ನಲ್ಲಿ 2 ಗ್ಲಾಸ್ ನೀರನ್ನು ಬಿಸಿ ಮಾಡಿ.
ಈಗ ಒಣಗಿದ ಆಮ್ಲಾ ಮತ್ತು ಕರಿಬೇವು ಸೇರಿಸಿ ಕುದಿಸಿ.
ನಂತರ ನಿಂಬೆ ರಸ ಮತ್ತು ಪಟಿಕ ಪುಡಿಯನ್ನು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನೀರಿನ ಬಣ್ಣ ಕಪ್ಪಾಗುವವರೆಗೆ ಈ ಎಲ್ಲಾ ಪದಾರ್ಥಗಳನ್ನು ಕುದಿಸಿ.
ನಂತರ ತಣ್ಣಗಾಗಲು ಪಕ್ಕಕ್ಕೆ ಇರಿಸಿ. ಈಗ ನೀರನ್ನು ಫಿಲ್ಟರ್ ಮಾಡಿ ಬೇರ್ಪಡಿಸಿ. ಶಾಂಪೂ ಮಾಡುವಾಗ ಈ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ. ನೀವು ಈ ನೀರನ್ನು ತಿಂಗಳಿಗೆ 3-4 ಬಾರಿ ಬಳಸಬಹುದು.